Tuesday, August 9, 2011







ಚಿ.ನಾ.ಹಳ್ಳಿಗೆ ಸಿ.ಇ.ಸಿ ತಂಡ ಭೇಟಿ
ಚಿಕ್ಕನಾಯಕನಹಳ್ಳಿ,ಆ.09 : ಸುಪ್ರೀಂ ಕೋಟರ್್ ಆದೇಶದ ಮೇರೆಗೆ ರಾಜ್ಯದ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಆಗಮಿಸಿರುವ ಕೇಂದ್ರದ ಉನ್ನತಾಧಿಕಾರಿಗಳ ತನಿಖಾ ಸಮಿತಿಯ (ಸಿ.ಇ.ಸಿ)ತಂಡ ಮಂಗಳವಾರ ತಾಲ್ಲೂಕಿಗೆ ಭೇಟಿ ನೀಡಿತು.ಈ ಸಂದರ್ಭದಲ್ಲಿ ಗಣಿ ಪ್ರದೇಶಗಳಿಗೆ ತೆರಳಿದ ತಂಡ ಕನರ್ಾಟಕ ಮೈನ್ಸ್, ಸುದರ್ಶನ್ಸಿಂಗ್ ಮೈನ್ಸ್, ಗಣಪತಿ ಸಿಂಗ್ ಮೈನ್ಸ್, ಪೋಧಾರ್ ಮೈನ್ಸ್ಗಳಿಗೆ ಭೇಟಿ ನೀಡಿ ವಿವರವನ್ನು ಪಡೆದರು. ತಾಲ್ಲೂಕಿನ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸಲು ತನಿಖಾ ತಂಡದ ಛೇರ್ಮನ್ ಪಿ.ವಿ.ಜಯಕೃಷ್ಣನ್, ತಂಡದ ಸದಸ್ಯ ಮಹೇಂದ್ರ ವ್ಯಾಸನ್, ದೀಪಕ್ ಶಮರ್ಾ, ರಾಜ್ಯದ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಯು.ವಿ.ಸಿಂಗ್ ಒಳಗೊಂಡ ತಂಡ ಮಧ್ಯಾಹ್ನ 3.30ರ ಸುಮಾರಿಗೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡು ನಂತರ ಗಣಿ ಪ್ರದೇಶಗಳಿಗೆ ತೆರಳಿದರು. ಸಿ.ಇ.ಸಿ ತಂಡದೊಂದಿಗೆ ತೆರಳಲು ಮುಂದಾದ ಮಾಧ್ಯಮದವರಿಗೆ ಗಣಿ ಮಾಲೀಕರು ನೇಮಿಸಿಕೊಂಡ ಬಾಡಿಗೆ ಬಂಟರು ಹಾಗೂ ಪೋಲಿಸಿನವರು ತಡೆಯೊಡ್ಡಿದರು.

No comments:

Post a Comment