Thursday, November 25, 2010




ಚಿಕ್ಕನಾಯಕನಹಳ್ಳಿ,ನ.25: ಅಕ್ಕಮಹಾದೇವಿ ಮಹಿಳಾ ಸಮಾಜದ ವತಿಯಿಂದ ಮಕ್ಮಲ್ ಟೋಪಿ ಎಂಬ ಹಾಸ್ಯಬರಿತ ನಾಟಕ ಪ್ರದರ್ಶನವನ್ನು ಡಿಸೆಂಬರ್ 5ರ ಭಾನುವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ತಿಳಿಸಿದರು.
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಸ್ಯರತ್ನಕರ ಡಾ.ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ ಮಿತ್ರ ಮಂಡಳಿಯಿಂವರ ಸಹಾಯದೊಂದಿಗೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಟಕ ಹಮ್ಮಿಕೊಂಡಿದ್ದು ಸಂಘ ಸ್ಥಾಪನೆಯಾಗಿ 10ವರ್ಷವಾಗಿದ್ದು ಅದರ ನೆನಪಿಗಾಗಿ ಮತ್ತು ಸಮುದಾಯ ಭವನ ಕಟ್ಟಲು ಕಟ್ಟಡದ ಸಹಾಯಾರ್ಥವಾಗಿ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಆಧರಿಸಿ ಈ ನಾಟಕ ಏರ್ಪಡಿಸಿದ್ದು ನಾಟಕದ ಪ್ರವೇಶದರ 100ರೂ ಎಂದು ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಸಂಘದ ಕಾರ್ಯದಶರ್ಿ ಭಾರತಿ ನಟರಾಜು, ವೀಣಾಶಂಕರ್. ಪುಷ್ಪ, ಯಶೋಧ, ಅಹಲ್ಯ ಉಪಸ್ಥಿತರಿದ್ದರು.

