Thursday, November 15, 2012


ಎ.ಪಿ.ಎಂ.ಸಿ.ಚುನಾವಣೆ: 13 ಕ್ಷೇತ್ರಗಳಿಗೆ 85ಜನರ ನಾಮಪತ್ರ ಸಲ್ಲಿಕೆ
  • ಎಸ್.ಆರ್.ರಾಜ್ಕುಮಾರ್ ಅವಿರೋಧ ಆಯ್ಕೆ, ಅಧಿಕೃತ ಘೋಷಣೆ ಬಾಕಿ
  • ಹುಳಿಯಾರು ಕ್ಷೇತ್ರಕ್ಕೆ ಅತಿ ಹೆಚ್ಚು ನಾಮಪತ್ರಗಳು
  • ಅತಿ ಹೆಚ್ಚು ಎಂದರೆ 14, ಅತಿ ಕಡಿಮೆ 1 ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ,ನ.13: ತಾಲೂಕಿನ ಎ.ಪಿ.ಎಂ.ಸಿ.ಚುನಾವಣೆ 13 ಕ್ಷೇತ್ರಗಳಿಗೆ 85ಜನರು 99 ನಾಮಪತ್ರಗಳು ಸಲ್ಲಿಸಿದ್ದಾರೆ, ಈ ಪೈಕಿ ಹುಳಿಯಾರು ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ 14 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರಕ್ಕೆ 1 ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.
ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರಕ್ಕೆ ಟಿ.ಎ.ಪಿ.ಸಿ.ಎಂ.ಎಸ್ನ ಅಧ್ಯಕ್ಷ ಎಸ್.ಆರ್.ರಾಜ್ಕುಮಾರ್ ಸಿಂಗದಹಳ್ಳಿ ಆಯ್ಕೆ ಬಹುತೇಕ ಖಚಿತವಾಗಿದ್ದು ಎ.ಪಿ.ಎಂ.ಸಿ.ನಿದರ್ೇಶಕರಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ  ಅಧಿಕೃತ ವಾಗಿ ಘೋಷಿಸಿಬೇಕಿದೆ.
ಉಳಿದ 12 ಕ್ಷೇತ್ರಗಳ ಪೈಕಿ ಯಳನಡು ಕ್ಷೇತ್ರಕ್ಕೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ, ಹುಳಿಯಾರಿಗೆ 14, ಹೊಯ್ಸಳಕಟ್ಟೆ 5, ತಿಮ್ಮನಹಳ್ಳಿ 8, ತೀರ್ಥಪುರ 7, ಕಂದಿಕೆರೆ 7, ಚಿಕ್ಕನಾಯಕನಹಳ್ಳಿ ಕಸಬಾ 11, ಹಂದನಕೆರೆ 5, ಮತಿಘಟ್ಟ 7, ಶೆಟ್ಟೀಕೆರೆ 10, ಜೆ.ಸಿ.ಪುರ 8, ವರ್ತಕರ ಕ್ಷೇತ್ರಕ್ಕೆ 7 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸೆಲೂನ್ನಲ್ಲಿ ಸಾಹಿತ್ಯ:  ಡಾ.ರಾಜ್ ಒಂದು ನೆನಪು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ನ.13: ಡಾ.ರಾಜ್ ಒಂದು ನೆನಪು ಕಾರ್ಯಕ್ರಮವನ್ನು ಪಟ್ಟಣದ ಸುಪ್ರಿಂ ಮೆನ್ಸ್ ಸೆಲೂನ್ನಲ್ಲಿ ಇದೇ 16ರ ಸಂಜೆ 5ಕ್ಕೆ ವೈವಿಧ್ಯ ಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸೆಲೂನ್ನ ಮಾಲೀಕ ಹಾಗೂ ಸಾಹಿತ್ಯ ಪ್ರೇಮಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಪ್ಟಣದ ಮತಿಘಟ್ಟ ಗೇಟ್ನಲ್ಲಿ ಇರುವ ಸುಪ್ರಿಂ ಮೆನ್ಸ್ ಸೆಲೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮದಡಿಯಲ್ಲಿ ಡಾ.ರಾಜ್ರವರನ್ನು ಕುರಿತ ಸಾಕ್ಷ್ಯಚಿತ್ರ, ಅವರ ಜೀವನದ ಅಪರೂಪದ ಪೋಟೊ ಮತ್ತು ಪುಸ್ತಕಗಳ ಪ್ರದರ್ಶನ, ಅವರ ಕುರಿತಾದ ಮಾತುಕತೆ ಹಾಗೂ ಮೈಸೂರ್ ಕುಮಾರ್ರವರಿಂದ ರಾಜ್ರ ಹಾಡುಗಳ ಗಾಯನವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಡಾ.ರಾಜ್ರವರ ಜೊತೆ ನಟಿಸಿರುವ ನಟ ತುಮಕೂರು ನಟರಾಜ್ ಹಾಗೂ ಗಾಯಕ ಎಂ.ಸಿ.ಕಲ್ಲೇಶ್ರವರುಗಳಿಗೆ ಗೌರವ ಸಮರ್ಪಣೆಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು, ಪೊಲೀಸ್ ಅಧಿಕಾರಿ ಸಿ.ಆರ್.ರವೀಶ್, ಸಾಹಿತಿ ಎಂ.ವಿ.ನಾಗರಾಜ್ರವರು ಉಪಸ್ಥಿರಿರುವರು.
