Monday, May 3, 2010

ಸಂತೆ ಸ್ಥಳವನ್ನು ಬದಲಿಸದಂತೆ ಒತ್ತಾಯಿಸಿ ವರ್ತಕರಿಂದ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ಮೇ.03: ಪಟ್ಟಣದಲ್ಲಿನ ಸಂತೆ ವರ್ತಕರು ದಿಢೀರ್ ಪ್ರತಿಭಟನೆಗಿಳಿದು ಸಂತೆ ಮೈದಾನವನ್ನು ಬದಲಾಯಿಸಬಾರದು ಹಾಗೂ ವರ್ತಕರಿಗೆ ಮೂಲ ಸೌಲಭ್ಯವನ್ನು ಒದಗಿಸಬೇಕೆಂದು ಆಗ್ರಹಿಸಿ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಿ.ಎಸ್.ಎನ್.ಎಲ್ ಕಛೇರಿಯ ಬಳಿ ಪ್ರತಿ ಸೋಮವಾರದ ಸಂತೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ, ಆ ಸ್ಥಳದ ಒಂದು ಭಾಗದಲ್ಲಿ ಈಗ ಲೋಕೋಪಯೋಗಿ ಇಲಾಖೆ ಕಟ್ಟಡವೊಂದನ್ನು ಕಟ್ಟಲು ಹೊರಟಿದ್ದರಿಂದ ಕೋಪಗೊಂಡ ವರ್ತಕರು, ಈ ಪ್ರದೇಶವನ್ನು ಸಂತೆ ಮೈದಾನವನ್ನಾಗಿ ಮುಂದುವರೆಸುವಂತೆ ಒತ್ತಾಯಿಸಿ ರಸ್ತೆಗಿಳಿದು ಪ್ರತಿಭಟಿಸಿದರು, ಈ ಸಂದರ್ಭದಲ್ಲಿ ಕೆಲವು ನಿಮಿಷ ವರ್ತಕರು ಆವೇಶಭರಿತರಾದರು. ಪರಿಸ್ಥಿತಿಯನ್ನು ತಿಳಿ ಮಾಡುವ ಉದ್ದೇಶದಿಂದ ಪಿ.ಎಸೈ. ಪ್ರತಿಭಟನಾಕಾರರನ್ನು ಪುರಸಭಾ ಮುಂಭಾಗಕ್ಕೆ ತೆರಳುವಂತೆ ಸೂಚಿಸಿದರು.
ಪುರಸಭಾ ಕಛೇರಿಯ ಮುಂದೆ ಜಮಾಯಿಸದ ವರ್ತಕರು ಪುರಸಭಾ ಆಡಳಿತದ ವಿರುದ್ದ ಘೋಷಣೆಗಳನ್ನು ಕೂಗಿದರು, ನಂತರ ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಪ್ರತಿಭಟನಾಕಾರರ ಬಳಿ ತೆರಳಿಸಿದರು.
ಸಭೆಯಲ್ಲಿ ಮಾತನಾಡಿದ ತರಕಾರಿ ವರ್ತಕಿ ಆಂಜನಮ್ಮ, ನಮ್ಮನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪದೇ ಪದೇ ಎತ್ತಾಕುತ್ತಿದ್ದರೆ, ನಮ್ಮ ವ್ಯಾಪಾರ ವಹಿವಾಟಿಗೆ ಅನಾನೂಕೂಲವಾಗುತ್ತದೆ, ನಮಗೆ ಆ ಸ್ಥಳದಲ್ಲೇ ಸಂತೆ ಮುಂದುವರೆಸಲು ಅವಕಾಶ ಕಲ್ಪಿಸಿ ಎಂದರು.
ಈರುಳ್ಳಿ ವ್ಯಾಪಾರಿ ಜಹೀರ್ ಮಾತನಾಡಿ, ಈ ಮೊದಲು ತಾತಯ್ಯನ ಗೋರಿ ಬಳಿ ಸಂತೆ ನಡೆಯುತ್ತಿತ್ತು ಈ ಸ್ಥಳವನ್ನು ಜವಳಿ ವ್ಯಾಪಾರಿ ಗೋಪಾಲ ಶೆಟ್ಟರ ಮನೆತನದವರು ದಾನವಾಗಿ ನೀಡಿದ್ದರು, ಆದರೆ ಪುರಸಭೆಯವರು ಆ ಜಾಗವನ್ನು ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ಗೆಂದು ನೀಡಿದ್ದರಿಂದ ಸಂತೆಯನ್ನು ತಾತಯ್ಯನ ಗೋರಿ ಬಳಿಯಿಂದ ಈಗ ನಡೆಯುತ್ತಿರುವ ಬಿ.ಎಸ್.ಎನ್.ಎಲ್.ಕಛೇರಿ ಬಳಿಗೆ ವಗರ್ಾಯಿಸಿದರು, ಈಗ ಅಲ್ಲಿಂದಲೂ ತೆರಳಿ ಎಂದರೆ ನಮಗೆ ತೊಂದರೆಯಾಗುತ್ತದೆ ಎಂದರು.
ತರಕಾರಿ ವ್ಯಾಪಾರಿ ಮೊಹಿದ್ದೀನ ಪಾಷ ಮಾತನಾಡಿ ಸಂತೆ ಸುಂಕವನ್ನು ಮಾತ್ರ ಕಟ್ಟಿಸಿಕೊಳ್ಳುವ ಈ ಪುರಸಭೆಯವರು ವರ್ತಕರಿಗೆ ಯಾವುದೇ ಸೌಕರ್ಯವನ್ನು ಕಲ್ಪಿಸಿಲ್ಲವೆಂದರು.
