Thursday, May 26, 2011



ಮನುಷ್ಯರಿಗೆೆ ಮರಣಾ ನಂತರ ನೆರವೇರಿಸುವಂತೆ ಕೋತಿಗೆ ಅಂತ್ಯಕ್ರಿಯೆಚಿಕ್ಕನಾಯಕನಹಳ್ಳಿ,

ಮೇ.26 : ಮನುಷ್ಯರಿಗೆ ಮರಣಾ ನಂತರ ನಡೆಯುವ ಅಂತ್ಯಕ್ರಿಯೆಯಂತೆ ಮರಣವನ್ನಪ್ಪಿದ ಕೋತಿಯೊಂದಕ್ಕೆ ಅಂತ್ಯಕ್ರಿಯೆ ನಡೆಸಿರುವ ಘಟನೆ ತಾಲ್ಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.ವಯಸ್ಸಾಗಿದ್ದ ಕೋತಿಯನ್ನು ಕಾಯಿಲೆಯಿಂದ ನರಳುತ್ತಿದ್ದುದನ್ನು ನೋಡಿ ಅಲ್ಲಿನ ಗ್ರಾಮಸ್ಥರು ಹಣ್ಣುಗಳನ್ನು ತಿನ್ನಿಸಿದಾಗ ಛೇತರಿಸಿಕೊಂಡು ಸ್ವಲ್ಪ ಹೊತ್ತು ಗ್ರಾಮದ ಸುತ್ತ ಓಡಾಡಿ ಪುನಃ ಅದೇ ಜಾಗಕ್ಕೆ ಬಂದು ನರಳಿ ಮರಣವನ್ನಪಿತು, ಗ್ರಾಮಸ್ಥರು ಎಲ್ಲಾ ಸೇರಿ ಮೀನಾಕ್ಷಮ್ಮಸಿದ್ದರಾಮಯ್ಯನ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ಮಾಡಿಸಿದರು. ಅಂತ್ಯಕ್ರಿಯೆಯ ನಂತರ ಪಾನಕ ಫಲಹಾರ ಹಂಚಲಾಯಿತು, ಗ್ರಾಮಸ್ಥರೆಲ್ಲಾರ ಹಣ ಸಹಾಯದೊಂದಿಗೆ ಅಂತ್ಯಕ್ರೀಯ ಜಾಗದಲ್ಲಿ ಮಂಟಪ ಕಟ್ಟಲಾಗಿದೆ ನಾಳೆ ಹನುಮಜ್ಜಯಂತಿ ಪ್ರಯಕ್ತ ಹಲವು ದೇವರು ಆಗಮಿಸಲಿದ್ದು ವಿಶೇಷ ಪೂಜೆಯನ್ನು ನಡೆಸಲು ಗ್ರಾಮಸ್ಥರು ತೀಮರ್ಾನಿಸಿದ್ದಾರೆ.
ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸಿದರೆ ನ್ಯಾಯಾಲಯದಲ್ಲಿ ಗೆಲವುಚಿಕ್ಕನಾಯಕನಹಳ್ಳಿ,

