Monday, March 23, 2015

ಅಕ್ರಮ ಮರಳು ಮಾಫಿಯಾ: ಹಂದನಕೆರೆ ಹೋಬಳಿಯಲ್ಲಿ ಬಲು ಜೋರು, ಕಡಿವಾಣ ಹಾಕುವವರು ಯಾರು...!?
-ಸಿ.ಗುರುಮೂತರ್ಿ ಕೊಟಿಗೆಮನೆ.

                                                      ಚಿತ್ರ ಶೀಷರ್ಿಕೆ: 
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾದವರು ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಕಂದಾಯ ಅಧಿಕಾರಿಗಳು ಸಕರ್ಾರದ ವಶಕ್ಕೆ ಪಡೆದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶೇಖರಿಸಿರುವ ಚಿತ್ರ.

ಚಿಕ್ಕನಾಯಕನಹಳ್ಳಿ, : ತಾಲೂಕಿನ ಹಂದನಕೆರೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಲೂಟಿ ಪ್ರಕರಣ ಈಗ ಇಡೀ ಜಿಲ್ಲಾಡಳಿತ ಜಾಗೃತಗೊಳ್ಳುವಂತೆ ಮಾಡಿದೆಯಲ್ಲದೆ, ಸಂಬಂಧಿಸಿದ ಅಧಿಕಾರಗಳಲ್ಲಿ ತಲ್ಲಣ ಮೂಡಿಸಿದೆ, ಇದರಿಂದ ಅಕ್ರಮ ಮರಳು ಸಾಗಾಣೆಕೆದಾರರ ಮತ್ತು ಕೆಲವು ಪೊಲೀಸರ ನಿತ್ಯದ ಆದಾಯಕ್ಕೆ ಕಡಿವಾಣಬಿದ್ದಿದೆ.
ತಾಲೂಕಿನ ಸುವರ್ಣಮುಖಿ ನದಿಯ ಹಳ್ಳಗಳಲ್ಲಿ ಸಿಗುತ್ತಿದ್ದ ಮರಳನ್ನು ಕೆಲವು ಕಾಳಸಂತೆ ಕೋರರು  ಅಕ್ರಮವಾಗಿ ಮಾರಾಟ ಮಾಡಿಕೊಳ್ಳುವ ಮೂಲಕ ತಮ್ಮ ದಂಧೆಯನ್ನು ಏಗ್ಗು ಸಿಗ್ಗಿಲ್ಲದೆ ನಡೆಸುತ್ತಿದ್ದರು, ಈ ಅಕ್ರಮ ದಂಧೆಯೋಪಾದಿಯಲ್ಲಿ ನಡೆಯುತ್ತಿದ್ದರೂ  ಹಂದನೆಕೆರೆ ಪೊಲೀಸರು ಈ ಬಗ್ಗೆ ಹೆಚ್ಚು ತಲೆ ಕಡೆಸಿಕೊಳ್ಳುತ್ತಿರಲಿಲ್ಲ,  ಕಾರಣ ಅವರಿಗೆ ಸಲ್ಲಬೇಕಾದ ಎಲ್ಲಾವಿಧದ ಗೌರವಗಳನ್ನು ಈ ಅಕ್ರಮ ದಂಧೆ ಕೋರರು ಚಾಚೂತಪ್ಪದೆ ಸಲ್ಲಿಸುತ್ತಿದ್ದರು. ಹೀಗಾಗಿ ಈ ಅಕ್ರಮಕ್ಕೆ ಬೆಂಗಾವಲಾಗಿ ನಿಂತಿದ್ದ ಹಂದನಕೆರೆಯ ಕೆಲವು ಪೊಲೀಸರಿಗೆ  ಮರಳು ಖಾಲಿ ಆದಷ್ಟು ಅವರ ಖಜಾನೆ ಭತರ್ಿಯಾಗುತ್ತಿದ್ದರಿಂದ ಈ ಅಕ್ರಮ ಹೆಚ್ಚಲಿ, ಹೆಚ್ಚಲಿ, ಎನ್ನುತ್ತಿದ್ದರೆ ಹೊರತು, ಅದನ್ನು ತಡೆಯುವ ದುಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ...!?
