Monday, March 30, 2015


 ಜಾತಿಗಣತಿಯಲ್ಲಿ ವೈಷ್ಣವ ಜನಾಂಗದವರು ಶ್ರೀ ವೈಷ್ಣವ ಎಂದೇ ನಮೂದಿಸಲು ಮನವಿ
                    
ಚಿಕ್ಕನಾಯಕನಹಳ್ಳಿ : ರಾಜ್ಯ ಸಕರ್ಾರ ಜಾತಿಗಳ ಗಣತಿ ಮಾಡಲು ಆದೇಶಿಸಿದ ಹಿನ್ನಲೆಯಲ್ಲಿ, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಶ್ರೀ ವೈಷ್ಣವ ಸಮುದಾಯದವರು ಶ್ರೀ ವೈಷ್ಣವ ಎಂದೇ ಗಣತಿಯಲ್ಲಿ ನಮೂದಿಸುವಂತೆ ತಾಲ್ಲೂಕು ಶ್ರೀ ವೈಷ್ಣವ ಸಂಘದ ಅಧ್ಯಕ್ಷ ಸಾಲ್ಕಟ್ಟೆ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.99ರಷ್ಟು ಜನ ಅರ್ಚಕ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವ ಶ್ರೀ ವೈಷ್ಣವರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದು ಯಾವುದೇ ಜಮೀನು ಇಲ್ಲದೆ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಹಿಂದುಳಿದವರಿಗೆ ನೀಡುವ ಸವಲತ್ತುಗಳನ್ನು ಶ್ರೀ ವೈಷ್ಣವ ಸಮುದಾಯದವರಿಗೂ ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದ್ದಾರೆ, ಶ್ರೀ ವೈಷ್ಣವ ಜನಾಂಗದ ಉಪಜಾತಿಗಳ ಪ್ರಕಾರ, ವೈಷ್ಣವ, ಶಾತ್ತದ ಶ್ರೀ ವೈಷ್ಣವ, ಸಾತಾನಿ, ಸಮಯರಾಯ, ಕದ್ರಿವೈಷ್ಣವ, ಸಾತ್ತದವಲ್ ಈ ಎಲ್ಲಾ ಉಪಪಂಗಡಗಳನ್ನು ಶ್ರೀ ವೈಷ್ಣವ ಎಂದೇ ನಮೂದಿಸಲು ಮನವಿ ಮಾಡಿದ್ದಾರೆ.
 ಮೇಲು ಕೋಟೆಯ ಮಜುರಾಯ ಇಲಾಖೆಗೆ ಸೇರಿದ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಉಸ್ತುವಾರಿ ನಡೆಸಲು ಯದುಗಿರಿ ಯತಿರಾಜ ಮಠದ ವಶಕ್ಕೆ ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ರಾಮಾನುಜಾಚಾರ್ಯರು ಜಾತಿ ಬೇಧವಿಲ್ಲದೆ ಎಲ್ಲರನ್ನೂ ಒಂದೇ ಎಂದು ಸಾರಿದ ಮಹಾನ್ಪುರುಷ, 1017ರಲ್ಲಿ ಜನಿಸಿದ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿದ್ದರು. 2017ನೇ ಇಸವಿಗೆ ಅವರ ಸಹಸ್ರಮನೋತ್ಸವ ಜಯಂತ್ಯೋತ್ಸವವನ್ನು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಸಲು ತೀಮರ್ಾನಿಸಲಾಗಿದೆ ಎಂದರಲ್ಲದೆ ಅಂದೇ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ ನಿಮರ್ಾಣಕ್ಕೆ ಹರಿಜನರ ಸಹಕಾರದೊಂದಿಗೆ ದೇವಾಲಯ ನಿಮರ್ಾಣ ಮಾಡಲು ಸಹಕಾರ ಪಡೆದಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಿಪಟೂರು ಶ್ರೀ ವೈಷ್ಣವ ಸಂಘದ ಅಧ್ಯಕ್ಷ ದೇವರಾಜು, ಗುಬ್ಬಿ ವೈಷ್ಣವ ಸಂಘದ ತಾ.