Saturday, October 30, 2010


ತಾಲೂಕು ಆಡಳಿತದ ವತಿಯಿಂದ ನ.1 ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ.30
: 54ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ನವಂಬರ್ 1ರ ಬೆಳಗ್ಗೆ 9ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ.ಸಮಾರಂಭದಲ್ಲಿ ಕಲಾವಿದ ಸಿ.ಎನ್.ಕೃಷ್ಣಾಚಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಗೋಕಾಕ್ ಚಳುವಳಿ ಹೋರಾಟಗಾರ ಸಿ.ಎಸ್.ನಾಗರಾಜುರವರಿಗೆ ಸನ್ಮಾನಿಸಲಾಗುವುದು.. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿರುವರು.
ಕನ್ನಡ ಸಂಘದ ವತಿಯಿಂದ

ರಾಜ್ಯೋತ್ಸವಚಿಕ್ಕನಾಯಕನಹಳ್ಳಿ,ಅ.30: 54ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಿಂದ ಮೂರು ದಿನಗಳ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಿಳಿಸಿದ್ದಾರೆ.ಅಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜರಾಜೇಶ್ವರಿ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಜೊತಗೆ ಕೃಷ್ಣದೇವರಾಯ, ಟಿಪ್ಪು ಸುಲ್ತಾನ್ ಕಿತ್ತೂರ ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಮದಕರಿ ನಾಯಕ, ಕುವೆಂಪು, ಮಾಸ್ತಿವೆಂಕಟೇಶ ಅಯ್ಯಂಗಾರ್, ತಾ.ರಾ.ಸು, ದ.ರಾ.ಬೇಂದ್ರೆ, ತೀ.ನಂ.ಶ್ರೀ, ಸಿ.ಬಿ.ಮಲ್ಲಪ್ಪ, ಡಾ.ರಾಜ್ಕುಮಾರ್ ಹಾಗೂ ಪೌರಾಣಿಕ ಕಥೆಗಳನ್ನು ಪ್ರತಿಬಿಂಬಿಸುವ ಸ್ಥಬ್ದ ಚಿತ್ರಗಳಿರುತ್ತವೆ.ನ.1ರ ಮಧ್ಯಾಹ್ನ ಮಧಾಹ್ನ 3ಗಂಟೆಗೆ ಕನ್ನಡ ಸಂಘದ ವೇದಿಕೆಯಲ್ಲಿ ರಂಗ ಗೀತೆಗಳ ಸ್ಪಧರ್ೆ, 2ರ ಮಂಗಳವಾರ ಸಂಜೆ 6.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 3ರ ಬುಧವಾರ 'ಆಷಾಡದಲ್ಲಿ ಅಳಿಯ' ಎಂಬ ನಗೆ ನಾಟಕವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

No comments:

Post a Comment