Wednesday, January 6, 2016


ವಿದ್ಯುತ್ ಪರಿವರ್ತಕಕ್ಕೆ ಮರದ ಊರುಗೋಲೇ ಬೆಂಗಾವಲು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮಾಕುವಳ್ಳಿ ಗ್ರಾಮದ ಹತ್ತಿರವಿರುವ 100ಕೆ.ವಿ ವಿದ್ಯುತ್ ಪರಿವರ್ತಕವನ್ನು  ಎರಡು ವಿದ್ಯುತ್ ಕಂಬಕ್ಕೆ ಅಳವಡಿಸಿದ್ದು ಕಂಬಗಳು ಬಿರುಕುಬಿಟ್ಟುಕೊಂಡಿದ್ದು, ಮುರಿದು ಹೋಗುವ ಸ್ಥಿತಿಯಲ್ಲಿರುವ  ಪರಿಣಾಮ, ವಿದ್ಯುತ್ ಪರಿವರ್ತಕ ಅತಿ ಭಾರದಿಂದ ಕುಸಿಯುತ್ತದೆ ಎಂಬ ಭೀತಿಯಿಂದ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಮರದ ಊರುಗೋಲು ಇಟ್ಟು ಎರಡು ತಿಂಗಳಾಗಿದೆ. ಈ ಬಗ್ಗೆ ಇಲಾಖೆಗೆ ದೂರು ಕೊಟ್ಟರೂ ಇನ್ನೂ ಸರಿಪಡಿಸಿದ ವಿದ್ಯುತ್ ಇಲಾಖೆಯ ಮೇಲೆ ಗ್ರಾಮಸ್ಥರು ಹರಿಹಾಯುತ್ತಿದ್ದಾರೆ.
ಗ್ರಾಮದ ಹತ್ತಿರವಿರುವ 100.ಕೆ.ವಿ. ವಿದ್ಯುತ್ ಪರಿವರ್ತಕದಿಂದ ಒಟ್ಟು 7 ವಿದ್ಯುತ್ ಪರಿವರ್ತಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು,  ಗ್ರಾಮದ 180 ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ,  ಆಕಸ್ಮಿಕವಾಗಿ 100.ಕೆ.ವಿ ವಿದ್ಯುತ್ ಪರಿವರ್ತಕ ಕುಸಿದು ಬಿದ್ದರೆ ಈ ಭಾಗದ ರೈತರ ಜಮೀನಿನಲ್ಲಿರುವ ಪಂಪ್ಸೆಟ್ಗಳು ಹಾಗೂ ಮನೆಗಳ ಸಂಪರ್ಕ ಕಡಿತವಾಗಿ ಲಕ್ಷಾಂತರ ರೂಪಾಯಿ ನಷ್ಠವಾಗಲಿದೆ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದು,  ಸ್ಥಳಕ್ಕೆ ಭೇಟಿ ನೀಡಿ ಹೋದ ಅಧಿಕಾರಿಗಳು ಇಲ್ಲಿಯವರಿಗೂ ಕ್ರಮ ಕೈಗೊಂಡಿಲ್ಲವೆಂದು  ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ವಿದ್ಯುತ್ ಪರಿವರ್ತಕಕ್ಕೆ ಉತ್ತಮ ಕಂಬಗಳನ್ನು ಒದಗಿಸಿ ಜನ-ಜಾನುವಾರುಗಳ ಪ್ರಾಣ ಉಳಿಸುವಂತೆ ಗ್ರಾಮಸ್ಥರು ಸಂಬಂಧಿಸಿದ  ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. 
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾ.ಪಂ.ಸದಸ್ಯ ಲಿಂಗರಾಜು ಮಾತನಾಡಿ, ವಿದ್ಯುತ್ ಪರಿವರ್ತಕದ ಕಂಬ ಮುರಿದಿರುವ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಅಧಿಕಾರಿಗಳು ತಿಪಟೂರಿನಲ್ಲಿ ಎಸ್ಟಿಮೇಟ್ ಆಗಬೇಕು ನೀವೇ ಹೋಗಿ ಎಂದು ಹೇಳುತ್ತಾರೆ, ತಿಪಟೂರಿಗೂ ಊರಿನ ಗ್ರಾಮಸ್ಥರು ಸೇರಿ ಹೋದೆವು ಅಲ್ಲಿ  ಅಧಿಕಾರಿಗಳು ನಮಗೆ ಸ್ಪಂದಿಸುವುದಿಲ್ಲ, ಅಧಿಕಾರಿಗಳು  ಕಛೇರಿಯಲ್ಲಿದ್ದರೂ ನಮ್ಮ ಸಮಸ್ಯೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಗ್ರಾಮಸ್ಥ ಕುಮಾರಸ್ವಾಮಿ ಮಾತನಾಡಿ, ಕೆ.ಇ.ಬಿಗೆ ಹೋಗಿ ಊರಿನ ವಿದ್ಯುತ್ ಸಮಸ್ಯೆ ಬಗ್ಗೆ ಹಲವಾರು ಬಾರಿ ತಿಳಿಸಿದ್ದೇವೆ, ಯಾವ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥ ಚಂದ್ರಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಕಛೇರಿಗೆ ಹೋಗಿ ಸಮಸ್ಯೆ ಬಗ್ಗೆ ತಿಳಿಸಿದರೆ ವಾರದೊಳಗೆ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ ಆದರೆ ತಿಂಗುಳುಗಳು ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದರು.


