Wednesday, May 29, 2013


ಚಿ.ನಾ.ಹಳ್ಳಿ ತಾ.ಪಂ: ಅಧ್ಯಕ್ಷ, ಉಪಾಧ್ಯಕ್ಷರ ರಾಜಿನಾಮೆ, ಪ್ರಭಾರ ಅಧ್ಯಕ್ಷರಾಗಿ ಸ್ಥಾಯಿ ಸಮಿತಿ ಅಧ್ಯಕ್ಷ
ಚಿಕ್ಕನಾಯಕನಹಳ್ಳಿ,ಮೇ.29 : ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಎಂ.ಎಂ.ಜಗದೀಶ್ ಹಾಗೂ ಉಪಾಧ್ಯಕ್ಷೆ ಎಂ.ಇ.ಲತಾರವರು ತಮ್ಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಎಂ.ಎಂ.ಜಗದೀಶ್ ಮೇ 10ರಂದು ಹಾಗೂ ಉಪಾಧ್ಯಕ್ಷೆ ಲತಾ ಮೇ 4ರಂದು ರಾಜೀನಾಮೆ ಸಲ್ಲಿಸಿದ್ದು ಮೇ 20ರಂದು ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಕನರ್ಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಸೆಕ್ಷನ್ 140(1)ರಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ ದಿನಾಂಕದಿಂದ 15ದಿನಗಳೊಳಗೆ ರಾಜೀನಾಮೆಯನ್ನು ವಾಪಸ್ ಪಡೆಯಲು ಅವಕಾಶವಿದ್ದು, ಮೇ 10ರಂದು ರಾಜೀನಾಮೆ ಸಲ್ಲಿಸಿದ್ದು ಮೇ 24ಕ್ಕೆ 15ದಿನಗಳು ಮುಗಿದಿರುತ್ತದೆ, ಈ ಅವಧಿಯಲ್ಲಿ ಅಧ್ಯಕ್ಷರು ರಾಜೀನಾಮೆಯನ್ನು ಹಿಂದಕ್ಕೆ ಪಡೆದಿರುವುದಿಲ್ಲ. ಕನರ್ಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಸೆಕ್ಷನ್ 140(1)ರಡಿ ಎಂ.ಎಂ.ಜಗದೀಶ್ ತಾ.ಪಂ.ಅಧ್ಯಕ್ಷರ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಲಾಗಿದ್ದು, ಮೇ 25ರಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ತೆರವಾಗಿದೆ ಎಂದು ತುಮಕೂರು ಪ್ರಭಾರ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಘೋಷಿಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ ತಾ.ಪಂ.ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬಿದಿರುಕೊಂತಮ್ಮ ದೇವಿಯ 6ನೇ ವರ್ಷದ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಮೇ.29 : ಪಟ್ಟಣದ ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವಿ ಹಾಗೂ ಮಾಸ್ತಮ್ಮ ದೇವಿಯವರ 6ನೇ ವರ್ಷದ ವಾಷರ್ಿಕೋತ್ಸವವು ಇದೇ 30 ಹಾಗೂ 31ರಂದು ನಡೆಯಲಿದೆ.
ಶ್ರೀ ಬನಶಂಕರಿ ಅಮ್ಮನವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು 30ರ ಗುರುವಾರ ಸಂಜೆ 6.30ಕ್ಕೆ ಅನುಘ್ನೆ, ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹಪೂಜೆ, ಮೃತ್ಯುಂಜಯಪೂಜೆ, ಕಳಶಸ್ಥಾಪನೆ, ಆರಾಧನೆ, ಗಣಪತಿಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ, ಹಾಗೂ 31ರ ಶುಕ್ರವಾರ ಪ್ರಾತಃಕಾಲ ಸುಪ್ರಭಾತ, ಪ್ರಧಾನ ಕುಂಭಾರಾಧನೆ, ಅಷ್ಟಲಕ್ಷ್ಮಿ ಹೋಮ, ಪ್ರಾಯಶ್ಚಿತ್ತ ಹೋಮ, ಮಧ್ಯಾಹ್ನ 12.05ಕ್ಕೆ ಪೂಣರ್ಾಹುತಿ, ಬಲಿ ಪ್ರಧಾನ, ಕಳಸಾಭಿಷೇಕ, ಅಲಂಕಾರ, 1.15ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗಿಸಲಾಗುವುದು.
