Saturday, June 5, 2010


ಮ್ಯಾನುಯಲ್ ಇನ್ಕಂ ಸಟರ್ಿಫಿಕೇಟ್ ನೀಡಲು ಡಿ.ಸಿ.ಸೂಚನೆ:
ಚಿಕ್ಕನಾಯಕನಹಳ್ಳಿ,ಜು.5: ವಿದ್ಯಾಥರ್ಿಗಳಿಗೆ ಶಾಲಾ ಪ್ರವೇಶಕ್ಕೆ ಅಗತ್ಯವಿರುವ ಜಾತಿ ಮತ್ತು ವರಮಾನ ಪತ್ರಗಳನ್ನು ಮ್ಯಾನುಯಲ್ ಆಗಿ ನೀಡಲು ಆದೇಶ ನೀಡಿರುವ ಜಿಲ್ಲಾಧಿಕಾರಿಗಳ ನಿಧರ್ಾರಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇ-ಗರ್ವನೆನ್ಸ್ ಬಂದಾಗಿನಿಂದಲೂ ಕಂಪ್ಯೂಟರೀಕೃತ ಜಾತಿ ಮತ್ತು ವರಮಾನ ನೀಡುತ್ತಿದ್ದು, ಇದರಿಂದ ಇತ್ತೀಚೆಗೆ ತಾಂತ್ರಿಕ ತೊಂದರೆಗಳು ಹೆಚ್ಚಾಗಿ ವಿದ್ಯಾಥರ್ಿಗಳು ಹಾಗೂ ಪೋಷಕರು ವರಮಾನ ಪತ್ರ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪವೆತ್ತಿ ಕಂಪ್ಯೂಟರೀಕೃತ ಪ್ರಮಾಣ ಪತ್ರಗಳು ಸರಿಯಾದ ಸಮಯಕ್ಕೆ ಅಬ್ಯಾಥರ್ಿಗಳ ಕೈ ತಲುಪದೇ ಶಾಲಾ ಪ್ರವೇಶಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಬಳಿ ಚಚರ್ಿಸಿದ ಫಲವಾಗಿ ಅವರು, ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡ ಪರಿಣಾಮ ಜಿಲ್ಲಾಧಿಕಾರಿಗಳು ಇದೇ ತಿಂಗಳ 4 ರಿಂದ 9ರವರೆಗೆ ಜಾತಿ ಮತ್ತು ವರಮಾನ ಪ್ರಮಾಣ ಪತ್ರವನ್ನು ಮ್ಯಾನುಯಲ್(ಕೈ ಬರಹ)ದ ಮೂಲಕ ಕೊಡಲು ಆದೇಶ ನೀಡಿದ್ದಾರೆ. ಇದರಿಂದ ನೆಮ್ಮದಿ ಕೇಂದ್ರಗಳಲ್ಲಿ ಕಂಪ್ಯೂಟರ್ ನೀಡುವ ಕಿರುಕುಳವನ್ನು ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ.
ವಿದ್ಯಾಥರ್ಿಗಳ ಹಾಗೂ ಪೋಷಕರ ಸಮಸ್ಯೆಗೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳಾದ ಡಾ.ಸಿ.ಸೋಮಶೇಖರ್ ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ರವರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಜಲು ಹೋದ ವಿದ್ಯಾಥರ್ಿ ನೀರು ಪಾಲು
ಚಿಕ್ಕನಾಯಕನಹಳ್ಳಿ,ಜು.5: ಈಜಲು ಹೋದ ವಿದ್ಯಾಥರ್ಿ ನೀರು ಪಾಲದ ಘಟನೆ ತಾಲೂಕಿನ ಶೆಟ್ಟೀಕೆರೆ ಯಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿರುವ ಶೆಟ್ಟೀಕೆರೆ ಯಶವಂತಕುಮಾರ್ ಎಂಬಾತ ತನ್ನ ಸಹಪಾಠಿಗಳೊಂದಿಗೆ ಕೆರೆಗೆ ಈಜಲು ಹೋದಾಗ ಈ ಘಟನೆ ನಡೆದಿದೆ, ಘಟನೆಯ ಸ್ಥಳಕ್ಕೆ ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ ಭೇಟಿ ನೀಡಿದ್ದರು. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆ: ಸಿ.ಎಂ.ಆರ್.