ಅಧ್ಯಕ್ಷ ದಯಾನಂದ್, ತಾ.ಉಪಾಧ್ಯಕ್ಷ ಶ್ರೀನಿವಾಸ್, ಕೇಶವಮೂತರ್ಿ, ಕೃಷ್ಣಮೂತರ್ಿ, ಸಾದರಹಳ್ಳಿ ಗ್ರಾ.ಪಂ.ಸದಸ್ಯ ರಂಗನಾಥ್, ಸಿದ್ದನಕಟ್ಟೆ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ರಾಮ ಸಪ್ತಾಹ ಏಳು ದಿನಗಳ ಕಾರ್ಯಕ್ರಮ
                                      

ಚಿಕ್ಕನಾಯಕನಹಳ್ಳಿ,: ಪಟ್ಟಣದ ದೇವಾಂಗ ಬೀದಿಯ ಶ್ರೀ ರಾಮ ಸಪ್ತಾಹದ ಸಮಿತಿ ವತಿಯಿಂದ ಶ್ರೀ ರಾಮ ಸಪ್ತಾಹ 71 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದು ಶ್ರೀ ರಾಮನವಮಿ ಅಂಗವಾಗಿ ಮಾಚರ್್ 28ರಿಂದ ಏಪ್ರಿಲ್ 3 ರವರೆಗೆ ಏಳು ದಿನಗಳ ಕಾಲ ಶ್ರೀ ರಾಮ ಸಪ್ತಾಹ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾಚರ್್ 20 ರಂದು ಶ್ರೀ ರಾಮ ಭಕ್ತಿ ಗೀತೆಗಳ ಗಾಯನ , 30 ರಂದು ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ, 31ರಂದು ಅಭಿನವ ಕಲಾ ಸಂಘದವರಿಂದ ನಗೆ ನಾಟಕ ಕಾರ್ಯಕ್ರಮ, ಏಪ್ರಿಲ್ 1ರಂದು ಯುವ ಕಲಾವಿದರಿಂದ ನಗೆಹನಿ ಮತ್ತು ಏಕಪಾತ್ರಾಭಿನಯ, 2ರಂದು ಬನಶಂಕರಿ ಮಹಿಳಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಕೊನೆಯ ದಿನ 3ರಂದು ಬೆಳಗ್ಗೆ 9ಗಂಟೆಗೆ ಹೋಮಾದಿ ಕಾರ್ಯಕ್ರಮಗಳು ಪೂಣರ್ಾಹುತಿ ಬೆಳಗ್ಗೆ 11.30ಕ್ಕೆ ವಸಂತೋತ್ಸವ ಹಾಗೂ ಬನಶಂಕರಿ ದೇವಿಯವರ ಉತ್ಸವ ನಡೆಯಲಿದೆ.
ರಾತ್ರಿ 9ಕ್ಕೆ ಸಮಾರೋಪ ಸಮಾರಂಭ ನಡೆಯಲಿದು,್ದ ಏಪ್ರಿಲ್ 7ರಂದು ಭಕ್ತಾಧಿಗಳ ನೆರವಿನೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.  
ಈ ಸಂದರ್ಭದಲ್ಲಿ ಮಾತನಾಡಿದ ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್ ಮಾತನಾಡಿ, 71ವರ್ಷಗಳಿಂದಲೂ ಶ್ರೀ ರಾಮ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು ಶ್ರೀ ರಾಮನವಮಿಯ ದಿನದಿಂದ ಏಳು ದಿನಗಳ ವರೆಗೆ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ ನಂತರ ಓಕಳಿ,ವಸಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಕನ್ನಡ ಸಂಘದ ವೇದಿಕೆಯ ಮೇಲ್ಛಾವಣಿ ಕಾಮಗಾರಿಗೆ ಗುದ್ದಲಿ ಪೂಜೆ
                      