ಮತಿಘಟ್ಟ ಗ್ರಾ.ಪಂ.ಸಾಮಾನ್ಯ ಸಭೆ
ಚಿಕ್ಕನಾಯಕನಹಳ್ಳಿ,ಮೇ.29 : 13ನೇ ಹಣಕಾಸು ಯೋಜನೆಯಲ್ಲಿ ಲಭ್ಯವಿರುವ ಆರು ಲಕ್ಷದ ಅರವತ್ತನಾಲ್ಕು ಸಾವಿರ ರೂ.ಗಳನ್ನು ವಿವಿಧ ಕಾಮಗಾರಿ ನೀಮರ್ಾಣಕ್ಕೆ ಹಾಗೂ ಶೌಚಾಲಯ ನಿಮರ್ಾಣಕ್ಕೆ ಹಣವನ್ನು ಮೀಸಲಿಡಲು ತಾಲ್ಲೂಕಿನ ಮತಿಘಟ್ಟ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀಮರ್ಾನಿಸಲಾಯಿತು.
  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷರಾದ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ನಡೆಯಿತು, ಈಗಾಗಲೆ 240 ಶೌಚಾಲಯಗಳನ್ನು ನಿಮರ್ಾಣ ಮಾಡಲಾಗಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹದಿನೈದು ಸಾವಿರ ರೂಗಳನ್ನು  ರೂಪಾಯಿಗಳನ್ನು ನಿಗಧಿಪಡಿಸಲಾಯಿತು.
ಎನ್ಆರ್ಇಜಿಗೆ ಸಂಬಂಧಿಸಿದಂತೆ 64ಲಕ್ಷರೂಗಳಿಗೆ ಕ್ರಿಯಾಯೋಜನೆ ಮಾಡಿದ್ದು ತೋಟಗಾರಿಕೆ, ಜಲಾನಯನ, ಶೌಚಾಲಯ ಮುಂತಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ಪೂರೈಸಲಾಗಿದೆ. ಇಂದಿರಾ ಆವಾಜ್ ಯೋಜನೆಯಲ್ಲಿ 26ಮನೆ, ಅಂಬೇಡ್ಕರ್ ಆವಾಸ್ ಯೋಜನೆಯಲ್ಲಿ 15 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕಾರ್ಯದಶರ್ಿ ಗಂಗಾಧರಯ್ಯ ತಿಳಿಸಿದರು.
ಉಪಾಧ್ಯಕ್ಷರಾದ ನಾಗಮ್ಮ ಹಾಗೂ ಸದಸ್ಯರು ಮತ್ತು ಕಾರ್ಯದಶರ್ಿ ಹೆಚ್.ಗಂಗಾಧರಯ್ಯನವರು ಸಭೆಯಲ್ಲಿ ಪಾಲ್ಗೊಂಡಿದ್ದರು. 
 ಡೆಂಗ್ಯೂ ಪ್ರಕರಣ ಪತ್ತೆ: ತಾಲೂಕಿನಾದ್ಯಂತ ಕ್ರಿಮಿನಾಶಕ ಸಿಂಪಡಿಸಲು ಶಾಸಕರಿಂದ ಅಧಿಕಾರಿಗಳಿಗೆ ತಾಕೀತು.
ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಾದ್ಯಂತ  ಕ್ರಿಮಿನಾಶಕ ಸಿಂಪಡಿಸಬೇಕು, ಈ ಕಾರ್ಯಕ್ಕೆ ಒಂದು ದಿನ ನಿಗಧಿಪಡಿಸಿ ಆ ದಿನವೇ ಎಲ್ಲಾ ಪಂಚಾಯಿತಿಗಳಲ್ಲಿನ ಗ್ರಾಮಗಳಿಗೆ, ಪುರಸಭೆಯ ವಾಡರ್್ಗಳಿಗೆ ಅಬೇಕ್ ಕ್ರಿಮಿನಾಶಕ ಸಿಂಪಡಿಸಿ ಒಂದು ದಿನಕ್ಕೆ ಪೂರ್ಣಗೊಳದಿದ್ದರೆ ಎರಡು ದಿನ ಬಳಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು. 
