Thursday, December 20, 2012ಕೈಕೊಟ್ಟ ಪ್ರಿಯತಮನ ಮನೆ ಬಾಗಿಲಿನಲ್ಲಿ ಮಹಿಳೆಯ ಬಿಡಾರ
                                     
ಚಿಕ್ಕನಾಯಕನಹಳ್ಳಿ,ಡಿ.20 : ಮದುವೆಯಾಗಿದ್ದ ಮಹಿಳೆಯನ್ನು ತನ್ನ ಪ್ರೇಮ ಪಾಶಕ್ಕೆ ಸಿಲುಕಿಸಿದ ಯುವಕ 5ತಿಂಗಳ ಕಾಲ ಜೊತೆಯಲ್ಲಿ ಜೀವನ ಮಾಡಿ ನಂತರ ಪ್ರೇಯಸಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕುಪ್ಪೂರು ಗ್ರಾಮದಲ್ಲಿ ನಡೆದಿದೆ.
ಕುಪ್ಪೂರು ಗ್ರಾಮದ ಮಹೇಶ್ ಎಂಬ ವ್ಯಕ್ತಿ ಅದೇ ಗ್ರಾಮದ ನಾಗರಾಜುರವರ ಪತ್ನಿ ಮಮತರಾಣಿ ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದೇನೆಂದು ನಂಬಿಸಿ, ಗಂಡನಿಂದ ದೂರವಾಗಿಸಿ ತನ್ನೊಡನೆ ಕಳೆದ 5ತಿಂಗಳ ಹಿಂದೆ ಕರೆದೊಯ್ದು ಬೆಂಗಳೂರು, ತುಮಕೂರಿನಲ್ಲಿ ಒಂದೇ ಮನೆಯಲ್ಲಿ ವಾಸಸಿ, ನಂತರ ತಿಪಟೂರಿನಲ್ಲಿ ಮನೆ ಮಾಡಿರುವುದಾಗಿ ನಂಬಿಸಿ ಕುಪ್ಪೂರು ಮಾರ್ಗವಾಗಿ ತಿಪಟೂರಿಗೆ ಹೋಗೋಣವೆಂದು ನಂಬಿಸಿ ಮಮತಾಳನ್ನು ಕುಪ್ಪೂರಿನಲ್ಲಿ ಬಿಟ್ಟು ಕೈಕೊಟ್ಟಿರುವುದಾಗಿ ಮಮತ ದೂರಿದ್ದಾರೆ. 
ಕುಪ್ಪೂರಿನ ಗ್ರಾಮದವರಾದ ಮಹೇಶ ಮತ್ತು ಮಮತಾ ಇಬ್ಬರು ಮೊದಲಿನಿಂದಲೂ ಪರಿಚಯಸ್ಥರಾಗಿದ್ದು ಮಮತ ನಾಗರಾಜುವಿನೊಂದಿಗೆ ಮದುವೆಯಾಗಿ ಒಂದು ಮಗು ಆದ ನಂತರ ಆರೋಪಿ ಮಹೇಶ ಮಮತಾಳನ್ನು ಪ್ರೇಮಿಸಿರುವುದಾಗಿ ಪುಸುಲಾಯಿಸಿ ಗಂಡ ಮತ್ತು ಮಗುವನ್ನು ಬಿಟ್ಟು ತನ್ನ ಜೊತೆಯಲ್ಲಿ ಸಂಸಾರ ನಡೆಸುವಂತೆ ಒತ್ತಾಯಿಸುತ್ತಿದ್ದರು. ಮಹೇಶನ ಈ ನಡವಳಿಕೆಯನ್ನು ನಂಬಿದ ಮಮತಾ ತನ್ನ ಮಗು ಮತ್ತು ಗಂಡನನ್ನು ಬಿಟ್ಟು ಮಹೇಶನ ಜೊತೆ ಓಡಿ ಹೋಗಿದ್ದಳು. ಈ ಮಧ್ಯೆ ಐದು ತಿಂಗಳ ನಂತರ ಮಹೇಶನ ನಿಜ ಬಣ್ಣ ಬಯಲಾಗಿ,  ತನಗೆ ಮೋಸ ಮಾಡುತ್ತಿರುವುದು ಮಮತನಿಗೆ ಅರಿವಾಗಿ  ಶಾಶ್ವತವಾಗಿ ಒಂದೆಡೆ ನೆಲಸುವಂತೆ ಒತ್ತಾಯಿಸಿದಳು. ಇದರಿಂದ ವಿಚಲಿತನಾದ ಮಹೇಶ ಮಮತಾಗೆ ಇಲ್ಲದ ಸಬೂಬುಗಳನ್ನು ಹೇಳಿ ಕುಪ್ಪೂರಿಗೆ ತಂದು ಬಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆಯಿಂದ ನೆಲೆ ಇಲ್ಲದಂತಾದ ಮಮತ ಕುಪ್ಪೂರಿನಲ್ಲೇ ಇರುವ ಮಹೇಶನ ಮನೆಯ ಬಾಗಿಲಿನಲ್ಲೇ ಬಿಡಾರ ಹೂಡಿದ್ದಾಳೆ.