  ಹೀಗೆ ಸಾಂಗೋಪಾಂಗವಾಗಿ ನಡೆಯುತ್ತಿದ್ದ ಈ ಅಕ್ರಮವನ್ನು ಬಯಲುಗೊಂಡಿದ್ದು, ಹಂದನಕೆರೆ  ಎಸ್.ಐ. ಸುನಿಲ್ ಮತ್ತು ತಿಪಟೂರು ಎ.ಸಿ. ಪ್ರಜ್ಞಾ ಅಮ್ಮೆಂಬಾಳ್ ರವರ ನಡುವಿನ ಮಾತನ ಚಕಮಕಿ, ಇಡೀ ದಂಧೆಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿತಲ್ಲದೆ, ದಂಧೆಕೋರರಿಗೆ ನಿದ್ದೆಗೆಡಿಸಿತು. 
ಹಂನದಕೆರೆ ಎಸ್.ಐ. ಮತ್ತು ಎ.ಸಿ.ಯವರ ಸಂಘರ್ಷ ಯಾವಾಗ ವಾಟ್ಸ್ ಅಪ್ನಲ್ಲಿ ಓಡಾಡಿ, ರಾಜ್ಯದ ಎಲ್ಲಾ ಟಿ.ವಿ.ಚಾನೆಲ್ಗಳಲ್ಲಿ ಭಿತ್ತರವಾಯಿತು ಆಗಿನಿಂದ ಬೆಂಗಳೂರಿನಲ್ಲಿ ಕುಳಿತು ಈ ಅಕ್ರಮವನ್ನು ಡೀಲ್ ಮಾಡುತ್ತಿದ್ದ ಅಕ್ರಮಕೋರರ ತೊಳ್ಳೆ ನಡುಗುವಂತಾಗಿದೆ. ಕಾರಣ  ಎ.ಸಿ. ಪ್ರಜ್ಞಾ, ತಹಶೀಲ್ದಾರ್ ಕಾಮಾಕ್ಷಮ್ಮ ನೇತೃತ್ವದ ತಂಡ ಈ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕುತ್ತಿದ್ದಾರೆ, ಅಲ್ಲದೆ ತಮ್ಮ ಜಮೀನುಗಳಲ್ಲಿ ಲೋಡ್ಗಟ್ಟಲೆ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಮರಳನ್ನೇಲ್ಲಾ ಸಕರ್ಾರದ ವಶಕ್ಕೆ ಪಡೆದಿದ್ದಾರೆ,  ಅಷ್ಟೇ ಅಲ್ಲ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಜಮೀನುಗಳ ಮಾಲೀಕರಿಗೆ ನಿಮ್ಮ ಜಮೀನುಗಳನ್ನು ಏಕೆ ಸಕರ್ಾರ ತನ್ನ ಸುಬಧರ್ಿಗೆ ತೆಗೆದುಕೊಳ್ಳಬಾರದು ಎಂಬ ಸಂದೇಶವನ್ನು ರವಾನಿಸಿದ್ದಾರೆ. 
ಇಷ್ಟೇ ಆಗಿದ್ದರೆ ಆ ಕಳ್ಳಕಾಕರು ತಲೆ ಗೆಡಿಸಿಕೊಳ್ಳುತ್ತಿರಲಿಲ್ಲ ಏಕೆಂದರೆ ಹಣದ ಹಮ್ಮು ಅವರನ್ನು ಏನನ್ನಾದರೂ ಮಾಡಿದರೂ ಜಯಸಿಕೊಂಡು ಬರುತ್ತೇವೆಂಬ ಹುಮ್ಮಸ್ಸನ್ನು ಮೂಡಿಸಿದೆ. ಆದರೆ ಅವರಿಗೆ ಸಂಕಟ ಎದುರಾಗಿರುವುದು ಇಡೀ ಅಕ್ರಮಕ್ಕೆ ಕಡಿವಾಣ ಹಾಕಲು ಹೋರಟಿರುವ ಎ.ಸಿ. ಮತ್ತು ತಹಶೀಲ್ದಾರ್ ರವರ ಕ್ರಮ ಹಾಗೂ ತಮಗೆ  ಬೆನ್ನೆಲುಬಾಗಿದ್ದ ಎಸ್.ಐ. ರವರು ಠಾಣೆಯ ಆಡಳಿತದಲಿಲ್ಲವೆಂಬ ಕೊರಗು.