ರಾಗಿ ರಾಮಾಯಣದ ಮೂಲಕ ಸಾಮಾಜಿಕ ನ್ಯಾಯವನ್ನು ಕಟ್ಟಿಕೊಟ್ಟವರು ಕನಕ ದಾಸರು: ಪ್ರೊ.ಎಸ್.ಜಿ.ಎಸ್.
ಚಿಕ್ಕನಾಯಕನಹಳ್ಳಿ,ನ.25: ಭೋಗಕ್ಕೆ ಬೆನ್ನು ತಿರುಗಿಸಿ ಬಡತನದ ಕಡೆ ಮುಖ ಮಾಡಿದ ಕನಕ ದಾಸರ ಪ್ರಜ್ಞೆಯನ್ನು ಅರಿಯುವ ಮೂಲಕ ಜಯಂತೋತ್ಸವವನ್ನು ಆಚರಿಸಬೇಕೆಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಹಾಗೂ ಕನಕ ಯುವಕ ಸಂಘ ಸಂಯುಕ್ತವಾಗಿ ಆಚರಿಸಿದ 523ನೇ ಕನಕ ಜಯಂತೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶ್ರೀಮಂತಿಕೆಯ ಸಂಭ್ರಮಾಚರಣೆಯನ್ನು ಬದಿಗಿಟ್ಟು ಸಂಕಟದಲ್ಲಿರುವ ಜನರಿಗೆ ಬೆಂಬಲವಾಗಿ ನಿಂತ ಕನಕದಾಸರು, ರಾಮಧಾನ್ಯ ಚರಿತೆಯ ಮೂಲಕ ಶ್ರೀಮಂತ ಹಾಗೂ ಬಡವರ ಮಧ್ಯೆದಲ್ಲಿನ ಗಟ್ಟಿತನವನ್ನು ಪ್ರದಶರ್ಿಸಿದ್ದಾರೆ. ಆ ಕಾರಣಕ್ಕಾಗಿಯೇ ರಾಮಧಾನ್ಯ ಚರಿತೆಯನ್ನು ರಾಗಿ ರಾಮಯಣ ಎನ್ನುತ್ತಾರೆ ಎಂದರು.
ಜನರಲ್ಲಿ ಸಾಮಾಜಿಕ ನ್ಯಾಯವನ್ನು ತಮ್ಮ ಸಾಹಿತ್ಯದ ಮೂಲಕ ಜಾಗೃತಿಯನ್ನು ಉಂಟು ಮಾಡಿದ ಹೋರಾಟಗಾರ, ಅವರ ಆಶಯಗಳನ್ನು ಈಡೇರಿಸುವಲ್ಲಿ ಹಿಂದುಳಿದವರೆಲ್ಲಾ ಎಲ್ಲರೂ ಒಂದಾಗಬೇಕೆಂದರು. ಇಂದಿಗೂ ಸಾಮಾಜಿಕ ನ್ಯಾಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದು, ಹಾವನೂರು ವರದಿಯಲ್ಲಿ ಗುರುತಿಸದೆ ನೂರಾರು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ. 1931ರಲ್ಲಿ ಜಾತಿಗಣತಿ ನಡೆದಿದ್ದು ಬಿಟ್ಟರೆ ಇಲ್ಲಿಯವರೆಗೂ ಜಾತಿ ಗಣತಿ ನಡೆದಿಲ್ಲವೆಂದರು.
ಇಂದಿನ ವ್ಯವಸ್ಥೆ ಒಳಗೆ ಪ್ರಜಾಪ್ರಭುತ್ವ ನೈತಿಕ ಅಧಃಪತನವಾಗುತ್ತಿದ್ದು, ವೈಯಕ್ತಿಕ ಕಾರಣಗಳಿಗಾಗಿ ಜಾತಿ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಹಿಂದುಳಿದ ಜಾತಿಗಳನ್ನು ಒಟ್ಟುಗೂಡಿಸಿಕೊಂಡು ಕರೆದುಕೊಂಡು ಹೋಗುವ ಜವಬ್ದಾರಿ ಹಿರಿಯಣ್ಣನಂತಿರುವ ಕುರುಬ ಜನಾಂಗ ತನ್ನ ಹೊಣೆಗಾರಿಕೆಯನ್ನು ಅರಿಯಬೇಕು, ಸಣ್ಣಪುಟ್ಟ ಜಾತಿಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡು ಅವರಿಗೆ ಸಾಮಾಜಿಕ ನ್ಯಾಯವನ್ನು ಒದಿಗಿಸಕೊಡಬೇಕೆಂದರು.
ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಜಾತಿ ವಿನಾಶಕ್ಕೆ ನಾಂದಿ ಹಾಡಬೇಕಾಗಿರುವ ಈ ಸಂದರ್ಭದಲ್ಲಿ ಇದರ ಹೊಣೆಗಾರಿಕೆಯನ್ನು ವಹಿಸಕೊಳ್ಳುವವರು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಪ್ರಸ್ಥಾವಿಕವಾಗಿ ಮಾತನಾಡಿ ಕನಕದಾಸರು ತಮ್ಮ ಕೀರ್ಥನೆಗಳಿಂದ ಅಷ್ಟೇ ಅಲ್ಲ ಒಡಪುಗಳ ಮೂಲಕ ಅಂದಿನ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಟ್ಟ ಶ್ರೇಷ್ಠ ಸಂತ ಅವರನ್ನು ಸಾರ್ವಜನಿಕವಾಗಿ ಸ್ಮರಿಸಿಕೊಳ್ಳುವಂತಹ ಕಾರ್ಯವನ್ನು ಸಕರ್ಾರ ಮಾಡಿದ್ದು ಕನಕ ದಾಸರ ಆಶಯಗಳಿಗೆ ಕೊಟ್ಟ ಗೌರವ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದ ವತಿಯಿಂದ ಸಾಹಿತಿ ಎಂ.ವಿ.ನಾಗರಾಜ್ ರಾವ್, ಶಿಕ್ಷಕ ಹಾಗೂ ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ, ಶಿಲ್ಪಿ ವಿಶ್ವನಾಥ್, ದಲಿತ ಮಹಿಳೆ ರುಕ್ಮಿಣಮ್ಮನವರನ್ನು ಸನ್ಮಾನಿಸಲಾಯಿತು, ಕನಕ ಯುವಕ ಸಂಘ ಗವಿರಂಗಯ್ಯ, ರೇವಣ್ಣ ಒಡೆಯರ್, ಗವಿಸಿದ್ದಯ್ಯ, ರತ್ನಕಂಬಳಿ ನೇಕಾರ ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿದರು.
ಸಮಾರಂಭದಲ್ಲಿ ಕಮಲ ಬಸವರಾಜು ಪ್ರಾಥರ್ಿಸಿದರೆ, ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರು, ಕೆಂಬಾಳ್ ರಮೇಶ್ ನಿರೂಪಿಸಿದರು, ಉಪನ್ಯಾಸಕ ಕಣ್ಣಯ್ಯ ಕನಕ ವಿದ್ಯಾಭಿವೃದ್ದಿ ನಿಧಿಯ ವರದಿ ನೀಡಿದರು, ಸುಮುಖ ಮಹಿಳಾ ಭಜನಾ ಮಂಡಳಿಯವರು ಸಾಮೂಹಿಕ ಗೀತೆ ಹಾಡಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಂದಿಸಿದರು.


No comments:

Post a Comment