Friday, November 27, 2015ಮತ್ತೆ ಗುಂಡಿಬಿದ್ದ ಚಿಕ್ಕನಾಯಕನಹಳ್ಳಿ ರಸ್ತೆಗಳು

ಚಿಕ್ಕನಾಯಕನಹಳ್ಳಿ,ನ.26 : ಪಟ್ಟಣದ ಮೂಲಕ ಹಾದು ಹೋಗಿರುವ ಚಾಮರಾಜನಗರ-ಜೇವಗರ್ಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು ಪ್ರತೀ ದಿನ ಅಪಘಾತಗಳು ಸಂಭವಿಸುತ್ತಿವೆ.
ಗುರುವಾರ ಸರಕು ತುಂಬಿದ್ದ ಎರಡು ಲಾರಿಗಳು ಗುಂಡಿ ತಪ್ಪಿಸಲು ಹೋಗಿ ಒಂದು ಲಾರಿ ಮಗುಚಿ ಬಿದಿದ್ದು, ಇನ್ನೊಂದು ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಕೊಲ್ಲಾಪುರದಿಂದ ಕೇರಳಕ್ಕೆ ಸ್ಪಿರಿಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತಾಲ್ಲೂಕಿನ ಮಾಳಿಗೆಹಳ್ಳಿ ಬಳಿ ಮಗುಚಿ ಬಿದ್ದಿದೆ.ಶ್ಯಾವಿಗೆಹಳ್ಳಿ ಬಳಿ ಲಾರಿಯೊಂದು ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಪಕ್ಕದ ಮರಕ್ಕೆ  ಢಿಕ್ಕಿ ಹೊಡೆದಿದೆ.
   ತಾಲ್ಲೂಕಿನ ಗಡಿ ಕೆ.ಬಿ.ಕ್ರಾಸ್ನಿಂದ ಹುಳಿಯಾರು  ವರೆಗಿನ  35 ಕಿಮಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆಯಲ್ಲಿ ಗುಂಡಿಗಳಿವೆಯೇ ಅಥವಾ ಗುಂಡಿಗಳಲ್ಲಿ ರಸ್ತೆಯಿದೆಯೇ ಎಂಬ ಅನುಮಾನ ಪ್ರಯಾಣಿಕರಲ್ಲಿದೆ. ದ್ವಿಚಕ್ರ ಹಾಗೂ ತ್ರಿಚಕ್ರ, ಕಾರು ಹಾಗೂ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.  ಗುಂಡಿಗಳ ಜೊತೆಯಲ್ಲಿ ರಸ್ತೆಯಲ್ಲಿರುವ ಉಬ್ಬು ಮತ್ತು ತಗ್ಗುಗಳಿಂದಲೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
  ತಾಲ್ಲೂಕಿನ ಹಾಲಗೊಣ, ಜೆ.ಸಿ.ಪುರ, ಗೋಡೆಕೆರೆ ಗೇಟ್, ತರಬೇನಹಳ್ಳಿ, ಕಾಡೇನಹಳ್ಳಿ, ಚಿಕ್ಕನಾಯಕನಹಳ್ಳಿ, ಮಾಳಿಗೆಹಳ್ಳಿ, ಶ್ಯಾವಿಗೆಹಳ್ಳಿ, ಎನ್ಆರ್ ಫ್ಯಾಕ್ಟರಿ, ಅವಳಗೆರೆ, ಚಿಕ್ಕಬಿದರೆ, ದೊಡ್ಡಬಿದರೆ, ಪೋಚಕಟ್ಟೆ, ಬಳ್ಳೇಕಟ್ಟೆ ಹುಳಿಯಾರ್ ಹೀಗೆ ಹತ್ತಾರುಕಡೆ ಅರ್ಧ ಅಡಿಯಿಂದ ಒಂದು ಅಡಿಯವರೆಗೂ ಗುಂಡಿಗಳು ಬಿದ್ದಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ.
