Thursday, December 13, 2012


ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಸಂಚಾರಿ ವಾಹನ
                           
ಚಿಕ್ಕನಾಯಕನಹಳ್ಳಿ,ಡಿ.13 : ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಮೂರು ದಿನಗಳ ವರೆಗೆ ಸಂಚಾರಿ ವಾಹನ ಸೌಲಭ್ಯವನ್ನು ಒದಗಿಸಿಕೊಡುವ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಚಾಲನೆ ನೀಡಿತು.
ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು. 
ತಾಲ್ಲೂಕಿನ ವ್ಯಾಪ್ತಿಯಲ್ಲಿನ ಸಮಾರು 30 ಸ್ತ್ರೀಶಕ್ತಿ ಗುಂಪಿನ ಸದಸ್ಯರು ಸ್ವತಃ ತಾವೇ ತಯಾರಿಸಿದ ದೀಪದ ಬತ್ತಿ, ಅಕ್ಕಿ ಹಪ್ಪಳ, ಕಾಳು ಹಪ್ಪಳ, ರಾಗಿ ಮಾಲ್ಟ್, ಸಿಹಿತಿಂಡಿ, ಸಾಂಬಾರ ಪುಡಿ ಮತ್ತು ಖಾರದ ಪುಡಿ, ಮೇಣದ ಬತ್ತಿ, ಊಟದ ಎಲೆ ಹಾಗೂ ವಿಶೇಷವಾಗಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿ ಬೆಣ್ಣೆ ಉತ್ಪನ್ನಗಳನ್ನು ಒಳಗೊಂಡು ಸುಮಾರು ಹತ್ತು ಸಾವಿರ ಬೆಲೆ ಬಾಳುವ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಮಾರಾಟಕ್ಕಾಗಿ ಕಛೇರಿಗೆ ವಸ್ತುಗಳನ್ನು ತಂದು ಒಪ್ಪಿಸಿರುವುದು ಶ್ಲಾಘನೀಯ ಎಂದು ಅಧಿಕಾರಿ ಅನೀಸ್ಖೈಸರ್ ತಿಳಿಸಿದರು. ಇದೇ ರೀತಿ ಇನ್ನು ಮುಂದೆ ಹೆಚ್ಚಿನ ಸಂಘಗಳು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಆಥರ್ಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ  ಹಾಗೂ ಒಕ್ಕೂಟದ ಕಾರ್ಯದಶರ್ಿ ಜಿ.ಈ.ಪರ್ವತಯ್ಯ ಮಾತನಾಡಿ ಮೂರು ದಿವಸಗಳಲ್ಲಿ ವಿವಿಧ ಸ್ಥಳಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಮಾರಾಟಕ್ಕಾಗಿ ವಾಹನ ಸೌಲಭ್ಯವನ್ನು ಒದಗಿಸಿದ್ದು ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು  ಇದೇ ಡಿಸೆಂಬರ್ 14ರ ಶುಕ್ರವಾರದಂದು ದುಗಡಿಹಳ್ಳಿ, ಶೆಟ್ಟಿಕೆರೆ, ಮಾದಿಹಳ್ಳಿ, ಮತಿಘಟ್ಟದಲ್ಲಿ ಮತ್ತು 15ರ ಶನಿವಾರ ತಿಮ್ಮನಹಳ್ಳಿ, ಕಂದಿಕೆರೆ, ಬರಗೂರು, ಹಂದನಕೆರೆ, ಕುಪ್ಪೂರಿನಲ್ಲಿ ಸಂಚಾರಿ ಮಾರುಕಟ್ಟೆ ನಡೆಯಲಿದೆ ಎಂದರು. 
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಈ.ಪರ್ವತಯ್ಯ, ಪರಮೇಶ್ವರಪ್ಪ, ವಿವಿಧ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಪ್ರತಿನಿಧಿಗಳು  ಉಪಸ್ಥಿತರಿದ್ದರು.
ಕಂದಿಕೆರೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಡಿ.13 : ಕಂದಿಕೆರೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ 15ರ ಶನಿವಾರ ಕಂದಿಕೆರೆಯ ಶ್ರೀ ಗಣಪತಿ ಜ್ಞಾನವಾಹಿತಿ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನದ ಧ್ವಜಾರೋಹಣವು ಬೆಳಗ್ಗೆ 7-45ಕ್ಕೆ ನಡೆಯಲಿದ್ದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ರಾಷ್ಟ್ರಧ್ವಜ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಪರಿಷತ್ ಧ್ವಜ, ತಾ.ಪಂ.ಸದಸ್ಯೆ ಉಮಾದೇವಿರಾಜ್ಕುಮಾರ್ ಕನ್ನಡಧ್ವಜ ಹಾರಿಸಲಿದ್ದಾರೆ. ಬೆಳಗ್ಗೆ 8-30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದ ರಾಜ ಬೀದಿಗಳಲ್ಲಿ ಜಾನಪದ ಕಲಾ ತಂಡಗಳು ಹಾಗೂ ವಾದ್ಯಗಳೊಂದಿಗೆ ನಡೆಯಲಿದ್ದು ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮೆರವಣಿಗೆ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9-30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು  ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರಾ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಮಾಜಿ ಶಾಸಕ ಬಿ.ಲಕ್ಕಪ್ಪ, ತಿಪಟೂರು ತಹಶೀಲ್ದಾರ್ ವಿಜಯ್ಕುಮಾರ್, ಸಮಾಜ ಸೇವಕ ರೇವಣ್ಣ ಒಡೆಯರ್ ಆಗಮಿಸಲಿದ್ದು ಸಮ್ಮೇಳನಾಧ್ಯಕ್ಷ ಕೆ.ಎಂ.ನಂಜಪ್ಪ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
ಗೋಷ್ಠಿ : ಮಧ್ಯಾಹ್ನ 2.30ರಿಂದ 5ರವರೆಗೆ ಸಮ್ಮೇಳನದಲ್ಲಿ ಗೋಷ್ಠಿ ನಡೆಯಲಿದ್ದು ಸ.ಪ್ರ.ದ.ಕಾ ಅಧ್ಯಾಪಕ ತಿಮ್ಮನಹಳ್ಳಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಲಿದ್ದು ಗ್ರಾ.ಪಂ.ಅಧ್ಯಕ್ಷೆ ಟಿ.ಎಸ್.ಲಕ್ಷ್ಮೀದೇವಮ್ಮ ಉದ್ಘಾಟನೆ ನೆರವೇರಿಸಲಿದ್ದಾರೆ. ಗೋಷ್ಠಿಯಲ್ಲಿ ವಿಷಯ 1: ಕವಿ ಜೈಶಂಕರ್ ಗಣೇಶ್ ಕಂದಿಕೆರೆ ಸಾಂಸ್ಕೃತಿ ಅವಲೋಕನ, ಉಪನ್ಯಾಸಕರಾಗಿ ಡಾ.ಮಹೇಶ್ ಶ್ರೀ ಮುಡಲಗಿರಿಯಪ್ಪ, ವಿಷಯ 2: ಗ್ರ್ರಾಮೀಣ ಕೃಷಿ ಮತ್ತು ಆಥರ್ಿಕತೆ, ಉಪನ್ಯಾಸಕರಾಗಿ ತಿಪಟೂರು ತಾ.ಕಸಾಪ ಅಧ್ಯಕ್ಷ ಉಜ್ಜಜ್ಜಿರಾಜಣ್ಣ, ಕವಿ ಸಮಯ ಕೆ.ಎನ್.ಮಲ್ಲಯ್ಯ, ವಿಷಯ 3 : ವಚನ ಸಾಹಿತ್ಯದಲ್ಲಿ ಬಂಡಾಯ ಉಪನ್ಯಾಸಕರಾಗಿ ಅಧ್ಯಾಪಕ ಡಾ.ಶಿವಣ್ಣ ಭಾಗವಹಿಸಲಿದ್ದಾರೆ.



No comments:

Post a Comment