Saturday, March 19, 2011
ದಿನದ ಲೆಕ್ಕದಲ್ಲಿ ಅಧಿಕಾರ ಹಿಡಿಯುವ ಅಧ್ಯಕ್ಷರಿಂದ ಪುರಸಭೆ ಅಭಿವೃದ್ದಿ ಸಾಧ್ಯವಿಲ್ಲ: ಸಿ.ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.19: 180 ದಿನಕ್ಕೆ ಒಬ್ಬೊಬ್ಬರಂತೆ ಚಿ.ನಾ.ಹಳ್ಳಿಯ ಪುರಸಭೆಯ ಅಧ್ಯಕ್ಷರ ಬದಲಾವಣೆಯಾಗುತ್ತಿದ್ದು ಪಟ್ಟಣದ ಯಾವುದೇ ಅಭಿವೃದ್ದಿಯಾಗುತ್ತಿಲ್ಲ, ಈ ರೀತಿ ದಿನದ ಲೆಕ್ಕದಲ್ಲಿ ಬದಲಾಗುತ್ತಿರುವ ಅಧ್ಯಕ್ಷರ ಚುನಾವಣೆಯನ್ನು ವಿರೋಧ ಪಕ್ಷದವರು ಬಹಿಷ್ಕರಿತ್ತೇವೆ ಎಂದು ಪುರಸಭಾ ವಿರೋಧ ಪಕ್ಷದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಸಾರ್ವಜನಿಕರು 17 ಜನ ಜೆ.ಡಿ.ಎಸ್ ಸದಸ್ಯರನ್ನು ಆಯ್ಕೆ ಮಾಡಿ 6ಜನ ವಿರೋಧ ಪಕ್ಷದ ಸದಸ್ಯರನ್ನು ಆರಿಸಿ ಕಳುಹಿಸಿದ್ದು ಅವರಲ್ಲಿ 6 ಸದಸ್ಯರನ್ನು ಅಧ್ಯಕ್ಷರನ್ನಾಗಿ 4ಸದಸ್ಯರನ್ನು ಉಪಾಧ್ಯಕ್ಷರನ್ನಾಗಿ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಕೇವಲ ಮೂರು ವರ್ಷಗಳಲ್ಲಿ ಬದಲಾಯಿಸಿದ್ದು, ನಮ್ಮ ಪುರಸಭೆ ಮಾತ್ರ 12ಜನ ಅಧಿಕಾರ ಹಿಡಿದರೂ ಅಭಿವೃದ್ದಿಯಾಗದೇ ಹಿಂದುಳಿದಿದೆ ಎಂದಿರುವ ಅವರು, ಸಕರ್ಾರದಿಂದ ಕೋಟಿಗಟ್ಟಲೇ ಅನುದಾನ ಬಂದರೂ ಪಟ್ಟಣ ಅಭಿವೃದ್ದಿಯಾಗದೆ ಅಧಿಕಾರಸ್ಥರು ಮಾತ್ರ ಅಭಿವೃದ್ದಿಯಾಗುತ್ತಿದ್ದಾರೆ, ಈ ಕಾರಣ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಇನ್ನಾದರೂ ದೀರ್ಘಕಾಲದ ಅಧ್ಯಕ್ಷರ, ಉಪಾಧ್ಯಕ್ಷರನ್ನು ನೇಮಿಸಿ ಪಟ್ಟಣದ ಅಭಿವೃದ್ದಿಗೆ ಸಹಕರಿಬೇಕು ಮತ್ತು ಪಟ್ಟಣದ ನೈರ್ಮಲ್ಯ , ಕುಡಿಯುವ ನೀರಿನ ವ್ಯವಸ್ಥೆ ಶೋಚನಿಯವಾಗಿದೆ ಅದರ ಬಗ್ಗೆ ಗಮನಿಸಬೇಕು ಎಂದಿದ್ದಾರೆ.

ಬ್ಯಾಲಕೆರೆಮ್ಮನ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.19: ಬ್ಯಾಲದಕೆರೆ, ಮಾಳಿಗೆಹಳ್ಳಿ ಕಸಬಾ ಹೋಬಳಿಯ ಕೆಂಪಮ್ಮ ದೇವರ ಜಾತ್ರಾಮಹೋತ್ಸವವನ್ನು ಇದೇ 19ರಿಂದ 30ರವರಗೆ ಏರ್ಪಡಿಸಲಾಗಿದೆ.
19ರಂದು ಧ್ವಜಾರೋಹಣ, 23ರಂದು ಅಮ್ಮನವರ ಮದನಗಿತ್ತಿ ಶಾಸ್ತ್ರ, 25ರಂದು ಅಮ್ಮನವರ ಆರತಿ ಬಾನ, 26ರಂದು ಕೆಂಪಮ್ಮದೇವಿಯವರಿಗೆ ಆರತಿ, 28ರಂದು ಗ್ರಾಮದೇವತೆಗಳ ಆಗಮನ, 29ರಂದು ದೇವರ ಗಂಗಾಸ್ನಾನ, ರಥೋತ್ಸವ ಮತ್ತು ಸಿಡಿ, 30ರಂದು ಅಮ್ಮನವರಿಗೆ ಓಕಳಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಕ್ತ ಮಂಡಳಿ ತಿಳಿಸಿದೆ.