ಆರಂಭವಾದ ಮುಕ್ತಿಗಾಗಿ ಒಂದು ಲಕ್ಷ ಮೃಣ್ಮಯ(ಹುತ್ತದ ಮಣ್ಣಿನ) ಪೂಜೆ
                                                                                
            
ಚಿಕ್ಕನಾಯಕನಹಳ್ಳಿ,ಡಿ.19 : ಕುಪ್ಪೂರಿನ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರಳಯ ಬೀತಿಯ ಮುಕ್ತಿಗಾಗಿ ಒಂದು ಲಕ್ಷ ಮೃಣ್ಮಯ(ಹುತ್ತದ ಮಣ್ಣಿನ) ಪೂಜೆಯನ್ನು ಪೀಠಧ್ಯಕ್ಷರಾದ ಡಾ.ಯತೀಶ್ವರ ಶೀವಾಚಾರ್ಯಸ್ವಾಮಿ ಆರಂಭಿಸಿದರು. 
ಮಠದಲ್ಲಿ ಶ್ರೀ ಮರುಳಸಿದ್ದೇಶ್ವರರಿಗೆ ವಿಶೇಷ ಪೂಜೆಯೊಂದಿಗೆ ಹೋಮ, ಹವನ ನೆರವೇರಿಸಲಾಯಿತು.. ಬೆಳಗ್ಗೆ ಮರುಳಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಕ್ಷಿರಾಭಿಷೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು.
ನಂತರ ಮೃಣ್ಮಯ(ಹುತ್ತದ ಮಣ್ಣಿನ) ಶಿವಲಿಂಗಗಳಿಗೆ-ಲಕ್ಷ ಬಿಲ್ವಾರ್ಚನೆ, ಶತರುದ್ರಯಾಗ ಮತ್ತು ಶಿವಪಂಚಾಕ್ಷರಿ ಜಪಯಜ್ಞವು  ನೆರವೇರಿತು.
ಈ ಶಾಸಕ ಸಿ.ಬಿ.ಸುರೇಶ್ಬಾಬು ಹಾಗೂ ಭಕ್ತಾಧಿಗಳು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. 

ಉಚಿತ ಮಧುಮೇಹ(ಡಯಾಬಿಟಿಸ್) ರೋಗ ತಪಾಸಣೆ, ಚಿಕಿತ್ಸೆ ಮತ್ತು ಸಂವಾದ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.19 : ಉಚಿತ ಮಧುಮೇಹ(ಡಯಾಬಿಟಿಸ್) ರೋಗ ತಪಾಸಣೆ, ಚಿಕಿತ್ಸೆ ಮತ್ತು ಸಂವಾದ ಶಿಬಿರ, ಸೀಳುತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಹಾಗೂ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಇದೇ 23ರ ಭಾನುವಾರ ಏರ್ಪಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.
ಶಿಬಿರವನ್ನು ರೋಟರಿ ಹಾಗೂ ಸಕರ್ಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ರೋಟರಿ ಬಾಲಭವನದಲ್ಲಿ ಬೆಳಗ್ಗೆ 8ಕ್ಕೆ ಹಮ್ಮಿಕೊಂಡಿದ್ದು ಡಯಾಬಿಟಿಸ್ ರೋಗತಜ್ಞರಾದ ಬೆಂಗಳೂರಿನ ಡಾ.ಪುಟ್ಟಶಂಕರಪ್ಪ, ಮೈಸೂರಿನ ಸಿ.ಎಚ್.ಲಕ್ಷ್ಮೀನಾರಾಯಣ ಮತ್ತು ತುಮಕೂರು ಸಿದ್ದಾರ್ಥ ಮೆಡಿಕಲ್ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಬಿ.ಗಿರೀಶ್ರವರಿಂದ ತಪಾಸಣೆ ಏರ್ಪಡಿಸಲಾಗಿದೆ.
