Tuesday, February 7, 2012



ವಿಜ್ಞಾನ ವಿಭಾಗದ ಗ್ರಾಮೀಣ ವಿದ್ಯಾಥರ್ಿಗಳಿಗೆ ಸಿ.ಇ.ಟಿ.ಯ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ
ಚಿಕ್ಕನಾಯಕನಹಳ್ಳಿ,ಫೆ.06  ;  ನಗರದ ಜ್ಞಾನಪೀಠ ಪ್ರೌಢ ಶಾಲೆಯಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ವತಿಯಿಂದ ದ್ವಿತಿಯ ಪಿ.ಯು.ಸಿ, ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಸಿ.ಇ.ಟಿ. ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ರಸಾಯನ  ಶಾಸ್ರದ  ಉಪನ್ಯಾಸಕರಾದ ಆನಂದ ಅವರು ಮಾತನಾಡಿ ದ್ವಿತಿಯ ಪಿ.ಯು.ಸಿ. ವಿಜ್ಞಾನ ವಿಭಾಗದಿಂದ ಇಂಜಿನಿಯರಿಂಗ್, ಎಂ,ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್. ಪವ್ರೇಶ ಪರೀಕ್ಷೇಗೆ ಈ ತರಬೇತಿ ಅನುಕೂಲವಾಗುತ್ತದೆ. ಸಿ.ಇ.ಟಿ. ಯಲ್ಲಿ ವೇಗ ಮತ್ತು ಸ್ಪಷ್ಟತೆ ತುಂಬ ಅವಶ್ಯಕವಾಗಿರುತ್ತದೆ. ಏಕೆಂದರೆ 90 ನಿಮಿಷದಲ್ಲಿ 60 ಪ್ರಶ್ನೆಗೆ  ಉತ್ತರಿಸುವುದರಿಂದ ತರಬೇತಿಯ ಅವಶ್ಯಕತೆ ಇರುತ್ತದೆ. ವಿದ್ಯಾಥರ್ಿಗಳಿಗೆ ಉತ್ತಮ ಫಲಿತಾಂಶಗಳಿಸಲಿ ಎಂದು ಆಶಿಸಿದರು
ಈ ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಕೊ  ಅಪರೆಟಿವ್ ಬ್ಯಾಂಕ್ ಅಧ್ಯಕ್ಷರು ಸಿ.ಎಸ್. ನಟರಾಜು, ಪುರಸಭಾದ್ಯಕ್ಷ ದೊರೆಮುದ್ದಯ್ಯ, ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ  ಸಿ.ಡಿ.ಚಂದ್ರಶೇಖರ್ ಮಾತನಾಡಿದರು.. 
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅದ್ಯಕ್ಷರಾದ ಅಸ್ಲಂ ಪಾಷ, ಕಾಂಗ್ರೆಸ್ ಮುಖಂಡರು ಕೃಷ್ಣೆಗೌಡ, ಜಯಕನರ್ಾಟಕ ಅದ್ಯಕ್ಷರಾದ ವೆಂಕಟೇಶ್. ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಸಹನಾ ಪ್ರಿಯಾ ಪ್ರಾಥರ್ಿಸಿದರೆ, ಜಾಕೀರ್ ಹುಸೇನ್ ಸ್ವಾಗತಿಸಿ  ಸಿ.ಆರ್.ಪಿ. ದುರ್ಗಯ್ಯ ನಿರೂಪಿಸಿದರು.

ಬ್ರೈ ಕಾಯಿದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡುವವರನ್ನೂ  ಬಂಧಿಸುವ ಅಪಾಯವಿದೆ, ರೈತರೇ ಎಚ್ಚರ.
