Saturday, June 12, 2010

ಗಣಿಗಾರಿಕೆಗೆ ಅರಣ್ಯ ಪ್ರದೇಶ ಒತ್ತುವರಿ: ದೂರು

ಚಿಕ್ಕನಾಯಕನಹಳ್ಳಿ,ಜೂ.11: ಅರಣ್ಯ ಇಲಾಖೆಗೆ ಸೇರಿದ ಪ್ರದೇಶವನ್ನು ಹೊರತು ಪಡಿಸುವವರೆಗೂ ಗೊಲ್ಲರಹಳ್ಳಿ ಗ್ರಾಮದ ಖಾಸಗಿಯೊಬ್ಬರಿಗೆ ಸೇರಿದ ಗಣಿ ಪ್ರದೇಶವನ್ನು ಅಳತೆ ಮಾಡಬಾರದೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿರುವ ವಿವಿಧ ವ್ಯಕ್ತಿಗಳಿಗೆ ಸೇರಿದ ಗಣಿ ಪ್ರದೇಶವನ್ನು ಕಂದಾಯ ಇಲಾಖೆ, ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಸೇರಿ ಒಂದೇ ಬಾರಿ ಜಂಟಿ ಸವರ್ೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಸವರ್ೆ.ನಂ.12ರಲ್ಲಿ ಪ್ರವೀಣ್ ರಾಮಮೂತರ್ಿಗೆ ಗಣಿಗಾರಿಕೆ ಪ್ರಾರಂಭಿಸಲು ಮಂಜೂರಾತಿ ದೊರೆತಿದ್ದು ಜೂನ್ 9ರಂದು ಅವರ ಗಣಿ ಪ್ರದೇಶವನ್ನು ಅಳತೆ ಮಾಡಲು ಸವರ್ೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದು ಈ ಸವರ್ೆ ನಂಬರ್ನ ಭೂಮಿ ಅರಣ್ಯ ಇಲಾಖೆಗೆ ಸೇರಿದೆ, ಅಲ್ಲದೆ ಇದಕ್ಕೆ ಹೊಂದಿಕೊಂಡಂತೆ ಇರುವ ಹೊಬಳೆಗೆಟ್ಟೆ, ಯರೇಕಟ್ಟೆ, ಹಾಗೂ ಹೊಸಳ್ಳಿ ಸವರ್ೆ ನಂಬರುಗಳ ಕೆಲವು ಪ್ರದೇಶವು ಅರಣ್ಯಕ್ಕೆ ಸೇರಿದ ಜಮೀನಾಗಿದೆ ಈ ಗ್ರಾಮಗಳ ಗಡಿ ಪ್ರದೇಶವನ್ನು ಗುರುತಿಸುವುದು ಹಾಗೂ ಅರಣ್ಯ ಪ್ರದೇಶವನ್ನು ಅಳತೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರೆಯುವುದೆಂದು ತಿಳಿಸಿದ್ದಾರೆ.
ಗಣಿ ಪ್ರದೇಶದ ರೈತರಿಗೆ ಬೆಳೆ ಪರಿಹಾರ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.11: ತಾಲೂಕಿನ ಗಣಿಗಾರಿಕೆಯಿಂದ ಬೆಳೆ ಹಾನಿಯಾದ ಗ್ರಾಮಗಳ ಹಿಡುವಳಿಗಾರರಿಗೆ ಮತ್ತು ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮವನ್ನು ಇದೇ 14ರ ಸೋಮವಾರ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ
ಕಾರ್ಯಕ್ರಮವನ್ನು ಡಾ. ಅಂಭೇಡ್ಕರ್ ಭವನದಲ್ಲಿ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಂಡಿದ್ದು ಬುಳ್ಳೇನಹಳ್ಳಿ, ಹೊನ್ನೆಬಾಗಿ ಮತ್ತು ಜೋಗಿಹಳ್ಳಿ ಗ್ರಾಮದ ಹಿಡುವಳಿದಾರು ಮತ್ತು ವಿದ್ಯಾಥರ್ಿಗಳು ಚೆಕ್ ಸ್ವೀಕರಿಸಲು ಸಭೆಗೆ ಆಗಮಿಸುವಂತೆ ತಹಸೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.


No comments:

Post a Comment