ಉಚಿತ ಹೃದಯರೋಗ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನು ಇದೇ 23ರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಬ್ರಹ್ಮವಿದ್ಯಾಸಮಾಜದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಬಿ.ಪಿ, ಇಸಿಜಿ, ಇಸಿಎಚ್ಓ ಸ್ಕ್ಯಾನಿಂಗ್ಗಳನ್ನು ಅಗತ್ಯವಿದ್ದವರಿಗೆ ಉಚಿತವಾಗಿ ನಡೆಸಲಾಗುವುದು. 

ಸಮಗ್ರ ಕೃಷಿ ಕ್ಷೇತ್ರೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.20 : ಉಚಿತ ಬೀಜ, ಗೊಬ್ಬರದ ನೆರವು ನೀಡುವುದರ ಜೊತೆಗೆ ಮಾರುಕಟ್ಟೆ ಬಗ್ಗೆ ತರಬೇತಿ ನೀಡುವುರದ ಮೂಲಕ, ಪರಿಷ್ಕರಣೆಗೆ ಅಗತ್ಯವಾದ ಯಂತ್ರೋಪಕರಣ ಒದಗಿಸಿ ಕೊಡುವ ಪ್ರಯತ್ನ ಮಾಡಿದರೆ, ರೈತ ಬೆಳೆಯುವುದನ್ನು ಹೆಚ್ಚಿಸುತ್ತಾನೆ ಎಂದು ಕೃಷಿ ಸಲಹಾ ಸೇವೆಯ ಯೋಜನಾ ಸಂಯೋಜಕ ಜಿ.ಕೆ.ವಿ.ಕೆ. ಬೆಂಗಳೂರಿನ ಡಾ ಈಶ್ವರಪ್ಪ ಕರೆ ನೀಡಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಕೃಷಿ ಸಲಹಾ ಸೇವೆ ವತಿಯಿಂದ ನಡೆದ ಹಾರಕ ಮತ್ತು ಸಮಗ್ರ ಕೃಷಿ ಕ್ಷೇತ್ರೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕಡಿಮೆ ನೀರುಬಳಸಿ ಬೆಳೆಯಬಹುದಾದಂತಹ ಹಾರಕ ಬೆಳೆಯನ್ನು ಗೋಪಾಲನಹಳ್ಳಿಯ 20 ಯುವಕರು 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದು ಇವರಿಗೆ ಆತ್ಮಸ್ಥೈರ್ಯ ನೀಡುವಲ್ಲಿ ಎಲ್ಲರು ಮುಂದಾಗಬೇಕು ಎಂದರು.
ಜೆಕೆವಿಕೆ ಸಮಾಲೋಚಕ ಡಾ.ಯಲ್ಲಪ್ಪ ಮಾತನಾಡಿ ಗೋಪಾಲನಹಳ್ಳಿ ಯುವಕರ ಉತ್ಸಾಹ ಮೆಚ್ಚತಕ್ಕಂತದ್ದು. ಇತರೆ ಹಳ್ಳಿಗಳೂ ಇದರ ಸದುಪಯೋಗ ಪಡಿಸಿಕೊಂಡು ಕಣ್ಮರೆಯಾಗುತ್ತಿರುವ ಕಿರುಧಾನ್ಯಗಳನ್ನು ಉಳಿಸೋಣ ಎಂದರು. 
ಸಹ ಸಂಶೋಧನಾ ನಿದರ್ೇಶಕರಾದ ಡಾ. ನೂತನ್ ಮಾತನಾಡಿ ಹಾರಕ ಪರಿಷ್ಕರಣೆ ಕಷ್ಟ ಆದರೂ ಅಗತ್ಯ ಯಂತ್ರೋಪಕರಣಗಳು ಸೇಲಂನಲ್ಲಿ ಲಭ್ಯವಿದ್ದು ನಮ್ಮಲ್ಲಿಯೂ ಈ ಯಂತ್ರಗಳ ಆಗಮನವಾದರೆ ಬೆಳೆಯುವವರ ಸಂಖ್ಯೆ ಹೆಚ್ಚಿ ತಿನ್ನುವವರ ಸಂಖ್ಯೆಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದರು.
