Tuesday, August 2, 2011




ಪ್ರೌಢಶಾಲಾ ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತರಾಗಿ
ಚಿಕ್ಕನಾಯಕನಹಳ್ಳಿ,ಆ.02: ಪ್ರೌಢಾಶಾಲಾ ಹಂತ ಮಕ್ಕಳ ಶೈಕ್ಷಣಿಕ ಜೀವನದ ಬಹು ಮುಖ್ಯ ಘಟ್ಟ ಇಂತಹ ಸಮಯದಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು ್ಲ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಸಾಸಲು ಪ್ರೌಡಶಾಲಾ ನೂತನ ಕೊಠಡಿ, ಬೈಸಿಕಲ್ ಹಾಗೂ ಶೆಟ್ಟಿಕೆರೆ ಹೋಬಳಿ ಮಟ್ಟದ ಕ್ರೀಡಾ ಕೂಟ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಮಾತನಾಡಿ ಸಕರ್ಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೇಕ ಯೋಜನೆಗಳನ್ನು ತಂದಿದ್ದು ಇದರ ಪ್ರಯೋಜನ ಪಡೆದು ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದರು.
ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ 26 ಕೆರೆಗಳಿಗೆ ನೀರು ಹರಿಸಲು ಸಕರ್ಾರ 102 ಕೋಟಿ ರೂ ಮಂಜೂರಾತಿ ನೀಡಿದ್ದು ಇದಕ್ಕೆ ಶ್ರಮಿಸಿದ ಸಂಸದ ಜಿ.ಎಸ್.ಬಸವರಾಜು ಹಾಗೂ ಕೆ.ಎಸ್.ಕಿರಣ್ಕುಮಾರ್, ವಿವಿಧ ಮಠಾಧಿಪತಿಗಳಿಗೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಈ ಕೀತರ್ಿ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಇ.ಓ ದಯಾನಂದ್, ತಾ.ಪಂ.ಸದಸ್ಯ ರಮೇಶ್, ಗ್ರಾ.ಪಂ.ಸದಸ್ಯರಾದ ರವಿಕುಮಾರ್, ದಿನೇಶ್, ಕುಮಾರಯ್ಯ, ಲಲಿತಮ್ಮ, ಇಂಜಿನಿಯರ್, ಸಾಸಲು ಮಹೇಶ್, ಶಾಂತಕುಮಾರ್ ಮುಂತಾದವರಿದ್ದರು.
ಹಾಲಿ/ಮಾಜಿ ಯೋಧರ ಸಭೆ
ಚಿಕ್ಕನಾಯಕನಹಳ್ಳಿ,ಆ.02 : ತಾಲ್ಲೂಕು ವ್ಯಾಪ್ತಿಯಲ್ಲಿ ನೆಲಸಿರುವ ಮಾಜಿ ಸೈನಿಕರು ಹಾಗೂ ಹಾಲಿ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರುಗಳಿಗಾಗಿ ಇದೇ 15ರ ಸೋಮವಾರ ಮಧ್ಯಾಹ್ನ 3.30ಕ್ಕೆ ್ಲಜೋಗಿಹಳ್ಳಿ ಗೇಟ್ ದಕ್ಷಿಣ ಬಡಾವಣೆಯಲ್ಲಿರುವ ಮಾಜಿ ಯೋಧರಾದ ಶಿವಣ್ಣನವರ ನಿವಾಸದಲಿ ್ಲ ಚಹಾಕೂಟವನ್ನು ಏರ್ಪಡಿಸಿದ್ದು ಎಲ್ಲಾ ಹಾಲಿ ಮತ್ತು ಮಾಜಿ ಯೋಧರುಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಾಜಿ ಯೋಧರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಕೋರಿದ್ದಾರೆ.
ಗಣಿಗಾರಿಕೆಗಾಗಿ ಅಕ್ರಮ ರಸ್ತೆ ನಿಮರ್ಾಣ: ಬಿ.ಎಲ್.ಆರೋಪ
ಚಿಕ್ಕನಾಯಕನಹಳ್ಳಿ,ಆ.02: ಹತ್ಯಾಳ್ ಬೆಟ್ಟದಿಂದ ಅಬ್ಬಿಗೆ ಗುಡ್ಡದವರೆಗೆ ಗಣಿಗಾರಿಕೆಗಾಗಿ ಸಕರ್ಾರ ಅಕ್ರಮವಾಗಿ ರಸ್ತೆ ನಿಮರ್ಾಣ ಮಾಡುತ್ತಿದೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ಆರೋಪಿಸಿದ್ದಾರೆ.