ತಾ.ಪಂ. ಸಭಾಂಗಣದಲ್ಲಿ ನಡೆದ  ಸಭೆಯಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ನ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಕಾರ್ಯ ತುತರ್ಾಗಿ ಆಗಬೇಕು ಎಂದರು. 
ತಾಲೂಕಿನ ವೈದ್ಯರು ಸಮರ್ಪಕವಾಗಿ ಕೆಲಸ ಮಾಡಬೇಕು, ಹುಳಿಯಾರಿಗೆ ಈಗಿರುವ ವೈದ್ಯರ ಜೊತೆಗೆ ಇನ್ನೊಬ್ಬರು ಸಮರ್ಥ ವೈದ್ಯರನ್ನು ನೇಮಿಸಿ ಅಲ್ಲಿಗೆ ಹಳ್ಳಿ ಜನರು  ಆರೋಗ್ಯ ತಪಾಸಣೆಗೆ ಹೆಚ್ಚು ಬರುತ್ತಾರೆ,  ಈ ಬಗ್ಗೆ ಹೆಚ್ಚು  ಕಾಳಜಿವಹಿಸಬೇಕೆಂದು ಎಂದರು. ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ  ತಾಲೂಕು ವೈದ್ಯಾಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಾಲೂಕಿನಲ್ಲಿ ಏಳು ಡೆಂಗ್ಯೂ ಪ್ರಕರಣಗಳಿವೆ ಎಂದು ಶಂಕಿಸಲಾಗಿದ್ದು ಇದರಲ್ಲಿ, ಒಬ್ಬ ಬಾಲಕಿ ಸಾವನ್ನಪ್ಪಿದ್ದು ಮೂವರು ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾತ್ರಿಕೆಹಾಳ್, ಕಂಪನಹಳ್ಳಿ, ಸೋರಲಮಾವು ಗ್ರಾಮದಲ್ಲಿನ ಮೂವರು ಚೇತರಿಸಿಕೊಂಡಿದ್ದು, ಹುಳಿಯಾರು, ಚಿ.ನಾ.ಹಳ್ಳಿಯಲ್ಲಿನ ಡೆಂಗ್ಯೂ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
 ಸಭೆಯಲ್ಲಿದ್ದ ತಾ.ಪಂ.ಸದಸ್ಯೆ ಸವಿತಾ ಮಾತನಾಡಿ, ನಮ್ಮ ಭಾಗದ ಗ್ರಾ.ಪಂ.ಗಳಲ್ಲಿ ವರ್ಷವಾದರೂ ನೀರಿನ ಸಿಸ್ಟನ್ಗಳನ್ನು ಸ್ವಚ್ಚಗೊಳಿಸುವುದಿಲ್ಲ, ಮೂರು ವರ್ಷವಾದರೂ ಚರಂಡಿಗಳನ್ನು ತಿರುಗಿ ನೋಡುವುದಿಲ್ಲ ಈಗಾದರೆ ರೋಗಗಳು ಬರುವುದಿಲ್ಲವೇ ಎಂದರು. ಈ ಮಾತಿಗೆ ಜಿ.ಪಂ. ಸದಸ್ಯೆ ಮಂಜುಳಾ ಗವಿರಂಗಯ್ಯ ಧ್ವನಿಗೂಡಿಸಿ ಇಡೀ ಹೋಬಳಿಯಲ್ಲಿ ಈ ಸಮಸ್ಯೆ ಇದೆ ಎಂದರು. 
