Thursday, June 13, 2013


ತರಬೇನಹಳ್ಳಿ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,: ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲ್ಲೂಕಿನ ತರಬೇನಹಳ್ಳಿ ಗ್ರಾಮಸ್ಥರು ತಾಲ್ಲೂಕು ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಸುಮಾರು 120 ಮನೆಗಳಿರುವ ತರಬೇನಹಳ್ಳಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ,  ನೀರಿಗಾಗಿ ಜನತೆ ಕಿಲೋಮೀಟರ್ಗಟ್ಟಲೆವರೆಗೂ ಸಂಚರಿಸುವ ಸ್ಥತಿ ಎದುರಾಗಿದ್ದು ದನಕರುಗಳು ಸಾಯುವ ಸ್ಥಿತಿಗೆ ಬಂದಿವೆ, ಈ ಗ್ರಾಮದಲ್ಲಿ ನೂರಾರು ಲೀಟರ್ ಹಾಲನ್ನು ಪಟ್ಟಣಕ್ಕೆ ಕೊಂಡೊಯ್ಯುತ್ತೇವೆ ಆದರೆ ನೀರಿಲ್ಲದೆ ದನಕರುಗಳು ಹಾಲನ್ನು ಸರಿಯಾಗಿ ನೀಡುತ್ತಿಲ್ಲ ಇದರಿಂದ ನಮ್ಮ ಆಥರ್ಿಕ ಜೀವನದ ಮೇಲೂ ಹೊಡೆತ ಬಿದ್ದಿದೆ  ಎಂದು ಗ್ರಾಮಸ್ಥರು ಪ್ರತಿಭಟನೆ ವೇಳೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ತಾಲ್ಲೂಕು ಪಂಚಾಯ್ತಿ ಆಡಳಿತ ವ್ಯವಸ್ಥೆ ಶೀಘ್ರವಾಗಿ ನೀರಿನ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಉಗ್ರಪ್ರತಿಭಟನೆ ಮಾಡುವುದಾಗಿ ತಿಳಿಸಿದರಲ್ಲದೆ ಟ್ಯಾಂಕರ್ ನೀರಿನ ವ್ಯವಸ್ಥೆಯಿಂದ ಗ್ರಾಮಸ್ಥರು ಪರಸ್ಪರ ಜಗಳವಾಡುತ್ತಿದ್ದಾರೆ ಅದಕ್ಕಾಗಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಿಸಲು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಂಜಾಮರಿ, ಷಣ್ಮುಖ, ಗಂಗಾಧರ್ ಹಾಗೂ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಭಾಷಾ ಬೋಧಕರು ವಿದ್ಯಾಥರ್ಿಗಳಿಗೆ ಕನ್ನಡ ವ್ಯಾಕರಣದ ಬಗ್ಗೆ ಹೆಚ್ಚು ಒತ್ತು ನೀಡಿ
ಚಿಕ್ಕನಾಯಕನಹಳ್ಳಿ : ಇಂದಿನಿಂದಲೇ ಕನ್ನಡ ಭಾಷಾ ಭೋದಕರು ವಿದ್ಯಾಥರ್ಿಗಳಿಗೆ ವ್ಯಾಕರಣದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದರೆ ವಿದ್ಯಾಥರ್ಿ ಕನ್ನಡ ಭಾಷೆಯಲ್ಲಿ ಉತ್ತಮ ಅಂಕ ಪಡೆಯುತ್ತಾರೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕಿಯರ ಪ್ರೌಡಶಾಲೆಯಲ್ಲಿ ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಭೋದಕರ ಸಂಘದ ವತಿಯಿಂದ ನಡೆದ ಕನ್ನಡ ಭಾಷಾ ಪುನಶ್ಚೇತನ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.85ರಷ್ಟು ಫಲಿತಾಂಶ ಬರುತ್ತದೆಂದು ನಿರೀಕ್ಷಿಸಿದ್ದೆವು, ಆದರೆ ಕಳೆದ ಬಾರಿಗಿಂತ 5ರಷ್ಟು ಪಲಿತಾಂಶ ಕಡಿಮೆ ಬಂದಿದೆಯಲ್ಲದೆ, ತಾಲ್ಲೂಕು ಜಿಲ್ಲೆಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಶಿಕ್ಷಕರು ಈಗಿನಿಂದಲೇ ವಿದ್ಯಾಥರ್ಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಫಲಿತಾಂಶ ಬರುವಂತೆ ಕರೆ ನೀಡಿದರು. 