ಹಾಸನ ಎಫ್. ಎಮ್. ರೇಡಿಯೋದ ಕೃಷಿ ಕಾರ್ಯಕ್ರಮಗಳ ನಿರೂಪಕರಾದ, ಬರಹಕಾರ ಡಾ.ವಿಜಯ ಅಂಗಡಿಯವರು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದು. ಬಳಸುವುದು ಹೆಚ್ಚಾದಾಗ ಉತ್ತಮ ಆರೋಗ್ಯವಿರುವ ಸಾಧ್ಯ ರೈತರು ದುಶ್ಟಟಗಳಿಂದ ದೂರವಾಗಿ ಸಮಗ್ರ ಕೃಷಿ ಮೂಲಕ ಮಿತವ್ಯಯದಲ್ಲಿ ಸುಖಜೀವನ ನಡೆಸಬಹಹುದು ಎಂದ ಅವರು ನಾವು ತಿನ್ನುವುದಕ್ಕಿಂತ ಏನನ್ನು ತಿನ್ನುತ್ತೇವೆ ಎನ್ನುವುದು ಮುಖ್ಯ ಆ ನಿಟ್ಟಿನಲ್ಲಿ ಗೋಪಾಲನಹಳ್ಳಿ ಜನತೆ ಇತರೆ ಹಳ್ಳಿಗಳಿಗೆ ಮಾದರಿ ಈ ಕರುಧಾನ್ಯ ಹಾರಕ ರಾಜ್ಯದಾದ್ಯಂತ ವಿಸ್ತರಿಸಿದರೆ ಮದುವೇಹದಂತಹ ರೋಗ ಹತೋಟಿಗೆ ಬರುತ್ತದೆ. ಎಂದರು.  
ಜಿ.ಕೆ.ಯು.ಕೆಯ ಪ್ರೊ.ಕೃಷ್ಣಪ್ಪ ಮಾತನಾಡಿ 3000 ವರ್ಷಗಳ ಇತಿಹಾಸವಿರುವ                                                                         ಈ ಹಾರಕ ಮರಳಿ ಬೆಳೆಯಲು  ಹೆಚ್ಚುತ್ತಿರುವ ರೋಗಗಳೂ ಕಾರಣವಾಗಿದ್ದು, ಈ ರೋಗಗಳ ನಿಯಂತ್ರಣಕ್ಕೆ ಕಿರುಧಾನ್ಯ  ಸೇವನೆ ಸಹಕಾರಿ ಎಂದರು. ಜಿ.ಕೆ. ರಘು ಹಾರಕ ಬೆಳೆದವರ  ಮುಂದಿನ ಉದ್ದೇಶವನ್ನು  ಹಂಚಿಕೊಂಡರು. ಜಿಕೆ.ವಿ.ಕೆ ಯ ಡಾ  ಮಮತರವರು ಹಾರಕದಿಂದ ವಿವಿಧ ತಿನಿಸುಗಳಾದ ರೋಟ್ಟಿ, ದೋಸೆ, ಇಡ್ಲಿ. ಮೊಸರನ್ನ, ಚಿತ್ನಾನ, ಪಲಾವು ಹೀಗೆ ವೈವಿದ್ಯಮಯವಾದ ತಿನಿಸುಗಳನ್ನು ಹೇಗೆ ಮಾಡಬಹುದೆಂದು ಮಾಹಿತಿನೀಡಿದರು. 
ಕಾರ್ಯಕ್ರಮದಲ್ಲಿ ತಿಪಟೂರಿನ ಗುರುಕುಲ ಸಿ.ಇ.ಒ ಹರಿಪ್ರಸಾದ್, ಸಹಾಯಕ ಕೃಷಿ ನಿದರ್ೇಶಕರಾದ (ಎ.ಡಿ.ಎ.) ಕೃಷ್ಣಪ್ಪ,  ಶಿವಣ್ಣ, ನಾಗರಾಜು,ಎನ್. ಸಿ. ತುಮಕೂರು. ಅಶೋಕ್ಕುಮಾರ್. ಜೆ.ಎಸ್.ವೈ.ಎಸ್. ಸಿ.ಎನ್.ಹಳ್ಳಿ ಭಾಗವಹಿಸಿದ್ದರು.  
ಸಮಗ್ರ ಕೃಷಿಯ ಪ್ರಯೋಜನಪಡೆದ ರೈತ ನಿರಂಜನವರು ಬೆಳೆದ ಟಮೋಟ, ಬೆಂಡೆ. ಬದನೆ, ಮೆಣಸಿನಗಿಡ. ವೀಕ್ಷಿಸಿದ ರೈತರು ಹಸು. ಕುರಿ. ಕೋಳಿ ಮೊಲ ಎರೆಹುಳು ತೊಟ್ಟಿ ವೀಕ್ಷಿಸಿದರು. ನಿರಂಜನ್ರವರು ಸ್ಪರಚಿತ ಭಜನೆ ಹಾಡಿದರು. ಈ ಕ್ಷೇತ್ತೋತ್ಪವದ ಆಕರ್ಷಣೆ ಜಿ.ಬಿ. ಆತ್ಮಾನಂದರವರ ಚಿತ್ರಕಲಾ ಕುಟೀರ ನೋಡುಗರ ಮನಸೆಳೆಯಿತು.
ಡಾ. ಸೋಮಶೇಖರ್. ವಂದಿಸಿದರು. ನಿರಂಜನ್. ಸಮಗ್ರ ಕೃಷಿಯ ಬಗ್ಗೆ ಭಜನೆ ಮೂಲಕ ನಿರೂಪಿಸಿದರು. ಡಾ. ಗೋಪಿನಾಥ್. ನಿರೂಪಿಸಿ ಸ್ವಾಗತಿಸಿದರು. ಪೂಜಾ, ಸ್ವಾತಿ. ಪ್ರಾಥರ್ಿಸಿದರು.

ಹೊಲಿಗೆ ಯಂತ್ರದಲ್ಲಿ ಅವ್ಯವಹಾರ, ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಆರೋಪ
ಚಿಕ್ಕನಾಯಕನಹಳ್ಳಿ,ಡಿ.20 :  ಪರಿಶಿಷ್ಟ ಜಾತಿ-ಪಂಗಡದ ಶೇ.22ರ ಅನುದಾನದಡಿ ಪುರಸಭೆ ಖರೀದಿಸಿರುವ ಹೊಲಿಗೆಯಂತ್ರದಲ್ಲಿ ಅವ್ಯವಹಾರ ನಡೆದಿದೆ ಎ ಂದು ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಆರೋಪಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ  ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು 3000 ಬೆಲೆಬಾಳುವ ಹೊಲಿಗೆಯಂತ್ರವನ್ನು 6950 ರೂ.ಮೊತ್ತದ ಅಧಿಕ ಬೆಲೆಗೆ ಖರೀದಿಸಿದ್ದು, 6.5 ಲಕ್ಷ ರೂ. ಬಿಲ್ ಪಾವತಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಗಳು ತಾತ್ಕಾಲಿಕ ತಡೆ ನೀಡಿ ಹೊಲೆಗೆಯಂತ್ರ, ಪಾವತಿಸಿರುವ ಬಿಲ್ ಅನ್ನು ಪರಿಶೀಲಿಸಿ ನಂತರ ವಿತರಿಸಲು ಸೂಚಿಸಿದ್ದಾರೆ. ಆದರೆ ಹಾಲಿ ಖರೀದಿಸಿರುವ ಹೊಲಿಗೆಯಂತ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ದೂರಿದರು.
ಸದಸ್ಯ ಮಹೇಶ್ ಮಾತನಾಡಿ ಪಟ್ಟಣದ ವೆಂಕಣ್ಣನ ಕಟ್ಟೆಯಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿಮರ್ಿಸಲು  ಭೂ ಸೇನಾ ನಿಗಮಕ್ಕೆ ಗುತ್ತಿಗೆ ನೀಡಲಾಗಿದ್ದು, ಕಳೆದ ಎರಡು ವರ್ಷಗಳಿಂದ ಉದ್ಯಾನವನ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದೆ ಎಂದುಆರೋಪಿಸಿದರು.
  ಮಟನ್ ಮಾಕರ್ೆಟ್ನಲ್ಲಿ ಮೂರು ವರ್ಷಗಳ ಹಿಂದೆ 8 ಮಳಿಗೆಗಳನ್ನು ನಿಮರ್ಿಸಿದ್ದು, ಮಳಿಗೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಈ ಕಾರಣದಿಂದ ಯಾರು ಬಾಡಿಗೆಗೆ ಬರುತ್ತಿಲ್ಲ. ಸೌಲಭ್ಯ ಕಲ್ಪಿಸಲು ವಿಫಲರಾದ ಎಂಜನಿಯರ್ ಅವರಿಂದ ಬಾಡಿಗೆ ವಸೂಲು ಮಾಡುವಂತೆ ಸದಸ್ಯ ಮಹೇಶ್ ಆಗ್ರಹಿಸಿದರು.