ಈ ಸಮಸ್ಯೆಗೆ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರತಿಕ್ರಿಯಿಸಿ ಸಭೆಯಲ್ಲಿದ್ದ ಇ.ಓ.ರವರಿಗೆ ಶೀಘ್ರವೇ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಇ.ಓ. ತಿಮ್ಮಯ್ಯ ಮಾತನಾಡಿ ಇದೇ 29ರಂದು ಗ್ರಾ.ಪಂ. ಅಧ್ಯಕ್ಷರು, ಪಿ.ಡಿ.ಓ. ಹಾಗೂ ಕಾರ್ಯದಶರ್ಿಗಳ ಸಭೆ ಕರೆದು ಈ ಬಗ್ಗೆ ಕೂಲಂಕುಶವಾಗಿ ನಿದರ್ೇಶನ ನೀಡುವುದಾಗಿ ತಿಳಿಸಿದರು.   (ಪೋಟೊ ಇದೆ)
ಸುದ್ದಿ:2
ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಾಲೂಕು ಆಡಳಿತದ ಸಹಕಾರವಿದೆ: ಶಾಸಕ ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.27 : ಜೂನ್ ತಿಂಗಳ 28,29,30ರಂದು ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ, ವಿಜೃಂಭಣೆಯಿಂದ ನಡೆಸಲು ಅಗತ್ಯವಾದ  ಎಲ್ಲಾ ಜವಬ್ದಾರಿಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾಹಿತ್ಯ ಪರಿಷತ್ನ ಪದಾಧಿಕಾರಿಗಳನ್ನು ಒಳಗೊಂಡಂತೆ ಇರುವ ವಿವಿಧ ಸಮಿತಿಗಳು ಜವಬ್ದಾರಿಯುತವಾಗಿ  ಕೆಲಸ ನಿರ್ವಹಿಸುವಂತೆ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. 
  ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಗವಾಗಿ ಶಾಸಕ ಸಿ.ಬಿ.ಸುರೇಶ್ಬಾಬುರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಸಾಹಿತ್ಯಾಭಿಮಾನಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಮ್ಮೇಳನಕ್ಕೆ ವಿವಿಧ ತಾಲ್ಲೂಕುಗಳಿಂದ ಆಗಮಿಸುವವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಹಾಸ್ಟಲ್ಗಳು, ಶಾಲೆ ಹಾಗೂ ಕಾಲೇಜು ಬಳಸಿಕೊಳ್ಳಲು ಹಾಗೂ ಸಮ್ಮೇಳನದ ವಿವಿಧ ಖಚರ್ಿನ ಮೊತ್ತಕ್ಕೆ ಬೇಕಾಗುವ ಹಣಕ್ಕಾಗಿ ದೇಣಿಗೆ ಸಂಗ್ರಹಿಸುವ ಬಗ್ಗೆ ತೀಮರ್ಾನಿಸಲಾಯಿತು.
ಸಮ್ಮೇಳನದಲ್ಲಿ ಶಿಕ್ಷಣ, ಮಾಧ್ಯಮ, ಸಾಮಾಜಿಕ, ಕಲೆ, ಕೃಷಿ, ವಿಜ್ಞಾನ ಕ್ಷೇತ್ರಗಳಲ್ಲಿ  ಸೇವೆ ಸಲ್ಲಿಸಿರುವ ಪ್ರಮುಖರಿಗೆ ಸನ್ಮಾನಿಸಲು ಸೂಚಿಸಿದರಲ್ಲದೆ ಸಮ್ಮೇಳನಕ್ಕಾಗಿ ವೈಯಕ್ತಿಕವಾಗಿ 1ಲಕ್ಷರೂಗಳನ್ನು ದೇಣಿಗೆಯಾಗಿ ನೀಡುವ ಜೊತೆಗೆ ಸಾಂಸ್ಕೃತಿಕ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ತಿಳಿಸಿದರು.
