Friday, April 11, 2014

ಮನುಷ್ಯತ್ವ ಇಲ್ಲದ ಮೋದಿ, ಭ್ರಷ್ಟಾಚಾರಕ್ಕೆ ಹೆಸರಾಗಿರುವ ಬಿಜೆಪಿ 


 ಚಿಕ್ಕನಾಯಕನಹಳ್ಳಿ,ಏ.10: ರಾಷ್ಟ್ರ ಮಟ್ಟದಲ್ಲಿ  ಮನುಷ್ಯತ್ವ ಇಲ್ಲದ ಮೋದಿ, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಹೆಸರಾಗಿರುವ  ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ನಂತವರ ನೇತೃತ್ವದಲ್ಲಿ  ಅನಾಚಾರ, ದೂರಾಚರಗಳಿಗೆ ಪ್ರಸಿದ್ದರಾಗಿರುವ ಹಾಲಪ್ಪ, ಲಕ್ಷ್ಮಣಸವದಿ, ಸಿ.ಸಿ.ಪಾಟೀಲ, ರೇಣುಕಾಚಾರ್ಯರಂತಹವರೇ ತುಂಬಿರುವ ಕೋಮುವಾದಿ ಬಿ.ಜೆ.ಪಿ. ಒಂದಡೆಯಾದರೆ, ಜೆ.ಡಿ.ಎಸ್.ನಲ್ಲಿ ದೇವೇಗೌಡ, ಕುಮಾರಸ್ವಾಮಿ ಮೇಲೆ ವಿಶ್ವಾಸವನ್ನು ಕಳೆದುಕೊಂಡಿರುವ ನಾಯಕರೇ ತುಂಬಿರುವ ಪಕ್ಷ, ಇವರೆಡನ್ನೂ ಧಿಕ್ಕರಿಸಿ.  ರೈತರ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್. ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರ ಪರ ಸಿ.ಎಂ.ಸಿದ್ದರಾಮಯ್ಯ ಪ್ರಚಾರ ಭಾಷಣ ಮಾಡಿದರು. ಕೋಮುವಾದವನ್ನೇ ಅಜಂಡಾ ಮಾಡಿಕೊಂಡಿರುವ ಬಿ.ಜೆ.ಪಿ, ಈಗ ಹೊರಡಿಸಿರುವ ತನ್ನ ಪ್ರಣಾಳಿಕೆಯಲ್ಲಿ  ಹಿಂದೆ ಜನಸಂಘ ಹೊರಡಿಸುತ್ತಿದ್ದ ಅಂಶಗಳನ್ನೇ  ಪುನರ್ ಮುದ್ರಣ ಮಾಡಿಸಿದಂತಿದೆ ಎಂದು ಸಿದ್ದರಾಮಯ್ಯ ವ್ಯಂಗವಾಡಿದರು.
ಮೋದಿಗೆ ಮತ ನೀಡಿದರೆ ಗುಜರಾತಿನಲ್ಲಿ 2002ರಲ್ಲಿ ನಡೆದ ಕೋಮು ದಳ್ಳುರಿ ಇಡೀ ರಾಷ್ಟ್ರದಲ್ಲಿ ಆರಂಭಗೊಳ್ಳುತ್ತದೆ, ಅಲ್ಲಿ ಅಷ್ಟು ನರಮೇದ ಆದ್ರೂ ಪಶ್ವಿತಾಪ ಪಡದ ಮೋದಿ ಈ ದೇಶದ ಪ್ರಧಾನಿ ಆಗಬಾರದು ಎಂದರಲ್ಲದೆ, ರಾಷ್ಟ್ರದಲ್ಲಿರುವ 82 ಕೋಟಿ ಮತದಾರರು ದೇಶದ ಭವಿಷ್ಯವನ್ನು ನಿಧರ್ಾರಿಸುವಾಗ ಈ ಅಂಶಗಳನ್ನು ಗಮನದಲ್ಲಿಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ಭ್ರಷ್ಟಾಚಾರ ಇದೆ ಎಂದು ಮೈಸೂರಿನಲ್ಲಿ ಮೋದಿ ಹೇಳುವಾಗ ಪಕ್ಕದಲ್ಲೇ ಭ್ರಷ್ಟಚಾರದ ಸಲುವಾಗಿ ಜೈಲಿಗೆ ಹೋದ ಯಡಿಯೂರಪ್ಪ, 14 ಸಾವಿರ ಕೋಟಿ ರೂಗಳ ಹಗರಣದ ಆರೋಪ ಹೊತ್ತಿರುವ ಅನಂತಕುಮಾರ್ ಪಕ್ಕದಲ್ಲೇ ಕುಳಿತ್ತಿದ್ದರೂ ಮೋದಿಯ ಕಣ್ಣಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದರು.
