Saturday, March 10, 2012


ತಾತಯ್ಯನವರ 52ನೇ ವರ್ಷದ ಉರುಸ್ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಮಾ.10 : ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ ಉರುಸ್, ತಾತಯ್ಯನವರ 52ನೇ ವರ್ಷದ ಉರುಸ್ ಕಾರ್ಯಕ್ರಮವನ್ನು ಇದೇ 12ರಿಂದ 14ರವರೆಗೆ ನಡೆಯಲಿದೆ ಎಂದು ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ತಿಳಿಸಿದೆ.
ಉರುಸ್ ಕಾರ್ಯಕ್ರಮವು 12ರ ಸೋಮವಾರದಂದು ರಾತ್ರಿ 8.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ 
 ತಾತಯ್ಯನವರ ಉತ್ಸವ ನಡೆಯಲಿದೆ, 13ರ ಮಂಗಳವಾರ ಸಂಜೆ 7.30ಕ್ಕೆ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಮುಜ್ತಾಬಾ ನಾಜಾನ್ ಪಾಟರ್ಿ ಆಫ್ ಮುಂಬಯಿ ಮತ್ತು ನೂರಿ ಸಭಾ ಪಾಟರ್ಿ ಆಫ್ ನಾಗಪುರುರವರಿಂದ ಜಿದ್ದಾಜಿದ್ದಿನ ಖವ್ವಾಲಿ ನಡೆಯಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನೆರವೇರಿಸಲಿದ್ದು ಗೋರಿಕಮಿಟಿ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಜಿ.ಪಂ.ಅಧ್ಯಕ್ಷ ಆನಂದರವಿ ಮತ್ತಿತರರು ಉಪಸ್ಥಿತರಿರುವರು.
14ರ ಬುಧವಾರ ಸಂಜೆ 7.30ಕ್ಕೆ ನಗೆಹಬ್ಬ, ಸಂಗೀತ ರಸಸಂಜೆಯನ್ನು ಖ್ಯಾತ ಹಾಸ್ಯಗಾರರಾದ ರಿಚಡರ್್ ಲೂಯಿಸ್ ಹಾಗೂ ಮೈಸೂರ್ ಆನಂದ್ ತಂಡದವರಿಂದ ನಡೆಯಲಿದ್ದು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ಕೆ.ರಾಜು ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್ ಹಾಗೂ ನಟಿ ಪೂಜಾಗಾಂಧಿರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿದೇವಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿರುವರು.

ತಾತಯ್ಯನವರ ಉತ್ಸವಕ್ಕೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ
                                            
ಚಿಕ್ಕನಾಯಕನಹಳ್ಳಿ,ಮಾ.10 : ತಾತಯ್ಯನವರ ಉತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ತಿಳಿಸಿದರು.
ತಾತಯ್ಯನವರ ಉರುಸ್ ಉತ್ಸವ ಆರಂಭವಾಗುವ ಹಿನ್ನೆಲೆಯಲ್ಲಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಕರೆದಿದ್ದ ಹಿಂದು ಮುಸ್ಲಿಂ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲಿನಿಂದಲೂ ನೆಡಯುತ್ತಿರುವ ಈ ಉರುಸ್ ಕಾರ್ಯಕ್ರಮಕ್ಕೆ ಎಲ್ಲಾ ಹಿಂದು ಮುಸ್ಲಿಂರು ಒಟ್ಟಾಗಿ ಸೇರಿ ಉರುಸ್ನ್ನು ಯಶಸ್ವಿಯಾಗಿ ನಡೆಸಲು ಕರೆ ನೀಡಿದರು.
ಪುರಸಭಾ ಸದಸ್ಯ ಬಾಬುಸಾಹೇಬ್ ಮಾತನಾಡಿ ಈ ಬಾರಿ ತಾತಯ್ಯನವರ ಉರುಸ್ಗೆ ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು ಅದಕ್ಕಾಗಿ ಹೆಚ್ಚು ಮಹಿಳಾ ಪೋಲಿಸ್ ಸಿಬ್ಬಂದಿಯನ್ನು ನೇಮಿಸಲು ಸಲಹೆ ನೀಡಿದರು.
ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಉರುಸ್ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.
ಶಾಂತಿ ಸಭೆಯಲ್ಲಿ ಪಿ.ಎಸ್.ಐ ಕೆ.ಪ್ರಭಾಕರ್, ಪ್ರೊಪೆಷನರಿ ಪಿ.ಎಸ್.ಐ ನಾಗರಾಜುಮೇಕ, ಪೋಲಿಸ್ ಗುಪ್ತಮಾಹಿತಿ ಸಿಬ್ಬಂದಿ ಆರ್.ದಯಾನಂದ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಕಾಂಗ್ರೆಸ್ ಪಕ್ಷದ ವಿಧಾನಸಭಾ ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್,  ಗೋರಿ ಕಮಿಟಿಯ ಟಿ.ರಾಮಯ್ಯ, ಘನ್ನಿಸಾಬ್, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ, ದಲಿತ ಮುಖಂಡ ಮಲ್ಲಿಕಾಜರ್ುನ್,  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ,  ನಾಮಿನಿ ಸದಸ್ಯ ಎಂ.ಎಸ್.ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವುದೇ ಮಹಿಳಾ ದಿನಾಚರಣಾ ಕಾರ್ಯಕ್ರಮದ ಉದ್ದೇಶ
                                             