ಚಿಕ್ಕನಾಯಕನಹಳ್ಳಿ,ಫೆ.5: ಜೈವಿಕ ಬೀಜಗಳಿಗೆ ಸಂಬಂಧಿಸಿದಂತೆ ಬಿ.ಆರ್.ಎ.ಐ(ಬ್ರೈ) ಮಸೂದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡಿದರೆ ಪೊಲೀಸರು ಬಂಧಿಸುವಂತಹ ಪರಿಸ್ಥಿತಿ ನಿಮರ್ಾಣವಾಗುತ್ತದೆ ಆದ್ದರಿಂದ ಎಲ್ಲಾ ರೈತರು ಕುಲಾಂತರಿ ಬೀಜಗಳ ಬಗ್ಗೆ ಈಗಲೇ ಜಾಗೃತಿ ವಹಿಸುವ ತುತರ್ಾದ ಕೆಲಸವಾಗಬೇಕು ಎಂದು ರಾಜ್ಯ ಬೀಜ ಆಂದೋಲನದ ಮುಖಂಡರಾದ ಗಾಯಿತ್ರಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದಿಂದ ಅಂದು ಉಪ್ಪು, ಇಂದು ಬೀಜ ಆಂದೋಲನದ ಅಂಗವಾಗಿ ಹೊರಟ ಜಾಥ,  ತಾಲೂಕಿನ ತರಬೇನಹಳ್ಳಿಯಲ್ಲಿ ಸಮಾವೇಶಗೊಂಡು  ಆಂದೋಲನದ ವಿಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ(ಬ್ರೈ), ಕಾನೂನು ಕರಡು ರೂಪದಲ್ಲಿದೆ, ಈ ಕಾಯಿದೆಯನ್ನೇನಾದರೂ ಕೇಂದ್ರ ಸಕರ್ಾರ ಕಾನೂನಾಗಿ ಜಾರಿಗೆ ತಂದರೆ,  ಖಾಸಗಿ ಕಂಪನಿಗಳು ಬೀಜಗಳನ್ನು ನಿಯಂತ್ರಿಸುತ್ತವೆ, ಖಾಸಗಿ ಕಂಪನಿಗಳು ನೀಡುವ ನಪುಂಸಕ ಬೀಜಗಳು ರೈತರ ಹೊಲ ಸೇರುತ್ತವೆ,  ಇಂತಹ ಬೀಜಗಳಿಂದ ಗಂಡಾತರ ಕಾದಿದೆ, ಅದನ್ನು ಈಗಲೇ ಹಿಸುಕಿ ಹಾಕದಿದ್ದರೆ ಮುತ್ತೊಂದು ದಿನ ನಮ್ಮನ್ನೆಲ್ಲಾ ಆ ಬೀಜಗಳು ಸಾವಿನ ದವಡೆಗೆ ತಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ನಮ್ಮ ಈ ಆಂದೋಲನ ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ವಲಯಗಳಲ್ಲೂ ನಡೆಯಲಿದ್ದೂ, ಅಂತಿಮವಾಗಿ  ಫೆ. 15ರಂದು ಕೂಡ್ಲಗಿಯಲ್ಲಿ ಸಮಾವೇಶಗಳಲ್ಲಿದೆ ಎಂದು ತಿಳಿಸಿದರು.
ನಂದಿಹಳ್ಳಿ ಕೃಷಿಕ ಎನ್.ಮೃತ್ಯುಂಜಯಪ್ಪ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಬೀಜದ ಗುಣಮಟ್ಟವನ್ನು ಕಾಯ್ದುಕೊಳ್ಳವ ಅಧಿಕಾರ  ನಮ್ಮ ಸಕರ್ಾರಕ್ಕಿದೆ.   ಸಕರ್ಾರ ತರಲು ಹೊರಟಿರುವ ಕೆಲವು ಕಾಯಿದೆಗಳೇನಾದರೂ ಜಾರಿಗೆ ಬಂದರೆ ಆ ಅಧಿಕಾರ ಖಾಸಗಿ ಕಂಪನಿಗಳಿಗೆ ಹೋಗಿ ಅವರು ಕೊಟ್ಟ ನಪುಂಸಕ ಬೀಜಗಳನ್ನು ಪ್ರತಿ ವರ್ಷವು ಕಂಪನಿಗಳಿಂದ ಕೊಳ್ಳಬೇಕಾಗುತ್ತದೆ ಎಂದರು.