ಕನರ್ಾಟಕವನ್ನು ರಾಷ್ಟ್ರದಲ್ಲೇ ನಂ.1 ರಾಜ್ಯವನ್ನಾಗಿ ಮಾಡುವ ಕನಸು ನನ್ನದು ಅದನ್ನು ನನಸಾಗಿಸಲು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದರು, ಗ್ರಾಮಾಂತರ ಪ್ರದೇಶದಲ್ಲಿ ಎಷ್ಟು ಕುಟುಂಬಗಳು ತುತ್ತು ]ಅನ್ನಕ್ಕಾಗಿ ಕಾಯುತ್ತಿದ್ದ ದಿನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಅದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ತಂದೆ, ಮಕ್ಕಳ ಅಪೌಷ್ಠಕತೆ ನಿವಾರಿಸಲು ಹಾಲು ವಿತರಣೆ ಮಾಡಿದೆ, ಅಹಿಂದ ವರ್ಗದವರು ವಿವಿಧ ನಿಗಮ ಮಂಡಳಿಗಳಲ್ಲಿ ತೆಗೆದುಕೊಂಡ ಸಾಲ ಮನ್ನ ಮಾಡಿದ್ದರಿಂದ ಇದರ ಉಪಯೋಗವನ್ನು 10 ಲಕ್ಷ ಜನ ಪಡೆದುಕೊಂಡರು, ರೈತರಿಗೆ ಬಡ್ಡಿ ರಹಿತ 3 ಲಕ್ಷ ರೂಗಳ ಸಾಲವನ್ನು ವಿತರಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಅಬ್ಯಾಥರ್ಿಗೆ ಮತ ನೀಡಿದರೆ ಅದು ಬಿ.ಜೆ.ಪಿ. ಅಬ್ಯಾಥರ್ಿಯ ಗೆಲುವಿಗೆ ಸಹಕರಿಸಿದಂತೆ ಆದ್ದರಿಂದ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದು ಹನುಮೇಗೌಡರಿಗೆ ಮತನೀಡಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿ, ಯಾವುದೇ ಗಾಳಿ ಸುದ್ದಿಗೆ ಕಿವಿಕೊಡದೆ ರಾಜ್ಯ ಸಕರ್ಾರವನ್ನು ಮುಂದೆ ನಾಲ್ಕು ವರ್ಷಗಳ ಕಾಲ ಸುಭದ್ರವಾಗಿ ಮುನ್ನಡೆಸುವ ಅವಕಾಶವನ್ನು ಕಲ್ಪಿಸಿಕೊಡುವಂತೆ ಕೋರಿದರು.
ರಾಜ್ಯವನ್ನು ರೋಗಮುಕ್ತ, ಗುಡಿಸಲು ಮುಕ್ತ, ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಸಕರ್ಾರವನ್ನು ನಡೆಸುವಂತೆ ರಾಜ್ಯದ ಜನತೆ ಆಶೀರ್ವದಿಸಬೇಕು ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ರಾಷ್ಟ್ರಕ್ಕೆ ಶಿಕ್ಷಣ ಕಾಯಿದೆ, ಉದ್ಯೋಗ ಕಾಯಿದೆ, ಮಾಹಿತಿ ಹಕ್ಕು ಕಾಯಿದೆಯಂತಹ ಜನೋಪಯೋಗಿ ಅಸ್ತ್ರಗಳನ್ನು ಜನತೆ ನೀಡಿರುವ ಸಕರ್ಾರ, 96 ಕೋಟಿ ಜನತೆಯ ಕೈಗೆ ಮೊಬೈಲ್ ಕೊಡಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
  ಸಿದ್ದರಾಮಯ್ಯನವರ ನೇತೃತ್ವದ ಸಕರ್ಾರ ಕೈಗಾರಿಕಾ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಎರಡನೇ ಸ್ಥಾನಕ್ಕೆ ತಂದಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ ಎಂದರು.
ಬಹಿರಂಗ ಸಭೆಯಲ್ಲಿ ಜಿಲ್ಲಾ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಚಿಕ್ಕನಾಯಕನಹಳ್ಳಿಯ ಇತಿಹಾಸದಲ್ಲಿ 1978ರಲ್ಲಿ ಇಂದಿರಾಗಾಂಧಿ ಪಟ್ಟಣಕ್ಕೆ ಬಂದಾಗ ಸೇರಿದಷ್ಟೇ ಜನಸ್ತೋಮ ಇಂದು ಸಿದ್ದರಾಮಯ್ಯ ಪಟ್ಟಣಕ್ಕೆ ಬಂದಾಗಲೂ ಸೇರಿರುವುದು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ  ಸಿಕ್ಕಿರುವ ಬೆಂಬಲ ಎಂದರು. 
  ಸಭೆಯಲ್ಲಿ ಅಬ್ಯಾಥರ್ಿ ಎಸ್.ಪಿ.ಮುದ್ದುಹನುಮೇಗೌಡ, ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ವಿ.ರಾಜಶೇಖರನ್, ನಟ ಶಶಿಕುಮಾರ್, ಎಂ.ಆರ್.ಸೀತಾರಾಂ ಮಾತನಾಡಿದರು. ಷಫಿ ಅಹಮದ್, ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ಸಾಸಲು ಸತೀಶ್, ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ, ಬಿ.ಲಕ್ಕಪ್ಪ, ಭಕ್ತರಾಮೇಗೌಡ, ಎಚ್.ಬಿ.ನಾರಾಯಣಗೌಡ, ಸಿ.ಕೆ.ಗುರುಸಿದ್ದಯ್ಯ, ಎ.ಪಿ.ಎಂ.ಸಿ.ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ರೇಣುಕಮ್ಮ ಗುರುಮೂತರ್ಿ,  ಧರಣಿ ಲಕ್ಕಪ್ಪ, ಸಾದರಹಳ್ಳಿ ಮಲ್ಲಿಕಾರ್ಜನಯ್ಯ, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೇಗೌಡ,  ಬಾಬು ಸಾಹೇಬ್, ತೀರ್ಥಪುರ ವಾಸು,ಘನ್ನಿಸಾಬ್, ಮಹಮದ್ ಪೀರ್ಸಾಬ್, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಸೇರಿದಂತೆ ಹಲವರಿದ್ದರು.