ನವೋದಯ ಕಾಲೇಜ್ನ ಜಾನಪದ ತಂಡಕ್ಕೆ ಅಧಿಕ ಬಹುಮಾನಗಳು
ಚಿಕ್ಕನಾಯಕನಹಳ್ಳಿ,ಮಾ.:19: ತಾಲೂಕಿನ ನವೋದಯ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳು ಕೆ.ಬಿ.ಕ್ರಾಸ್ನ ರಂಭಾಪುರಿ ಮಠದ ಆವರಣದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಕಾಲೇಜಿನ ವಿದ್ಯಾಥರ್ಿಗಳು ಸ್ಪಧರ್ೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸ್ಪಧರ್ೆಗಳಲ್ಲಿ ಪಾಲ್ಗೊಂಡು ವಿಜಯಶಾಲಿಯಾದವರೆಂದರೆ ಅನಿಲ್ಕುಮಾರ್-ಜಾನಪದ ನೃತ್ಯ, ಮಧು-ಗೀಗೀ ಪದ, ರಂಗಸ್ವಾಮಿ-ಕೋಲಾಟ, ರವಿಕುಮಾರ್-ಕೋಲಾಟ, ವಿನಯ್ಕುಮಾರ್ ಚರ್ಮವಾಧ್ಯ, ಹರೀಶ್ ಜಾನಪದ ಗೀತೆ, ನಾಗರಾಜ-ಲಾವಣಿ, ರಂಗನಾಥ-ಭಾವಗೀತೆ, ಅನ್ನಪೂರ್ಣ-ಜಾನಪದ ನೃತ್ಯ, ಪುಷ್ಪ ಗೀಗೀಪದ, ಪ್ರತಿಭಾ-ಭಜನೆ, ಅಶ್ವಿನಿ-ಸೋಬಾನೆ ಪದ, ಲಾವಣಿ-ಅನ್ನಪೂರ್ಣ, ಭಾವಗೀತೆ-ಅಶ್ವಿನಿ, ಲಾವಣಿ-ಅಶ್ವಿನಿ, ರಾಗಿಬೀಸೋ ಪದ-ಅನ್ನಪೂರ್ಣ, ಕೋಲಾಟ-ಅನಿಸಾ ಬಾನು, ಭಾವಗೀತೆ-ಪ್ರತಿಭಾ ಎಂ.ಎನ್ ಪ್ರಶಸ್ತಿಗಳ್ನು ಪಡೆದು ಶಿವಮೊಗ್ಗದಲ್ಲಿ ನಡೆಯಲಿರುವ ಬೆಂಗಳೂರು ವಿಭಾಗ ಮಟ್ಟದ ಯುವಜನ ಮೇಳಕ್ಕೆ ಆಯ್ಕೆಯಾಗಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ ಮತ್ತು ಪ್ರೊ.ಎಸ್.ಎಲ್.ಶಿವಕುಮಾರಸ್ವಾಮಿ ಇವರನ್ನು ಅಭಿನಂದಿಸಿದ್ದಾರೆ.
ಕೋಪ ಬೆಂಕಿಗೆ ಸಮಾನ
ಚಿಕ್ಕನಾಯಕನಹಳ್ಳಿ,ಮಾ.19 : ಕೋಪ ಮಾಡಿಕೊಂಡರೆ ತನ್ನನ್ನೇ ತಾನು ಹಿಂಸಿಸಿದಂತಾಗುತ್ತದೆ ಕೋಪವೆಂಬ ಬೆಂಕಿಯನ್ನು ಇತರರಿಗೆ ಎಸೆಯುವ ಮುನ್ನ ನಿಮ್ಮನ್ನೇ ಸುಡುವುದನ್ನು ಎಚ್ಚರಿಕೆಯಿಂದ ಗಮನಿಸಿ ಎಂದು ಭಾರತ ಕ್ರಿಕೆಟ್ ತಂಡದ ಯೋಗಗುರು ಯೋಗರತ್ನ ಡಾ.ಎಸ್.ಎನ್.ಓಂಕಾರ್ರವರು ವ್ಯಾಖ್ಯಾನಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿದ್ಯಾಥರ್ಿಗಳೆಲ್ಲರ ಮನ ಸೂರೆಗೊಂಡು ಯಶಸ್ವಿಗೊಳಿಸಿದರು. ಖ
ಸಮಾರಂಭದಲ್ಲಿ ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ, ಎ.ಎನ್.ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.