Thursday, September 8, 2011ಸೆ.17 ರಂದು ಚಿ.ನಾ.ಹಳ್ಳಿ ನಾಲ್ಕನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಸೆ.08 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಇದೇ 17ರ ಶನಿವಾರ ಬೆಳಗ್ಗೆ 08.15 ಆರಂಭಗೊಳಲಿದೆ, ಸಮ್ಮೇಳನಾಧ್ಯಕರಾದ ಪ್ರೊ.ನಾ.ದಯಾನಂದರವರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವೈವಿಧ್ಯಮ ಗೋಷ್ಠಿಗಳು, ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8.15ಕ್ಕೆ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅರಳೇಪೇಟೆ, ನೆಹರು ಸರ್ಕಲ್, ತಾತಯ್ಯನ ಗೋರಿ ಮಾರ್ಗವಾಗಿ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳನಾಧ್ಯಕ್ಷ ಪ್ರೊ.ನಾ.ದಯಾನಂದ ಅವರನ್ನು ಮೆರವಣಿಗೆಯಲ್ಲಿ ಬಯಲು ರಂಗಮಂದಿರಕ್ಕೆ ಕರೆತರಲಾಗುವುದು. ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಬಸವರಾಜಪ್ಪ ನೆರವೇರಿಸುವರು ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಪುರಸಭಾ ಸದಸ್ಯರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಹಾಜರಿರುವರು. . ಬೆಳಗ್ಗೆ 10.45ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಕವಿ ಡಾ.ಸಾ.ಶಿ.ಮರುಳಯ್ಯ ಸಮ್ಮೇಳನವನ್ನು ಉದ್ಘಾಟಿಸುವರು. ತಾಲ್ಲೂಕಿನ 3ನೇ ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಂ.ವಿ.ನಾಗರಾಜ್ರಾವ್ ನಿಕಟಪೂರ್ವ ಅಧ್ಯಕ್ಷರ ನುಡಿಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವರು.ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪ-ಸಿ.ಡಿ ಬಿಡುಗಡೆ ಮಾಡಲಿದ್ದು ಹಿರಿಯ ಸಾಹಿತಿ ಡಾ.ಅಬ್ದುಲ್ ಹಮೀದ್ ಪುಸ್ತಕ ಮಳಿಗೆಗಳ ಉದ್ಗಾಟನೆ ನೆರವೇರಿಸಲಿದ್ದು ಕವಿ ಹಾಗೂ ಲೇಖಕ ಪ್ರೊ.ನಾ.ದಯಾನಂದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರತ್ನರಾವ್, ಜಯಮ್ಮ, ಭಾರತಿ ನಟರಾಜ್, ಸರಸ್ವತಮ್ಮ, ಪದ್ಮವರದರಾಜು, ಸುಲೋಚನಮ್ಮ, ಜಯಮ್ಮ ವೇದಮೂತರ್ಿ, ನಾಗರಾಜು, ಲಕ್ಕಮ್ಮ, ಬೆನಕನಕಟ್ಟೆ ಬಿ.ಪಿ.ಚನ್ನಪ್ಪ, ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಜೋಡಿಕಲ್ಲೇನಹಳ್ಳಿಶಿವಪ್ಪ, ಅನ್ಸರ್ಪಾಷ, ಕೆ.ಎನ್.ಶಂಕರಲಿಂಗಯ್ಯ, ಬಿ.ಎಲ್.