Thursday, September 4, 2014


ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ
ಚಿಕ್ಕನಾಯಕನಹಳ್ಳಿ,ಸೆ.04 : ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ ಆದ್ದರಿಂದ ಕಾನೂನಿನ ಬಗ್ಗೆ ಎಲ್ಲರೂ ಅರಿವು ಪಡೆದುಕೊಳ್ಳುವುದು ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
   ಪಟ್ಟಣದ ತಾಲ್ಲೂಕ್ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಂಯುಕ್ತ ಆಶ್ರಯದಲ್ಲಿ ಅಪೌಷ್ಠಿಕತೆ ಮತ್ತು ಮರಳಿ ಬಾ ಶಾಲೆಗೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ನಮ್ಮ ದೇಶದ ಅತ್ಯುನ್ನತ ಸಂವಿದಾನ ಪಡೆದಿದ್ದು ಪ್ರತಿಯೊಬ್ಬ ಪ್ರಜೆಯು ಗೌರವದಿಂದ ಜೀವಿಸುವ ಹಕ್ಕನ್ನು ಹೊಂದಿದ್ದು ಜಾತಿ, ಬೇದ, ಪಂಥ, ಹೆಣ್ಣು, ಗಂಡು ಎಂಬ ಬೇದಬಾವವಿಲ್ಲದೇ ಜೀವಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ತಾಯಿ ಗರ್ಭದಿಂದ ಹಿಡಿದು ಸಾಯುವವರೆಗೂ ಕಾನೂನು ನಮಗೆ ಅನ್ವಯವಾಗುತ್ತದೆ. ತಾಯಂದಿರು ಸರಿಯಾದ ಪೌಷ್ಠಿಕಾಂಶದ ಅಹಾರ ಸೇವಿಸದೆ ಹೋದರೆ ಹುಟ್ಟಿದ ಮಕ್ಕಳು ಅಂಗವಿಕಲತೆ, ಬುದ್ದಿಮಾಂದ್ಯ ಮಕ್ಕಳು ಹುಟ್ಟುವುದರಿಂದ ತಂದೆ-ತಾಯಿ ಹಾಗೂ ಸಮಾಜಕ್ಕೂ ಹೊರೆಯಾಗುತ್ತಾರೆ. 
ಉಚ್ಚನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಅಪೌಷ್ಠಿಕತೆಯಿಂದ ನರಳುತ್ತಿರುವ ಗಭರ್ಿಣಿ ಸ್ರೀಯರಿಗೆ ಮಕ್ಕಳಿಗೆ ಪೌಷ್ಠಿಕಾಂಶವಿರುವ ಅಹಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಗಭರ್ಿಣಿ ಸ್ತ್ರೀಯರಿಗೆ ಮೊಳಕೆಕಾಳು ಹಾಗೂ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಮಕ್ಕಳು ಹುಟ್ಟುತ್ತಾರೆ. ಹುಟ್ಟಿದ ಮಗುವಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸರಿಯಾಗಿ ಪೋಷಿಸಿ ಇಲ್ಲದೇ ಹೋದರೆ ಮಕ್ಕಳು ಸಮಾಜ ಘಾತುಕರಾಗುತ್ತಾರೆ ಎಂದ ಅವರು ಕೆಲವರು ಹಣ ಮಾಡುವ ದೃಷ್ಠಿಯಿಂದ ಕಲಬೆರಕೆ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಅರೋಗ್ಯದ ಮೇಲೆ ದುಶ್ಟಪರಿಣಾಮ ಉಂಟಾಗುತ್ತದೆ  ಎಂದು ತಿಳಿಸಿದರು. 
ನ್ಯಾಯಾದೀಶರಾದ ಎನ್. ವೀಣಾ ಮಾತಾನಾಡಿ ಎರಡು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ ವರದಿ ಬಂದ ಹಿನ್ನಲೆಯಲ್ಲಿ ಕೆಲವು ಎನ್.ಜಿ.ಒ. ಸಂಘಟನೆಗಳು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ ನಂತರ ಉಚ್ಚನ್ಯಾಯಾಲಯ ನ್ಯಾಯಾಧೀಶರ ಸಮಿತಿ ರಚಿಸಿ ವರದಿಯನ್ನು ತರಿಸಿಕೊಂಡ ನಂತರ ವಿವಿಧ ಇಲಾಖೆಗಳ ಸಮಿತಿಯನ್ನು ರಚಿಸಿ ಗಭರ್ೀಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡುವಂತೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸಕರ್ಾರ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನ್ಯಾಯಂಗ ಇಲಾಖೆ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
   ಸಿ.ಡಿ.ಪಿ.ಓ. ಅನಿಸ್ ಖೈಸರ್ ಮಾತನಾಡಿ ತಾಲ್ಲೂಕಿನಲ್ಲಿ 205 ಮಕ್ಕಳು ಅಪೌಷ್ಠಿಕತೆಯಿಂದ ನರಳಿದ್ದು ಇವರಿಗೆ ಉತ್ತಮ ಪೌಷ್ಠಿಕಾಂಶದ ಅಹಾರ ಹಾಗೂ ಸಲಹೆ ಹಾಗೂ ಚಿಕಿತ್ಸೆ ನೀಡುವುದರಿಂದ ಮಕ್ಕಳು ಗುಣಮುಖಾರಾಗಿದ್ದು ಇನ್ನು 85 ಮಕ್ಕಳಿಗೆ ಚಿಕಿತ್ಸೆ ಹಾಗೂ ಪೌಷ್ಠಿಕ ಅಹಾರ ನೀಡಲಾಗುತ್ತಿದೆ, ಗಬರ್ಿಣಿ ಸ್ರೀಯರು ಮೂಢ ನಂಬಿಕೆಗೆ ಮಾರು ಹೋಗದೇ ಉತ್ತಮ ಅಹಾರ ಸೇವಿಸಿ, ಹುಟ್ಟಿದ ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಸ್ತ್ರೀಯರ ಕರ್ತವ್ಯ  ಎಂದರಲ್ಲದೆ ಜಿಲ್ಲೆಯಲ್ಲಿ 1000 ಗಂಡು ಮಕ್ಕಳು 977 ಜನ ಹೆಣ್ಣುಮಕ್ಕಳಿದ್ದಾರೆ ಇದರಿಂದ ಹೆಣ್ಣು ಮಕ್ಕಳ ಕೊರತೆಯಿದೆ ಅದ್ದರಿಂದ  ತಂದೆ ತಾಯಂದಿರಿಗೆ ಹೆಣ್ಣುಮಕ್ಕಳ ಬಗ್ಗೆ ಇರುವ ತಾತ್ಸಾರ ಮನೋಭಾವ ಹೋಗಬೇಕು ಎಂದರು.
  ಕಾರ್ಯಕ್ರಮದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾದ್ಯಾಕ್ಷ ಹೆಚ್.ಎಸ್.ಜ್ಞಾನಮೂತರ್ಿ, ಬಿ.ಇ.ಒ.ಸಾ.ಚಿ.ನಾಗೇಶ್, ಸಿ.ಪಿ.ಐ.ಜಯಕುಮಾರ್, ಉಪತಹಸೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
    ಮಾಲತಿ ಪ್ರಾಥರ್ಿಸಿದರು. ವಕೀಲ ಲೋಕೇಶ್ ನಿರೂಪಿಸಿದರು. ವಕೀಲ ದಿಲೀಪ್ ಸ್ವಾಗತಿಸಿ ವಂದಿಸಿದರು.

