Thursday, February 10, 2011


ಫೆ.16ರಂದು 3 ಸಾವಿರ ಯುವಕರಿಗೆ ಸ್ಥಳದಲ್ಲೇ ನೇಮಕಾತಿ ಆದೇಶ: ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಫೆ.10: ಕನಿಷ್ಟ ಮೂರು ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಆದೇಶ ಪತ್ರ ವಿತರಿಸಲಾಗುವುದಲ್ಲದೆ, ಅಬಾಲ ವೃದ್ದರಾಗಿ ಎಲ್ಲಾ ವರ್ಗದ ಜನರ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಸಿ.ಬಿ.ಎಸ್. ಸಮಾಜ ಸೇವಾ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಭಾಗದ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು, ತನ್ಮೂಲಕ ಬಡ ಕುಟುಂಬಗಳು ಆಥರ್ಿಕವಾಗಿ ಸದೃಢಗೊಳ್ಳಬೇಕು ಎಂಬ ಉದ್ದೇಶ ಅದೇ ರೀತಿ, ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಯ ದೃಷ್ಠಿಯನ್ನಿಟ್ಟುಕೊಂಡು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಾಮಾನ್ಯ ಜನತೆಗೂ ತಲುಪುವಂತಾಗಲಿ ಎಂಬ ಸದುದ್ದೇಶದಿಂದ, ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯ ಸಹಕಾರದಲ್ಲಿ ನಮ್ಮ ಹುಟ್ಟು ಹಬ್ಬದಂದು ಈ ಎರಡೂ ಕಾರ್ಯಕ್ರಮಗಳನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ 16 ರಂದು ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯಾದ್ಯಂತ ಯುವಕರು ಭಾಗವಹಿಸಲಿದ್ದು, 12 ರಿಂದ 15 ಸಾವಿರ ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸ್ಥಳೀಯ ತಾ.ಪಂ.ಯ ಕಾರ್ಯನಿವರ್ಾಹಣಾಧಿಕಾರಿಗಳ ಮೂಲಕ ಎಲ್ಲಾ ಪಂಚಾಯ್ತಿಯ ನಿರುದ್ಯೋಗಿಗಳಿಗೆ ವಿಷಯ ತಿಳಿಸಿದ್ದು, ಇದೇ ಸಂದರ್ಭದಲ್ಲಿ ನಿರುದ್ಯೋಗಿ ಯುವಕರ ವೈಯಕ್ತಿಕ ವಿವರಗಳ ದಾಖಲೀಕರಣವನ್ನು ಮಾಡಲಾಗುವುದು ಎಂದರು.
ಉದ್ಯೋಗಾಂಕ್ಷಿಗಳು ತಮ್ಮ ಬಯೋಡೇಟಾ ಹಾಗೂ ಇತ್ತೀಚಿನ ಮೂರು ಭಾವಚಿತ್ರಗಳನ್ನು ಕಡ್ಡಾಯವಾಗಿ ಮೇಳಕ್ಕೆ ತರಬೇಕು ಎಂದರಲ್ಲದೆ, ಈ ಮೇಳ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟನಲ್ಲಿ ಸಾಗುವುದರ ಜೊತೆಗೆ ಉದ್ಯೋಗ ಹುಡುಕಿಕೊಂಡ ಹೊರಟವರಿಗೆ ಮಾರ್ಗ ಸೂಚಿಯಾಗಿಯೂ ಕೆಲಸ ನಿರ್ವಹಿಸುವುದು.
ಈ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಟಫೇ, ವಿಡಿಯೋಕಾನ್ ವಿಕ್ರಾಂತ್ ಟೈರ್ಸ್, ಜೆ.ಕೆ.ಟೈರ್ಸ್, ರಿಲೆಯಾನ್ಸ್ ಫ್ರೆಶ್, ಅಪೊಲೋ ಪವರ್ ಸಿಸ್ಟಂ, ಮೋರ್ ಆದಿತ್ಯ ಬಿಲರ್ಾ, ಹಿಂದೂಜಾ, ವಿನ್ನರ್ ಗ್ರೂಪ್, ಶ್ರೀಸಾಯಿ ಟೆಲಿಕಮ್ಯುನಿಕೇಶನ್, ಸೇರಿದಂತೆ 45 ರಿಂದ 50 ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಮೇಳದಲ್ಲಿ ಭಾಗವಹಿಸುವರು ಎಂದರು.