ಸಮ್ಮೇಳನದ ದಿನದಂದು 7.45ಕ್ಕೆ ಧ್ವಜಾರೋಹಣ ನೆರವೇರಲಿದ್ದು ನಂತರ ಮೂರು ದಿನಗಳ ಕಾಲ ಎರಡು ವೇದಿಕೆಯಲ್ಲಿ ವಿಸ್ಕೃತವಾದ ಕವಿಗೋಷ್ಠಿಗಳು, ವಿಶೇಷಗೋಷ್ಠಿ, ಕಥಾಸಮಯ, ಕವಿಸಮಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಿತ್ರಕಲಾ ಪ್ರದರ್ಶನಗಳು, ಕೃಷಿ ಬಗ್ಗೆ ಉತ್ತೇಜನ ನೀಡುವ ಪ್ರದರ್ಶನಗಳು ನಿಮರ್ಾಣವಾಗಲಿದ್ದು, 8.30ಕ್ಕೆ ಆರಂಭಗೊಳ್ಳುವ ಮೆರವಣಿಗೆಯಲ್ಲಿ ಕಂಸಾಳೆ, ಜಾನಪದ ತಂಡ ಹಾಗೂ ತಾಲ್ಲೂಕನ್ನು ಪ್ರತಿಬಿಂಬಿಸುವ ವಿವಿಧ ಪ್ರದರ್ಶನಗಳ ಮೆರವಣಿಗೆ ನಡೆಯಲಿದೆ.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ತಿಮ್ಮಯ್ಯ, ಬಿ.ಇ.ಓ.ಸಾ.ಚಿ.ನಾಗೇಶ್, ಕಸಾಪ ಅಧ್ಯಕ್ಷ ರವಿಕುಮಾರ್,  ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿ: 3
ಜನ ಮನ್ನಣೆಯಿಂದ ಮುಖಂಡರಾಗುತ್ತಾರೆ ಹೊರತು, ಮುಖಂಡರಂತೆ ವತರ್ಿಸಿದರೆ  ಜನ ಮನ್ನಣೆ ಸಿಗುವುದಿಲ್ಲ
ಚಿಕ್ಕನಾಯಕನಹಳ್ಳಿ,ಮೇ.27 : ಸಾರ್ವಜನಿಕ ಜೀವನಕ್ಕೆ ಇಳಿದ ಮೇಲೆ ಸಮಾಜಸೇವೆ ನಮ್ಮ ಗುರಿಯಾಗಿರಬೇಕು, ಆಗ ಸೇವೆ ಮಾಡುವ ವ್ಯಕ್ತಿ ಜನರಿಂದ ಮನ್ನಣೆ ಪಡೆಯುತ್ತಾನೆ ನಂತರ ಮುಖಂಡನಾಗುತ್ತಾನೆಯೇ ಹೊರತು, ಮುಖಂಡರಾಗಿ ಜನರ ವಿಶ್ವಾಸಗಳಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸಿ.ಬಿ.ಸುರೇಶ್ಬಾಬುರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ವಿವಿದ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಂದು ಭಾವಿಸಿದ್ದೆವು, ಆದರೆ ಕಾಂಗ್ರೆಸ್ ಸಕರ್ಾರಕ್ಕೆ ಅಧಿಕಾರಕ್ಕೆ ಬಂದಿದ್ದರಿಂದ ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಆದರೂ ಸಿದ್ದರಾಮ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಅಭಿವೃದ್ದಿಗಾಗಿ ಶ್ರಮಪಡುವೆ ಎಂದರಲ್ಲದೆ ಎಲ್ಲಾ ಜನತೆಯನ್ನು ಪ್ರೀತಿ, ವಿಶ್ವಾಸದಿಂದ ಅವರ ಭಾವನೆಗಳಿಗೆ ಸ್ಪಂದಿಸುತ್ತಿರುವುದರಿಂದಲೇ ತಾಲ್ಲೂಕಿನ ಜನತೆ ನನ್ನನ್ನು