Wednesday, September 15, 2010

ನಿವೇಶನ ವಿವಾದ: ಅಂಬೇಡ್ಕರ್ ಭಾವ ಚಿತ್ರ ತಿಪ್ಪೆಗುಂಡಿಯಲ್ಲಿ.
ಚಿಕ್ಕನಾಯಕನಹಳ್ಳಿ,ಸೆ.15: ಡಾ. ಅಂಬೇಡ್ಕರ್ ಭಾವಚಿತ್ರವನ್ನು ತಿಪ್ಪೆಗೆಸಿದು ಅವಮಾನಿಸಿದರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಜೋಗಿಹಳ್ಳಿ ರಾಮಾಂಜನೇಯ ಯುವಕ ಸಂಘದ ಕಛೇರಿಯಲ್ಲಿದ್ದ ಡಾ. ಅಂಬೇಡ್ಕರ್ ರವರ ಭಾವಚಿತ್ರವನ್ನು ತಿಪ್ಪೆಗೆಸಿದಿದ್ದರಿಂದ ಕೆಲವು ಕಾಲ ಗೊಂದಲ ಉಂಟಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ಈ ಗೊಂದಲ ಠಾಣೆಯ ಮೆಟ್ಟಿಲ ಹತ್ತಿದೆ.
ಗಣೇಶನ ಹಬ್ಬದ ಅಂಗವಾಗಿ ಸಂಘದ ಕಛೇರಿಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು, ಮಂಗಳವಾರ ಬೆಳಗ್ಗೆ ಸಂಘದ ಬಾಗಿಲು ತೆರೆದಿದ್ದು, ಗಣೇಶನ ವಿಗ್ರಹ ಹಾಗೂ ರಾಮ ದೇವರ ಪೊಟೋಕ್ಕೆ ಯಾವುದೇ ಧಕ್ಕೆಯಾಗಿರಿಲಿಲ್ಲ ಆದರೆ ಅಂಬೇಡ್ಕರ್ ರವರ ಭಾವಚಿತ್ರ ಮಾತ್ರ ತಿಪ್ಪೆಯ ಗುಂಡಿಯಲ್ಲಿ ಬಿದಿತ್ತು. ಇದರಿಂದ ದಲಿತ ಸಂಘಟನೆಗಳು ಜಾಗೃತರಾಗಿ ಈ ಘಟನೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹಿಸಿದರು.
ರಾಮಾಂಜನೇಯ ಯುವಕ ಸಂಘದ ಕಛೇರಿಯ ನಿವೇಶನದ ವಿಷಯದಲ್ಲಿ ತಕರಾರಿದ್ದು, ಕೋಟರ್್ಮೆಟ್ಟಿಲು ಹತ್ತಿತ್ತು. ಈ ಸಂಬಂಧದ ಪ್ರಕರಣ ಸಂಘದ ಪರವಾಗಿ ಒಂದು ತಿಂಗಳ ಹಿಂದೆಯಷ್ಟೇ ಕೋಟರ್್ ಆದೇಶವಾಗಿತ್ತು. ಈ ನಿವೇಶನದಲ್ಲಿ ಕಟ್ಟಡವನ್ನು ಇತ್ತೀಚೆಗಷ್ಟೆ ಕಟ್ಟಿದ್ದು ಈ ಕಟ್ಟಡದಲ್ಲಿದ್ದ ಅಂಬೇಡ್ಕರ್ ಪೊಟೋವನ್ನು ತಿಪ್ಪೆಗೆಸಿದಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕಾರ್ಯದಶರ್ಿ ನರಸಿಂಹಮೂತರ್ಿ ತಿಳಿಸಿದ್ದಾರೆ.
ಈ ಘಟನೆನೆ ಹಿನ್ನೆಲೆಯಲ್ಲಿ ಮಂಜುನಾಥ್ ಸಿಂಗ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕಾರ್ಯದಶರ್ಿ, ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದಾರೆ. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚಿನ್ನಾಭರಣ ಹಾಗೂ ನಗದು ಕಳ್ಳತನ
ಚಿಕ್ಕನಾಯಕನಹಳ್ಳಿ,ಸೆ.15: ರಾತ್ರಿ ವಿದ್ಯುತ್ ಸರಬರಾಜು ಇಲ್ಲದ ಸಮಯದಲ್ಲಿ ಆಭರಣಗಳು ಮತ್ತು ನಗದು ಹಣ ಕಳ್ಳತನವಾಗಿರುವ ಘಟನೆ ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೇಲನಹಳ್ಳಿಯ ಮಲ್ಲಿಕಾಜರ್ುನಯ್ಯ ಎಂಬುವರ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು ಕುಟುಂಬದವರು ಪರಸ್ಥಳಕ್ಕೆ ಹೋಗಿದ್ದಾಗ, ರಾತ್ರಿ ಸುಮಾರು 2ಗಂಟೆಯಲ್ಲಿ ಮನೆಯ ಮುಂದಿನ ಬೀಗವನ್ನು ಮುರಿದು 4ಜೊತೆ ವಾಲೆ ಒಂದು ಉಂಗುರ ಮತ್ತು ಮಾಟಿಪ್ಲೇಟ್ ಆಭರಣಗಳ ಜೊತೆ 2ಸಾವಿರ ರೂಗಳು ಕಳ್ಳತನವಾಗಿದೆ. ಚಿ.ನಾ.ಹಳ್ಳಿ ಪೋಲಿಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ.


No comments:

Post a Comment