ಈ ಸೆಲೂನ್ನಲ್ಲಿ ಈಗಾಗಲೇ ಕವಿಗೋಷ್ಠಿ, ಡಿ.ವಿ.ಜಿ.ರವರ ಮಂಕುತಿಮ್ಮನ ಕಗ್ಗ ಮೇಲಿನ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿತ್ತು ಇದು ಮೂರನೇ ಕಾರ್ಯಕ್ರಮ.
ಕನಕ ಜಯಂತಿ: ನ.15ರಂದು ಪೂರ್ವಭಾವಿ ಸಭೆ:
ಚಿಕ್ಕನಾಯಕನಹಳ್ಳಿ,ನ.13: ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ರೂಪುರೇಷೆಗಳ ಬಗ್ಗೆ ಚಚರ್ಿಸಲು ಸಮಾಜ ಬಾಂಧವರ  ಪೂರ್ವ ಭಾವಿ ಸಭೆಯನ್ನು ಇದೇ15ರಂದು ಮಧ್ಯಾಹ್ನ 4 ಗಂಟೆಗೆ ಕರೆಯಲಾಗಿದೆ ಎಂದು ಕನಕ ಸೇವಾ ಸಮಿತಿ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಈ ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಎಲ್ಲಾ ಜನಪ್ರತಿನಿಧಿಗಳು, ನೌಕರ ಬಾಂಧವರು, ವಿವಿಧ ಸಂಘಗಳ ಪದಾಧಿಕಾರಿಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯಮಾನ್ಯರು ಸೇರಿದಂತೆ ಸಮಾಜದ ಎಲ್ಲಾ ಬಂಧುಗಳ ಸಭೆಗೆ ಆಗಮಿಸಿ ಡಿ.1ರಂದು ನಡೆಯಲಿರುವ ಕನಕ ಜಯಂತಿ ಯಶಸ್ವಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕಣ್ಣಯ್ಯ ಕೋರಿದ್ದಾರೆ.
ನಿವೃತ್ತ ಸಂಘದ ಅಧ್ಯಕ್ಷ ಎನ್.ನರಸಿಂಹಯ್ಯನವರಿಗೆ ಭಾವಪೂರ್ಣ ಶ್ರದ್ದಾಂಜಲಿ
ಚಿಕ್ಕನಾಯಕನಹಳ್ಳಿ,ನ.14: ನಿವೃತ್ತ ನೌಕರರ ಸಂಘದ ವತಿಯಿಂದ 19 ವರ್ಷಗಳ ಸುದೀರ್ಘ ಅವದಿಗೆ ಸಂಘದ ಅಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಎನ್. ನರಸಿಂಹಯ್ಯನವರಿಗೆ ಸಂಘದ ಕಛೇರಿಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಅಪರ್ಿಸಿ, ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೃತರ ಗುಣಗಾನ ಮಾಡಿದ ಸಂಘದ ಪದಾಧಿಕಾರಿಗಳು, ಅವರ ಸೇವೆ, ಸಂಘಟನೆ, ಅವರ ಕಾರ್ಯವೈಖರಿಯ ಬಗ್ಗೆ ಮಾತನಾಡಿದ ಕೆ.ರಂಗನಾಥ್ 19 ವರ್ಷಗಳ ಕಾಲ ಸಂಘದಲ್ಲಿ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಕ್ರಿಯಾತ್ಮಕವಾಗಿ  ಮಾರ್ಗದರ್ಶನ ಮಾಡುತ್ತಾ  ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ಅಜೀವ ಅಧ್ಯಕ್ಷರಾಗಿದ್ದವರು ಎನ್.ನರಸಿಂಹಯ್ಯನವರು ಅವರ ಮರಣದಿಂದ ನಮಗೆ ತುಂಬಲಾರದ ನಷ್ಠವುಂಟಾಗಿದೆ ಎಂದರು.