    ಪಟ್ಟಣ ವ್ಯಾಪ್ತಿಯ ತಾಲ್ಲೂಕು ಕಛೇರಿ, ಸಕರ್ಾರಿ ಆಸ್ಪತ್ರೆ, ಕೋಟರ್್, ಲೋಕೋಪಯೋಗಿ ಇಲಾಖೆ ಕಛೇರಿ ಮುಂಭಾಗ,ಜೋಗಿಹಳ್ಳೀ ಗೇಟ್,ತಾಲ್ಲೂಕು ಪಂಚಾಯ್ತಿ, ಪ್ರವಾಸಿ ಮಂದಿರ, ಶೆಟ್ಟಿಕೆರೆ ಗೇಟ್, ಎಂ.ಎಚ್.ಪಿ.ಎಸ್ ಶಾಲೆ ಮುಂಭಾಗ, ಕೆಎಸ್ಆರ್ಟಿಸಿ ನಿಲ್ದಾಣದ ಮುಂಭಾಗ, ನೆಹರು ಸರ್ಕಲ್, ಹುಳಿಯಾರ್ ಗೇಟ್ ಬಳಿ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದಿದ್ದು ಪ್ರಯಾಣಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಳೆದ ವರ್ಷವೂ ಇದೇ ರೀತಿ ಈ ಭಾಗದ ರಸ್ತೆಯಲ್ಲಿ ಗುಂಡಿಗಳು ಬಿದ್ದದ್ದು ರಾಷ್ಟ್ರೀಯ ಹೆದ್ದಾರಿ 150(ಎ) ಇಲಾಖೆ ರಸ್ತೆಗೆ ನಾಮಕಾವಸ್ತೆ ತೇಪೆ ಹಾಕಿ ಕೈ ಚೆಲ್ಲಿ ಕುಳಿತಿರುತ್ತದೆ. 
    20 ದಿನಗಳ ಹಿಂದಷ್ಟೇ ರೂ. 9 ಲಕ್ಷ ವ್ಯಚ್ಚದಲ್ಲಿ ರಸ್ತೆ ರಿಪೇರಿ ಕಾರ್ಯ ನಡೆದಿದೆ.ದುರಸ್ತಿ ಕಾರ್ಯ ಕಳಪೆ ಗುಣಮಟ್ಟದಿಂದಾಗಿ ಕಿತ್ತು ಹೋಗಿದೆ. ದುರಸ್ತಿಯಾದ 3 ದಿನಕ್ಕೆ ಗುಂಡಿ ಮುಚ್ಚಲು ಹಾಕಿದ್ದ ಡಾಂಬಾರ್ ಹಾಗೂ ಜೆಲ್ಲಿಕಲ್ಲುಗಳು ಕಿತ್ತು ಹೋಗಲು ಪ್ರಾರಂಭವಾಯಿತು.15 ದಿನಗಳ ಕಾಲ ಸತತವಾಗಿ ಸುರಿದ ಜಡಿಮಳೆಗೆ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದ್ದು ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.