ಚಿಕ್ಕನಾಯಕನಹಳ್ಳಿ,ಜು.5: ಇಂದಿನ ದಿನಗಳಲ್ಲಿ ಪರಿಸರಕ್ಕೆ ಆಗಿರುವ ಹಾನಿ ಅಗಾಧವಾಗಿದೆ, ಇದರಿಂದ ಮುಂದಿನ ಭವಿಷ್ಯ ತುಂಬಾ ಕರಾಳವಾಗಿದೆ. ಮಕ್ಕಳಿಗೆ ಪರಿಸರ ಅರಿವು ಮೂಡಿದಾಗ ಭವಿಷ್ಯ ಸುಂದರವಾಗುತ್ತದೆ ಎಂದು ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ತಿಳಿಸಿದರು.
ತಾಲೂಕು ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಚರಿಸಿದ ಪರಿಸರ ದಿನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪುರಸಭೆಯ ಸಹಕಾರದೊಂದಿಗೆ ಚಿ.ನಾ.ಹಳ್ಳಿ ಪರಿಸರ ಸುಂದರಗೊಳಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿದರು.
ಈ ಬಾರಿಯ ಪರಿಸರ ದಿನಾಚರಣೆಯ ಘೋಷ ವಾಕ್ಯ, ''ಕೋಟಿ ಕೋಟಿ ಪ್ರಭೇದಗಳು-ಒಂದೇ ಭೂಮಿ-ಒಂದೇ ಭವಿಷ್ಯ'' ಕುರಿತು ತಾಲೂಕಿನ ಎಪ್ಪತ್ತು ಜನ ಶಿಕ್ಷಕರಿಗೆ ಅರಿವು ಮೂಡಿಸಲಾಯಿತು. ಜೀವಿ ವೈವಿಧ್ಯಗಳನ್ನು ಸಂರಕ್ಷಣೆ ಕುರಿತು ವಿವರವಾಗಿ ತಾಲೂಕು ಕೇಂದ್ರದ ಎನ್.ಇಂದಿರಮ್ಮ ತಿಳಿಸಿದರು.
ತುಮಕೂರಿನ ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ, ಜೀವಿ ವೈವಿಧ್ಯ ದಾಖಲಾತಿ ಮಾಡಲು ಬೇಕಾದ ವಿವರವನ್ನು ನಮೂನೆಗಳಲ್ಲಿ ಭತರ್ಿ ಮಾಡುವ ಕ್ರಮವನ್ನು ಹಾಜರಿದ್ದ ಶಿಕ್ಷಕರಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಆರ್.ಸಿ, ಎಚ್.ಎಸ್.ಸಿದ್ದರಾಜಪ್ಪ ಮಾತನಾಡಿ ಅಭಿವೃದ್ದಿಯ ಹೆಸರಿನಲ್ಲಿ ಪರಿಸರನಾಶ ಹೆಚ್ಚುತ್ತಿದೆ, ಎರಡನ್ನೂ ಸಮತೋಲನ ಮಾಡುವ ಪ್ರಯತ್ನಗಳಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಸ್.ಬಸವರಾಜು ಉಪಸ್ಥಿತರಿದ್ದರು, ವಿಶ್ವೇಶ್ವರ ಸ್ವಾಗತಿಸಿದರೆ, ಎಂ.ಎಸ್.ಈಶ್ವರಪ್ಪ ನಿರೂಪಿಸಿದರು, ಟಿ.ಎನ್.ರಮೇಶ್ ವಂದಿಸಿದರು.

No comments:

Post a Comment