ಜಿಲ್ಲಾಡಳಿತದಿಂದ ರಾಜೀ ಸಂಧಾನದ ಸಭೆ:  ಎ.ಸಿ. ಮತ್ತು ಎಸ್.ಐ.ರವರ ಮಾತಿನ ಚಕಮಕಿ ರಾಜ್ಯದ ತುಂಬೆಲ್ಲಾ ಸದ್ದು ಮಾಡುತ್ತಿದ್ದಂತೆಯೇ ಎಸ್.ಪಿ.ಕಾತರ್ಿಕ ರೆಡ್ಡಿಯವರು ತಕ್ಷಣವೇ ಎಸ್.ಐ. ಸುನಿಲ್ ರವರನ್ನು ಹಂದನಕೆರೆ ಠಾಣೆಯ ಛಾಜರ್್ನ್ನು ಎ.ಎಸ್.ಐ.ರವರಿಗೆ ನೀಡಿ ಎಸ್.ಪಿ.ಕಛೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ಸುನಿಲ್ ಕಳೆದ ಒಂದು ವಾರದಿಂದ ಎಸ್.ಪಿ.ಕಛೇರಿಯಲ್ಲಿ ಇದ್ದಾರೆ.
ಈ ಮಧ್ಯೆ ಡಿ.ಸಿ, ಎಸ್.ಪಿ. ನೇತೃತ್ವದಲ್ಲಿ ಎ.ಸಿ. ಮತ್ತು ಎಸ್.ಐ.ರವರ ನಡುವೆ ರಾಜಿ ಸಂಧಾನ ಕಾರ್ಯವೂ ನಡೆದಿದೆ, ಎ.ಸಿ. ಪ್ರಜ್ಞಾರವರನ್ನು ಎಸ್.ಐ.ರವರು ಸಾರಿ ಕೇಳಿರುವ ಪ್ರಹಸನವು ಆಗಿದೆ,  ಆದರೆ ಅದೆಲ್ಲಾ ಕಣ್ಣೊರಿಸುವ ಮಟ್ಟಿಗೆ ಮಾತ್ರ ಪ್ರಯೋಜನವಾಗಿದೆ ಹೊರತು ಮತ್ತೇನೂ ಅಲ್ಲ.
ಮರುದಿನವೇ ಎ.ಸಿ. ಪ್ರಜ್ಞಾರವರು ತಹಶೀಲ್ದಾರ್ ಜೊತೆಗೂಡಿ ಅಕ್ರಮ ಮರಳು ಸಂಗ್ರಹಗೊಂಡಿರುವ ನಿರುವಗಲ್, ಅಂಕಸಂದ್ರ ಸೇರಿದಂತೆ ಹಲವು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಲ್ಲಿ ಲೋಡು ಗಟ್ಟಲೆ ಮರಳು ಇರುವುದನ್ನು ಕಂಡು ಕೆಂಡಾಮಂಡಲಾವಾಗಿದ್ದಾರೆ. ಆ ಮರಳನ್ನೆಲ್ಲಾ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇಲ್ಲಿಂದ ಶುರವಾಯಿತು ಅಸಲಿ ಮಸಲತ್ತು. ಇದರಿಂದ ಕುಪಿತಗೊಂಡಿರುವ ಮರಳು ಮಾಫಿಯಾ ಎಸ್.ಐರವರನ್ನು ನಾವು ರಕ್ಷಿಸಿಕೊಂಡರೆ ಮಾತ್ರ ನಮ್ಮ ಉಳಿವು ಅಲ್ಲದೆ,  ಈ ಎ.ಸಿ. ಮತ್ತು ತಹಶೀಲ್ದಾರ್ ರವರಿಗೆ ನಾವೇನೆಂದು ತೋರಿಸಲೇ ಬೇಕೆಂದು ಪಣ ತೊಟ್ಟವರಂತೆ ಸಂಘಟಿತರಾಗುತ್ತಿದ್ದಾರೆ.
ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಲಾರಿ ಢಿಕ್ಕಿ ಯತ್ನ:  ಕಂದಾಯ ಅಧಿಕಾರಿಗಳ ಕಾಯರ್ಾಚರಣೆ ತೀವ್ರಗೊಂಡಂತೆ ಮರಳು ಮಾಫಿಯಾದ ಜನರೂ ರೊಚ್ಚಿಗೆದ್ದರು, ಇದರ ಫಲವೇ ಅಕ್ರಮ ಮರಳು ಪರಿಶೀಲನೆಗೆಂದು ಹೋದ ಸಂದರ್ಭದಲ್ಲಿ ಎ.ಸಿ. ಪ್ರಜ್ಞಾರವರ ಸಮ್ಮುಖದಲ್ಲೇ ನಂಬರ್ ಇಲ್ಲದ ಹೊಸ ಲಾರಿಯೊಂದು ತಹಶೀಲ್ದಾರ್ ಕಾಮಾಕ್ಷಮ್ಮ ಮತ್ತು ಹಂದನಕೆರೆ ಕಂದಾಯ ಅಧಿಕಾರಿ ವಿಜಯ ನರಸಿಂಹರವರ ಮೇಲೆರಗಿದೆ ಅದೃಷ್ಟ ವಶಾತ್ ಅವರಿಬ್ಬರು ಅಪಾಯದಿಂದ ಪರಾಗಿದ್ದಾರೆ. 
ಈ ಅಕ್ರಮ ದಂಧೆ ಇಂದು ನೆನ್ನೆಯದಲ್ಲ, ಕಳೆದ ಐದಾರು ವರ್ಷಗಳಿಂದ ನಡೆಯುತ್ತಿರುವ ಕಾಳಸಂತೆ,  ಆದರೆ ಆಗೆಲ್ಲಾ ಕದ್ದು ಮುಚ್ಚಿ ಟ್ರಾಕ್ಟರ್ಗಳಲ್ಲಿ ಹಂಗೂ- ಇಂಗೂ ನಡೆಯುತ್ತಿದ್ದು, ಕಂದಾಯ ಅಧಿಕಾರಿಗಳ ಕೈಗೆ ಸಿಕ್ಕಾಗ  ದಂಢ ಕಟ್ಟಿಸಿಕೊಂಡು ಬಿಡುತ್ತಿದ್ದರು, ಸ್ವಲ್ಪ ಜಾಸ್ತಿ ಏನಿಸಿದಾಗ ಹಂಗೊಂದು ಇಗೊಂದು ಕೇಸುಗಳನ್ನು ಹಾಕುತ್ತಿದ್ದರು,  
ಆಗೆಲ್ಲಾ ಇಲ್ಲಿನ ಮರಳುಗೆ ಅಷ್ಟೋಂದು ಬೇಡಿಕೆ ಇರಲಿಲ್ಲ ಏಕೆಂದರೆ ಶಿರಾ, ಹೊಸದುರ್ಗ ಮತ್ತಿತರಕಡೆಯಿಂದ ಮರಳು ಇಲ್ಲಿನ ಜನರಿಗೆ ದೊರೆಯುತ್ತಿದ್ದರಿಂದ ಈ ಮರಳನ್ನು ಇಲ್ಲಿನ ಜನ ಅಷ್ಟೇ ಬಳಸಿಕೊಳ್ಳುತ್ತಿದ್ದರು. 