ನಿವೃತ್ತ ಶಿಕ್ಷಕ ಜಿ.ಸಿದ್ದರಾಮಯ್ಯ ಮಾತನಾಡಿ ನರಸಿಂಯ್ಯನವರು ತಮ್ಮ ಜೀವಿತಾವಧಿಯಲ್ಲಿ ನೌಕರರ ಸಂಘಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ, ಕೌಟುಂಬಿಕ ಜೀವನದಲ್ಲಿ ಯಾವುದೇ ಎದುರಾದ ಸಂದರ್ಭದಲ್ಲಿ ಸಂಘದ ಏಳಿಗಾಗಿ ಶ್ರಮಿಸಿ ಸಂಘದ ಅಭಿವೃದ್ದಿಗೆ ಕಾರಣರಾಗಿದ್ದಾರೆ.
ಸಮಾರಂಭದಲ್ಲಿ  ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಸಿ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.  ಸಂಘದ ಕಾರ್ಯದಶರ್ಿ ಸಿ.ಡಿ.ರುದ್ರಮುನಿ, ಉಪಾಧ್ಯಕ್ಷ ನಂಜುಂಡಪ್ಪ,  ನರಸಿಂಹಯ್ಯನವರ ಪುತ್ರಿ ಎನ್.ಇಂದಿರಮ್ಮ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಣದ ದೇವರಹಟ್ಟಿಯಲ್ಲಿ ದೀಪೋತ್ಸವ
ಚಿಕ್ಕನಾಯಕನಹಳ್ಳಿ,.ನ.14 : ಶ್ರೀ ಬಾಣದರಂಗನಾಥಸ್ವಾಮಿ ಮತ್ತು ಬೇವಿನಹಳ್ಳಿ ಅಮ್ಮನವರ ದೀಪೋತ್ಸವವು ನವಂಬರ್ 17ರ ಶನಿವಾರದಂದು ಗೋಡೆಕೆರೆಯ ಬಾಣದೇವರಹಟ್ಟಿಯಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, 9ಕ್ಕೆ ಧ್ವಜಾರೋಹಣ, 12ಕ್ಕೆ ಗಂಗಾಪೂಜೆ, 1ಕ್ಕೆ ರುದ್ರಾಭಿಷೇಕ ಮತ್ತು ನಾಗಪ್ಪನ ಪೂಜೆ, 2ಕ್ಕೆ ಬಸವನ ಉತ್ಸವ, 3ಕ್ಕೆ ತುಳಸಿ ಪೂಜೆ, 4ಕ್ಕೆ ರಾಶಿ ಪೂಜೆ, 5ಕ್ಕೆ ಕಳಸಪೂಜೆ, ಹಾಗೂ ದೀಪೋತ್ಸವ, ರಾತ್ರಿ 12ಕ್ಕೆ ಭೂ ಕೈಲಾಸೋತ್ಸವ ನಡೆಯಲಿದೆ. ಸಂಜೆ 6ಗಂಟೆಗೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 10 ಗಂಟೆಗೆ ಆಕರ್ೆಷ್ಟ್ರ ಹಮ್ಮಿಕೊಳ್ಳಲಾಗಿದೆ.
ರಾತ್ರಿ 8ಗಂಟೆಗೆ ಸಮಾರಂಭ ನಡೆಯಲಿದ್ದು ಯಾದವ ಸಂಸ್ಥಾನದ ಯಾದವಾನಂದ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸೊಗಡುಶಿವಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಶಾಸಕರುಗಳಾದ ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಬಿ.ಸಿ.ನಾಗೇಶ್, ಟ.ಬಿ.ಜಯಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ  ಸಂಘಟಕರು ಮನವಿ ಮಾಡಿದರು.