Tuesday, December 7, 2010


ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದೇನೆ ಹಾಗೂ ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರ ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನ್ನ ಆಹಾರ ನೀಡುತ್ತಿರುವುದು ಕನರ್ಾಟಕ ಮಣ್ಣು : ಹಿರಣ್ಣಯ್
ಚಿಕ್ಕನಾಯಕನಹಳ್ಳಿ,ಡಿ.07: ಕಳೆದ ಅರವತ್ತು ವರ್ಷಗಳಿಂದ ರಂಗಭೂಮಿಯ ಮೂಲಕ ರಾಜಕಾರಣಿಗಳನ್ನು, ಭ್ರಷ್ಠ ಅಧಿಕಾರಿಗಳನ್ನು ಟೀಕಿಸುತ್ತಾ ಬಂದಿದ್ದರು, ಇದರಿಂದ ಯಾವುದೇ ಸುಧಾರಣೆಯಾಗಲಿಲ್ಲ ಎಂದು ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ವಿಷಾದಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಟ್ಟಡದ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ರಂಗಭೂಮಿ ಅಂದು-ಇಂದು ಎಂಬ ವಿಷಯದಲ್ಲಿ ಮೇಲ್ಕಂಡಂತೆ ಮಾತನಾಡುತ್ತ ಅಂದು ರಂಗಭೂಮಿಯ ಕಲಾದವಿದರು ಸಮಾಜದ ನೈತಿಕತೆಯ ಅದಃಪತನದಲ್ಲ್ಲಿ ಮುಳುಗಿಹೋಗಿದ್ದಾರೆ ಎಂಬ ಭಾವನೆಯಿಂದ ಯಾರು ರಂಗಭೂಮಿ ಕಲಾವಿದರನ್ನು ಪುರಸ್ಕರಿಸುತ್ತಿರಲಿಲ್ಲ. ರಂಗಕಲಾವಿದರಿಗೆ ಊರುಗಳಲ್ಲಿ ಬಾಡಿಗೆ ಮನೆಯಲ್ಲಾಗಲಿ ಹೆಣ್ಣು ಕೊಡುವಾಗ ಹತ್ತಾರು ಬಾರಿ ಯೋಚಿಸುತ್ತಿದ್ದರು. ನಾಟಕಕಾರರಿರಿಗೆ ಗೌರವ ಮತ್ತು ಸ್ವಾತಂತ್ರ್ಯ ಇವುಗಳಿಂದ ವಂಚಿತರಾಗಿದ್ದರು. ಇಂದಿನ ರಂಗಭೂಮಿಯಲ್ಲಿ ಪ್ರಶಸ್ತಿಗಳು ಚೀಪ್ ರೇಟ್ ಗಳಾಗಿದ್ದು, ಪಾತ್ರಗಳಿಗೆ ಅರ್ಥ ತುಂಬುವಲ್ಲಿ ವಿಫಲವಾಗಿದ್ದರೂ ಎಲ್ಲವೂ ಹತ್ತಿರವಾಗಿದ್ದು ರಂಗ ಭೂಮಿಗೆ ಅಂಟಿರುವ ಗ್ರಹಣ ದೂರವಾಗಬೇಕಾದರೆ ಕಲಾವಿದನಿಂದ ಏಕಾಗ್ರತೆ, ನಿಷ್ಠೆ, ಅರ್ಪಣೆ, ತಪಸ್ಸು, ತ್ಯಾಗ, ಸ್ವಾತಂತ್ರ್ಯ ಎಲ್ಲವನ್ನೂ ಮೈಗೂಡಿಸಿಕೊಂಡರೆ ಮಾತ್ರ ಮೃತ್ಯು ಕೂಪದಿಂದ ರಂಗಭೂಮಿ ಹೊರಬರಲು ಸಾಧ್ಯವಾಗುತ್ತದೆ. ಶಾಸಕಾಂಗ, ಕಾಯರ್ಾಂಗ ಮತ್ತುನ್ಯಾಯಂಗ ಇವುಗಳಲ್ಲಿ ರಾಷ್ಟ್ರ ಪ್ರಜ್ಞೆ ಕಣ್ಣು ತೆರೆಯುವಂತೆ ಮಾಡುವಲ್ಲಿ ಮಾಧ್ಯಮ ಮತ್ತು ರಂಗಭೂಮಿಗಳು ಮಹತ್ತರ ಕೆಲಸ ನಿರ್ವಹಿಸಬೇಕಾಗಿದೆ ಎಂದರು . ಕನ್ನಡ ನಾಡು, ನನಗೆ ಅಕ್ಷರ, ಅನ್ನ, ಆಶ್ರಯ, ಎಲ್ಲವನ್ನು ನೀಡಿರುವಾಗ ಪರಭಾಷೆಯಲ್ಲಿ ಪ್ರದರ್ಶನ ನೀಡುವ ಅವಶ್ಯಕತೆ ನನಗಿಲ್ಲ ಎಂದು ನಟ ರತ್ನಾಕರ ಡಾ|| ಮಾಸ್ಟರ್ ಹಿರಣ್ಣಯ್ಯ ಅವರ ಅಂತರಾಳದ ಮಾತನ್ನು ಬಹಿರಂಗ ಪಡಿಸಿದರು