ಚಿಕ್ಕನಾಯಕನಹಳ್ಳಿ : ಕನ್ನಡ ಸಂಘದ ಚಟುವಟಿಕೆಗಳಿಗೆ ಹಾಗೂ ತಾಲ್ಲೂಕಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಕನ್ನಡ ಸಂಘದ ವೇದಿಕೆಯ ಮೇಲ್ಛಾವಣಿಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀರವರು ತಮ್ಮ ಅನುದಾನದಲ್ಲಿ ಬಿಡುಗಡೆ ಮಾಡಿರುವ 12.5ಲಕ್ಷ ರೂ ಹಣದಲ್ಲಿ ಮೇಲ್ಛಾವಣಿ ಕಾಮಗಾರಿಗೆ  ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯ ಬಳಿ ನೂತನವಾಗಿ ನಿಮರ್ಾಣವಾಗುತ್ತಿರುವ ವೇದಿಕೆಯ ಮೇಲ್ಛಾವಣಿಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕನ್ನಡ ಸಂಘದ ವೇದಿಕೆಯು 36 ವರ್ಷಗಳ ಹಿಂದೆ ಪ್ರಾರಂಭವಾಗಿದೆ, ಈ ಸಂಘದ ವೇದಿಕೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಹ ಅನುದಾನ ಬಿಡುಗಡೆ ಮಾಡಿದ್ದಾರೆ, ವೇದಿಕೆಯ ಮುಂಭಾಗದ ಮೇಲ್ಛಾವಣಿಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ 12.5 ಲಕ್ಷ ರೂಗಳನ್ನು ಅನುದಾನವನ್ನು ಬಿಡುಗಡೆ ಮಾಡಿದ್ದು ಇದರಿಂದ ಪಟ್ಟಣದಲ್ಲಿ ನಡೆಯುವ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆ, ನಾಟಕೋತ್ಸವ ಕಾರ್ಯಕ್ರಮಗಳಿಗೆ ಈ ವೇದಿಕೆ ಅನುಕೂಲ ಕಲ್ಪಿಸಲಿದೆ ಎಂದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಕನ್ನಡ ಸಂಘದ ವೇದಿಕೆಗೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ, ವೇದಿಕೆ ಹಾಗೂ ಮೇಲ್ಛಾವಣಿ ನಿಮರ್ಾಣ ಮಾಡಿರುವುದರಿಂದ ಪಟ್ಟಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು. ಈಗ ಗುದ್ದಲಿ ಪೂಜೆ ನೆರವೇರಿಸಿದ್ದು ಎರಡು ತಿಂಗಳ ಒಳಗೆ ಮೇಲ್ಛಾವಣಿ ಕಾಮಗಾರಿ ಮುಗಿಯಲಿದೆ ಎಂದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಾತನಾಡಿ, 36 ವರ್ಷಗಳ ಹಿಂದೆ ಆರಂಭವಾದ ಕನ್ನಡ ಸಂಘದ ವೇದಿಕೆಯ ಅಭಿವೃದ್ದಿಯಲ್ಲಿ ಸಂಘದ ಅಧ್ಯಕ್ಷರಾದ ಸೀಮೆಎಣ್ಣೆ ಕೃಷ್ಣಯ್ಯನವರ ಹಾಗೂ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿರವರ ಪರಿಶ್ರಮವಿದೆ, ಸಂಘದ ವೇದಿಕೆ ಹಾಗೂ ಮೇಲ್ಛಾವಣಿ ಕಾಮಗಾರಿಯಿಂದ ತಾಲ್ಲೂಕಿನ ಜನತೆಗೆ ಸಂಪೂರ್ಣ ಉಪಯೋಗವಾಗಲಿದೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಚಿ.ನಾ.ಪುರುಷೋತ್ತಮ್, ಸಾಲ್ಕಟ್ಟೆಶ್ರೀನಿವಾಸ್, ಕೆ.ಜಿ.ಕೃಷ್ಣೆಗೌಡ, ಶ್ರೀನಿವಾಸ್, ಜಯರಾಮಯ್ಯ, ರಾಜಣ್ಣ, ಸಿ.ಎಸ್.ನಟರಾಜು, ರವಿಕುಮಾರ್, ರವಿ ಮತ್ತಿತತರರು ಉಪಸ್ಥಿತರಿದ್ದರು.