ಬಟ್ಟೆ ವ್ಯಾಪಾರಿ ಕೃಷ್ಣೋಜಿ ರಾವ್ ಮಾತನಾಡಿ, ಬೇರೆ ಊರುಗಳಲ್ಲಿ ವರ್ತಕರಿಗೆ ಹಾಗೂ ಗ್ರಾಹಕರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ, ಇಲ್ಲಿ ನಮಗೆ ಕುಡಿಯಲು ನೀರಿನ ವ್ಯವಸ್ಥೆಯಾಗಲಿ, ಶೌಚಾಲಯದ ವ್ಯವಸ್ಥೆಯಾಗಲಿ ಸಂತೆ ನಡೆಯುವ ಜಾಗದಲ್ಲಿ ಇಲ್ಲ ಎಂದರು.
ನಂತರ ಮಾತನಾಡಿದ ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ವರ್ತಕರ ಮುಖಂಡರೊಂದಿಗೆ ಸಭೆ ನಡೆಸಿ ನಂತರ ಸಭೆಯ ತೀಮರ್ಾನವನ್ನು ತಿಳಿಸುವುದಾಗಿ ಪ್ರತಿಭಟಾನಾಕಾರರಿಗೆ ತಿಳಿಸಿ, ಪುರಸಭಾ ಸಭಾಂಗಣಕ್ಕೆ ತೆರಳಿದರು.
ಸಭೆಯಲ್ಲಿ ಪುರಸಭಾ ವಿರೋಧ ಪಕ್ಷದ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಪಿ.ಮಹೇಶ್, ಬಾಬು ಸಾಹೇಬ್ ಹಾಗೂ ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸೀಮೆಣ್ಣೆ ಗುರುಮೂತರ್ಿ ಪುರಸಭಾ ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದರು.
ಈಗ ನಡೆಯುತ್ತಿರುವ ಸ್ಥಳದಲ್ಲೇ ಸಂತೆಯನ್ನು ಮುಂದುವರೆಸಿ, ಈ ಮೊದಲೆ ವಿಷಯ ತಿಳಿದಿದ್ದರೂ ವರ್ತಕರಿಗೆ ವಿಷಯವನ್ನು ತಿಳಿಸದೆ ಏಕಾಏಕಿ ಅವರು ಸರಕು ಸರಂಜಾಮುಗಳನ್ನು ತಂದು ವ್ಯಾಪಾರ ನಡೆಸಲು ಹೋದಾಗ ಇಲ್ಲಿ ಸಂತೆ ನಡೆಯುವುದಿಲ್ಲವೆಂದು ಹೇಳಿದ್ದರಿಂದ ವರ್ತಕರು ಬೀದಿಗಿಳಿಯ ಬೇಕಾಯಿತು ಎಂಬ ಅಂಶಗಳು ಸಭೆಯಲ್ಲಿ ವ್ಯಕ್ತವಾದವು.
ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ, ಅಲ್ಲಿ ಕಟ್ಟಡ ಆರಂಭಿಸುವ ವಿಷಯ ನನಗೆ ಇತ್ತೀಚೆಗೆ ತಿಳಿಯಿತು, ಮೊದಲೇ ತಿಳಿದಿದ್ದರೆ ಸಂಬಂಧಿಸಿದವರಿಗೆ ಸಂತೆಯ ಸಮಸ್ಯೆಯನ್ನು ಬಗೆ ಹರಿಸಿದ ನಂತರ ಕಟ್ಟಡ ಕಟ್ಟಲು ಅನುವು ಮಾಡಿಕೊಡುತ್ತಿದ್ದೆವು ಎಂದರು. ಈ ಮಾತಿನಿಂದ ಸಭೆ ಸಮಾಧಾನವಾಗಲಿಲ್ಲ. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೊಂದಿಗೆ ವಿರೋಧ ಪಕ್ಷದ ಕೆಲವರು ಮತ್ತೆ ವಾಗ್ವಾದಕ್ಕಿಳಿದರು.
ನಂತರ ಅಧ್ಯಕ್ಷರು ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಈಗ ಸಂತೆ ಸ್ಥಳದಲ್ಲಿ ನಡೆಯಲಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಕಾಲಂ ನಿಮರ್ಿಸಲು ತೋಡಿರುವ ಗುಂಡಿಗಳನ್ನು ಮುಚ್ಚಿ ಸಂತೆಗೆ ಅನವು ಮಾಡಿಕೊಡುವಂತೆ ಹೇಳಿದ್ದರಿಂದ ವರ್ತಕರ ಮುಖಂಡರು ಸಮಾಧಾನವಾಗಿ ಪ್ರತಿಭಟನೆ ಸ್ಥಗಿತಗೊಳಿಸಿದರು, ಸೋಮವಾರದ ಸಂತೆ ಎಥಾ ಪ್ರಕಾರ ನಡೆಯಿತು.
ಸಭೆಯಲ್ಲಿ ಪುರಸಭಾ ಸದಸ್ಯರಾದ ರಾಜಣ್ಣ(ಬಸ್), ದೊರೆಮುದ್ದಯ್ಯ, ಸಿ.ಪಿ.ಐ. ರವಿ ಪ್ರಸಾದ್, ಪಿ.ಎಸೈ. ಶಿವಕುಮಾರ್, ಮುಖ್ಯಾಧಿಕಾರಿ ಸಿದ್ದಮೂತರ್ಿ ಉಪಸ್ಥಿತರಿದ್ದರು.

No comments:

Post a Comment