ತಹಶೀಲ್ದಾರ್ ಟಿ.ಸಿ. ಕಾಂತರಾಜು ಕನ್ನಡ ನಾಡನ್ನರಸಿ ಬರುವ ಪರಭಾಷಿಗರಿಗೆ ಕನ್ನಡ ಭಾಷಾಜ್ಞಾನ ಬೆಳೆಯುವಂತೆ ನಾವುಗಳು ಸಹಕರಿಸುವುದರ ಮೂಲಕ ನಿತ್ಯವೂ ಕನ್ನಡ ರಾಜ್ಯೋತ್ಸವ ಬೆಳಗುವಂತೆ ಆಗಬೇಕು. ಕಪಟ, ವಂಚನೆಯನ್ನರಯದ ಚಿಕ್ಕನಾಯಕನಹಳ್ಳಿ ಜನತೆ ಆಥರ್ಿಕವಾಗಿ ಹಿಂದುಳಿದಿದ್ದು ಇಲ್ಲಿ ಕಬ್ಬಿಣ ಅದಿರು ಕಾಖರ್ಾನೆ ಸ್ಥಾಪನೆ ಕೈಗೊಂಡರೆ ಇಲ್ಲಿನ ಸಾವಿರಾರು ಕುಟುಂಬಗಳು ಆಥರ್ಿಕವಾಗಿ ಸಧೃಡವಾಗಲು ಸಾಧ್ಯವಾಗುತ್ತದೆ ಮತ್ತು ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾದರೆ ಸಕರ್ಾರ ನೀಡುವ ಎಲ್ಲಾ ಸೌಲಭ್ಯ ಸಿಗುವಲ್ಲಿ ಉತ್ಸುಕನಾಗಿ ಕೆಲಸ ನಿರ್ವಹಿಸುವುದಾಗಿ ಹೇಳಿದರು, ಭೃಷ್ಠಾಚಾರ, ಮೂಢನಂಬಿಕೆ ವಿರುದ್ದ ಸಾಮಾಜಿಕ ಕಳಕಳಿಯಿಂದ ನಿದರ್ಾಕ್ಷಿಣ್ಯ ಮನಸ್ಸುಳ್ಳ ನಟ ರತ್ನಾಕರ ಡಾ|| ಮಸ್ಟರ್ ಹಿರಣ್ಣಯ್ಯ ಇವರಿಂದ ಸನ್ಮಾನ ಸ್ವೀಕರಿಸಿರುವುದು ನನ್ನ ಭಾಗ್ಯವಾಗಿದ್ದು ಇದರಿಂದ ನಾನು ನಿಷ್ಠರವಾದರೂ ಪ್ರಾಮಾಣಿಕವಾಗಿ ಪ್ರಗತಿಪರ ಕೆಲಸ ನಿರ್ವಹಿಸುವಂತೆ ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಈ ಸನ್ಮಾನ ಎಂದರು.
ಬಾಬು ಹಿರಣ್ಣಯ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ನಾವಿಂದು ಮರೆಯಲಾಗದಂತಹ ಚಿಕ್ಕನಾಯಕನಹಳ್ಳಿ ನನ್ನ ತವರೂರು ನನ್ನ ತಾಯಿ ಇಲ್ಲಿಯವರೆ, ಅವರಿಲ್ಲದಿದ್ದರೆ ನಾವ್ಯಾರು ಇರುತ್ತಿರಲಿಲ್ಲ ನನ್ನ ತಾಯಿ ರಂಗಭೂಮಿ ಹಿಂದೆ ನಿಂತು ಪ್ರೋತ್ಸಾಹಿಸಿ ನಮಗೆ ಹೆಸರು, ಕೀತರ್ಿ ತಂದುಕೊಡುವಲ್ಲಿ ಸಾಹಿತ್ಯ ಹಾಗೂ ರಂಗಭೂಮಿಗೆ ಅವರ ಸೇವೆ ಅನನ್ಯವಾದದ್ದು ನನ್ನ ತಾಯಿಯೇ ಸರ್ವ ಶ್ರೇಷ್ಠರು ಎಂದು ಏಳಿಗೆಯ ಯಶಸ್ಸಿನ ಮಹತ್ವ ಹಾಗೂ ತಾಯಿಯ ಪ್ರೇಮವನ್ನು ಪ್ರದಶರ್ಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ಹಿರಿಯ ಸಾಹಿತಿ ಎಂ. ವಿ. ನಾಗರಾಜ ರಾವ್ ಅವರ 4 ಕಾದಂಬರಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ಟಿವಿ, ವೀಡಿಯೋ ಮೊಬೈಲ್ ಗಳು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು ಕೆಟ್ಟ ಸಂಸ್ಕೃತಿಯಲ್ಲಿ ಮುಳುಗಿ ಹೋಗಿರುವಂತಹ ಸಮಾಜಕ್ಕೆ ಆತ್ಮ ವಿಮಶರ್ೆ ಅವಶ್ಯಕವಾಗಿದೆ. ಆ ತರಹದ ವಿಮಶರ್ೆಗಳನ್ನು ನಾಟಕ ಕಂಪನಿಗಳು ಸಮಾಜ ತಿದ್ದುವ ಕೆಲಸ ಮಾಡಿಕೊಂಡು ಬರುತ್ತಿರುವ ಕಲಾವಿದರ ಸಹಕಾರಕ್ಕೆ ಸಕರ್ಾರಗಳು ಮಾಶಾಸನ ನೀಡುವಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಂ.ವಿ.ನಾಗರಾಜ್ ರಾವ್ ವಹಿಸಿದ್ದರು. ಕ್ಷೇತ್ರ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನರಾವ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್, ಬೆಂಗಳೂರು ಶಿಕ್ಷಣ ಆಯುಕ್ತ ಕಛೇರಿಯ ಉಪನಿದರ್ೇಶಕ ಪಾಲಾಕ್ಷಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಾಥರ್ಿಸಿದರು ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಸಿ.ಎ.ಕುಮಾರ್ಸ್ವಾಮಿ ನಿರೂಪಿಸಿ, ಎಸ್.ಸಿ.ನಟರಾಜ್ ವಂದಿಸಿದರು.

No comments:

Post a Comment