ಅಕ್ರಮ ಮರಳು ವಶ, ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡುವಂತೆ ದಸಂಸ ಮುಖಂಡರ ಒತ್ತಾಯ
                      
ಚಿಕ್ಕನಾಯಕನಹಳ್ಳಿ,: ಚಿ.ನಾ.ಹಳ್ಳಿ ತಾಲ್ಲೂಕಿನ ಹಂದನಕೆರೆ ಬಳಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡಿರುವ ಮರಳನ್ನು ಲೋಕೋಪಯೋಗಿ ಇಲಾಖೆಯವರು ಸಕರ್ಾರದ ಯೋಜನೆಗಳ ಮೂಲಕ ಮನೆ ಕಟ್ಟಿಕೊಳ್ಳುತ್ತಿರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಡಿಎಸ್ಎಸ್ ಮುಖಂಡ ಲಿಂಗದೇವರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂದನಕೆರೆ ಬಳಿ ಗ್ರಾಮಗಳಲ್ಲಿ ಅಕ್ರಮವಾಗಿ ಶೇಖರಿಸಿದ್ದ ಮರಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಆಶ್ರಯ ಯೋಜನೆ, ಅಂಬೇಡ್ಕರ್ ಯೋಜನೆ, ಇಂದಿರಾ ಅವಾಜ್ ಹಾಗೂ ಬಸವ ವಸತಿ ಯೋಜನೆಗಳ ಮೂಲಕ ಸಕರ್ಾರದ ವತಿಯಿಂದ ಮನೆ ಕಟ್ಟಿಕೊಳ್ಳುತ್ತಿರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಅವರು ಮನೆ ಕಟ್ಟಿಕೊಳ್ಳುವಾಗ ಉಂಟಾಗುವ ಸಮಸ್ಯೆಯನ್ನು ನಿವಾರಿಸಬಹುದು ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೋವಿ ಜನಾಂಗದ ಮುಖಂಡ ಸತೀಶ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಪುರಸಭೆ 8.99ಲಕ್ಷ ಉಳಿತಾಯ ಬಜೆಟ್
                                 

ಚಿಕ್ಕನಾಯಕನಹಳ್ಳಿ, : 2015-16ನೇ ಸಾಲಿಗೆ ಚಿ.ನಾ.ಹಳ್ಳಿ ಪುರಸಭೆ 8.99ಲಕ್ಷ ರೂ ಉಳಿತಾಯ ಬಜೆಟ್ನ್ನು ಪುರಸಭೆ ಬಹುಮತದಿಂದ ಅಂಗೀಕರಿಸಿತು.
ಪುರಸಭಾಧ್ಯಕ್ಷೆ ರೇಣುಕಮ್ಮನವರ ಅಧ್ಯಕ್ಷತೆಯಲ್ಲಿ ಆಯವ್ಯಯ ಅಂದಾಜು ಪಟ್ಟಿಯನ್ನು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಂಡಿಸಿದರು.
ಪುರಸಭಾ ಸಾರ್ವಜನಿಕ ಕಾಮಗಾರಿಗಳಿಗಾಗಿ 11ಲಕ್ಷ ರೂ ವೆಚ್ಚ ಮಾಡಲು ತೀಮರ್ಾನಿಸಿತ್ತು, ಪುರಸಭಾ ವತಿಯಿಂದ ಸಾರ್ವಜನಿಕ ಕಾಮಗಾರಿಗಳಿಗಾಗಿ 25 ಲಕ್ಷ ರೂ ವೆಚ್ಚ ಮಾಡಲು ಸಭೆ ನಿರ್ಧರಿಸಿದ ಪರಿಣಾಮ, ಉಳಿತಾಯದ 4ಲಕ್ಷ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ನೀರಿನ ಅನುಕೂಲತೆಯ ಹಣದಲ್ಲಿ 10ಲಕ್ಷ ರೂ ಸೇರಿಸಿ 25ಲಕ್ಷ ರೂ ವಿನಿಯೋಗಿಸುವಂತೆ ತೀಮರ್ಾನಿಸಲಾಯಿತು. 12.99ಲಕ್ಷ ರೂ ಇದ್ದ ಉಳಿತಾಯ ಬಜೆಟ್ನಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ 4ಲಕ್ಷ ತೆಗೆದಿದ್ದರಿಂದ ಉಳಿತಾಯ 8.99ಲಕ್ಷ ರೂಪಾಯಿ ಉಳಿತಾಯದ ಬಜೆಟ್ನ್ನು ಸಭೆ ಸವರ್ಾನುಮತದಿಂದ ಅಂಗೀಕರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಮಹಮದ್ ಖಲಂದರ್ ಮಾತನಾಡಿ, ಪಟ್ಟಣದ ವಿವಿಧ ವಾಡರ್್ಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡುತ್ತಿದ್ದು ಕಳಪೆ ಕಾಮಗಾರಿಗಳಾಗುತ್ತಿವೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸಲಹೆ ನೀಡಿದ ಅವರು ಸಿ.ಸಿ.ರಸ್ತೆಗೆ ಗುತ್ತಿಗೆದಾರರು ಸರಿಯಾಗಿ ನೀರು ಹಾಕಿ ಕ್ಯೂರಿಂಗ್ ಮಾಡುತ್ತಿಲ್ಲ ಇದರಿಂದ ರಸ್ತೆ ಬೇಗ ಹಾಳಾಗುತ್ತದೆ ಎಂದರು.