ಪಂಕಜ ಚಂದ್ರಶೇಖರ್, ರಂಗಪ್ಪ ಇವರುಗಳನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಗ್ರಾಮೀಣ ವಿಭಾಗದ ಅಧ್ಯಕ್ಷ ಜಿ.ಇಂದ್ರಕುಮಾರ್ ಹಾಗೂ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ.ಲಲಿತ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್.ಬಸವರಾಜ್ರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು, ಎಂ.ವಿ.ನಾಗರಾಜರಾವ್ರವರ ಸಾವಿರಾರು ನುಡಿಮುತ್ತುಗಳು, ಸೂಕ್ತಿಕೋಶ, ಪ್ರೊ. ನಾ.ದಯಾನಂದರವರ ಜಂಗಮ ಮಂಡೆವಿಶೇಷ ಆಹ್ವಾನಿತರಾಗಿ ತಾ.ಪಂ.ಇಓ ಎನ್.ಎಂ.ದಯಾನಂದ್, ಟಿ.ಸಿ.ಕಾಂತರಾಜು, ಬಿಇಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ಬೆಂಗಳೂರಿನ ಹೇಮಂತ ಸಾಹಿತ್ಯದ ವೆಂಕಟೇಶ್, ಕೈಗಾರಿಕೋದ್ಯಮಿ ಎನ್.ಎಂ.ಶಿವಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಪಾಲ್ಗೊಳ್ಳುವರು.
ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರವನ್ನಾಗಿಸಿಕೊಂಡಿದ್ದವರು, ಈಗ ಎ.ಟಿ.ಎಂ.ನ್ನಾಗಿಸಿಕೊಂಡಿದ್ದಾರೆ.ಚಿಕ್ಕನಾಯಕನಹಳ್ಳಿ,ಸೆ.8 : ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿಸಿಕೊಂಡಿದ್ದ ಕೆಲವು ಗಂಡಸರು, ಈಗ ಸ್ತ್ರೀಶಕ್ತಿ ಸಂಘದಿಂದ ಹಣವನ್ನು ತಂದುಕೊಡುವ ಎ.ಟಿ.ಎಂ.ಗಳನ್ನಾಗಿಸಿಕೊಂಡಿರುವ ಬಗ್ಗೆ ಮಹಿಳೆಯರು ಜಾಗೃತಿವಹಿಸಬೇಕೆಂದು ಪುರಸಭಾ ಸದಸ್ಯೆ ಸಿ.ಎಂ.ರೇಣುಕಮ್ಮ ಹೇಳಿದರು.ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಸ್ಥಳೀಯ ಗ್ರಾಮಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊಟಮ್ಮನವರು ಅಂದು ಸ್ಥಾಪಿಸಿದ ಸ್ತ್ರೀಶಕ್ತಿ ಸಂಘಗಳಿಂದ ಇಂದು ಕೆಲವು ಜನ ಗಂಡಸರು ಸಂಘದಿಂದ ತರುವ ಹಣವನ್ನು ಉಪಯೋಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ, ಇನ್ನೂ ಕೆಲವು ದಂಪತಿಗಳು ಕಷ್ಟದ ದುಡಿಮೆಯಿಂದ ಹಾಗೂ ಬುದ್ದಿವಂತಿಕೆಯಿಂದ ಬದುಕು ನಡೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಇಂದಿನ ಯುಗಕ್ಕೆ ತಕ್ಕಂತೆ ಬದುಕುತ್ತಿರುವದನ್ನು ಸಹಿಸದ ಕೆಲವು ಕುಹಿಕಿಗಳು ಟೀ ಅಂಗಡಿ ಮುಂದೆ ಕುಳಿತು ಒಳ್ಳೆ ಬಟ್ಟೆಯನ್ನು ಹಾಕಿಕೊಂಡು ಹೋಗುವವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿಕೊಂಡು ಅವಹೇಳನ ಮಾಡುವುದು ತರವಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ಪುರುಷರು ಮತ್ತು ಮಹಿಳೆಯರು ಪ್ರತಿ ಒಂದು ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ನೆರವಾದರೆ ಸಮಾಜ ಮುಂದೆ ಬರುತ್ತದೆ, ಒಬ್ಬ ಪುರುಷನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯರ ಯಶಸ್ಸಿನ ಹಿಂದೆ ಪುರುಷನು ಇರುತ್ತಾರೆ ಎಂದು ಹೇಳಿದರು. ಗಂಡು ಹೆಣ್ಣು ಸಮಾನವಾಗಿ ಯೋಚಿಸುವ ಕುಟುಂಬಗಳು ಸುಖವಾಗಿವೆ, ಅಂತಹ ಕುಟುಂಬದ ಮಕ್ಕಳು ಒಳ್ಳೆಯ ಬದುಕನ್ನು ರೂಢಿಸಿಕೊಳ್ಳುತ್ತಾರೆ. ಇಲ್ಲಿ ಯಾರು ಮೇಲಲ್ಲ, ಯಾರೂ ಕೀಳು ಅಲ್ಲ ಸಮರಸವೇ ಜೀವನವೆಂಬುದನ್ನು ಅರಿತು ಬಾಳಬೇಕೆಂದರು. ಜ್ಞಾನನಿಧಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಜಿ ರಾಜ್ ಮಾತನಾಡಿ ಮಹಿಳೆಯರು ಸಂಘಗಳಿಗೆ ಸೇರಿ ಉಳಿತಾಯದ ಮನೋಭಾವನೆಯನ್ನು ಅರಿತುಕೊಂಡವರ ಜೀವನ ಸುಧಾರಿಸುತ್ತಿದ್ದಾರೆ ಎಂದರು. ಮಹಿಳೆಯರು ಒಗ್ಗಟ್ಟಾಗಿ ತಮ್ಮ ಸಂಘದ ಬಗ್ಗೆ ಇರುವ ಸಮಸ್ಯೆಯನ್ನು ಕೂತು ಪರಿಹರಿಸಿಕೊಳ್ಳಬೇಕೆಂದರಲ್ಲದೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಾಟೆ ಮಾಡಿಕೊಳ್ಳಬೇಡಿ, ತಮ್ಮ ಸಂಘದಿಂದ ಸಾಲವನ್ನು ಪಡೆದು ಸಣ್ಣ ಪುಟ್ಟ ವ್ಯಾಪಾರ ಮಾಡಿ ಆಥರ್ಿಕವಾಗಿ ಸದೃಡವಾಗಿ ಎಂದು ಹೇಳಿದ ಅವರು, ಹಿಂದೆ ಗಂಡಸರು ದುಡಿಮೆ ಮಾಡಿಕೊಂಡು ಬಂದರೆ ಜೀವನ ನಡೆಯುತ್ತಿತ್ತು ಇಲ್ಲವಾದರೆ ತುತ್ತು ಅನ್ನಕ್ಕೂ ಬಡತನವಿತ್ತು ಆದರೆ ಈಗ ಮಹಿಳೆಯರು ಸಂಸಾರದ ಜವಾಬ್ದಾರಿ ಹೊತ್ತು ವ್ಯವಹಾರದೊಂದಿಗೆ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿದ್ದಾರೆ ಎಂದರು. ಧರ್ಮಸ್ಥಳ ಕ್ಷೇಮಾಭಿವೃದ್ದಿ ಯೋಜನಾಧಿಕಾರಿ ಲೋಹಿತಾಶ್ವ ಮಾತನಾಡಿ ಮಹಿಳೆಯರಿಗೆ ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇದ್ದರೆ ನಮ್ಮ ಸ್ವಯಂಸೇವಕರು ಪ್ರತಿ ಸಂಘದಲ್ಲೂ ಇರುತ್ತಾರೆ ಅವರ ಬಳಿ ಮಾಹಿತಿ ಪಡೆದು ಯೋಜನೆಯ ಉಪಯೋಗ ಪಡೆದುಕೊಳ್ಳಿ ಎಂದ ಅವರು ಸ್ವಸಹಾಯ ಸಂಘಗಳು ಒಂದುಗೂಡಿ ಯೋಜನೆಯ ಬಗ್ಗೆ ಇತರರಿಗೆ ತಿಳಿಸುತ್ತಾ ತಾವು ಅಭಿವೃದ್ದಿ ಹೊಂದಲು ಕರೆ ನೀಡಿದರು.ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ರುಕ್ಮಿಣಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ರವಿಕುಮಾರ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಮಾಳಿಗೆಮನೆಯಿಂದ ಮಾನಸಗಂಗೋತ್ರಿಯವರಿಗೆ ಏರಿಬಂದವರು ಡಾ.