Thursday, November 24, 2011



ಅಧಿಕಾರಿಗಳ ವೈಫಲ್ಯದಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ ಕೆ.ಡಿ.ಪಿ.ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ
ಚಿಕ್ಕನಾಯಕನಹಳ್ಳಿ,ನ.24 :  2005-06ನೇ ಸಾಲಿನಿಂದ 2010-11ನೇ ಸಾಲಿನ ವರೆಗೆ ಒಟ್ಟು ನಾಲ್ಕು ವರ್ಷಗಳ  ತಾಲ್ಲೂಕಿನ ಬಸವ ಇಂದಿರಾ ಯೋಜನೆಯ ಮಾಹಿತಿ ನೀಡುವಲ್ಲಿ ಹಾಗೂ ಫಲಾನುಭವಿಗಳ ಆಯ್ಕೆಯ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಡಿಸೆಂಬರ್ 2ರೊಳಗೆ ನೀಡಬೇಕು ಎಂದು ಇ.ಓ.ರವರಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಸೂಚಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲತೆ ಕಂಡಿರುವುದನ್ನು ಪ್ರಶ್ನಿಸಿ ಅಧಿಕಾರಿಗಳ ಮೇಲೆ ಕಿಡಿಕಾರಿದರು.
ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕಾರ್ಯದಶರ್ಿ ಹಾಗೂ ಪಿಡಿಓಗಳು  ಯೋಜೆನಗಳ ಪೂರ್ಣ ಮಾಹಿತಿಯನ್ನು ಸಿದ್ದಪಡಿಸಿ  ಡಿಸಂಬರ್ 2ರಂದು ನಡೆಯುವ ಸಭೆಗೆ ಅಧಿಕಾರಿಗಳು ಬರುವಾಗ ಪ್ರತಿ ಪಂಚಾಯ್ತಿಯಿಂದ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ತರುವುದು ಈ ಎಲ್ಲಾ ಫಲಾನುಭವಿಗಳು ಅರ್ಹರಾಗಿರಬೇಕು, ಅನರ್ಹರ ಪಟ್ಟಿ ತರುವ ಅಧಿಕಾರಿಗಳ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದ ಅವರು,  ಈ ಬಗ್ಗೆ  ನಮಗೆ ನಿಖರ ಮಾಹಿತಿ ನೀಡಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡದೆ ಕುಳಿತಲ್ಲೇ ಮಾಹಿತಿ ಪಡೆದು ವರದಿ ನೀಡುತ್ತಿರುವುದರಿಂದ ತಾಲ್ಲೂಕಿನ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ, ಫಲಾನುಭವಿಗಳ ಆಯ್ಕೆಯಲ್ಲಿ ವಸತಿ ಇರುವವರಿಗೆ ಮತ್ತೊಮ್ಮೆ ಆಯ್ಕೆ ಮಾಡುತ್ತಿದ್ದಾರೆ ಎಂದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳಿಗೆ ಜನಪ್ರತಿನಿಧಿಗಳನ್ನು  ಆಹ್ವಾನಿಸದೇ ತಮಗೆ ಇಷ್ಟ ಬಂದಂತೆ ಸಭೆಗಳನ್ನು ನಡೆಸುತ್ತಿದ್ದಾರೆ ಅಲ್ಲದೆ ಇದರ ಬಗ್ಗೆ ಗ್ರಾಮದ ಜನರಿಗೂ ತಿಳಿಯುತ್ತಿಲ್ಲ  ಇದರಿಂದಲೇ ತಾಲ್ಲೂಕಿಗೆ ಕಡಿಮೆ ಅನುದಾನ ದೊರಕುತ್ತಿದೆ ಎಂದರು.
ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ನಾವು ಇಲ್ಲಿ ಕಾಫಿ, ಟೀ ಕುಡಿಯಲು ಬರುವುದಿಲ್ಲ ಗ್ರಾಮಗಳ ಅಭಿವೃದ್ದಿ ಬಗ್ಗೆ ಮಾಹಿತಿ ಪಡೆಯಲು ಬಂದರೆ ಇಲ್ಲಸಲ್ಲದನ್ನು ನೀಡುತ್ತೀರ, ಅರ್ಹ ಫಲಾನುಭವಿಗಳನ್ನು  ಆಯ್ಕೆಮಾಡದೆ ಅನರ್ಹರನ್ನು ಆಯ್ಕೆ ಮಾಡಿರುವ  ಬಗ್ಗೆ ದೂರು ತೆಗೆದುಕೊಂಡು ಬಡವರು ನಮ್ಮ ಮನೆಬಾಗಿಲಿಗೆ ಬರುತ್ತಾರೆ ಇದು ಅಧಿಕಾರಿಗಳ  ಕರ್ತವ್ಯದ ವೈಪಲ್ಯ ಎಂದರು.
ಸಭೆಯಲ್ಲಿ ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷರಾದ ಸಿತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ. ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನ ಗಂಗಾಧರ್, ತಾಲ್ಲೂಕು ದಂಡಾಧಿಕಾರಿಗಳಾದ ಉಮೇಶ್ಚಂದ್ರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಇ.ಓ.ಎನ್.ಎಂ ದಯಾನಂದ, ಟಿ.ಎ.ಪಿ.ಸಿ.ಎಂ.ಎಸ್ನ ಅಧ್ಯಕ್ಷ ಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತಿರಿದ್ದರು.

No comments:

Post a Comment