ಸಕರ್ಾರ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಶೌಚಾಲಯಗಳನ್ನು ನಿಮರ್ಿಸಲು ಸಹಾಯಧನ ನೀಡಲು ಸಕರ್ಾರದ ಆದೇಶ ಬಂದ ನಂತರ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸಭೆಯಲ್ಲಿ ತಿಳಿಸಿದರು.
2013-14ರಲ್ಲಿ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 75 ಮನೆಗಳು ಬಂದಿದ್ದು,  2015-16ರಲ್ಲಿ 200 ಮನೆಗಳನ್ನು ಮಂಜೂರು ಮಾಡಲು ಪುರಸಭೆ ಠರಾವು ಮಾಡಿ ಸಕರ್ಾರಕ್ಕೆ ಕಳಿಸಲು ಸಭೆಯಲ್ಲಿ ತೀಮರ್ಾನಿಸಿದರು ಹಾಗೂ ಪಟ್ಟಣದ ಹೊಸಬಸ್ನಿಲ್ದಾಣದ ಹಾಗೂ ಪುರಸಭೆ ಪಕ್ಕದ ಎರಡು ಮಳಿಗೆ ಹಾಗೂ ಮಟನ್ ಮಾಕರ್ೆಟ್ ಬಳಿ ಇರುವ 5 ಅಂಗಡಿ ಮಳಿಗೆಗಳು ಹಾಗೂ ವೆಂಕಟರಮಣ ದೇವಾಲಯದ ಹತ್ತಿರವಿರುವ ಪುರಸಭಾ ಮಳಿಗೆಗಳನ್ನು ಹರಾಜು ಮಾಡಲು ಸಭೆ ತೀಮರ್ಾನಿಸಿತು.
ಸಂತೆ ಮೈದಾನದ ಬಳಿ ಹಾಗೂ ಮಾರುಕಟ್ಟೆ ಬಳಿ ಶೌಚಾಲಯ ನಿಮರ್ಿಸಲು ಸದಸ್ಯ ಸಿ.ಪಿ.ಮಹೇಶ್ ಅಧಿಕಾರಿಗಳಿಗೆ ಆಗ್ರಹಿಸಿದರು.
ಇನ್ನು ಎರಡು ತಿಂಗಳಿನಲ್ಲಿ ಶೌಚಾಲಯ ನಿಮರ್ಿಸಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ತಿಳಿಸಿದರು.
ವೆಂಕಟರಮಣ ದೇವಾಲಯದ ಬಳಿ ಖಾಲಿ ಇರುವ ಮಳಿಗೆಗಳಿಗೆ 1ಸಾವಿರ ರೂ ಬಾಡಿಗೆ ಹಾಗೂ 50 ಸಾವಿರ ರೂಪಾಯಿ ಮುಂಗಡ ಡೆಪಾಸಿಟ್ ಮಾಡಲು ಜಿಲ್ಲಾಧಿಕಾರಿಯವರಿಗೆ ಕಳಿಸಲು ಸಭೆ ತೀಮರ್ಾನಿಸಿತು.
ಪುರಸಭೆಯ ಜೆ.ಸಿ.ಬಿ.ಯನ್ನು ರಿಪೇರಿ ಮಾಡಿಸಿ, ರಿಪೇರಿಯಾಗದೇ ಹೋದರೆ ಗುಜರಿಗೆ ಹಾಕಿ ಎಂದು ಸಿ.ಪಿ.ಮಹೇಶ್ ಹೇಳಿದರು.
ಪುರಸಭೆಯ ಅಂಗಡಿ ಮಳಿಗೆಗಳನ್ನು ಕೂಗಿದವರು ಸ್ಥಳದಲ್ಲಿ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.