ತರಬೇನಹಳ್ಳಿ ಷಡಾಕ್ಷರಿ ಮಾತನಾಡಿ, ದೇಶಿ ಬೀಜಗಳಲ್ಲಿ ಇರುವ ಸತ್ವವನ್ನು ನಾವು ಕಂಪನಿಗಳು ಕೊಡುವ ಬೀಜಗಳಲ್ಲಿ ಪಡೆಯಲಾಗುವುದಿಲ್ಲ, ಈಗಾಗಲೇ ನಮ್ಮ ದೇಹದಲ್ಲಿ ದಿನೇ ದಿನೇ ಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೇ, ಕುಲಾಂತರಿ ಬೀಜದ ಆರ್ಭಟ ಹೆಚ್ಚಾದರೆ ನಮ್ಮ ತನವನ್ನೇ ಕಳೆದುಕೊಂಡತ್ತಾಗುತ್ತದೆ ಎಂದರು.
ತರಬೇನಹಳ್ಳಿ ಅನ್ನಪೂರ್ಣಮ್ಮನವರು ದೇಶಿ ಬೀಜದ ಕೈಚೀಲವನ್ನು ಸೃಜನಾ ಎಂಬ ಬಾಲಕಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ತರಬೇನಹಳ್ಳಿ ಷಡಾಕ್ಷರಿಯವರ ತೋಟದಲ್ಲಿ ಬೀಜ ಬ್ಯಾಂಕ್ನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಕೈ ಚೀಲದಲ್ಲಿ ದೇಶಿ ಬೀಜಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೃಜನಾ ಮಹಿಳಾ ತಂಡದವರಿಂದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ಸೋಮನಹಳ್ಳಿ ಶಾಲಾ ಮಕ್ಕಳಿಂದ ನನ್ನ ಅಂಗಿಗೇಕೆ ಜೇಬಿಲ್ಲ ಎಂಬ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ  ಸಾವಯವ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಮಲ್ಲೇಶಯ್ಯ ಕಲ್ಲೇನಹಳ್ಳಿ, ಸೃಜನ ಸಂಘದ ಅಧ್ಯಕ್ಷೆ ಜಯಮ್ಮ, ಎನ್.ಇಂದಿರಮ್ಮ,  ತರಬೇನಹಳ್ಳಿ ಅನ್ನಪೂರ್ಣಮ್ಮ, ಪಂಕಜ ಚಂದ್ರಶೇಖರ್,  ಹಸಿರು ಸೇನೆಯ ಸತೀಶ್ ಕೆಂಕೆರೆ ಉಪಸ್ಥಿತರಿದ್ದರು.

ಜುಯಲರಿಯಲ್ಲಿ ಬಂಗಾರವನ್ನು ಕದ್ದವರನ್ನು ಒಂದು ಗಂಟೆಯಲ್ಲಿ ಮಾಲು ಸಮೇತ ಹಿಡಿದ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಫೆ.5: ಪಟ್ಟಣದ ಖಾಸಗಿ ಜ್ಯೂಯಲರಿ ಅಂಗಡಿಯಲ್ಲಿ ಸುಮಾರು ಮೂರು ನೂರು ಗ್ರಾಂಗಳಿಗೂ ಅಧಿಕ ಪ್ರಮಾಣದ ಸುಮಾರು ಏಳುವರೆ ಲಕ್ಷ ರೂಗಳ ಚಿನ್ನಾಭರಣ ಕಳ್ಳತನ ಮಾಡಿದ ಐದು ಮಹಿಳೆಯರ ಗುಂಪನ್ನು ಕಳ್ಳತನ ಮಾಡಿದ ಒಂದು ಗಂಟೆ ಒಳಗೆ ಮಾಲು ಸಮೇತ ಪತ್ತೆಹಚ್ಚಿದ ಘಟನೆ ಜರುಗಿದೆ.
