Friday, April 26, 2013


ಸಿ.ಗುರುಮೂತರ್ಿ ಕೊಟಿಗೆಮನೆ.
ಬಿಸಿಲಿನ ಧಗೆಯಲ್ಲಿ ಅಭ್ಯಥರ್ಿಗಳಿಂದ ಚುನಾವಣಾ ಕಾವು



ಚಿಕ್ಕನಾಯಕನಹಳ್ಳಿ,ಏ.26: ಜಾತಿ ಮತ್ತು ವ್ಯಕ್ತಿ ಆಧಾರಿತವಾಗಿರುವ ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾವು ಬಿಸಲಿನ ಧಗೆಯ ಜೊತೆ ಪೈಪೋಟಿಗಿಳಿದಿದೆ. ಕುಡಿಯುವ ನೀರಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕಿ.ಲೋ.ಮೀಟರ್ ಗಟ್ಟಲೆ ಬಿಂದಿಗೆ ಹಿಡಿದು ಓಡಾಡುತ್ತಿದ್ದರೆ, ಇವರ ಹಿಂದೆ ರಾಜಕಾರಣಿಗಳು ಜಾತಿಯ ಲೇಬಲ್ ಹಿಡಿದುಕೊಂಡು ಅಲೆದಾಡುತ್ತಿದ್ದಾರೆ.
'ಜಾತಿ'ಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಮುಂದಾಗಿರುವ ಉರಿಯಾಳುಗಳು ತಮ್ಮ ಮತಬ್ಯಾಂಕ್ಗಳನ್ನು ಹೆಚ್ಚಿಸಿಕೊಳ್ಳಲು ಪ್ರಬಲ ಕೋಮಿನ ಪ್ರಭಾವಿ ನಾಯಕರುಗಳನ್ನು ಕ್ಷೇತ್ರಕ್ಕೆ ಕರೆಸಿ ಅವರ ಮೂಲಕ ತಮ್ಮ ಗೆಲುವಿನ ಕನಸುಕಾಣುತ್ತಿದ್ದಾರೆ. ಆ ಪ್ರಭಾವಿ ನಾಯಕರುಗಳು ಅಷ್ಟೇ ನಮ್ಮ ಶಕ್ತಿಯನ್ನು ರಾಜ್ಯದ ಜನತೆಗೆ ತೋರಿಸಬೇಕೆಂದರೆ ನಮ್ಮನ್ನು ಆಶೀರ್ವದಿಸಿ, ಎಂದು ಹಿಗ್ಗೂಸಿಗ್ಗಿಲ್ಲದೆ, ನೇರವಾಗಿ 'ಜಾತಿ' ರಾಜಕೀಯದ ಮಾತನಾಡುತ್ತಿದ್ದರೆ, ಸಣ್ಣಪುಟ್ಟ ಜಾತಿಯವರು ನಮ್ಮಗ್ಯಾರು ಗತಿ ಎಂಬಂತೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದರೆ, ಇವರನ್ನು ಹಿಡಿದುಕೊಳ್ಳಲು ದುಡ್ಡು ಹೆಂಡದ ರುಚಿ ತೋರಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಹವಣಿಸುತ್ತಿದ್ದಾರೆ. ಇಲ್ಲಿಗೆ ಬಂದಿದೆ ಪ್ರಜಾ(ಜಾತಿ)ಪ್ರಭುತ್ವದ ಸ್ಥಿತಿ.
ಕ್ಷೇತ್ರದಲ್ಲಿನ ಜನರ ಬದುಕು ದುಸ್ತರವಾಗಿ ಜೀವನ ನಡೆಸಲು ಫ್ಯಾಕ್ಟ್ರಿಗಳನ್ನು ಹುಡುಕಿಕೊಂಡು ಅಕ್ಷರಸ್ಥ ವರ್ಗ ನಗರದ ಕಡೆಗೆ ಹೊರಟರೆ, ಕಾಫಿ ತೋಟಗಳಲ್ಲಿ ಜೀತ ಮಾಡಲು ಇನ್ನೊಂದು ವರ್ಗ ಹೋಗಿದೆ, ಒಳ್ಳೆಯ ಕೋಸರ್್ಗಳಿಲ್ಲದೆ ತಮ್ಮ ಮಕ್ಕಳ ಬಗ್ಗೆ ಚಿಂತಿಸುತ್ತಾ ಮಗದೊಂದು ವರ್ಗ ಪಟ್ಟಣ ಸೇರಿದ್ದಾರೆ. ಈಗಾಗಿ ಹಳ್ಳಿಗಳು ವೃದ್ದಾಶ್ರಮಗಳಾಗಿವೆ. ಇನ್ನೂ ಇಲ್ಲಿ ನೆಲೆಸಿರುವ ಜನರಿಗೆ ನೀರಿನ ಸಮಸ್ಯೆ, ರಸ್ತೆ, ವಿದ್ಯುತ್ ಸೇರಿದಂತೆ ಒಳ್ಳೆಯ ಆದಾಯ ಕೊಡುವ ಹಾಗೂ ನಿರಂತರ ಕೆಲಸ ಸಿಗುವಂತಹ ಕೆಲಸದ ಸಮಸ್ಯೆ ಅಪಾರವಾಗಿದ್ದರೂ ಈ ಬಗ್ಗೆ ಎಳ್ಳೆಷ್ಟು ಕಾಳಜಿಯಿಲ್ಲದ ನಾಯಕರುಗಳು, ನಮ್ಮನ್ನು ಗೆಲ್ಲಿಸಿದರೆ ಮಾತ್ರ ನಿಮ್ಮ ಸೇವೆಗೆ ನಾವು ಸಿದ್ದ ಎಂದು ಬೊಗಳೆ ಬಿಡುತ್ತಿದ್ದಾರೆ. 
