Saturday, March 23, 2013


ಕಾಡೇನಹಳ್ಳಿಗೆ ಸಲಗಗಳ ಭೇಟಿ, ಭಯಭೀತರಾದ ಜನರು
                     
ಚಿಕ್ಕನಾಯಕನಹಳ್ಳಿ,ಮಾ.23 : ಪಟ್ಟಣದ ಹೊರವಲಯದ ಕಾಡೇನಹಳ್ಳಿಗೆ ಶನಿವಾರ ಬೆಳ್ಳಂಬೆಳಗ್ಗೆ 6.30ರ ಸುಮಾರಿನಲ್ಲಿ ಮೂರು (ಸಲಗ)ಕಾಡಾನೆಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದವು.
    ಬೆಳ್ಳಂಬೆಳಗ್ಗೆ ಕಾಡೇನಹಳ್ಳಿ ಬಳಿಯ ದಬ್ಬೇಘಟ್ಟ ಕೆರೆ ಬಳಿಯಲ್ಲಿ ಕಾಡಾನೆಗಳು ವಿಹರಿಸುತ್ತಿರುವಾಗ ಗ್ರಾಮಸ್ಥರು ಕಂಡು ಗಾಬರಿಗೊಂಡು ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದರು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
    ಕಾಡಾನೆಗಳು ಗ್ರಾಮಕ್ಕೆ ಆಗಮಿಸಿದ ಸುದ್ದಿ ತಿಳಿದು ನೂರಾರು ಜನರ ಸ್ಥಳಕ್ಕೆ ಧಾವಿಸಿ ಆನೆಗಳ ಚಲನವಲನಗಳನ್ನು ಕೂತೂಹಲದಿಂದ ವೀಕ್ಷಿಸಿದರಲ್ಲದೆ ಆನೆಗಳನ್ನು ಗ್ರಾಮದಿಂದ ಓಡಿಸಲು ಮುಂದಾದರು. ಗಾಬರಿಗೊಂಡ ಕಾಡಾನೆಗಳು ದಬ್ಬೇಘಟ್ಟದ ಹಾಗೂ ಕಾಡೇನಹಳ್ಳಿಯ ಗ್ರಾಮದ ಮುಖಾಂತರ ತರಬೇನಹಳ್ಳಿ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಬಾಳೆಗಿಡಗಳನ್ನು ನಾಶಮಾಡಿದವು. ಅಲ್ಲಿಂದ ಗೋಡೆಕೆರೆ ಕಡೆಗೆ ಆನೆಗಳು ಪ್ರಯಾಣ ಬೆಳೆಸಿದವು.
    ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನ ಆಗಮಿಸುತ್ತಿದ್ದು, ಗ್ರಾಮದ ಕಡೆಗೆ ಎಲ್ಲಿ ಆನೆಗಳು ನುಗ್ಗುತ್ತವೋ ಎಂಬ ಆತಂಕದಲ್ಲಿ ಮುಳುಗಿದ್ದ ದೃಶ್ಯ ಕಂಡುಬಂದಿತು.
  ಗುಬ್ಬಿ ಕಡೆಯಿಂದ ತಾಲ್ಲೂಕಿನ ಗಂಟೆಹಳ್ಳಿಗೆ ಶುಕ್ರವಾರ ರಾತ್ರಿ ಆಗಮಿಸಿರುವ ಸಲಗಗಳು ಮದನಮಡು ಕೆರೆ, ತೀರ್ಥಪುರ ಮಾರ್ಗವಾಗಿ ಮದಲಿಂಗನ ಕಣಿವೆಯ ಮೂಲಕ ಸಂಚರಿಸಿದ ಕಾಡಾನೆಗಳು ಕಾಡೇನಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾದವು ವಿಷಯತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ, ಕಾಡಾನೆಗಳು ಮದ್ಯಾಹ್ನ 4ರ ಸುಮಾರಿಗೆ ಕರಿ ಹಿಂಡು ನಡುವನಹಳ್ಳಿ ಬಳಿಯ ಚೌಳಿಹಳ್ಳದಲ್ಲಿ ಬೀಡು ಬಿಟ್ಟಿದೆ. ಪ್ರಯಾಣದ ಉದ್ದಕ್ಕೂ ಸಿಕ್ಕ ಕದಳಿ ವನ, ಅಡಿಕೆ-ತೆಂಗಿನ ತೋಟಗಳ ಮೇಲೆ ದಾಳಿಮಾಡುತ್ತಾ ಸಾಗಿದ್ದು ನಷ್ಟದ ಲೆಕ್ಕ ಸಿಕ್ಕಿಲ್ಲ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಎಂದು ಆರೆಫ್ಒ ಮಾರುತಿ ತಿಳಿಸಿದರು. ತಿಪಟೂರು ವಲಯ ಅರಣ್ಯಾಧಿಕಾರಿ ಸತ್ಯನಾರಾಯಣ ಹಾಗು ಅರಣ್ಯ ಇಲಾಖಾ ಸಿಬ್ಬಂದಿ ಇದ್ದರು.

                     ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
                               
ಚಿಕ್ಕನಾಯಕನಹಳ್ಳಿ,ಮಾ.23 : ಚಿಕ್ಕನಾಯಕನಹಳ್ಳಿಯ ದೊಡ್ಡರಾಂಪುರ ಗೊಲ್ಲರಹಟ್ಟಿ ಹಾಗೂ ಹುಳಿಯಾರು ಭಾಗದ  ಕೆಜೆಪಿ, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರುಗಳು ಜೆಡಿಎಸ್ ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡು ಶಾಸಕ ಸಿ.ಬಿ.ಸುರೇಶ್ಬಾಬುರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ದೊಡ್ಡರಾಂಪುರ ಗೊಲ್ಲರಹಟ್ಟಿಯ ಡಿ.ಎ.ರೇವಣ್ಣ, ಪೂಜಾರಿ ಕಾಟಪ್ಪ, ನಾಗಯ್ಯ, ಚಿಕ್ಕನಾಗಯ್ಯ, ಕೆಂಪಜ್ಜ, ಚಂದ್ರಶೇಖರಯ್ಯ, ರೇವಣ್ಣ, ಪ್ರಕಾಶ್, ಸಿರಿಯಪ್ಪ, ಹಾಗೂ ಹುಳಿಯಾರಿನ ಜಗದೀಶ್, ಪ್ರಸನ್ನಕುಮಾರ್, ಮಂಜುನಾಥ್ ಕದೀರ್ಅಹಮದ್, ಅಂಜನಮೂತರ್ಿ, ಮಹಮದ್ಷರೀಪ್, ಅಮೀರ್ಪಾಷ, ಕೇಶವಮೂತರ್ಿ ಸೇರಿದಂತೆ ಹಲವು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.

ಚುನಾವಣಾ ಪ್ರಚಾರಕ್ಕೆ ಚಾಲನೆ  ಪಡೆಯಲಿರುವ ಕೆ.ಎಸ್.ಕಿರಣ್ಕುಮಾರ್

ಚಿಕ್ಕನಾಯಕನಹಳ್ಳಿ,ಮಾ.23 : ಭಾಜಪ ಅಭ್ಯಾಥರ್ಿ ಕೆ.ಎಸ್.ಕಿರಣ್ಕುಮಾರ್ರವರು ಮಾ.24ರಂದು ಬೆಳಗ್ಗೆ 10 ಗಂಟೆಗೆ (ಇಂದು) ಹುಳಿಯಾರು ಹೋಬಳಿಯ ಮರೆನಡು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

No comments:

Post a Comment