ಆದರೆ ರಾಜ್ಯದ ಎಲ್ಲಾ ಕಡೆ ಮರಳು ಸಾಗಣಿಕೆಯ ಮೇಲೆ ನಿರ್ಬಂಧ ಹೆಚ್ಚಾದಾಗ ಇಲ್ಲಿನ ಮರಳು ಅಗತ್ಯ ತೀರ ಕಂಡು ಬಂದಿತು. ಅಷ್ಟೇ ಅಲ್ಲ ನವಿಲೆ ಕೆರೆ ಬಳಿ ಇದ್ದ ಮರಳನ್ನು  ಒಮ್ಮೆ ಸಕರ್ಾರ ಹರಾಜು ಮಾಡುವ ಪ್ರಕ್ರಿಯೆ ನಡೆಸಿತು, ಆ ಸಂದಂರ್ಭದಲ್ಲಿ ಬೆಂಗಳೂರು ಕಡೆಯ ಒಂದಷ್ಟು ಜನ ಈ ಕಡೆ ಮುಖ ಮಾಡಿದರು, ಆಗ ಶುರವಾಯಿತು ನೋಡಿ ಇಲ್ಲಿಯ ಮರಳು ದಂಧೆಯ ಕರಾಮತ್ತು.
ಹಲವು ಮರಳು ಮಾಫಿಯಾದ ಜನ ಇಲ್ಲಿಗೆ ಬಂದು ಸುವರ್ಣಮುಖಿ ನದಿಯ 25 ಕಿ.ಮೀ. ಉದ್ದಕ್ಕೂ ಇರುವ ಅಗಾಧ ಮರಳನ್ನು ನೋಡಿ ಸ್ವರ್ಗಕ್ಕೆ ಮೂರು ಗೇಣು ಎಂಬಂತಾಡಿಕೊಂಡು ಹೋದರು ಆಗಿನಿಂದ ಶುರವಾಯಿತು ಇಲ್ಲಿನ ಮರಳು ಮಾಫಿಯಾ.
ಮರಳು ಮಾಫಿಯಾದ ಮೇಲೆ ಪೊಲೀಸರ ಕೇಸುಗಳು: ಟ್ರ್ಯಾಕ್ಟರ್ಗಳ ಜಾಗಕ್ಕೆ ಟಿಪ್ಪರ್ಗಳು, ಹತ್ತು, ಹನ್ನೆರಡು ಚಕ್ರದ ಲಾರಿಗಳು ಬಂದವು, ಹಂದನಕೆರೆಯ ಕೆಲವರು ಬೆಂಗಳೂರಿನಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದವರು, ಈ ಮಾಫಿಯಾಕ್ಕೆ ಎಂಟ್ರಿಯಾದರು. ಅಲ್ಲಿದ್ದುಕೊಂಡೆ ಇಲ್ಲಿ ತಮ್ಮ ಕಡೆಯ ಕೆಲವರನ್ನು ಬಿಟ್ಟು ಅಕ್ರಮ ಮರಳು ಹೊಡೆಸಲು ಆರಂಭಿಸಿದರು, ಮರಳು ತುಂಬಲು ಜೆ.ಸಿ.ಬಿ.ಗಳು ಬಂದವು, ಹಳ್ಳಗಳಲ್ಲಿ ಮರಳು ಇರುವ ಭಾಗದಲ್ಲಿನ ತೋಟದವರಿಗೆ ಆರಂಭದಲ್ಲಿ ನೂರರ ಲೆಕ್ಕದಲ್ಲಿ ನೀಡುತ್ತಿದ್ದ ಹಣ ಸಾವಿರಕ್ಕೆ ಏರಿಕೆಯಾಯಿತು, ಹಗಲು ರಾತ್ರಿ ಎಂಬ ವ್ಯತ್ಯಾಸಗಳು ಮಾಫಿಯಾದ ಜನರಿಗೆ ಮಾಯವಾದವು, ರಾತ್ರಿಯ ಕಾಯರ್ಾಚರಣೆಗಳು ಚುರುಕುಗೊಂಡವು, ಬೀಟ್ನಲ್ಲಿದ್ದ ಪೊಲೀಸರ ಕಿರಿಕಿರಿ ತಪ್ಪಿಸಲು ಅವರಿಗೂ ಪುಡಿನೋಟುಗಳ ವಾಸನೆ ಹಿಡಿಸಿದರು. ಇದಕ್ಕೆ ಬಗ್ಗದ ಕೆಲವರಿಗೆ 