ಕಣದಲ್ಲಿರುವ 11 ಅಭ್ಯಥರ್ಿಗಳ ಪೈಕಿ, ಕೆ.ಜೆ.ಪಿ.ಯ ಜೆ.ಸಿ.ಮಾಧುಸ್ವಾಮಿ, ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್, ರೈತ ಸಂಘದ ಕೆಂಕೆರೆ ಸತೀಶ್ ಈ ಮೂರು ಜನ ಲಿಂಗಾಯಿತರಾದರೆ,  ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್, ಪಕ್ಷೇತರ ಅಭ್ಯಥರ್ಿ ಮಂಜುಳಾ ನಾಗರಾಜ್ ಇವರು  ಕುರುಬ ಸಮಾಜಕ್ಕೆ ಸೇರಿದವರಾಗಿದ್ದಾರೆ, ಕಾಂಗ್ರೆಸ್ನ ಸತೀಶ್ ಸಾಸಲು, ಜೆ.ಡಿ.ಯು.ನ ಜಿ.ಪ್ರಕಾಶ್ ಇಬ್ಬರೂ ಗೊಲ್ಲ ಸಮಾಜದವರು, ಬಿ.ಎಸ್.ಆರ್ ಪಕ್ಷದ ಕೆ.ಎಲ್.ದೇವರಾಜು ನಾಯಕ ಸಮಾಜದವರಾದರೆ, ವೆಲ್ಫೇರ್ ಪಾಟರ್ಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯಕ್ ಮತ್ತು ಪಕ್ಷೇತರ ರಾಮಚಂದ್ರಯ್ಯ ಬರಗೂರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ, ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸೇರಿಸಿಕೊಂಡು ಆರು ಹೋಬಳಿಗಳಿರುವ ದೊಡ್ಡ ಕ್ಷೇತ್ರವಾಗಿದೆ. ಒಂದು ಲಕ್ಷದ ತೊಂಭತ್ತೆಂಟು ಸಾವಿರ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಲಿಂಗಾಯಿತರು 45 ಸಾವಿರ, ಕುರುಬರು 38 ಸಾವಿರ, ಒಕ್ಕಲಿಗರು 18 ಸಾವಿರ, ಗೊಲ್ಲರು 16ಸಾವಿರ, ಮುಸ್ಲಿಂ ಮತ್ತು ಅಲ್ಪಸಂಖ್ಯಾತರು 15ಸಾವಿರ, ಪರಿಶಿಷ್ಟಜಾತಿ ಮತ್ತು ಪಂಗಡ ಸೇರಿ 40 ಸಾವಿರ, ಮಡಿವಾಳರು 4ಸಾವಿರ, ಬಲಿಜ 6ಸಾವಿರ, ಉಪ್ಪಾರರು 10ಸಾವಿರ ಮತ್ತು ಇತರೆ ಜಾತಿಯವರು 6 ಸಾವಿರ ಹೀಗೆ ಹಂಚಿ ಹೋಗಿದ್ದು ಸ್ಫಧರ್ೆಯಲ್ಲಿ ಮುಂಚೂಣಿಯಲ್ಲಿರುವ ಉರಿಯಾಳುಗಳು  ನಿಣರ್ಾಯಕ ಮತಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ, ಮುಸ್ಲಿಂ ಮತ್ತು ಇತರೆ ಸಣ್ಣ ಪುಟ್ಟ ಜಾತಿಗಳ ಮೇಲೆ  ಕಣ್ಣಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಜಾತಿ ರಾಜಕಾರಣದ ಜತೆಗೆ ಚೆಲ್ಲುವ ಕೋಟಿಗಳ ಲೆಕ್ಕದ ಹಣವೂ ನಿಣರ್ಾಯಕವಾಗಲಿದೆ.