ತಾಲ್ಲೂಕಿನಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಕಾಯರ್ಾಗಾರಗಳು ನಡೆಯುತ್ತಿವೆ ಆದರೂ ತಾಲ್ಲೂಕಿನಲ್ಲಿ 4ಶಾಲೆಗಳು ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ. 2013-14ನೇ ಸಾಲಿನಲಿ ಇನ್ನೂಮ ಉತ್ತಮ ಫಲಿತಾಂಶ ಎಲ್ಲಾ ಶಾಲೆಗಳಲ್ಲೂ ಬರಬೇಕು ಎಂದರಲ್ಲದೆ ಅದಕ್ಕಾಗಿ ತರಬೇತಿ ಹಾಗೂ ಮೌಲ್ಯಮಾಪನದ ಬಗ್ಗೆ ವ್ಯಾಪಕ ಚಚರ್ೆಯಾಗಬೇಕು, ಇಂತಹ ಕಾರ್ಯಗಾರದಲ್ಲಿ ಶಿಕ್ಷಕರು ಭಾಗವಹಿಸಿ, ಮೂಲ ಉದ್ದೇಶದ ಅರಿವನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು. 
ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ ತಾಲ್ಲೂಕಿನ ಕನ್ನಡ ಭಾಷಾ ಬೋಧಕರ ಸಂಘಟನೆ ಕನ್ನಡ ಭಾಷಾ ಬೋಧನೆಯ  ಬಗ್ಗೆ ಶಿಕ್ಷಕರಲ್ಲಿ ಹೆಚ್ಚಿನ ತರಬೇತಿ ನೀಡುತ್ತಿದೆ, ಆದರೂ ತಾಲ್ಲೂಕಿನ 58ಶಾಲೆಗಳಲ್ಲಿ ಕೇವಲ 4ಶಾಲೆಗಳು ಮಾತ್ರ ಶೇ.100ರಷ್ಟು ಪಲಿತಾಂಶ ಪಡೆದಿವೆ ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ವಿದ್ಯಾಥರ್ಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಪ್ರೀತಿ ವಿಶ್ವಾಸ ಬರುವಂತೆ ನೋಡಿಕೊಳ್ಳಬೇಕು ಎಂದರು.
ಡಿ.ವಿ.ಪಿ.ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಲ್.ಮಲ್ಲಿಕಾಜರ್ುನಯ್ಯ ಮಾತನಾಡಿ ಕನ್ನಡ ಭಾಷೆ ಸುಲಭವಲ್ಲ, ಕನ್ನಡವೂ ಕಠಿಣ ಎಂಬುದನ್ನು ಮಕ್ಕಳಿಗೆ ಅರಿವು ಮೂಡಿಸಬೇಕು, ಹಾಗೂ ಕನ್ನಡದ ಬಗ್ಗೆ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು 2013-14ನೇ ಸಾಲಿನಲ್ಲಿ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಶೇ.100ರಷ್ಟು ಪಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು. ಸಮಾರಂಭದಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಪ್ಪ, ಮಂಜಯ್ಯಗೌಡರು ಉಪಸ್ಥಿತರಿದ್ದರು.
ಇದೇ 17ರಂದು ಚಿ.ನಾ.ಹಳ್ಳಿಯಲ್ಲಿ ಬಿ.ಎಸ್.ಪಿ.ಪಕ್ಷದ ಸಭೆ

ಚಿಕ್ಕನಾಯಕನಹಳ್ಳಿ,ಜು.13: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಜನ ಸಮಾಜ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರ ಸಭೆಯನ್ನು ಇದೇ 17ರ ಸೋಮವಾರ ಬೆಳಿಗ್ಗೆ11ಕ್ಕೆ ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದೆ ಎಂದು ಪಕ್ಷದ ಸಂಚಾಲಕರು ತಿಳಿಸಿದ್ದಾರೆ.
ಪಕ್ಷದ ನಾಯಕರು ಹಾಗೂ ರಾಜ್ಯ ಸಮಿತಿ ಪ್ರಧಾನ ಕಾರ್ಯದಶರ್ಿಯವರಾದ ಕ್ಯಾಪ್ಟನ್ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಆದ್ದರಿಂದ ಪಕ್ಷದ ಎಲ್ಲ ಮುಖಂಡರುಗಳು ಮತ್ತು ಸಕ್ರಿಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವಂತೆ ಸಂಚಾಲಕರುಗಳಾದ ಆರ್.ರಂಗಸ್ವಾಮಿ ಕೋರಿದ್ದಾರೆ. 

No comments:

Post a Comment