'ಕನಕಾಂಬರ' ಬಣ್ಣದ ನೋಟುಗಳೂ ಚಾಲ್ತಿಗೆ ಬಂದವು, ಹೀಗೆ  ವೇಗವನ್ನು ಪಡೆದಕೊಂಡ ಮಾಫಿಯಾ ತನ್ನ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರಿಂದ ಆಗಾಗ ಒಂದೊಂದು ಪೊಲೀಸ್ ಕೇಸುಗಳು ಆರಂಭಗೊಂಡವು. ಈ ಸಂಬಂಧ 2013 ರಿಂದ ಪೊಲೀಸ್ ಕೇಸುಗಳು ಆರಂಭಗೊಂಡಿವೆ, 2013ರ ಅಕ್ಟೋಬರ್ ಮೂರ ರಂದು, ಅದೇ ತಿಂಗಳು ಇಪ್ಪತ್ತೈದರಂದು ಎರಡು ಎಫ್.ಐ.ಆರ್.ಗಳು ಹಾಕಿರುವುದಕ್ಕೆ ದಾಖಲೆಗಳಿವೆ.
ಈ ಕೇಸುಗಳಲ್ಲಿ ನಿರುವಗಲ್ ಸೀತರಾಮಾಯ್ಯ ಮತ್ತು ಆತನ ಮಗ ಮಧುಚಂದ್ರನ ಮೇಲೆ ಆರೋಪಗಳು ಅತಿಯಾಗಿ ಕೇಳಿ ಬಂದವು. ಈಗ ಈ ಕೇಸುಗಳು ವಿಚಾರಣೆ ಹಂತದಲ್ಲಿದೆ. 
ಈಗ ಈ ಮಾಫಿಯಾ ತಾಲೂಕಿನಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮರಳನ್ನು ಸಂಗ್ರಹಿಸಿದ್ದ ನಿರುವಗಲ್ ಗ್ರಾಮದ ಎನ್.ಸೀತರಾಮಯ್ಯನವರ ಆರು ಎಕರೆ ಮೂವತ್ತೆರೆಡು ಗುಂಟೆ,  ಎಚ್.ಆರ್.ಶಾರದಮ್ಮ ನವರ ಆರು ಎಕರೆ ಮೂವತ್ತೊಂದು ಗುಂಟೆ ಸೇರಿದಂತೆ ಅದೇ ಗ್ರಾಮದ ಸವರ್ೆನಂಬರ್ನಲ್ಲಿರುವ  ನಾಗಪ್ಪ, ಪುಟ್ಟಯ್ಯ, ವರದಯ್ಯ, ಮರಿರಂಗಯ್ಯ ಎಂಬುವರ ಜಮೀನುಗಳನ್ನು ಸಕರ್ಾರ ತನ್ನ ಸುಬಧರ್ಿಗೆ ಪಡೆಯಲು ಮುಂದಾಗಿದೆ, 
ಈ ಎಲ್ಲಾ ವಿಚಾರದ ಬೆಳಕು ಚೆಲ್ಲುವ ವಿಚಾರವಾಗಿ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವ ವಿಷಯವಾಗಿ ಇದೇ 23(ಇಂದು) ಮರಳು ನಿಯಂತ್ರಣದ ಕಾಯರ್ಾಚರಣೆ ಪಡೆಯ ಸಭೆಯನ್ನು ಶಾಸಕರು ಕರೆದಿದ್ದಾರೆ, ಈ ಸಭೆ ಕಡಿವಾಣ ಹಾಕುವಲ್ಲಿ ಏನೇನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. . .!



No comments:

Post a Comment