ಪುರಸಭಾ ಸದಸ್ಯೆ ರೂಪಾ ಮಾತನಾಡಿ, ನಮ್ಮ ವಾಡರ್್ಗೆ ನೀರು ಹರಿಸಲು ಅನೇಕ ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಕೂಡಲೇ ವಾಡರ್್ಗೆ ನೀರು ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರುಗಳಾದ ರೇಣುಕಮ್ಮ, ಪ್ರೇಮದೇವರಾಜು, ಪುಷ್ಪ.ಟಿ.ರಾಮಯ್ಯ, ಇಂದಿರಾಪ್ರಕಾಶ್, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಮಲ್ಲೇಶಯ್ಯ, ಅಶೋಕ್, ಸಿ.ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಕೆರೆ ಒತ್ತುವರಿ ಖರಾಬು ತೆರವುಗಳಿಸುವಂತೆ ರೈತರ ಮನವಿ 

                             
ಚಿಕ್ಕನಾಯಕನಹಳ್ಳಿ,ಮಾ.30 : ಕೆಲವು ಪ್ರಭಾವಿ ರೈತರು ಒತ್ತುವರಿ ಮಾಡಿಕೊಂಡಿರುವ ಖರಾಬು ತೆರವುಗೊಳಿಸುವಂತೆ ಒತ್ತಾಯಿಸಿ ಕಾತ್ರಿಕೆಹಾಲ್ ಹಾಗೂ ಮದನಮಡು ಸುತ್ತಮುತ್ತ ಗ್ರಾಮಗಳ ರೈತರು ಸಕರ್ಾರವನ್ನು ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಮನವಿ ಸಲ್ಲಿಸಿದರು. 
ತಾಲ್ಲೂಕಿನ ಕಂದಿಕೆರೆ ಹೋಬಳಿ ಗುಡ್ಡಗಾಡಿನಿಂದ ಕೂಡಿದ್ದು ಶೇ.95ರಷ್ಟು ರೈತರು ವ್ಯವಸಾಯ ಹಾಗೂ ಪಶುಪಾಲನೆ ವೃತ್ತಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದೇವೆ, ಹತ್ತಾರು ವರ್ಷಗಳಿಂದ ಈ ಭಾಗಕ್ಕೆ ಸರಿಯಾಗಿ ಮಳೆಯಾಗದೇ ಅಂತರ್ಜಲ ಕಡಿಮೆಯಾಗಿ ತೆಂಗು, ಬಾಳೆ, ಅಡಿಕೆ ಮುಂತಾದ ಬೆಳೆಗಳು ಒಣಗಿ ಹೋಗಿದ್ದು ಕುಡಿಯುವ ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ, 1000 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿ ಹಗಲು ಕಷ್ಟಪಟ್ಟರು, ಏನೂ ಪ್ರಯೋಜನವಾಗುತ್ತಿಲ್ಲ, ಇದರಿಂದ ರೈತರು ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರದೇ ರೈತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾತಗಿದೆ, 20 ರಿಂದ 25 ವರ್ಷದ ಹುಡುಗರು ಜಮೀನಿನಲ್ಲಿ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಿಗೆ ಕೆಲಸ ಹುಡಿಕಿಕೊಂಡು ಗುಳೇ ಹೋಗುವಂತಾಗಿದೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದಂತಾಗಿದೆ ಈ ಸಂದರ್ಭದಲ್ಲಿ ಕೆಲವು ಪ್ರಭಾವಿ ಮುಖಂಡರು ಕೆರೆಯ ಖರಾಬು ಹಳ್ಳಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಇದರ ಬಗ್ಗೆ ಕಾನೂನು ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.
ಕೂಡಲೇ ಹೇಮಾವತಿ ನಾಲೆಯಿಂದ ಮದನಮಡು ಕಾತ್ರಿಕೆಹಾಲ್, ಜಾಣೇಹಾರ್ ಭಾಗಗಳಿಗೆ ನೀರು ಹರಿಸಿದರೆ ಮಾತ್ರ ಈ ಭಾಗದ ಜನರು ಬದುಕುಳಿಯಲು ಸಾಧ್ಯ ಎಂದು ರೈತ ಮುಖಂಡರು ಸಕರ್ಾರವನ್ನು ಒತ್ತಾಯಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಪೋಡಿ ಆಂದೋಲನ ಮಾಡುತ್ತಿರುವುದರಿಂದ ಎಲ್ಲಾ ಸವರ್ೆಯರ್ಗಳಿಗೆ 4ನೇ ತಾರೀಖಿನವರೆಗೂ ಪೋಡಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ಕೆಲಸದ ಒತ್ತಡವಿದೆ ಎಂದ ಅವರು ಏಪ್ರಿಲ್ 6ರ ನಂತರ ಸವರ್ೆಯರ್ಗಳನ್ನು ಕರೆದುಕೊಂಡು ಖರಾಬಿನ ಸ್ಥಳಗಳಿಗೆ ಭೇಟಿ ನೀಡಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮನವಿ ಪತ್ರವನ್ನು ಅಪರ್ಿಸಿದರು.