ಶಾಸಕನಾಗಿ ಮರು ಆಯ್ಕೆ ಮಾಡಿದ್ದಾರೆ, ತಾಲ್ಲೂಕಿನ ಹೇಮಾವತಿ ನೀರಿನ ಸಮಸ್ಯೆ, ತಾಲ್ಲೂಕಿನ ವಿದ್ಯಾಥರ್ಿಗಳಿಗೆ ಬೇಕಾಗಿರುವ ಪಾಲಿಟೆಕ್ನಿಕ್ ಕಾಲೇಜು, ನಿರುದ್ಯೋಗಿಗಳ ಉದ್ಯೋಗ ಸಮಸ್ಯೆ ನಿವಾರಿಸಲು ಈಗಾಗಲೇ ಶ್ರಮಿಸುತ್ತಿದ್ದೇನೆ, ಎಂದರಲ್ಲದೆ ತೀನಂಶ್ರೀ ಭವನದ ಕಾಮಗಾರಿ ಶೀಘ್ರ ಮುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ದರ್ಪದಿಂದ ಎಂದೂ ವತರ್ಿಸದ ಸುರೇಶ್ಬಾಬು ತಮ್ಮ ವಿರೋಧಿಯನ್ನು ಆತ್ಮೀಯವಾಗಿ ಕಾಣವ ಗುಣದಿಂದಲೇ ಈಗಿನ ಚುನಾವಣೆಯಲ್ಲಿ ಮರುಆಯ್ಕೆಯಾಗಿದ್ದಾರೆ, 42ವರ್ಷದ ಯುವಕರಾಗಿರುವ ಸುರೇಶ್ಬಾಬು ಶಾಸಕರಾಗಿ ಉತ್ತಮ ಆಡಳಿತ ನೀಡಲಿದ್ದು, ಅವರು ತಾಲ್ಲೂಕಿಗೆ ಅಗತ್ಯವಾಗಿ ಬೇಕಾಗಿರುವ ನೀರಾವರಿಗೆ ಆದ್ಯತೆ ನೀಡುವುದು, ನಶಿಸುತ್ತಿರುವ ನೇಕಾರಿಕೆಗೆ ಜೀವ ತುಂಬುವುದು, ತೀ.ನಂ.ಶ್ರೀ ಸಭಾ ಭವನವನ್ನು  ಪೂರ್ಣಗೊಳಿಸುವುದು, ತೀ.ನಂ.ಶ್ರೀ ಕಾಲೇಜನ್ನು ಆಚಾರ್ಯ ತೀ.ನಂ.ಶ್ರೀ ಕಾಲೇಜು ಎಂದು ಮರುಹೆಸರಿಡುವುದು, ಚಿಕ್ಕದಾಗಿರುವ ತೀ.ನಂ.ಶ್ರೀ ಗ್ರಂಥಾಲಯ ವಿಸ್ತರಿಸುವ ಬಗ್ಗೆ ತಿಳಿಸಿದರು.
ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದಶರ್ಿ ರಮೇಶ್ಬಾಬು ಮಾತನಾಡಿ 1972ರಲ್ಲಿ ಎನ್.ಬಸವಯ್ಯನವರು ಒಮ್ಮೆ ಗೆದ್ದು, ಮತ್ತೆ ಎದುರಾದ ಚುನಾವಣೆಯಲ್ಲಿ ಶಾಸಕನಾಗಿ ಮರು ಆಯ್ಕೆಗೊಂಡು ಸಚಿವರಾಗಿದ್ದು, ಅದೇ ರೀತಿ ಅವರ ಮಗ ಸುರೇಶ್ಬಾಬು ವಿಧಾನಸಭೆಗೆ ಮರು ಆಯ್ಕೆಗೊಂಡಿದ್ದು ಮುಂದೆ ಸಚಿವರಾಗುವ ಮುನ್ಸೂಚನೆ ನೀಡಿದ್ದಾರೆ, ಈಗ ಸುರೇಶ್ಬಾಬುರವರಿಗೆ ನಡೆಸುತ್ತಿರುವ ಅಭಿನಂದನೆ ಅವರಿಗೆ ಮುಂದೆ ಅನೇಕ ಜವಬ್ದಾರಿಗಳಿವೆ ಎಂಬ ಸೂಚನೆ ನೀಡಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿರವರಿಗೆ ಇವರ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದರಲ್ಲದೆ ಎಲ್ಲರೊಂದಿಗೆ ಗೌರವವಾಗಿ ನಡೆಸಿಕೊಳ್ಳುವುದರಿಂದಲೇ ಸುರೇಶ್ಬಾಬುರವರ ಬಗ್ಗೆ ತಾಲ್ಲೂಕಿನ ಜನತೆಯಲ್ಲಿ ಉತ್ತಮ ಅಭಿಪ್ರಾಯವಿದೆ ಎಂದರು.
