Thursday, April 17, 2014

ಕುಪ್ಪೂರು ಬಳಿ ಬೀಡುಬಿಟ್ಟಿರುವ ಆನೆಗಳು 
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಣೆಕಟ್ಟೆ ಬಳಿ ಇರುವ ಹಳ್ಳದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಎರಡು ಆನೆಗಳು ಸುತ್ತಮುತ್ತಲ ತೋಟಗಳಲ್ಲಿ ಸಂಚರಿಸುತ್ತಿವೆ.
ಚಿಕ್ಕನಾಯಕನಹಳ್ಳಿ : ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹೊರಟ ಆನೆಗಳ ಹಿಂಡಿನಿಂದ ಬೇರ್ಪಟ್ಟ ಎರಡು ಆನೆಗಳು ಮೊನ್ನೆ ತಾಲ್ಲೂಕಿನ ಬುಕ್ಕಾಪಟ್ಟಣ ಹಾಗೂ ಬೋರನಕಣಿವೆಯಲ್ಲಿ ತಂಗಿದ್ದು ರಾತ್ರಿ ಚಿಕ್ಕಬಿದರೆ ಮಾರ್ಗವಾಗಿ ಕುಪ್ಪೂರು ಬಳಿಯ ಹಳ್ಳದ ಬಳ್ಳಾರಿ ಜಾಲಿಯ ಪೊದೆಗಳಲ್ಲಿ ಎರಡು ಆನೆಗಳು ಬೀಡುಬಿಟ್ಟಿವೆ.
  ತಾಲ್ಲೂಕಿನ ಬೋರನಕಣಿವೆ ಜಲಾಶಯದ ಮಾರ್ಗವಾಗಿ ಚಿಕ್ಕಬಿದರೆ, ಅಣೆಕಟ್ಟೆ ಮೂಲಕ ಕುಪ್ಪೂರು ಸುತ್ತಮುತ್ತಾ ಆನೆಗಳು ಗುರುವಾರ ಬೆಳಗಿನ ಜಾವ ತಿರುಗಾಡುತ್ತಿದು ಅರಣ್ಯ ಇಲಾಖೆಯ ಸಿಬ್ಬಂದಿಯು ಆನೆಗಳನ್ನು ಓಡಿಸಲು ಹರಸಾಸಹ ಪಡುತ್ತಿದ್ದಾರೆ, ಆನೆಗಳನ್ನು ನೋಡಿದ ಜನರು ಶಿಳ್ಳೆ ಮತ್ತು ಕೇಕೇ ಹಾಕುತ್ತಿರುವುದಕ್ಕೆ ಆನೆಗಳು ಬೆದುರುವ ಸಂಭವವಿರುವುದರಿಂದ ಜನರನ್ನು ನಿಯಂತ್ರಿಸಲು ಶ್ರಮ ಪಡುತ್ತಿದ್ದಾರೆ.
ಬಿಸಿಲಿರುವುದರಿಂದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಆನೆಗಳು ಯಾವುದೇ ಸಮಯದಲ್ಲಾದರೂ ಕದಲಬಹುದು ಎಂಬ ಕಾರಣದಿಂದ ಜನರನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಸಂಜೆಯಾದ ನಂತರ ಸ್ಥಳದಿಂದ ಕದಲುವ ಸಂಭವವಿದೆ ಎಂದು ವಲಯ ಅರಣ್ಯಾಧಿಕಾರಿ ಮಾರುತಿ ತಿಳಿಸಿದ್ದಾರೆ. ಆನೆಗಳನ್ನು ನಿಯಂತ್ರಿಸಲು ಸ್ಥಳ್ಕದಲ್ಲೇ ಅರಣ್ಯ ಇಲಾಖಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಚಿ.ನಾ.ಹಳ್ಳಿ ಲೋಕಸಭಾ ಚುನಾವಣೆ ಶಾಂತಿಯುತ ಮತದಾನ

ಚಿಕ್ಕನಾಯಕನಹಳ್ಳಿ ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 222ನೇ ವಾಡರ್್ನ ಮತಗಟ್ಟೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬ ಪತ್ನಿ ಬಬಿತಾರವರೊಂದಿಗೆ ಮತಚಲಾಯಿಸಿ, ಹೆಬ್ಬೆಟ್ಟಿನ ಶಾಹಿ ತೋರಿಸುತ್ತಿರುವುದು.






ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಪತ್ನಿ ತ್ರಿವೇಣಿ, ಮಗ ಅಭಿಗ್ನರೊಂದಿಗೆ ಮತ ಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿಯವರು ಅಬುಜಿಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 207ರಲ್ಲಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ : ಲೋಕಸಭಾ ಚುನಾವಣೆಯ ಮತದಾನ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು ನವಿಲೆ ಗ್ರಾಮದ 201ನೇ ಬೂತ್ನಲ್ಲಿ ಮತಯಂತ್ರ ಕೆಟ್ಟುಹೋದ ಪರಿಣಾಮ 15 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತು.
ಮೇಲನಹಳ್ಳಿ ಮತ್ತು ನವಿಲೆ ಸೇರಿದಂತೆ ಅಲ್ಲಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದ ವರದಿಗಳು ಬಂದಿವೆ. ಸಂಜೆ 5ಗಂಟೆಯವರೆಗೆ ಶೇ.60ರಷ್ಟು ಮತದಾನವಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ 222ನೇ ಮತಗಟ್ಟೆಯಲ್ಲಿ ಪತ್ನಿ ಬಬಿತಾರೊಂದಿಗೆ ಮತ ಚಲಾಯಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದರು. ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಜಿ ಅಬೂಜಿಹಳ್ಳಿ ಸಕರ್ಾರಿ ಪ್ರಾಥಮಿಕ ಶಾಲೆ ಹಾಗೂ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಕುಪ್ಪೂರು ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಮನಹಳ್ಳಿ ಮತಗಟ್ಟೆಯ ಗುಂಗುರಪೆಂಟೆಯ 78 ಮತದಾರರಲ್ಲಿ ಒಬ್ಬರು ಮತಚಲಾಯಿಸಿದ್ದಾರೆ, ಉಳಿದವರು ಮತದಾನ ಬಹಿಷ್ಕರಿಸಿ ತಮಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಮತದಾನದಿಂದ ದೂರ ಉಳಿದಿದ್ದಾರೆ. ತಾಲ್ಲೂಕಿನ ಕೆಲವು ಕಡೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದವರೊಂದಿಗೆ ಮಾತಿನ ಚಕಮಕಿ ನಡೆದಿದೆ.


















1 comment:

  1. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಮನಹಳ್ಳಿ ಮತಗಟ್ಟೆಯ ಗುಂಗುರಪೆಂಟೆಯ 78 ಮತದಾರರಲ್ಲಿ ಒಬ್ಬರು ಮತಚಲಾಯಿಸಿದ್ದಾರೆ, ಉಳಿದವರು ಮತದಾನ ಬಹಿಷ್ಕರಿಸಿ ತಮಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಮತದಾನದಿಂದ ದೂರ ಉಳಿದಿದ್ದಾರೆ. EMBANEWS.DAYAMAADI VOTE MAADI...NANTHARA HOARATA MADONA...9900547647

    ReplyDelete