ಈ ಸಂದರ್ಭದಲ್ಲಿ ರೈತರುಗಳಾದ ವಸಂತ್ಕುಮಾರ್, ಕಾತ್ರಿಕೆಹಾಲ್ ಕುಮಾರ್, ವಿರೂಪಾಕ್ಷಪ್ಪ, ಯೋಗಾನಂದಪ್ಪ, ಕೋದಂಡರಾಮು, ಲೋಕೇಶ್, ಗಂಗಾಧರಯ್ಯ, ಜಯಪ್ರಕಾಶ್, ವಸಂತ್ಕುಮಾರ್ ಮುಂತಾದವರು ಉಪಸ್ಥಿತರಿದ್ದರು.


ಆಟೋ ಚಾಲಕರ ಜಾಥಾ ಚಿ.ನಾ.ಹಳ್ಳಿಗೆ ಆಗಮನ
                          

ಚಿಕ್ಕನಾಯಕನಹಳ್ಳಿ,ಮಾ.30: ರಾಜ್ಯದ ಆಟೋ ಚಾಲಕರು ತಮ್ಮ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾಚರ್್ 24 ರಿಂದ ಏಪ್ರಿಲ್ 12ರವರೆಗೆ ರಾಜ್ಯಾದ್ಯಂತ ಸಿಐಟಿಯು ನೇತೃತ್ವದಲ್ಲಿ ಆಟೋ ಚಾಲಕರ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಕಾರ್ಯದಶರ್ಿ ಪಿ.ಎನ್.ರವಿ ಹೇಳಿದರು.  
ದಾವಣಗೆರೆ ಹಾಗೂ ಬೆಂಗಳೂರಿನಿಂದ ಹೊರಟ ಆಟೋ ಚಾಲಕರ ಜಾಥಾ ಸೋಮವಾರ ಚಿಕ್ಕನಾಯಕನಹಳ್ಳಿಗೆ ಆಗಮಿಸಿ ನಂತರ ನೆಹರು ವೃತ್ತದಲ್ಲಿಪಟ್ಟಣದ ಆಟೋಚಾಲಕರೊಂದಿಗೆ ಮಾತನಾಡಿದ ಪಿ.ಎನ್.ರವಿ, ಆಟೋ ಚಾಲಕರ ರಾಜ್ಯ ತರಬೇತಿ ಶಿಬಿರ ಮೇ 15ರಿಂದ 17ರವರೆಗೆ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ನಡೆಯಲಿದ್ದು ಶಿಬಿರಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಟೋ ಚಾಲಕರು ಭಾಗವಹಿಸಲಿದ್ದಾರೆ ಎಂದ ಅವರು, ಆಟೋ ಚಾಲಕರಿಗೆ ಪರವಾನಿಗೆ ನೀಡುವಾಗ ವಿದ್ಯಾರ್ಹತೆ 8ನೇ ತರಗತಿ ಕಡ್ಡಾಯಗೊಳಿಸಿರುವುದು ಸರಿಯಲ್ಲ, ರಾಜಕಾರಣಿಗಳು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಸಂಸತ್ತು ಹಾಗೂ ವಿಧಾನಸಭೆಗೆ ಸ್ಪಧರ್ಿಸಲು ಏಕೆ ವಿದ್ಯಾರ್ಹತೆ ನಿಗಧಿಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಅಸಂಘಟಿತ ಕಾಮರ್ಿಕರ ಕಲ್ಯಾಣ ಮಂಡಳಿಯಲ್ಲಿ ಆಟೋ ಚಾಲಕರ ನೊಂದಣಿ, ಗುರುತಿನ ಪತ್ರ ಹಾಗೂ ಕಲ್ಯಾಣ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು. ಇಲ್ಲಿಯವರೆಗೆ ಚಾಲಕರನ್ನು ನೊಂದಣಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿಲ್ಲ  ಸಕರ್ಾರ ಬಜೆಟ್ನಲ್ಲಿ ಹೆಚ್ಚುವರಿ ಹಣವನ್ನು ನೀಡಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಆಟೋ ಚಾಲಕರನ್ನು ಕ್ರಿಮಿನಲ್ಗಳಂತೆ ನೋಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ಗಂಗರಾಜು, ಈಶ್ವರಯ್ಯ,, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.