Friday, September 24, 2010

ಮಗನಿಂದಾಗಿ ತಂದೆಗೆ ಪೂಜೆ......!
ಚಿಕ್ಕನಾಯಕನಹಳ್ಳಿ.ಸೆ.22: ಗಣಪನ ದೆಸೆಯಿಂದ ಶಿವಪ್ಪ ಪೂಜೆ ಕಂಡ ಅಪರೂಪದ ಘಟನೆ ನವಿಲೆಯಲ್ಲಿ ನಡೆದಿದೆ.
ಪಟ್ಟಣದಿಂದ ಐದು ಕಿ.ಮೀ ದೂರವಿರುವ ನವಿಲೆ ಗ್ರಾಮದಲ್ಲಿರುವ ಶಿವಲಿಂಗ ಹಾಗೂ ಬಸವಣ್ಣ ವಿಗ್ರಹವಿರುವ ಗುಡಿ ಶತಮಾನಗಳಿಂದ ಪೂಜೆಯನ್ನು ಕಾಣದೆ ಪಾಳು ಬಿದ್ದು ದನ ಕರುಗಳನ್ನು ಕಟ್ಟುವ ಗುಡಾರವಾಗಿತ್ತು.
ಈಗ್ಗೆ ಐವತ್ತು ವರ್ಷಗಳಾಚೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮಿಗಳು ಕಾರ್ಯಕ್ರಮವೊಂದಕ್ಕೆ ನವಿಲೆಗೆ ಆಗಮಿಸಿದ ಸಂದರ್ಭದಲ್ಲಿ ಈ ಪಾಳು ಬಿದ್ದ ದೇವಾಲಯದಲ್ಲಿನ ದೊಡ್ಡ ಗಾತ್ರದ ಶಿವಲಿಂಗ ಹಾಗೂ ಬಸವಣ್ಣನ ವಿಗ್ರಹಗಳನ್ನು ನೋಡಿ, ಈ ವಿಗ್ರಹಗಳು ಚೋಳರ ಕಾಲದ ಮೂತರ್ಿಗಳೆಂದು ಅರಿತು, ಪೂಜೆ ಕಾಣದ ಈ ಪ್ರತಿಮೆಗಳನ್ನು ಸಿದ್ದಗಂಗಾ ಮಠಕ್ಕೆ ಕೊಂಡೊಯ್ಯಲು ಬಯಸಿದುಂಟು ಎಂದು ಹೇಳುವ ಗ್ರಾಮದ ಹಿರಿಯ ಜೀವ ಮೂರ್ತಪ್ಪ ಆಗಿನ ಗ್ರಾಮದ ಮುಖ್ಯಸ್ಥರು ಆಸಕ್ತಿ ತೋರಲಿಲ್ಲವೆನ್ನುತ್ತಾರೆ.
ಈ ಮಧ್ಯೆ ಇದೇ ಗ್ರಾಮದ ಚನ್ನಯ್ಯ ಎಂಬುವರು ಚೋಳರ ಕಾಲದ ಈ ದೇವಾಲಯವನ್ನು ಪಾಳು ಬಿಡುವುದು ಬೇಡವೆಂದು ಕೆಲಕಾಲ ಸಣ್ಣದಾಗಿ ಪೂಜೆ ಮಾಡಲು ಹೋದರಾದರೂ ಅವರ ಜೀವನದ ತಾಪತ್ರೆಯಗಳಿಂದ ಅವರ ವ್ರತ ಕೈಗೂಡದೆ ಪೂಜಾ ಕಾರ್ಯಕ್ಕೆ ಕೈ ಚೆಲ್ಲಿದರು.
ಈಗ ಈ ದೇವಾಲಯದ ಅನತಿ ದೂರದಲ್ಲಿದ್ದ ಗಣಪತಿ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮುಂದಾದ ಗ್ರಾಮಸ್ಥರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ಸ್ವಾಮಿಗಳನ್ನು ಗ್ರಾಮಕ್ಕೆ ಕರೆಸಿಕೊಂಡು ಗಣಪತಿ ಪುನರ್ ಪ್ರತಿಷ್ಠಾಪಿಸಬೇಕೆಂದು ಕೋರಿದ ಹಿನ್ನೆಲೆಯಲ್ಲಿ ದೇವಾಲಗಳನ್ನು ವೀಕ್ಷಿಸಿದ ಸ್ವಾಮಿಗಳು ಶಿವಲಿಂಗವಿದ್ದ ದೇವಾಲಯವನ್ನು ತೋರಿಸಿದ್ದರಲ್ಲದೆ, ಶಿವಲಿಂಗಕ್ಕೆ ಮೊದಲ ಪೂಜೆಯನ್ನು ಅವರೇ ನೆರವೇರಿಸಿ ಮುಂದೆ ಸಾಂಗವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಗ್ರಾಮದ ಹಿರಿಯರಿಗೆ ವಹಿಸಿ ಅದಕ್ಕೊಂಬ ಪೂಜಾರಿಯನ್ನು ನೇಮಿಸಿದ್ದಾರೆ. ಜಲವಾಸದಲ್ಲಿರುವ ಗಣಪತಿಯನ್ನು ಪುನರ್ ಪ್ರತಿಷ್ಠಾಪಿಸಲು ಸಿದ್ದತೆ ನಡೆಯುತ್ತಿದೆ.
ಶಾಸಕ ಸಿ.ಬಿ.ಸುರೇಶ್ ಬಾಬು ಗ್ರಾಮಸ್ಥರೊಂದಿಗೆ ಶಿವಲಿಂಗಕ್ಕೆ ಪೂಜೆ ನೆರವೇರಿಸುವುದು, ದೇವಾಲಯದ ಅಭಿವೃದ್ದಿ ಹಾಗೂ ಗಣಪತಿ ಪುನರ್ ಪ್ರತಿಷ್ಠಾಪನೆ ವಿಷಯವಾಗಿ ಚಚರ್ಿಸಿದ್ದಾರೆ.