ಈ.26: ನ್ಯಾಯಾಲಯಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡುವ ಅಗತ್ಯವಿರುವುದಿಲ್ಲ, ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸಬೇಕು, ಎಂದು ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಕೆ.ಜಿ.ಎಫ್ನಿಂದ ವಗರ್ಾವಣೆಗೊಂಡು ಬಂದಿರುವ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ ಮತ್ತು ನ್ಯಾಯಾಲಯ ಸಿಬ್ಬಂದಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನ್ಯಾಯಾಧೀಶರು ನ್ಯಾಯಾಲಯದಲ್ಲಿ ತೀಪರ್ು ಬರೆಯುವಾಗ ಪುಟಗಟ್ಟಲೆ ತೀಪರ್ಿನ ವಿವರಣೆ ಬರೆಯುವ ಅಗತ್ಯತೆ ಇಲ್ಲ, ಮೊಕದ್ದಮೆಯ ಸರಳತೆಗೆ ತಕ್ಕಂತೆ ಒಂದೆರಡು ಪುಟಗಳಲ್ಲಿ ತೀಪರ್ು ಬರೆಯಬಹುದು ಎಂದರಲ್ಲದೆ ನನ್ನ ಮೊದಲ ಆದ್ಯತೆ ಹಳೆಯ ಮೊಕದ್ದಮೆಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸುವುದು, ಹೊಸ ಮೊಕದ್ದಮೆಗಳಿಗೆ ಕಾಲಾವಕಾಶ ನೀಡುವುದು, ಈ ನಿಟ್ಟಿನಲ್ಲಿ ಸ್ಥಳೀಯ ವಕೀಲರುಗಳು ಸಹಕಾರ ನೀಡಬೇಕು ವಕೀಲರು ಜಟಿಲವಾಗಿರುವ ಹಳೆಯ ಮೊಕದ್ದಮೆಗಳ ಬಗ್ಗೆ ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಲು ಸಹಕರಿಸಬೇಕು ಎಂದರು. ನ್ಯಾಯಾಧೀಶೆ ಎ.ಜಿ.ಶಿಲ್ಪರವರು ಮಾತನಾಡಿ ಶಿಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ನ್ಯಾಯಾಧೀಶರು ಕೆ.ಎಂ.ರಾಜಶೇಖರ್ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್ ಇಲ್ಲಿಗೆ ಹೊಸದಾಗಿ ಬರುವ ನ್ಯಾಯಾಧೀಶರನ್ನು ಸ್ವಾಗತಿಸುವುದು ಸಂಘದ ಸಂಪ್ರದಾಯ, ತಾಲೂಕು ಆಥರ್ಿಕವಾಗಿ ಹಿಂದುಳಿದ ತಾಲ್ಲೂಕು, ಇಲ್ಲಿ ಬಡ ಕಕ್ಷಿದಾರರಿಗೆ ವಕೀಲರುಗಳೇ ತಮ್ಮ ಸ್ವಂತ ಖಚರ್ಿನಲ್ಲಿ ಕಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆತಂದಿರುವ ಉದಾಹರಣೆಗಳಿವೆ ಆದುದರಿಂದ ನ್ಯಾಯಾಲಯವು ಕೆಲವು ವಿಷಯಗಳಲ್ಲಿ ಕಕ್ಷಿದಾರರಿಗೆ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದರು. ಹಿರಿಯ ವಕೀಲರಾದ ಎಂ.ಮಹಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಿ.ಕೆ.ಸೀತಾರಾಮಯ್ಯ, ಸಿದ್ದನಕಟ್ಟೆ ಚಂದ್ರಶೇಖರ್ ಮಾತನಾಡಿದರು.ಸಮಾರಂಭದಲ್ಲಿ ವಕೀಲರಾದ ಹನುಮಂತಪ್ಪ ಪ್ರಾಥರ್ಿಸಿ, ಸಿ.ರಾಜಶೇಖರ್ ಸ್ವಾಗತಿಸಿ ಲೋಕೇಶ್ ನಿರೂಪಿಸಿ, ಎನ್.ಎನ್.ಶ್ರೀಧರ್ ವಂದಿಸಿದರು.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಮೇ

.26: ಅಂಗನವಾಡಿ ಸಹಾಯಕಿಯರ ನಿವೃತ್ತಿಯಿಂದ 13 ಅಂಗನವಾಡಿ ಕೇಂದ್ರಗಳಿಗೆ ಅರ್ಹ ಅಭ್ಯಥರ್ಿಗಳಿಂದ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಜರ್ಿಗಳನ್ನು ಆಹ್ವಾನಿಸಲಾಗಿದೆ.ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿಯಾಗಿದ್ದು ತಾಲ್ಲೂಕಿನ ನಡುವನಹಳ್ಳಿ, ಚಟ್ಟಸಂದ್ರ, ಇಂದಿರಾನಗರ ಹುಳಿಯಾರು, ಲಕ್ಮಗೊಂಡನಹಳ್ಳಿ, ಸಾಸಲ.ಎ, ಹೊಸಹಳ್ಳಿ, ಕೇದಿಗೆಹಳ್ಳಿ, ಬುಳ್ಳೇನಹಳ್ಳಿ, ಮಾರಸಂದ್ರ ಪಾಳ್ಯ, ಕುರಿಹಟ್ಟಿ, ಬಾಲದೇವರಹಟ್ಟಿ, ಕೆಂಕೆರೆ, ದೊಡ್ಡರಾಂಪುರ, ಗ್ರಾಮಗಳಿಗೆ ಮೇ 24ರಂದು ಪ್ರಕಟಣೆ ಹೊರಡಿಸಿದ್ದು ಸಂಬಂಧಪಟ್ಟ ಗ್ರಾಮ, ಗ್ರಾಮಪಂಚಾಯ್ತಿ, ಗ್ರಾಮದ ಶಾಲೆಗಳಲ್ಲಿ ಪ್ರಕಟಣೆಯನ್ನು ಪ್ರಚಾರಪಡಿಸಲಾಗಿದೆ, ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 6ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಬಹುದಾಗಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಖೈಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment