Saturday, December 8, 2012


ಜಿಲ್ಲೆಯಲ್ಲಿ ಪ್ರಥಮ ಶುದ್ದಗಂಗಾ ನೀರಿನ ಘಟಕ ತಾಲ್ಲೂಕಿನ ಶೆಟ್ಟಿಕೆರೆಗೆ

                                 ಚಿಕ್ಕನಾಯಕನಹಳ್ಳಿ,ಡಿ.08 : ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ತಾಲ್ಲೂಕಿನಾದ್ಯಂತ ಸಂಘಗಳನ್ನು ರಚಿಸಿ ಗ್ರಾಮಗಳ ಅಭಿವೃದ್ದಿ ಹಾಗೂ ಸ್ವಚ್ಛತೆಯನ್ನು ಕಾಪಾಡುತ್ತಿದೆ ಈ ನಂಬಿಕೆಯ ಮೇಲೆ ಯೋಜನೆಗೆ ಶುದ್ದಗಂಗಾ ನೀರಿನ ಘಟಕವನ್ನು ಆರಂಭ ಮಾಡಲು ನೆರವು ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಶುದ್ದ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಜನೆಯು ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿಗ್ರಾಮಗಳ ಅಭಿವೃದ್ದಿ ಬಗ್ಗೆ ಜಾಗೃತಿ ಮೂಡಿಸುತ್ತಿದೆ, ಇದೇ ರೀತಿ ತಾಲ್ಲೂಕಿನಲ್ಲೂ ಯೋಜನೆ ಆರಂಭವಾದ ಒಂದುವರೆ ವರ್ಷದಲ್ಲಿ ಸುಮಾರು ಮುವತ್ತು ಸಾವಿರಕ್ಕೂ ಹೆಚ್ಚು ಸಂಘದ ಸದಸ್ಯರಾಗಿದ್ದಾರೆ ಎಂದ ಅವರು ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿನ ವಿಶ್ವಾಸ ಉಳಿಸಿಕೊಂಡಿದೆ, ಜಿಲ್ಲೆಗೆ ಪ್ರಥಮವಾಗಿ ಆರಂಭವಾಗಿರುವ ಶುದಗಂಗಾ ನೀರಿನ ಘಟಕಕ್ಕೆ ಶಾಸಕರ ನಿಧಿಯಿಂದ 3 ಲಕ್ಷ ನೀಡುತ್ತಿರುವುದಾಗಿ ತಿಳಿಸಿದ ಅವರು ಈ ಯೋಜನೆಗೆ ಗ್ರಾಮ ಪಂಚಾಯಿತಿಯಿಂದ 5ಲಕ್ಷರೂ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ವತಿಯಿಂದ  5ಲಕ್ಷ ಭರಿಸುತ್ತಿದ್ದು ಒಟ್ಟು 13 ಲಕ್ಷ ರೂವೆಚ್ಚದಲ್ಲಿ ಘಟಕ ಪ್ರಾರಂಭವಾಗಲಿದೆ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ತಾಲ್ಲೂಕಿನ ಮಾದರಿ ಗ್ರಾಮವನ್ನಾಗಿ ಶೆಟ್ಟಿಕೆರೆ ಮಾಡಬೇಕೆಂಬ ಚಿಂತನೆಯಿದೆ ಅದಕ್ಕೆ ಸಾಕ್ಷಿಯೆಂಬಂತೆ ಶುದ್ದಗಂಗಾ ನೀರಿನ ಘಟಕ ಶೆಟ್ಟಿಕೆರೆ ಹೋಬಳಿಗೆ ಬಂದಿರುವುದ ಸ್ವಾಗತಾರ್ಹವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮೇಲ್ವಿಚಾರಕ ನಾಗರಾಜು ಮಾತನಾಡಿ ಸಂಸ್ಥೆಯು ಸೇವಾ ಮನೋಭಾವದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶುದ್ದಗಂಗಾ ನೀರಿನ ಘಟಕದಂತೆ ಇತರೆ 40 ರೀತಿಯ ಯೋಜನೆಯ ಪಟ್ಟಿಯಿದೆ, ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮದ ಜನರ ಸಹಾಯ ಅಗತ್ಯವಾಗಿದೆ ಎಂದರಲ್ಲದೆ ಈಗ ಶಂಕುಸ್ಥಾಪನೆಗೊಳ್ಳುತ್ತಿರುವ ಶುದ್ದಗಂಗ ನೀರಿನ  ಘಟಕ ರಾಜ್ಯದಲ್ಲಿ 51ನೇಯದಾಗಿದ್ದು ತುಮಕೂರು ಜಿಲ್ಲೆಯಲ್ಲಿ ಪ್ರಥಮ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರಂಭಿಸಿರುವ ಶುದ್ದಗಂಗಾ ನೀರಿನ ಘಟಕ ಯೋಜನೆಯು ಜಾರಿಗೆ ತರುವುದರ ಜೊತೆಗೆ ಉತ್ತಮವಾಗಿ ನಿರ್ವಹಣೆ ಮಾಡಲಿ ಎಂದು ಆಶಿಸಿದರು. ಸಮಾರಂಭದಲ್ಲಿ ಪಿಡಿಓ ಸಿದ್ದರಾಮಯ್ಯ ಪ್ರಾಸ್ತಾವಿಕ ನುಡಿಳಗನ್ನಾಡಿದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯರಾದ ರಮೇಶ್ಕುಮಾರ್, ಗ್ರಾ.ಪಂ.ಅಧ್ಯಕ್ಷ ಶಶಿಧರ್, ಸಾವಿತ್ರಮ್ಮ, ಲತಾಮಣಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಅಧಿಕಾರಿ ನಾಗರಾಜು ನಿರೂಪಿಸಿದರೆ, ಹರ್ಷ ಸ್ವಾಗತಿಸಿದರು.
ಶನೇಶ್ವರಸ್ವಾಮಿಗೆ ರಜತ ಕವ

ಚಿಕ್ಕನಾಯಕನಹಳ್ಳಿ,ಡಿ.08 : ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀ ಗೌರಮ್ಮ ತಾಯಿ ಮತ್ತು ವರಸಿದ್ದಿ ಶನೇಶ್ಚರ ಸ್ವಾಮಿ ದೇವಾಲಯದಲ್ಲಿ ರಜತ ಕವಚ ಧಾರಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಇದೇ 7 ಶುಕ್ರವಾರ ಬನಶಂಕರಿ ದೇವರ ಉತ್ಸವ ಶ್ರೀ ಬನಶಂಕರಿ ಮಹಿಳಾ ಮಂಡಳಿ ಹಾಗೂ ದೇವಾಂಗ ಯುವಕರಿಂದ ಭಜನೆ ನಡೆಯಿತು  ಶನಿವಾರ ಗಣಹೋಮ, ಸುದರ್ಶನ ಹೋಮ, ನವಗ್ರಹ ಹೋಮಗಳು ಸಾಂಗೋಪಾಂಗವಾಗಿ ಜರುಗಿದವು. ವರಸಿದ್ದಿ ಶನೇಶ್ಚರಸ್ವಾಮಿ ಮತ್ತು ಬನಶಂಕರಮ್ಮ ದೇವರುಗಳಿಗೆ ಸುಮಾರು 4.5ಕೆಜಿ ಬೆಳ್ಳಿಯ ರಜತ ಕವಚ, ಡಮರುಗವನ್ನು ಶ್ರೀಮತಿ ಚಂದ್ರಕಲಾ ಶ್ರೀನಿವಾಸಮೂತರ್ಿ(ಪಾರ್ಥ) ಮಕ್ಕಳು, ಸಿ.ಎಲ್ ಚಕ್ಕಣ್ಣ ಪಾರ್ಥ ಮಕ್ಕಳು ಹಾಗೂ ಪಾರ್ಥ ಕುಟುಂಬದವರು ದಾನಿಗಳಾಗಿ ಕಾರ್ಯಕ್ರಮದ ಸೇವೆಯನ್ನು ನೀಡಿದರು. ದೇವಾಂಗ ಸಂಘದ ಅಧ್ಯಕ್ಷರು ಕಾರ್ಯಕಾರಿ ಮಂಡಳಿ ಸೇವಾಕರ್ತರು ಒಳಗೊಂಡು ಪೂಜಾ ಕೈಂಕರ್ಯದ ಹೋಮಕ್ಕೆ ಪೂಣರ್ಾಹುತಿ ಅಪರ್ಿಸಿದರು.

No comments:

Post a Comment