ಚಲನಚಿತ್ರ ನಟ ಹನುಮಂತೇಗೌಡ ಮಾತನಾಡಿ ಎನ್.ಬಸವಯ್ಯನವರು ಅಕಾಲ ಮರಣವನ್ನಪ್ಪಿದಾಗ ಸುರೇಶ್ಬಾಬುರವರು ವಿಧಾನಸಭೆ ಚುನಾವಣೆಗೆ ಸ್ಪಧರ್ಿಸಿದ್ದರು ಆಗ ಅವರ ವಿರೋಧಿಗಳು ಆಡೋ ಹುಡುಗನನ್ನು ಕರೆತಂದು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂಬ ಹುಡುಗಾಟ ಮಾತುಗಳು ಬರುತ್ತಿದ್ದವು, ಅದೇ ಆಡೋ ಹುಡುಗ ಈಗ ತಾಲ್ಲೂಕಿನಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ ತಂದೆಯಂತೆ ಮಗನೂ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ ಎಂದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಧುಸೂಧನ್, ಪೂಜಾ.ಕೆ, ದರ್ಶನ್.ಕೆ.ಎಸ್, ಚಂದನ್.ಬಿ.ಎಸ್.ರವರಿಗೆ ಸನ್ಮಾನಿಸಲಾಯಿತು. 
ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ,  ತಾ.ಪಂ.ಸದಸ್ಯರಾದ ಲತಾ, ಚೇತನ, ಕವಿತ, ಹೇಮಾವತಿ ವಕೀಲ ಎಂ.ಬಿ.ನಾಗರಾಜು, ಜೆಡಿಎಸ್ ಮುಖಂಡ ಆಲದಕಟ್ಟೆ ತಿಮ್ಮಯ್ಯ, ಜೆಡಿಎಸ್ ವಕ್ತಾರ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್, ಸಿ.ಆರ್.ತಿಮ್ಮಪ್ಪ, ರವಿ, ದಯಾನಂದ್, ಮಲ್ಲೇಶ್, ಅಶೋಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹೆಸರಳ್ಳಿ ರಾಜ್ಕುಮಾರ್ ಪ್ರಾಥರ್ಿಸಿದರೆ, ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿ, ಎಸ್.ಕೆ.ವಿಜಯಕುಮಾರ್ ನಿರೂಪಿಸಿದರು. (ಪೊಟೋ ಇದೆ)
ಸುದ್ದಿ:4
ಪಡಿತರ ಚೀಟಿ ನೊಂದಣಿ ಮಾಡಲು ನಿಗಧಿಗಿಂತ ಹೆಚ್ಚು ಹಣ ವಸೂಲಿ: ಆರೋಪ
ಚಿಕ್ಕನಾಯಕನಹಳ್ಳಿ,ಮೇ.27: ತಾಲ್ಲೂಕ ಹಂದನಕೆರೆ ಗ್ರಾ.ಪಂ.ಯಲ್ಲಿ ಪಡಿತರ ಚೀಟಿ ನೊಂದಾಯಿಸಲು ಸಕರ್ಾರ ನಿಗಧಿ ಮಾಡಿರುವುದಕ್ಕಿಂತ ಹೆಚ್ಚಿನ ಹಣಕ್ಕೆ ಗ್ರಾ.ಪಂ.ಯವರು ಒತ್ತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
 ಒಂದು ಪಡಿತರ ಚೀಟಿಯನ್ನು ನೊಂದಣಿ ಮಾಡಲು 100ರೂಪಾಯಿಗಳನ್ನು ಪಡೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಈ ಬಗ್ಗೆ ಪಂಚಾಯಿತಿ ಕಾರ್ಯದಶರ್ಿಯವರನ್ನು ವಿಚಾರಿಸಿದರೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ, ನೀವು ಕಂಪ್ಯೂಟರ್ ಆಪರೇಟರ್ ರವರನ್ನೇ ವಿಚಾರಿಸಿ ಎಂದರು. ಅಲ್ಲಿನ ಕಂಪ್ಯೂಟರ್ ಆಪರೇಟರ್ ರವರನ್ನು ವಿಚಾರಿಸಿದರೆ, 100ರೂ ಪಡೆಯತ್ತಿರುವುದು ಸತ್ಯವೆಂದು ಓಪ್ಪಿಕೊಂಡಿದ್ದಾರೆ.