ಸೃಜನಶೀಲ ಬರವಣಿಗೆ ನೀಡುತ್ತಿದ್ದ ಲೇಖಕ

ಯು.ಆರ್.ಅನಂತಮೂತರ್ಿ
ಚಿಕ್ಕನಾಯಕನಹಳ್ಳಿ,ಆ.04 : ಸೃಜನಶೀಲ ಬರವಣಿಗೆ, ತಮ್ಮ ಕೃತಿಗಳ ಮೂಲಕ ಸಮಕಾಲೀನ ವಾಸ್ತವಗಳನ್ನು ಓದುಗರಿಗೆ ನೀಡಿದ ಲೇಖಕ ಯು.ಆರ್.ಅನಂತಮೂತರ್ಿ ಎಂದು ನವೋದಯ ಪ್ರಥಮ ದಜರ್ೆ ಕಾಲೇಜಿನ ಕನ್ನಡ ಉಪನ್ಯಾಸಕ ರವಿಕುಮಾರ್.ಸಿ. ಹೇಳಿದರು.
ತಾಲ್ಲೂಕಿನ ಹಂದನಕೆರೆ ಜಿವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಹಂದನಕೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನಾತನ ಪರಂಪರೆಯನ್ನು ಸಮಕಾಲೀನಗೊಳಿಸುವ ಪ್ರಯತ್ನದಲ್ಲಿ ಅನಂತ್ಕುಮಾರ್ರವರು ತಮ್ಮ ಕಾದಂಬರಿಗೆ ಹೊಸತನ ಅಂಶಗಳ ದಾರಿ ಮಾಡಿದರು ಎಂದ ಅವರು ಈ ನೆಲದ ಪ್ರೀತಿ, ದ್ವೇಷ ಎರಡನ್ನೂ ಕಂಡ ಅವರ ಬರವಣಿಗೆ ಪ್ರತಿಯೊಬ್ಬ ವಿದ್ಯಾಥರ್ಿಗೆ ದಾರಿದೀಪವಾಗಬೇಕೆಂದರು. ಬದುಕು ರೂಪಿಸಿಕೊಂಡ ಬಗ್ಗೆ ಅನಂತಮೂತರ್ಿಯವರ ಜೀವನ ಶೈಲಿ, ಆತ್ಮವಿಶ್ವಾಸ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ನುಡಿದರು. ವಿಮರ್ಶಕರಾದ ಮೂತರ್ಿಯವರು ಕನ್ನಡದ ಪಂಪನಿಂದ, ಸಾಹಿತ್ಯದ ಅನೇಕ ಬರಹಗಾರರ ಜೊತೆ ಸಂಬಂಧವಿಟ್ಟುಕೊಂಡು ಅದರ ಪಯಣ ರಾಜಕೀಯವನ್ನು ಬೆಸೆದುಕೊಂಡ ಕೊಂಡಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಸಾಹಿತ್ಯ, ವಿಚಾರಾಧಾರೆಗಳು ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅನಂತಮೂತರ್ಿರವರ ಬರವಣಿಗೆ ಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಣ್ಣ, ಅನಂತಮೂತರ್ಿ ಈ ನಾಡು ಕಂಡ ಅನನ್ಯ ಚೇತನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೋಬಳಿ ಕಸಾಪ ಅಧ್ಯಕ್ಷ ಅನಂತಯ್ಯ, ಕಾರ್ಯದಶರ್ಿ ಮಂಜುನಾಥ್, ಆರ್.ಶಿವಣ್ಣ, ರಾಜೇಂದ್ರಕುಮಾರ್ ಮತ್ತು ಕಾಲೇಜು, ಪ್ರೌಢಶಾಲಾ ಶಿಕ್ಷಕರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

No comments:

Post a Comment