 ಪಟ್ಟಣದ ಖಾಸಗಿ ಬಸ್ ಸ್ಟಾಂಡ್ ಬಳಿಯ ಶ್ರೀ ಲಕ್ಷ್ಮಿ ಜುಯಲರ್ಸ್ಗೆ ಗ್ರಾಹಕರಂತೆ ನಟಿಸಿಕೊಂಡು ಬಂದ ಐದು ಜನ ಮಹಿಳೆಯರು,  ಆಭರಣಗಳನ್ನು ಕೊಂಡುಕೊಳ್ಳುವವರಂತೆ ನಟಿಸಿ ಜುಯಲರಿ ಮಾಲೀಕ ಚನ್ನಾರಾಂ ರವರ ಗಮನವನ್ನು ಬೇರೆಡೆ ಸೆಳೆದು ಅಂಗಡಿಯ ಕಪಾಟಿನಲ್ಲಿ ಬಂಗಾರದ ಒಡವೆಗಳನ್ನು ಇಟ್ಟಿದ ಟ್ರೇಗಳನ್ನೇ ಹೊತ್ತು ಹೊಯ್ದಿದ್ದಾರೆ.
ಎರಡು ಗುಂಪುಗಳಲ್ಲಿ ಬಂದ ಐವರು ಮಹಿಳೆಯರ ಪೈಕಿ  ಮೊದಲು ಮೂವರು ಮಹಿಳೆಯರು ಓಲೆಗಳನ್ನು ತೋರಿಸುವಂತೆ ಕೇಳಿದ್ದಾರೆ,  ನಂತರ ಇಬ್ಬರು ಬಂದು ಬೆಳ್ಳಿ ಆಭರಣಗಳನ್ನು ತೋರಿಸುವಂತೆ ಕೇಳಿದ್ದಾರೆ, ಇವರ ಕಡೆ ಮಾಲೀಕ ಚೆನ್ನಾರಾಂ ಬಂದಾಗ ಮೊದಲು ಬಂದ ಮೂವರು ಮಹಿಳೆಯರು ಕಪಾಟಿಗೆ ಕೈ ಹಾಕಿ ಚಿನ್ನಾಭರಣವಿದ್ದ ಟ್ರೇಗಳನ್ನು ಹೊತ್ತು ಹೊಯ್ದಿದ್ದಾರೆ. ನಂತರ ಉಳಿದ ಇಬ್ಬರು ಸ್ಥಳದಿಂದ ಕಾಲು ಕಿತ್ತಿದ್ದಾರೆ, ಇವರ ನಡವಳಿಕೆಯಲ್ಲಿ ಅನುಮಾನ ಬಂದದ್ದರಿಂದ ಅಂಗಡಿ ಮಾಲೀಕ ಚೆನ್ನಾರಾಂ ಕಪಾಟಿನ ಕಡೆ ನೋಡುವಷ್ಟರಲ್ಲಿ ಚಿನ್ನಾಭರಣಗಳಿದ್ದ ಟ್ರೇ ಕಾಣೆಯಾಗಿದೆ, ಬಂದ ಗಿರಾಕಿಗಳು ಅಂಗಡಿ ಎದುರಿನಲ್ಲೇ ಬಸ್ ಹತ್ತುವುದನ್ನು ಕಂಡು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಚೆನ್ನಾರಾಂ,  ಗಿರಾಕಿಗಳು ಹತ್ತಿದ ಬಸ್ನ್ನು ಬೆನ್ನು ಹತ್ತಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸಿಕ್ಕಿಹಾಕೊಂಡಿದ್ದಾರೆ, ಇನ್ನು ಉಳಿದ ಮೂವರು ಜೆ.ಸಿ.ಪುರದ  ದೇವಸ್ಥಾನದ ಬಳಿ ಅನುಮಾನವಾಗಿ ಓಡಾಡುವುದನ್ನು ಕಂಡು ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಉಳಿದ ಮೂವರನ್ನು ಪೊಲೀಸರು ಮಾಲು ಸಮೇತ ಹಿಡಿದಿದ್ದಾರೆ. 
