Thursday, June 23, 2011


ತಾಲ್ಲೂಕಿಗೆ ಹೇಮಾವತಿ ನೀರು ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಕಳೆದ ನಾಲ್ಕು ವರ್ಷಗಳ ಸತತ ಹೋರಾಟದ ಫಲವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತಾಲ್ಲೂಕಿನ ಪೆಮ್ಮಲದೇವರ ಕೆರೆ, ಶೆಟ್ಟಿಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ಕುಡಿಯುವ ಯೋಜನೆಗೆ ಸಕರ್ಾರ ಅನುಮೋದನೆ ನೀಡಿ 102 ಕೋಟಿರೂಗಳ ಬಿಡುಗಡೆ ಮಾಡಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು.
ಗುರುವಾರ ಹುಳಿಯಾರು ಮೂಲಕ ಶೆಟ್ಟಿಕೆರೆಗೆ ಬೈಕ್ ರ್ಯಾಲಿಯಲ್ಲಿ ಆಗಮಿಸಿ ಪಟ್ಟಣದ ನೆಹರು ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ಸಂಭ್ರಮ ವ್ಯಕ್ತಪಡಿಸಿದುರು.
ನಂತರ ಮಾತನಾಡಿ ಎರಡು ತಿಂಗಳಲ್ಲಿ ಟೆಂಡರ್ ಕರೆದು ನವರಂಬರ್ ಡಿಸಂಬರ್ನಲ್ಲಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಬಸವರಾಜು ಬೊಮ್ಮಾಯಿಯವರನ್ನು ಕೆರೆದು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಮತ್ತು ಗೋಡೆಕೆರೆ ಹಾಗೂ ಜೆ.ಸಿ.ಪುರ ಭಾಗಕ್ಕೂ ಕುಡಿಯುವ ನೀರು ಹರಿಸಲು ಮಂಜೂರಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಯ್ಯ, ತು.ಹಾ.ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ, ರಮೇಶ್,ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಟ್ಟಣ ಆಶ್ರಯ ಸಮಿತಿ ಗಂಗಾಧರಯ್ಯ, ಪುರಸಭಾ ನಾಮಿನಿ ಸದಸ್ಯರಾದ ಈಶ್ವರಭಾಗವತ್, ಲಕ್ಷ್ಮಯ್ಯ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು

No comments:

Post a Comment