ಅಯೋಧ್ಯೆ ತೀಪರ್ು: ಸೌಹಾರ್ಧತೆಯಿಂದ ನಡೆದುಕೊಳ್ಳುವಂತೆ ಸಿ.ಪಿ.ಐ.ಮನವಿ
ಚಿಕ್ಕನಾಯಕನಹಳ್ಳಿ,ಸೆ.22: ನ್ಯಾಯಾಲಯದಲ್ಲಿ ನಡೆಯುತ್ತಿರುವ ಅಯೋಧ್ಯೆ ರಾಮ ಮಂದಿರದ ತೀಪರ್ು ಯಾವ ಕಡೆಯಾದರೂ ಸರಿ ಸಂಘಟನೆಗಳು ಗಲಭೆಯಾಗದಂತೆ ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು ಎಂದು ವೃತ್ತ ನಿರೀಕ್ಷಕ ಪಿ. ರವಿಪ್ರಸಾದ್ ಸಂಘಟನೆಗಳಲ್ಲಿ ಮನವಿ ಮಾಡಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್.ಎಸ್.ಎಸ್, ಎ.ಬಿ.ವಿ.ಪಿ ಮತ್ತು ಪಕ್ಷ ಸಂಘಟನೆಗಳು ನ್ಯಾಯಾಲಯದಲ್ಲಿರುವ ರಾಮಮಂದಿರದ ತೀಪರ್ು ಹೊರಬಿದ್ದಾಗ ಸಂಘಟನೆಗಳು ಸಾರ್ವಜನಿಕ ಆಸ್ತಿಗೆ ತೊಂದರೆಯಾಗದಂತೆ ಕಾಪಾಡಬೇಕು. ಸಾರ್ವಜನಿಕ ಆಸ್ತಿ, ದೇಶದ ಆಸ್ತಿಗಳಿಗೆ ತೊಂದರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದ ಅವರು ಈ ಘಟನೆಗೆ ಸಂಬಂದಿಸಿದಂತೆ ಗಲಭೆಗಳ ಬಗ್ಗೆ ವಿಷಯ ತಿಳಿದರೆ ಸಾರ್ವಜನಿಕರು ಪೋಲಿಸ್ ಮತ್ತು ಹೋಂ ಗಾಡ್ಸ್ಗಳಿಗೂ ತಿಳಿಸಬೇಕು ಎಂದು ಸಭೆಯಲ್ಲಿ ಕೋರಿದರು.
ಪುರಸಭಾಧ್ಯಕ್ಷ ರಾಜಣ್ಣ ಮಾತನಾಡಿ ತಾಲೂಕಿನಲ್ಲಿ ಹಿಂದು, ಮುಸ್ಲಿಂ ಗಲಭೆಗಳು ಎಂದು ನಡೆದಿಲ್ಲ ತೀಪರ್ಿನ ನಂತರವೂ ಹಿಂದು ಮುಸ್ಲಿಂಗಳಲ್ಲಿ ಗಲಭೆಯಾಗದಂತೆ ನೋಡಿಕೊಳ್ಳಬೇಕು. ಅಣ್ಣ, ತಮ್ಮಂದಿರಂತೆ ಬಾಳಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ನ್ಯಾಯಾಲಯದ ತೀಪರ್ಿಗೆ ಎಲ್ಲರೂ ತಲೆಬಾಗಿ ಪಾಲಿಸಬೇಕು ಹೈಕೋಟರ್್ನಲ್ಲಿ ತೀಪರ್ು ನ್ಯಾಯೋಚಿತವಾದ ಕಡೆ ಆಗದಿದ್ದರೆ ಸುಪ್ರೀಂ ಕೋಟರ್್ಗೂ ಮೊರೆ ಹೋಗಿ ಗೆಲ್ಲಬಹುದು ಇದಕ್ಕಾಗಿ ಹಿಂದೂ ಮುಸ್ಲಿಂ ಗಲಭೆಗಳು ಆಗಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಬಿ.ಜೆ.ಪಿ.ಮುಖಂಡರಾದ ಶ್ರೀನಿವಾಸಮೂತರ್ಿ, ಸಿ.ಎಸ್.ರಾಜಣ್ಣ, ಜೆ.ಡಿ.ಎಸ್ ಮುಖಂಡರುಗಳಾದ ಸಿ.ಎಸ್.ನಟರಾಜು, ಎಚ್.ಬಿ. ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಬಾಬು ಸಾಹೇಬ್, ಪೀರ್ ಪಾಷ, ಸಿ.ಎಂ.ಬೀರಲಿಂಗಯ್ಯ ಎಚ್.ಬಿ.ಎಸ್.ನಾರಾಯಣಗೌಡ, ಮತ್ತು ಅ.ಭಾ.ವಿ.ಪ, ಮುಖಂಡ ಚೇತನ್ ಪ್ರಸಾದ್, ಆರ್.ಎಸ್.ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

No comments:

Post a Comment