ಸಕರ್ಾರ ತಾಲೂಕಿನ ಸಾಲ್ಕಟ್ಟೆ ಬಳಿ ಒಂದು ಸಾವಿರ ಎಕರೆ ಭೂ ಪ್ರದೇಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜಿಸಿದ್ದು, ಅಲ್ಲಿ ಗಾಮರ್ೆಂಟ್ಸ್ ಫ್ಯಾಕ್ಟರಿ ಅಥವಾ ಐರನ್ ಸ್ಪಾಂಜಸ್ ಕಾಖರ್ಾನೆಗೆ ಅವಕಾಶ ನೀಡಬಹುದು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರಕ್ಕೆ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಸುಮಾರು 130 ತಜ್ಞ ವೈದ್ಯರ ಸಿಬ್ಬಂದಿ ಭಾಗವಹಿಸುತ್ತಾರೆ, ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ ಮತ್ತು ಮೂತ್ರಾಂಗಗಳ ಕಲ್ಲು, ಸಕ್ಕರೆ ರೋಗ, ಗಭರ್ಿಣ ಮತ್ತು ಸ್ತ್ರೀರೋಗ, ಕೀಲು ಮತ್ತು ಮೂಳೆ, ಕಿವಿ ಮೂಗು ಗಂಟಲು, ಕಣ್ಣು, ಚರ್ಮ, ಮಕ್ಕಳ ತಜ್ಞರು ಸೇರಿದಂತೆ ಮಾನಸಿಕ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ವೈದ್ಯಕೀಯ ತಪಾಸಣೆ ನಡೆಸಿದ ನಂತರ, ಗಂಭೀರ ವ್ಯಾಧಿಗಳಿಗೆ ತಜ್ಞ ವೈದ್ಯರುಗಳಿಂದ ಚಿಕಿತ್ಸೆಗಳನ್ನು ನೀಡಿ ಅಗತ್ಯ ಬಂದಲ್ಲಿ ಆದಿ ಚುಂಚುನಗಿರಿ ಆಸ್ಪತ್ರೆಗೆ ಹೋಗಲು ಗುರುತಿನ ಚೀಟಿ ನೀಡಲಾಗುವುದು ಹಾಗೂ ಆಸ್ಪತ್ರೆ ವಾಹನದಲ್ಲಿ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ ಪುನಃ ವಾಪಸ್ಸು ಕರೆತರಲಾಗುವುದು. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತವಾಗಿ ಆಪರೇಷನ್ ಮಾಡಲಾಗುವುದು, ರೋಗಿಗೆ ಊಟದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಜನರಲ್ ವಾಡರ್್ಗಳ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು.
ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಹಾಗೂ ಉಚಿತ ಕನ್ನಡಕವನ್ನು ನೀಡಲಾಗುವುದು ಎಂದರು.
ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಸಿ.ಬಿ.ಎಸ್. ಅಭಿಮಾನಿ ಬಳಗದ ವತಿಯಿಂದ ಬಸವೇಶ್ವರ ನಗರ ಹಾಗೂ ಕೇದಿಗೆಹಳ್ಳಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಉಚಿತವಾಗಿ ಸಿದ್ದ ಉಡುಪುಗಳನ್ನು ವಿತರಿಸಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಮಾಯಸಂದ್ರ ಆದಿಚುಂಚನ ಗಿರಿ ಮಠದ ಶಿವಕುಮಾರ ನಾಥ ಸ್ವಾಮಿ, ಆದಿಚುಂಚನಗಿರಿ ಮಠದ ಕಾರ್ಯದಶರ್ಿ ನಿರ್ಮಲಾನಂದನಾಥಸ್ವಾಮಿ, ಎ.ಐ.ಎಂ.ಎಸ್.ನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ವೈದ್ಯಾಧೀಕ್ಷಕ ಡಾ.ಎಸ್.ಬಿ.ವಸಂತಕುಮಾರ್ ಉಪಸ್ಥಿತರಿರುವರು ಎಂದು ಸಿ.ಬಿ.ಸುರೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಗೋಷ್ಠಿಯಿಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಕೊ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ಸದಸ್ಯರುಗಳಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರವಿ(ಮೈನ್ಸ್) ಹಾಜರಿದ್ದರು.

ಹಂದನಕೆರೆಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 1.50 ಕೋಟಿ ರೂ ಬಿಡುಗಡೆ
ಚಿಕ್ಕನಾಯಕನಹಳ್ಳಿ,ಫೆ.10: ಸಕರ್ಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಾನಗಳಲ್ಲಿ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಅಭಿವೃದ್ದಿಯಾಗುತ್ತದೆ ಎಂದು ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್ ಹೇಳಿದರು.
ತಾಲೂಕಿನ ಹಂದನಕೆರೆಯಲ್ಲಿ ನಡೆದ ಸುವರ್ಣ ಗ್ರಾಮೋದಯ ಯೋಜನೆ ಹಾಗೂ ಶಿಕ್ಷಕರು ವಸತಿ ನಿಲಯ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರವಾಗಿರುವ ಹಂದನಕೆರೆ ಒಂದೇ ಮನೆಯಲ್ಲಿ 5ರಿಂದ 6ಜನ ವಾಸಿ ಮಾಡುವುದರಿಂದ ಮನೆಗಳು ಕಿಸ್ಕಿಂದೆಯಾಗಿದೆ, ಆದ್ದರಿಂದ ಶಾಸಕರು ಈ ಗ್ರಾಮದ ಜನತೆಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು. ಜಿ.ಪಂ.ಅಧ್ಯಕ್ಷರಾದ ಸಮಯದಲ್ಲಿ 28ಗ್ರಾಮ ಪಂಚಾಯ್ತಿಗಳಿಗೆ ತಲಾ 29 ನಿವೇಶನ ಹಂಚಿದ್ದಾಗಿ ತಿಳಿಸಿದ ಅವರು, ಈಗ ಪ್ರತಿ ಗ್ರಾ.ಪಂ.ಗಳಿಗೆ 50 ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ರಾಜೀವ್ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡಬೇಕಾದೆರೆ, ನಿವೇಶನ ಬೇಕು, ಆದರೆ ಶಾಸಕರಿಗೆ ಮನೆ ನೀಡುವ ಅಧಿಕಾರವಿಲ್ಲ ಎಂದು ವಿಷಾದಿಸಿದರು.
ಎಲ್ಲವೂ ಸಕರ್ಾರದ ಕೈಯಲ್ಲಿದೆ, ಹಿಂದೆ ಶಾಸಕರಿಗೆ ಮನೆ ಹಾಗೂ ನಿವೇಶನ ನೀಡುವ ಅಧಿಕಾರವಿತ್ತು. ಇದನ್ನು ಸಕರ್ಾರ ಕಿತ್ತುಕೊಂಡಿದೆ, ಈ ಭಾಗದಲ್ಲಿನ ಜನ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಪ್ರತಿ ಮನೆಯಲ್ಲಿ 5ರಿಂದ 6ಜನ ವಾಸಿಸುತ್ತಿದ್ದಾರೆ ಆದ್ದರಿಂದ ಈ ಹಂದನಕೆರೆ ಗ್ರಾಮದ ಬಡವರಿಗೆ ನಿವೇಶನ ಹಾಗೂ ಮನೆ ನಿಮರ್ಿಸಿ ಕೊಡುವ ಕಡೆ ಸಕರ್ಾರ ಶಾಸಕರು ಗಮನ ಹರಿಸುವಂತೆ ತಿಳಿಸಿದರು.
ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಗುತ್ತಿಗೆದರರು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಗೆ ಬೇಗನೇ ಕಾಮಗಾರಿ ಪೂರೈಸಿಕೊಡಬೇಕು ಇದಕ್ಕೆ ಗ್ರಾಮಸ್ಥರೆಲ್ಲರೂ ಸಹಕಾರ ನೀಡುತ್ತೇವೆಂದರು, ಹಂದನಕೆರೆ ಸಮುದಾಯ ಭವನಕ್ಕೆ 22ಲಕ್ಷ ಮಂಜೂರಾಗಿದೆ, ಇಲ್ಲಿ ಮದುವೆ, ಮುಂಜಿ ಮಾಡಲು ಈ ಸಮುದಾಯ ಭವನ ಚಿಕ್ಕದಾಗುತ್ತದೆ ಆದ್ದರಿಂದ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ದೊಡ್ಡ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳಬೇಕೆಂದು ರಘುನಾಥ್ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸುವರ್ಣ ಗ್ರಾಮದ ಯೋಜನೆ ಅಡಿಯಲ್ಲಿ ಹಂದನಕೆರೆಗೆ 1.48.ಕೋಟಿ ರೂ ಬಿಡುಗಡೆಯಾಗಿದ್ದು, ಕಾಂಕ್ರಿಟ್ ರಸ್ತೆ ನಿಮರ್ಾಣಕ್ಕೆ 20.35 ಲಕ್ಷ, ಡಾಂಬರು ರಸ್ತೆ ನಿಮರ್ಾಣಕ್ಕೆ 42.65 ಲಕ್ಷ, ಸಿಮೆಂಟ್ ಕಾಂಕ್ರಿಕಟ್ ಚರಂಡಿ ನಿಮರ್ಾಣಕ್ಕೆ ಹಾಗೂ 8ಸೇತುವೆ ನಿಮರ್ಾಣಕ್ಕೆ 36ಲಕ್ಷ, ಸಮುದಾಯ ಭವನ್ಕೆ 22ಲಕ್ಷ, ಅಂಗನವಾಡಿ ಕಟ್ಟಡಕ್ಕೆ 5ಲಕ್ಷ ತ್ಯಾಜ್ಯ ವಸ್ತು ವಿಲೇವಾರಿಗಾಗಿ 10ಲಕ್ಷ, ತರಬೇತಿಗಾಗಿ 9.2ಲಕ್ಷ, ವಿದ್ಯುತ್ ಸಲಕರಣೆಗೆ 1.48ಲಕ್ಷ ಐ.ಇ ಗೆ 1.48ಲಕ್ಷ ಬಿಡುಗಡೆಯಾಗಿದ್ದು ಸಕರ್ಾರ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಕೋಂಟ್ಯಾಂತರ ರೂ ಹಣ ಬಿಡುಗಡೆ ಮಾಡಿದೆ, ಇದರ ಸದುಪಯೋಗ ಪಡಿಸಿಕೊಂಡು ಗುಣ ಮಟ್ಟದ ಕಾಮಗಾರಿಯ ಕಡೆ ಜನರು ಗಮನ ಹರಿಸಿ ಎಂದರಲ್ಲದೆ, ಹಂದನಕೆರೆಗೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಾಗೂ ಕೃಷಿ ಮಾರುಕಟ್ಟೆ ತರಲು ಅಧಿವೇಶನದಲ್ಲಿ ಪ್ರಾಸ್ತಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸೂತಿ ಹಾಗೂ ಜನನಿ ರಕ್ಷ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರ ವಸತಿ ಗೃಹ ಕೆಲವು ಕಡೆ ಪಾಳು ಬಿದ್ದಿವೆ, ಹಂದನಕೆರೆ ಹೃದಯ ಭಾಗದಲ್ಲಿ ನಿಮರ್ಿಸುತ್ತಿರುವ 8ವಸತಿ ಗೃಹಗಳಲ್ಲಿ ಶಿಕ್ಷಕರು ವಾಸಮಾಡುವ ಮೂಲಕ ಶಿಕ್ಷಣದ ಅಭಿವೃದ್ದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯರಾದ ಹೇಮಾವತಿ, ಮಂಜುನಾಥ್, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಈರಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು ಇ.ಓ ದಯಾನಂದ್ ಉಪಸ್ಥಿತರಿದ್ದರು.