ರಾಧಾಕೃಷ್ಣನ್ಚಿಕ್ಕನಾಯಕನಹಳ್ಳಿ,ಸೆ.08 : ನಮ್ಮ ದೇಶ ಗುರುಪರಂಪರೆಯಿಂದ ಕೂಡಿದ್ದು ಆ ಪರಂಪರೆಯ ಶಿಕ್ಷಣವೆಂಬ ಸೌರವ್ಯೂಹದಲ್ಲಿ ತಿರುಗುವ ಮಿನುಗುತಾರೆ ಶಿಕ್ಷಕ, ಅವನು ವ್ಯಕ್ತಿಯ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತಾ ತನ್ನ ಕಾರ್ಯ ಮುಂದುವರಿಸುತ್ತಾನೆ ಎಂದು ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ರಾಜಕುಮಾರ್ ಹೇಳಿದರು.ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಡಾಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಷಯ ಜ್ಞಾನವನ್ನು ಪಡೆದವನು ಶಿಕ್ಷಕ, ಮಾಳಿಗೆಯ ಮನೆಯಿಂದ ಮಾನಸಗಂಗೋತ್ರಿಯವರೆಗೆ ಏರಿ ಬಂದವರು ರಾಧಾಕೃಷ್ಣನ್, ಯುವ ಶಕ್ತಿಯನ್ನು ಒಗ್ಗೂಡಿಸಿ ರಾಷ್ಟ್ರ ಕಟ್ಟಿದವರಾಗಿ, ಶಿಕ್ಷಕರಾಗಿ ಉಪಕುಲಪತಿಯಾಗಿ ದೇಶದ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ, ದೇಶವಿದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಪಸರಿಸಿದ ದಷ್ಟಾರಾಗಿ ಎತ್ತರಕ್ಕೆ ಏರಿದವರು ಡಾ ಎಸ್.ರಾಧಾಕೃಷ್ಣನ್. ವಿದ್ಯಾಥರ್ಿಗಳು ಸಮುದಾಯದ ಎಲ್ಲರೊಂದಿಗೆ ಬೆರೆಯುವಂತಾಗಬೇಕು ಮಾನವ ಜನಾಂಗವನ್ನು ಕಟ್ಟುವ ಕೆಲಸ ಶಿಕ್ಷಕರಿಂದ ಆಗಬೇಕೆಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕೆ.ಸಿ. ಬಸಪ್ಪನವರು ಮಾತನಾಡಿ ಜಗತ್ತಿಗೆ ಕನಸುಗಳನ್ನು ಮಾರಾಟ ಮಾಡುವವನೆ ಶಿಕ್ಷಕ, ಶಿಕ್ಷಕ ಕಲಾಕೃತಿಯಾಗಿ ಉಳಿಯಬೇಕು, ನಿಷ್ಠೆ ಸ್ವಯಂಸಿದ್ದತೆ ತಾನು ತಿಳಿದದ್ದನ್ನೆಲ್ಲಾ ವಿದ್ಯಾಥರ್ಿಗಳಿಗೆ ತಿಳಿಸುವನಾಗಬೇಕು. ಅನ್ವಯತೆಯನ್ನು ಚಲನಶೀಲವನ್ನಾಗಿಸಿಕೊಳವುದೇ ಶಿಕ್ಷಕ ಸಮುದಾಯ ಎಂದು ನುಡಿದ ಅವರು ಜಗತ್ತಿನ ಯಾವ ಶಕ್ತಿಯು ಶಿಕ್ಷಕ ಶಕ್ತಿಗೆ ಸಮನಾಗಲಾರದು. ಶಿಕ್ಷಕ ಏನು? ಎಲ್ಲಿದೆ? ಎಂಬ ಪ್ರಶ್ನೆಗಳ ಮೂಲಕ ಒಬ್ಬ ವ್ಯಕ್ತಿಯನ್ನು ಬೆಳಸುವವನು. ಶಿಕ್ಷಕ ಅನುಮಾನಗಳನ್ನು ಪರಿಹರಿಸುವವನಾಗಬೇಕು ಶಿಕ್ಷಕ ಹಣದ ದಾಹವನ್ನು ಬಿಟ್ಟು ಜ್ಞಾನ ನೀಡುವವನಾಗುವ ಜೊತೆಗೆ ನಿರಂತರವಾದ ಅಧ್ಯಯನಶೀಲನಾಗಿ ವಿಷಯಗಳನ್ನು ಅನ್ವಯಶೀಲಗೊಳಿಸಬೇಕು. ವಿದ್ಯಾಥರ್ಿಗಳು ನಿರಂತರವಾಗಿ ಜ್ಞಾನದಾಹಿಗಳಾಗಬೇಕು ಆಗ ಮಾತ್ರ ಈ ಆಚರಣೆ ಅರ್ಥ ಪೂರ್ಣ ಎಂದರು. ಉಪನ್ಯಾಸಕ ಪ್ರೊ.ಆರ್.ಎಂ. ಶೇಖರಯ್ಯ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿ ಡಾಎಸ್. ರಾಧಾಕೃಷ್ಣನ್ ಅವರ ಆದರ್ಶಗಳು ಬದುಕಿಗೆ ಇಂಬು ನೀಡಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಪ್ರೊ. ಬಿ.ಎಸ್. ಬಸವಲಿಂಗಯ್ಯ ಉಪಸ್ಥಿತರಿದ್ದರು.