ಬಾಲ್ಯದಿಂದಲೇ ಮಕ್ಕಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ : ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ :  ಬಾಲ್ಯದಿಂದಲೇ ಮಕ್ಕಳು  ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವೈಜ್ಞಾನಿಕ ಪ್ರಜ್ಞೆ ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಿಂದ ಗುರುವಾರ ಹೊರಟ ತಾಲ್ಲೂಕಿನ ಬಾಲ ವಿಜ್ಞಾನಿಗಳ ತಂಡಗಳಿಗೆ ಶುಭಕೋರಿ ಮಾತನಾಡಿದರು. ತಾಲ್ಲೂಕಿನಿಂದ ಮಕ್ಕಳ 6 ತಂಡಗಳು ಜಿಲ್ಲಾ ಮಟ್ಟದಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದರು.   ನ. 27ರಿಂದ ಬೆಳಗಾಂ ಜಿಲ್ಲೆಯ ಗೋಕಾಕ್ದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶಕ್ಕೆ ತಾಲೂಕಿನ ಬಾಲವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಈ ತಂಡದಲ್ಲಿ 6 ಮಾರ್ಗದಶರ್ಿ ಶಿಕ್ಷಕರು  ಜೊತೆಯಲ್ಲಿ 30 ಬಾಲ ವಿಜ್ಞಾನಿಗಳು ತೆರಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿಯರು ಮಂಡಿಸಿದ ಕಷಾಯದ ಉಪಯುಕ್ತತೆಗಳು, ಕುಪ್ಪೂರು ಶಾಲೆಯ ವಿದ್ಯಾಥರ್ಿಗಳು ಸಿದ್ದಪಡಿಸಿರುವ ಅಡವಿ ಸೊಪ್ಪಿನ ಮೇಲಿನ ಪ್ರಬಂಧ, ಹೆಸರಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳು ಸಿದ್ದಪಡಿಸಿರುವ ಚಂಡು ಹೂವಿನ ಮಹಾತ್ಮೆ ಕುರಿತ ಪ್ರಬಂಧ ನವೋದಯ ಶಾಲೆಯ ಮಕ್ಕಳು ಸಿದ್ದಪಡಿಸಿರುವ ತೆಂಗಿನ ಎಣ್ಣೆ ಮಹತ್ವ ಕುರಿತ ಪ್ರಬಂಧಗಳು ತುಮಕೂರಿನಲ್ಲಿ ನಡೆದ 23ನೇ  ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದವು, ಈ ಸಂದರ್ಭದಲ್ಲಿ  ತಾಲ್ಲೂಕು ವಿಜ್ಞಾನ  ಪರಿಷತ್ ಕಾರ್ಯದಶರ್ಿ ಈಶ್ವರಪ್ಪ, ಮಾರ್ಗದಶರ್ಿ ಶಿಕ್ಷಕರಾದ ಕೆ.ಎಸ್.ನಾಗರಾಜ್, ವಿಶ್ವೇಶ್ವರಯ್ಯ, ರಮೇಶ್, ಕೃಷ್ಣಮೂತರ್ಿ, ಭಾರತಿ, ದಿವ್ಯ ಮುಂತಾದವರು ಉಪಸ್ಥಿತರಿದ್ದರು.


ಕನಕ ಜಯಂತಿಗೆ ತಾಲ್ಲೂಕು ಆಡಳಿತ ತಯಾರಿ
ಚಿಕ್ಕನಾಯಕನಹಳ್ಳಿ,ನ.26 : ತಾಲ್ಲೂಕು ಆಡಳಿತ ಕನಕ ಯುವಕ ಸಂಘ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀಕನಕದಾಸರ ಜಯಂತೋತ್ಸವ ಸಮಾರಂಭ ನವಂಬರ್28 ರಂದು ಶನಿವಾರ ಮದ್ಯಾಹ್ನ 12.30ಕ್ಕೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ.
 ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮಮ್ಮ ಉದ್ಘಾಟಿಸುವರು. ಪುರಸಭಾ ಅಧ್ಯಕ್ಷೆ ಪ್ರೇಮದೇವರಾಜ್ ಕನಕದಾಸರ ಭಾವಚಿತ್ರ ಅನಾವರಣಗೊಳಿಸುವರು. ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ  ಸಂಶೋಧಕ ಡಾ.ರಾಮಲಿಂಗಪ್ಪ ಟಿ.ಬೇಗೂರು ಕನಕದಾಸರ ಕುರಿತು ಉಪನ್ಯಾಸ ನೀಡುವರು. ದಾಸ್ಕೆರೆ ಭಾಗವತ ರಂಗಪ್ಪ. ಹೊಯ್ಸಲಕಟ್ಟೆ ಸಾಮಾಜ ಸೇವಕ ರಾಮದಾಸಪ್ಪ, ಯಾದವ ಸಮಾಜದ ಅಧ್ಯಕ್ಷ ಶಿವಣ್ಣ, ಸಿ.ಕೆ.ಘನಸಾಬ್, ಕಂಬಳಿ ನೇಕಾರ ರಾಮಯ್ಯ, ಯಳನಡು ಪ್ರಗತಿಪರ ರೈತ ಮಹಿಳೆ ಸಿದ್ದರಾಮಕ್ಕ, ಸಿದ್ದರಾಮಯ್ಯ ಉಂಡಾಡಯ್ಯನವರ, ರಾಜಣ್ಣ ಪುರಿಭಟ್ಟಿ, ಪರಮೇಶ್ವರಯ್ಯ, ನಂದಿಹಳ್ಳಿ ಶಿವಣ್ಣ, ಹಂದನಕೆರೆ ಅನಂತಯ್ಯನವರನ್ನು  ಸನ್ಮಾನಿಸಲಾಗುವುದು.
ಕನಕ ದಾಸರ ಭಾವಚಿತ್ರವಿರುವ ಮೆರವಣಿಗೆಯನ್ನು ತಹಶೀಲ್ದಾರ್ ಗಂಗೇಶ್ ಉದ್ಘಾಟಸಲಿದ್ದು, ಉತ್ಸವದಲ್ಲಿ ಸ್ಥಳೀಯ ಜಾನಪದ ಕಲಾತಂಡಗಳೊಂದಿಗೆ ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸುವ ಪುರಷರ ಡೊಳ್ಳು ಕುಣಿತ, ಪಟ್ಟದ ಕುಣಿತ, ಮಹಿಳಾ ಡೊಳ್ಳು ಕುಣಿತ, ಗೊರವರ ಕುಣಿತ, ಮಹಿಳಾ ವೀರಗಾಸೆ, ನಾಸಿಕ್ ಡೋಲು, ಭಕ್ತ ಕನಕದಾಸರ ವೇಷಗಾರಿಕೆ, ಕನಕನ ಕಿಂಡಿ ದೃಶ್ಯಾವಳಿ, ಸಂಗೊಳ್ಳಿ ರಾಯಣ್ಣ ಸ್ಥಬ್ದಚಿತ್ರ, ಕವಿರತ್ನ ಕಾಳಿದಾಸ ಸ್ಥಬ್ದಚಿತ್ರ, ಪಾಳೇಗಾರರ ವೇಷ, ಕಂಬಳಿ ನೇಕಾರಿಕೆಯ ದೃಶ್ಯಾವಳಿಗಳು ಸೇರಿದಂತೆ ಇನ್ನೂ ಹಲವು ತಂಡಗಳು ಭಾಗವಹಿಲಿವೆ. 
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ. ತಾ.ಪಂ. ಉಪಾಧ್ಯಕ್ಷ ಎ.ನಿರಂಜನಮೂತರ್ಿ. ಪುರಸಭಾ ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ. ಜಿ.ಪಂ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ. ಲೋಹಿತಬಾಯಿ. ಹೆಚ್.ಬಿ ಪಂಚಾಕ್ಷರಯ್ಯ. ಎನ್.ಜಿ.ಮಂಜುಳ. ನಿಂಗಮ್ಮ. ಮಾಜಿ ಶಾಸಕರಾದ ಬಿ.ಲಕ್ಕಪ್ಪ. ಜೆ.ಸಿ ಮಾಧುಸ್ವಾಮಿ. ಕೆ.ಎಸ್.ಕಿರಣ್ಕುಮಾರ್. ರಾಜ್ಯ ಸಕರ್ಾರ ನೌಕರರ ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ. ಕನಕ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ್ ಮತ್ತಿತ್ತರರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.
    
   
No comments:

Post a Comment