ಆರೋಪಿಗಳು ಮೈಸೂರು ನಿವಾಸಿಗಳೆಂದು ಹೇಳಿಕೊಂಡಿದ್ದು ದುರ್ಗ, ಶೀಲ, ಮಂಜುಳ, ಶೀಲ ಹಾಗೂ ಮಂಜುಳ ಎಂದು ಗುರುತಿಸಲಾಗಿದೆ. ಇವರೆಲ್ಲಾ 25 ರಿಂದ 45 ವರ್ಷದೊಳಗಿನವರಾಗಿದ್ದಾರೆ, ಹೆಚ್ಚಿನ ತನಿಖೆಯನ್ನು ಚಿ.ನಾ.ಹಳ್ಳಿ ಸಿ.ಪಿ.ಐ. ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದ ಮೂತರ್ಿ ಕೈಗೊಂಡಿದ್ದಾರೆ.

ಬೈಕ್ನಿಂದ ಬಿದ್ದು ಸ್ಥಳದಲ್ಲೇ ಒಬ್ಬ ಸಾವು, ಇಬ್ಬರು ಬೆಂಗಳೂರು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಫೆ.07 : ತಾಲ್ಲೂಕಿನ ಕಂದಿಕೆರೆ ಹೋಬಳಿ ಹನುಮಂತನಹಳ್ಳಿ ಗೇಟ್ ಬಳಿಯ ಬೈಕೊಂದರಿಂದ ಬಿದ್ದು ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮದನಮಡು ಗ್ರಾಮದ ಮಂಜುನಾಥ್(26) ಮೃತ ದುದರ್ೈವಿ ಅದೇ ಗ್ರಾಮದ ನರಸಿಂಹಮೂತರ್ಿ(28) ಮತ್ತು ರಂಗನಾಥ್(30) ಈ ಇಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಇಬ್ಬರು ಜೀವನ್ಮರಣದ ಜೊತೆ ಹೋರಾಡುತ್ತಿದ್ದಾರೆ.
ಸೋಮವಾರ ತಡರಾತ್ರಿ ಈ ದುರ್ಘಟನೆ ನಡೆದಿದ್ದು ಮಂಗಳವಾರ ಬೆಳಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಮತ್ತು ಮಂಜುನಾಥನ ಶವವನ್ನು ಕಂಡು ಸ್ಥಳೀಯರು ಪೋಲಿಸರಿಗೆ ತಿಳಿಸಿದ್ದಾರೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೋಲಿಸರು ದಾಖಲಿಸಿದ್ದು, ಸಿ.ಪಿ.ಐ ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದಮೂತರ್ಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರತಿಭಾ ಪುರಸ್ಕಾರ, 
ಚಿಕ್ಕನಾಯಕನಹಳ್ಳಿ,ಫೆ.07 : 2010-2011ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ ಹೊಂದಿ ಉತ್ತೀರ್ಣರಾಗಿರುವ ವಿದ್ಯಾಥರ್ಿ-ವಿದ್ಯಾಥರ್ಿನಿಯರುಗಳಿಗೆ ಮಾಚರ್್ 4ರ ಭಾನುವಾರ ಬೆಳಗ್ಗೆ 11ಗಂಟೆಗೆ  ಕುರುಬರಶ್ರೇಣಿಯ ಹಿರಿಯ ವಿದ್ಯಾಥರ್ಿಗಳ ಸಂಘದ ಎರಡನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.
 ಪ್ರತಿಭಾ ಪುರಸ್ಕೃತರು ಕುರುಬರ ಶ್ರೇಣಿಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ವ್ಯಾಸಾಂಗ ಮಾಡಿರಬೇಕು. ಸಂಬಂಧಪಟ್ಟ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು   ಜಿ.ರಂಗಯ್ಯ, ನಿ.ಮುಖ್ಯಶಿಕ್ಷಕರು, ಬಸವೇಶ್ವರ ನಗರ, ಡಿಇಡಿ ಕಾಲೇಜ್ ಮುಂಬಾಗ, ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ  ದಾಖಲೆ ನೀಡಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ  9964345554,  9448297581 ನಂ.ಗೆ ಸಂಪಕರ್ಿಸುವುದು.

No comments:

Post a Comment