ಗಣಿ ಧಣಿಗಳ ಅನುಕೂಲಕ್ಕಾಗಿ ಹತ್ಯಾಳ್ ಬೆಟ್ಟದ ತಪ್ಪಲಿನಿಂದ ಅಬ್ಬಿಗೆ ಗುಡ್ಡದ ವರೆಗೆ ಸುಮಾರು 30 ಅಡಿ ಅಗಲದ 12 ಕಿ.ಮೀ. ದೂರ ಈ ರಸ್ತೆ ನಿಮರ್ಿಸುತ್ತಿದ್ದು, ರಸ್ತೆಗಾಗಿ ಹುಲ್ಲುಬಂದಿ ಖರಾಬ್ ಜಮೀನುಗಳು, ಅರಣ್ಯ ಪ್ರದೇಶ, ಗುಂಡುತೋಪುಗಳು ಸೇರಿದಂತೆ ಆ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಿಟ್ಟಿರುವ ಎಲ್ಲಾ ಜಮೀನುಗಳನ್ನು ರಸ್ತೆ ನಿಮರ್ಾಣ ಕಾರ್ಯಕ್ಕೆ ಬಳಿಸಕೊಳ್ಳಲಾಗುತ್ತಿದ್ದು ಇದು ಸಕರ್ಾರವೇ ಮಾಡುತ್ತಿರುವ ಅಕ್ರಮ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರಿಗೆ ಉಪಯೋಗವಲ್ಲದೆ ರಸ್ತೆ ನಿಮರ್ಾಣಕ್ಕೆ ತಮ್ಮ ವಿರೋಧವಿದೆ ಎಂದರು . ಕನರ್ಾಟಕ ದಲಿತ ಪರಿಸರ ಮತ್ತು ಮೀಸಲಾತಿ ರಕ್ಷಣಾ ಸಮಿತಿಯ ಅಧ್ಯಕ್ಷ ನಾರಾಯಣ್ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈಚೆಗೆ ವಿಶ್ವಪರಿಸರ ದಿನವನ್ನು ಈ ಭಾಗದ ಗಡಿ ಅಕ್ರಮದಲ್ಲಿ ಭಾಗಿಗಳಾದ ಮೈನಿಂಗ್ ಕಂಪನಿಯ ಜೊತೆಗೂಡಿ ಆಚರಿಸಿದೆ ಎಂದು ಆರೋಪಿಸಿದರು.
ತಾ.ಪಂ. ನೂತನ ಮಳಿಗೆಗಳನ್ನು ಬಾಡಿಗೆಗೆ ಕೊಡಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಆ.02 : ತಾಲ್ಲೂಕು ಪಂಚಾಯಿತಿ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಮುಂಬಾಗ 5 ಅಂಗಡಿ ಮಳಿಗೆಗಳನ್ನು ಕಟ್ಟಿದ್ದು ಮಳಿಗೆಗಳು ಉದ್ಘಾಟನೆಯಾಗಿ ಒಂದು ವರ್ಷವಾದರೂ ಯಾರಿಗೂ ಬಾಡಿಗೆ ಕೊಡದೆ ನಿರ್ಲಕ್ಷ ಮಾಡಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕೃಷ್ಣೆಗೌಡ ಆರೋಪಿಸಿದ್ದಾರೆ.
ಈ ಮಳಿಗೆಗಳನ್ನು ಕಟ್ಟಲು ಲಕ್ಷಾಂತರ ರೂಗಳು ಖಚರ್ಾಗಿದೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ.ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರುಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ್ ಒತ್ತಾಯಿಸಿದ್ದಾರೆ.
ಕ್ರೀಡಾಕೂಟಗಳು ಮುಂದೂಡಿದೆ: ತಾ.ದೈ.ಶಿ.ಸಂಘ
ಚಿಕ್ಕನಾಯಕನಹಳ್ಳಿ,ಆ.02: ದೈಹಿಕ ಶಿಕ್ಷಕರ ಬೇಡಿಕೆ ಈಡೇರುವವರೆಗೆ ತಾಲ್ಲೂಕಿನಲ್ಲಿ ನಡೆಯುವ ಎಲ್ಲಾ ಹಂತಗಳ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಎಸ್.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿದರ್ೇಶನದ ಮೇರೆಗೆ ಕ್ರೀಡಾಕೂಟಗಳಲ್ಲಿ ದೈಹಿಕ ಶಿಕ್ಷಕರು ಅಸಹಕಾರ ತೋರಲಿದ್ದಾರೆ ಎಂದಿರುವ ಅವರು ನಮ್ಮ ಬೇಡಿಕೆಗಳಾದ ಪ್ರೊ.ಎಲ್.ಆರ್.ವೈದ್ಯನಾಥನ್ ಸಮಿತಿ ವರದಿ ಅನುಷ್ಠಾನ ಆಗದೇ ಇರುವುದು, 1967ರಿಂದ ಇಲ್ಲಿಯವರೆಗೆ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆಯಾಗದಿರುವ ಕುರಿತು, ದೈಹಿಕ ಶಿಕ್ಷಣ ಶಿಕ್ಷಕರ ಮುಂಬಡ್ತಿಯ ಬಗ್ಗೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಾತಿ ಆಗಿರುವುದಿಲ್ಲ ಈ ಬೇಡಿಕೆಗಳು ಅನುಷ್ಠಾನವಾಗಲೆಂದು ಕೋರಿದ್ದಾರೆ.




No comments:

Post a Comment