ಸದಸ್ಯ ಸಿ.ಎಲ್ ದೊಡ್ಡಯ್ಯ ಪಟ್ಟಣದ 19ನೇ ವಾಡರ್ಿನಲ್ಲಿ 7.5 ಲಕ್ಷ ರೂ. ವೆಚ್ಚದಲ್ಲಿ ನಿಮರ್ಿಸಿರುವ ಶೌಚಾಲಯ ಇದುವರೆಗೂ ಉದ್ಘಾಟನೆಯಾಗದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಉಪಯೋಗಕ್ಕೆ ಶೌಚಾಲಯ ಬೇಡವೇ ಎಂದು ಪ್ರಶ್ನಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಐಡಿಎಸ್ಎಂಟಿ ಹಾಗೂ ಪುರಸಭೆ ವತಿಯಿಂದ ನಿಮರ್ಿಸಿರುವ ಮಳಿಗೆಗಳನ್ನು ಹರಾಜಿನಲ್ಲಿ  ಕೂಗಿ ತೆಗೆದುಕೊಂಡವರು ಹೆಚ್ಚಿನ ಬಾಡಿಗೆ ಹಾಗೂ ಗುಡ್ವಿಲ್ ಪಡೆದು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯ ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು.
ಪುರಸಭಾಧ್ಯಕ್ಷರು ವಾಡರ್್ಗಳಿಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ಇದರಿಂದ ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ ಪ್ರತಿ ದಿನ ಮಂಜಾನೆ 5ಕ್ಕೆ ಪುರಸಭೆ ಬಳಿ ಬಂದು ಕಸಗುಡಿಸುವವರನ್ನು ವಾಡರ್್ಗಳಿಗೆ ಕಳುಹಿಸುತ್ತಿರುವುದಾಗಿ ಸಮಜಾಯಿಷಿ ನೀಡಿದರು.ಕಸಗುಡಿಸುವ ಆಟೋಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಕಸವಿಲೇವಾರಿ ವಾಹನಗಳಿಂದಾಗಿ ಪಟ್ಟಣದ ಎಲ್ಲಂದರಲ್ಲಿ ಕಸದ ರಾಶಿಗಳು ಬಿದ್ದಿವೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ಪುಟ್ಟಣ್ಣ ಮುಖ್ಯಾಧಿಕಾರಿ  ವೆಂಕಟೇಶ್ ಶೆಟ್ಟಿ, ರಂಗಸ್ವಾಮಯ್ಯ, ಸಿಎಲ್.ದೊಡ್ಡಯ್ಯ, ಸಿ.ಎಸ್.ರಮೇಶ್, ಮಿಲಿಟರಿ ಶಿವಣ್ಣ, ರುಕ್ಮಿಣಮ್ಮ , ಶಾರದಮ್ಮ, ಸಿ.ಎಸ್.ರಾಜಣ್ಣ, ಎಂ.ಎನ್.ಸುರೇಶ್ ಮತ್ತಿತರ ಸದಸ್ಯರು ಹಾಗೂ ಅಧಿಕಾರಿವರ್ಗದವರು ಹಾಜರಿದ್ದರು.


ಹುರುಳಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶ
ಚಿಕ್ಕನಾಯಕನಹಳ್ಳಿ,ಡಿ.20 : ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಿಂಗಾಮಿಗೆ ಕಸಬಾ, ಹುಳಿಯಾರು ,ಮತ್ತು ಹಂದನಕೆರೆ ಹೋಬಳಿಗಳಲ್ಲಿ ಹುರುಳಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶವಿರುತ್ತದೆ ಎಂದು ಸಹಾಯಕ ಕೃಷಿ ನಿದರ್ೇಶಕರು ತಿಳಿಸಿದ್ದಾರೆ.
 ಬೇಸಿಗೆ ಹಂಗಾಮಿಗೆ  ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯಿತಿ ಮತ್ತು ಹೋಯ್ಸಲಕಟ್ಟೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತದ ಬೆಳೆಗೆ ಬೆಳೆವಿಮೆ ಮಾಡಿಸಲು  ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:

Post a Comment