ಜೆ.ಸಿ.ಎಂ. ಓಟಕ್ಕೆ ಕೆ.ಎಸ್.ಕೆ. ಅಡ್ಡಗಾಲೇ. . . ?
ಜೆ.ಸಿ.ಮಾಧುಸ್ವಾಮಿಯವರ ಜೊತೆ ಲಿಂಗಾಯಿತ ಲೀಡರ್ಗಳಿದ್ದಾರೆ, ಯಡಿಯೂರಪ್ಪನವರ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ ಜೊತೆಗೆ ಅವರದೇ ಆದ 25 ಸಾವಿರ ಮತಗಳಿವೆ ಇವುಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಜೆ.ಸಿ.ಎಂ.ರವರ ನಿಷ್ಠೂರ ವರ್ತನೆ, ಅಧಿಕಾರಯುತವಾದ ಮಾತುಗಳು, ಯಾರಿಗೂ ಕೇರ್ ಮಾಡದ ನಡವಳಿಕೆಗಳಿಂದ ಹಲವರು ಬೇಸತ್ತಿದ್ದಾರೆ. ಇವುಗಳನ್ನೆಲ್ಲಾ ತನ್ನ ಪರವಾಗಿಸಿಕೊಂಡಿರುವ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಜೊತೆಗೆ  ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಹುಳಿಯಾರು ಮತ್ತು ಬುಕ್ಕಾಪಟ್ಟಣಕ್ಕೆ ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಈಗಲೂ ಸ್ಮರಿಸುವ ಆ ಭಾಗದ ಹಲವರು ಇವರ ಜೊತೆಯಲ್ಲಿದ್ದಾರೆ. ಹೇಮಾವತಿ ನೀರನ್ನು ತಾಲೂಕಿನ 27 ಕೆರೆಗಳಿಗೆ ಮಂಜೂರಾತಿ ಮಾಡಿಸುವಲ್ಲಿ ಶ್ರಮವಹಿಸಿರುವ ಕಿರಣ್ಕುಮಾರ್ ತಮ್ಮ ಶ್ರಮಕ್ಕೆ ಕೂಲಿ ಕೇಳುತ್ತಿದ್ದಾರೆ.
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗಿನ ಆಶೀವರ್ಾದ ಯಾರಿಗೆ. . .?  
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗೆ ಎಲ್ಲರ ಹೆಗಲ ಮೇಲೆ ಕೈ ಹಾಕಿ ಭಾವನಾತ್ಮಕವಾಗಿ ಮಾತನಾಡಿಸುವ ಸಿ.ಬಿ.ಸುರೇಶ್ ಬಾಬು ಸೌಮ್ಯ ಸ್ವಭಾವ, ಬಡವರಾದಿಯಾಗಿ ಅಧಿಕಾರಿಗಳವರೆಗೆ  ಎಲ್ಲರನ್ನೂ ಅಣ್ಣ, ಅಕ್ಕ, ಎಂದು ಮಾತನಾಡಿಸುತ್ತಾ ಯುವಕರ ಕಣ್ಮಣಿಯಾಗಿರುವ ಸಿ.ಬಿ.ಎಸ್. ಆಡಳಿತ ನಡೆಸುವಲ್ಲಿ ಬಿಗಿ ನಿಲುವುಗಳಿಲ್ಲವೆಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದ್ದಾರೆ, ಇವರ ಓಟದ ಓಘಕ್ಕೆ ಕಾಂಗ್ರೆಸ್ನ ಸತೀಶ್ ಅಡ್ಡಗಾಲು ಹಾಕುತ್ತಾರಾ ಎಂಬುದೇ ಈಗಿನ ಪ್ರಶ್ನೆ.
ಒಂದು ಹಂತದಲ್ಲಿ ಇಲ್ಲಿನ ಕಾಂಗ್ರೆಸ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಅದಕ್ಕೆ ಸ್ವಲ್ಪ ಚೇತರಿಕೆ ಕೊಟ್ಟವರು ಸತೀಶ್ ಸಾಸಲು, ಗೆಲ್ಲುವಷ್ಟು ತಾಕತ್ತು ಇಲ್ಲದಿದ್ದರೂ ತೊಡರುಗಾಲು ಕೊಡುವಷ್ಟು ಇಕ್ಕಮತ್ತು ಇದೆ. 
ಇವೆಲ್ಲಾ ಸದ್ಯದ ಲೆಕ್ಕಾಚಾರಗಳಷ್ಟೇ, ಇನ್ನೂ  ಮುಂದೈತೆ ಮಾರಿಹಬ್ಬ ಅಷ್ಟು ಹೊತ್ತಿಗೆ ಏನೇನು ಬದಲಾಗುತ್ತೋ ಕಾದುನೋಡಣ. . . . . ! 

No comments:

Post a Comment