ಗ್ರಾಮಸ್ಥರು  ಪಂಚಾಯತಿಯವರು ನಮಗೆ ಪಡಿತರ ಚೀಟಿಯ ಬಗ್ಗೆ ನೊಂದಣಿಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುತ್ತಿಲ್ಲ ನಾವು ಎಲ್ಲಾ ಕೆಲಸ ಕಾರ್ಯಗಳನ್ನು ತೊರೆದು ಬಂದಾಗ ನಮಗೆ ಪಡಿತರ ಚೀಟಿ ನೊಂದಣಿಯನ್ನು ಮಾಡುವುದಿಲ್ಲ ಹಾಗಾಗಿ ಸ್ಥಳಿಯ ಆಡಳಿತ ಜನರ ಸಮಸ್ಯೆಯನ್ನು ಕೊಡಲೆ ಬಗೆಹರಿಸ ಬೇಕು ಇಲ್ಲವಾದರೆ ಪ್ರತಿಭಟನೆ ಮಾಡುತ್ತೆವೆಂದು ಆಗ್ರಹಿಸಿದರು. ಈ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸುವಂತೆ  ಆಗ್ರಹಿಸಿದ್ದಾರೆ.
ಸುದ್ದಿ:4
ಕನರ್ಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭ
   ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನ ಸಕರ್ಾರಿ ಶಾಲೆಯಲ್ಲಿ 6 ನೇ ತರಗತಿಯಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ, ಗ್ರಾಮೀಣ ಪ್ರದೇಶದ ಆಥರ್ಿಕವಾಗಿ ಹಿಂದುಳಿದ, ಹಾಗೂ ಶಾಲೆ ಬಿಟ್ಟ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳ ಬಾಲಕಿಯರ ವಸತಿ ನಿಲಯಕ್ಕೆ ದಾಖಾಲಾತಿ ಆರಂಭವಾಗಿದೆ ಎಂದು ಬಿ.ಇ.ಓ ಸಾ.ಚಿ. ನಾಗೇಶ್ ತಿಳಿಸಿದ್ದಾರೆ. 
ಈ  ವಸತಿ ನಿಲಯವು ಪಟ್ಟಣದ ಗುರುಭವನದಲ್ಲಿ ನಡೆಯುತ್ತಿದ್ದು, 100 ವಿದ್ಯಾಥರ್ಿನಿಯರಿಗೆ ಮಾತ್ರ ಅವಕಾಶವಿದ್ದು ಈ ಕೊಡಲೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಹದು ಈ ವಸತಿ ನಿಲಯದಲ್ಲಿನ ಮಕ್ಕಳಿಗೆ ಉಚಿತ ತಿಂಡಿ, ಊಟ, ಹಾಸಿಗೆ, ಹೊದಿಕೆ, ಸಮವಸ್ರ, ವ್ಯೆದ್ಯಕೀಯ ಚಿಕಿತ್ಸೆ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
         ಹೆಚ್ಚಿನ ಮಾಹಿತಿಗಾಗಿ ಮುಖ್ಯಶಿಕ್ಷಕರು  ಸಕರ್ಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ ಹಾಗೂ ಶಿಕ್ಷಣ ಸಂಯೋಜಕರು, ಹಂದನಕೆರೆ ಇವರನ್ನು ಸಂಪಕರ್ಿಸಲು ಕೋರಿದೆ, ಹೆಚ್ಚಿನ ವಿವರಗಳಿಗೆ    08133-267267, 943713086, 9535467764  ಇಲ್ಲಿ ಸಂಪರ್ಕಇಸಲು ಕೋರಿದೆ.  

No comments:

Post a Comment