Wednesday, November 10, 2010



ಮಕ್ಕಳ ಪ್ರತಿಭೆ ಹೊರಹೊಮ್ಮಲು ಶಿಕ್ಷಕರ ಪಾತ್ರ ಮಹತ್ವವಾದದ್ದು
ಚಿಕ್ಕನಾಯಕನಹಳ್ಳಿ,ನ.10: ಮಕ್ಕಳ ಪ್ರತಿಭೆ ಹೊರಹೊಮ್ಮವಂತೆ ಹಾಗೂ ವ್ಯವಹಾರದ ಜ್ಞಾನ ತಿಳಿಯುವಂತೆ ಶಿಕ್ಷಕರು ಉತ್ತಮ ತರಬೇತಿಯನ್ನು ನೀಡಿ ಮಕ್ಕಳ ಭವಿಷ್ಯಕ್ಕೆ ದಾರಿಯಾಗಬೇಕು, ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ಭಾಷಾ ವಿಜ್ಞಾನ ಗಣಿತ ಮೇಳ ಹಾಗೂ ಮಕ್ಕಳ ಸಂತೆಯ ವಿಚಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಂತೆ ಮೇಳದಿಂದ ಮಕ್ಕಳು ಗಣಿತಾಭ್ಯಾಸ ಕಲಿತು ಮುಂದೆ ಅವರು ನಿರ್ವಹಿಸುವ ವ್ಯವಹಾರಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದರು.
ತುಮಕೂರು ಡಿ.ಡಿ.ಪಿ.ಐ ಕಚೇರಿಯ ಶಿಕ್ಷಣಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಉತ್ತಮ ವಿದ್ಯಾಭ್ಯಾವನ್ನು ಮಾಡುವ ಮೂಲಕ ಸೃಜನಶೀಲರಾಗಬೇಕು. ಕೆಲ ಮಕ್ಕಳಿಗೆ ಬರೀ ಓದುವದು ಮಾತ್ರ ತಿಳಿದಿದ್ದು ವ್ಯವಹಾರದ ಜ್ಞಾನವಿರುವುದಿಲ್ಲ ಅಂತಹ ಮಕ್ಕಳಿಗೆ ವ್ಯವಹಾರದ ಕಲಿಕೆಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದ ಅವರು ಪ್ರತಿಯೊಬ್ಬ ವಿದ್ಯಾಥರ್ಿಯು ಸಾಂಸ್ಕೃತಿಕ, ವಿಜ್ಞಾನ, ಗಣಿತ, ಕಲೆಯ ಎಲ್ಲ ವಿಚಾರದಲ್ಲೂ ಮುಂದಿರಬೇಕು ಎಂದರು.
ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳು ವಿದ್ಯಾಬ್ಯಾಸದಿಂದ ಲೋಕದ ಆಗು ಹೋಗುಗಳನ್ನು ತಿಳಿದುಕೊಂಡು ವ್ಯವಹಾರ ಕಲಿಯಬೇಕು ಮತ್ತು ತಮ್ಮ ಬುದ್ದಿಶಕ್ತಿಯಿಂದ ವ್ಯವಹಾರದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಒಳ್ಳೆಯ ವಿಚಾರದಲ್ಲಿ ಸ್ಪೂತರ್ಿ ತುಂಬಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ವಿವಿದ ಶಾಲೆಗಳಿಂದ ಬಂದಿರುವ ಮಕ್ಕಳಿಗೆ ಇಂತಹ ಸಂತೆ ಕಾರ್ಯಕ್ರಮದಿಂದ ಪರಸ್ಪರ ಪರಿಚಯಿಸಿಕೊಂಡು ವಿದ್ಯಾಭ್ಯಾಸಕ್ಕೆ ಮತ್ತು ವ್ಯವಹಾರಕ್ಕೆ ವೇದಿಕೆಯಾಗುತ್ತದೆ ಮತ್ತು ಪೋಷಕರು ತಮ್ಮ ಮನೆಗಳಲ್ಲಿ ಕೆಲವೊಂದು ವಸ್ತುಗಳನ್ನು ತರಿಸಿಕೊಳ್ಳುವ ಮೂಲಕ ಮಕ್ಕಳಿಗೆ ವ್ಯವಹಾರದ ಜ್ಞಾನವನ್ನು ಕಲಿಸಬಹುದು ಎಂದ ಅವರು ವ್ಯವಹಾರದಲ್ಲಿ ಮೇಲು ಮತ್ತು ಕೀಳರಿಮೆ ಇರದೆ ಎಲ್ಲರೂ ಒಂದೇ ರೀತಿಯ ಕೆಲಸ ಮಾಡುವುದರಿಂದ ಉತ್ತಮ ಭಾವನೆಯನ್ನು ಹೊಂದಬೇಕು ಎಂದರು.
ಮಕ್ಕಳ ಸಂತೆಯಲ್ಲಿ ಕಸಬಾ ಹೋಬಳಿಯ 35 ಶಾಲಾ ಮಕ್ಕಳು ಭಾಗವಹಿಸಿದ್ದರು.
ಸಮಾರಮಂಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ತಿಮ್ಮರಾಜು, ಬಿ.ಆರ್.ಸಿ ಸುಧಾಕರ. ರಾ.ಪ್ರಾ.ಶಿ.ಸಂ ಉಪಾಧ್ಯಕ್ಷೆ ಶೋಭಬಸವರಾಜ, ಪತ್ರಕರ್ತ ಸಿ.ಬಿ.ಲೋಕೇಶ್, ಸಿ.ಆರ್.ಪಿ ಶಶಿಕಲ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿವಕುಮಾರ್ ಸ್ವಾಗತಿಸಿದರೆ ವಿಶ್ವೇಶ್ವರಯ್ಯ ನಿರೂಪಿಸಿ, ಸಿ.ಕೆ.ಪಾಂಡುರಂಗಯ್ಯ ವಂದಿಸಿದರು.


No comments:

Post a Comment