ಚಿಕ್ಕನಾಯಕನಹಳ್ಳಿ,ಮಾ.10 : ಕಾಲಕ್ಕೆ ತಕ್ಕಂತೆ ಜೀವನ ಶೈಲಿ ಬದಲಾಗುತ್ತಿದೆ ಅದರಂತೆ ಮಹಿಳೆಯರು, ಎಲ್ಲಾ ಕ್ಷೇತ್ರದಲ್ಲೂ ಭಾಗಿಯಾಗಿದ್ದಾರೆ ಆದರೂ ಅವರಿಗೆ ಜೀವನ ಸುಧಾರಣೆಯಲ್ಲಿ ಒತ್ತಡ ಹೆಚ್ಚಿರುತ್ತದೆ ಈ ಬಗ್ಗೆ ಮಹಿಳೆಯರಿಗೆ ಗಮನ ಹರಿಸಿ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವುದೇ ಮಹಿಳಾ ದಿನಾಚರಣಾ ಕಾರ್ಯಕ್ರಮದ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದ ಅವರು ಮಹಿಳೆಯರು ಪುರುಷರಿಗಿಂತ ಮುಂದೆ ಇರುವುದನ್ನು ಇಂದು ನಾವು ಕಾಣುತ್ತಿದ್ದೇವೆ, ಸಕರ್ಾರವು ಇಂದು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುತ್ತಿದೆ ಇದರ ಜೊತೆಗೆ ತಮ್ಮ ಶ್ರಮವನ್ನು ಹೆಚ್ಚಿನದಾಗಿ ಬಳಸಿಕೊಂಡರೆ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ದಾರಿ ಕಾಣಲು ಸಾಧ್ಯ ಎಂದರು.
ನ್ಯಾಯಾಧೀರಾದ ಕೆ.ನಿರ್ಮಲ ಮಾತನಾಡಿ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಎರಡು ಕಣ್ಣುಗಳಿದ್ದಂತೆ, ಸಮಾಜದಲ್ಲಿ ಪುರುಷರು ಎಷ್ಟು ಮುಖ್ಯವೋ ಅಷ್ಟೇ ಮಹಿಳೆಯರು ಮುಖ್ಯ, ದೇಶದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನಮಾನವಿದೆ, ಹಿಂದಿನ ಕಾಲದಿಂದಲೂ ಹೆಣ್ಣನ್ನೇ ದೇವತೆ, ಆದಿಶಕ್ತಿ, ಮಾತೆಯರು ಎಂಬ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ, ಇಂದು ಮಹಿಳೆಯರಿಗೆ ಸಕರ್ಾರವು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿರುವುದು ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಸಮಾಜದ ಸೇವೆಯನ್ನು ಮಾಡುವಲ್ಲಿ ಸಹಕಾರಿಯಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ 1808ರಲ್ಲಿ ಇಗ್ಲೆಂಡ್ ದೇಶದಲ್ಲಿ ಮಾಚರ್್ 8ರಂದು ಕಾಮರ್ಿಕರು ನಡೆಸಿದ ಹೋರಾಟದ ಫಲವಾಗಿ ಮಹಿಳಾ ದಿನಾಚರಣೆ ಜಾರಿಗೆ ಬಂತು ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಲಭಿಸಲು ಫಲಕಾರಿಯಾಯಿತು, ನಮ್ಮ ರಾಜ್ಯದಲ್ಲಿ 1975ರಿಂದ ಮಾಚರ್್ 8ರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸ್ತ್ರೀಯರಿಗೆ ಸಮಾನ ಅವಕಾಶ ಸಿಗುತ್ತಿರಲಿಲ್ಲ, ಸ್ತ್ರೀಯರ ಅಭಿವೃದ್ದಿಗೆ ಅನೇಕ ಕಾನೂನುಗಳು ಜಾರಿಯಾಗಿದ್ದು ಅದರಲ್ಲಿ ವರದಕ್ಷಿಣೆ ನಿಷೇದ ಕಾಯಿದೆ, ಕೌಟುಂಬಿಕ ದೌರ್ಜನ್ಯ ಕಾಯಿದೆ, ಆಸ್ತಿಯ ಹಕ್ಕು, ವಿವಾಹ ಹಕ್ಕು   ಮಹಿಳೆಯರ ಏಳಿಗೆಗಾಗಿ ಕಾನೂನುಗಳು ರೂಪಿತವಾಗಿದ್ದು ಸಮಾಜದಲ್ಲಿ ಮಹಿಳೆಯರು ಮುಂದೆ ಬರಲು ಈ ಕಾಯಿದೆಗಳು ಸಹಕಾರಿಯಾಗಿವೆ ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಈ.ಪರ್ವತಯ್ಯ ಸ್ವಾಗತಿಸಿದರೆ, ವಕೀಲರ ಸಂಘದ ಕಾರ್ಯದಶರ್ಿ ರಾಜಶೇಖರ್ ವಂದಿಸಿದರು.