ನವಂಬರ್ ತಿಂಗಳಿನಲ್ಲೇ ವಿದ್ಯುತ್ ಪರಿವರ್ತಕ ಮುರಿದಿರುವ ಬಗ್ಗೆ ಬೆಸ್ಕಾಂ ಸಹಾಯಕ ಇಂಜನಿಯರ್ರವರಿಗೆ ಕಛೇರಿಗೆ ಹೋಗಿ ತಿಳಿಸಿದರೂ ಯಾರೂ ಕೂಡ ಇತ್ತ ಗಮನ ಹರಿಸಿಲ್ಲ, ತಾತ್ಕಾಲಿಕವಾಗಿ ಇರಲಿ ಎಂದು ಗ್ರಾಮಸ್ಥರೇ ಸೇರಿ ಪರಿವರ್ತಕಕ್ಕೆ ಮರದ ಊರುಗೋಲನ್ನು ಸಹಾಯಕ್ಕೆ ನಿಲ್ಲಿಸಿದ್ದೇವೆ, ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಾದರೆ ಲೈನ್ಮೆನ್ ಕೂಡ ಬರುವುದಿಲ್ಲ, ಲೈನ್ಮೆನ್ಗೆ  ಈ ಬಗ್ಗೆ ಕೇಳಿದರೆ ಅಧಿಕಾರಿಗಳ ಬಳಿ ವಿಚಾರಿಸಿ ಎನ್ನುತ್ತಾರೆ ಎಂದು ದೂರಿದರು.
 (ಗ್ರಾಮಸ್ಥ ನಿಜಾನಂದಮೂತರ್ಿ 

ಶೆಟ್ಟಿಕೆರೆಯಲ್ಲಿ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.06 : ತಾಲ್ಲೂಕಿನ ಶೆಟ್ಟಿಕೆರೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದ್ದು ಮನೆಯಲ್ಲಿದ್ದ  1ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳರು ದೋಚಿದ್ದಾರೆ.
ಶೆಟ್ಟಿಕೆರೆವಾಸಿ  ಪ್ರಕಾಶ್ ಎಂಬುವವರು ಹೊಸದುರ್ಗಕ್ಕೆ ಸಂಬಂಧಿಕರ ಮನೆಗೆ ಕುಟುಂಬ ಸಮೇತರಾಗಿ ಮದುವೆಗೆ ಹೋದಾಗ ಈ ಕೃತ್ಯ ನಡೆದಿದೆ.  ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಧೃಡಪಡಿಸಿಕೊಂಡು, ಮಂಗಳವಾರ ರಾತ್ರಿ ಮನೆಯ ಮುಂಭಾಗದ ಬಾಗಿಲು ಹೊಡೆದು ಒಳನುಗಿರುವ ಕಳ್ಳರು ಮನೆಯಲ್ಲಿ 5ಚಿನ್ನದ ಉಂಗುರ, ಬೆಳ್ಳಿಯ ಒಡವೆಗಳು ಹಾಗೂ ನಗದು ದೋಚಿಕೊಂಡು  ಪರಾರಿಯಾಗಿದ್ದಾರೆ. ಚಿಕ್ಕನಾಯಕನಹಳ್ಳಿಯ ಉಪ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ಪತ್ರ ಬರಹಗಾರರಾಗಿರುವ ಪ್ರಕಾಶ್, ಪೊಲೀಸರಿಗೆ ದೂರು ನೀಡಿದ್ದಾರೆ. 
ಸ್ಥಳಕ್ಕೆ ಸಿಪಿಐ ಮಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂದಿಕೆರೆಯ ಗೌರಸಾಗರ ರಸ್ತೆ ಗುಂಡಿಗಳ ತಾಣ
ಚಿಕ್ಕನಾಯಕನಹಳ್ಳಿ06:  ಕಂದಿಕೆರೆ ಹೋಬಳಿಯ ಗೌರಸಾಗರ ರಸ್ತೆ ಹದಿನೈದು ವರ್ಷಗಳಿಂದ ಯಾವುದೇ ದುರಸ್ಥಿಯನ್ನೇ ಕಾಣದೆ,  ಗುಂಡಿಗಳಿಂದ ಕೂಡಿರುವ ರಸ್ತೆಯಿಂದ ಜನ ಬೇಸತ್ತು ಹೋಗಿದ್ದಾರೆ. 
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಗೌರಸಾಗರ, ಉಪಲೀಕನಹಳ್ಳಿ, ರಾಮಪ್ಪನ ಹಟ್ಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳು ದುರಸ್ಥಿಯನ್ನು ಕಾಣದೇ ಕೂಡಿದ್ದು ಸುಮಾರು 15ವರ್ಷದಿಂದ ಯಾವುದೇ ದುರಸ್ಥಿಯನ್ನು ಕಂಡಿಲ್ಲ.  ಈ ಗ್ರಾಮಗಳಿಗೆ ಒಂದ ಸುವ್ಯವಸ್ಥಿತವಾದ ರಸ್ತೆ ಇಲ್ಲದೇ ಪ್ರತಿದಿನ ವೃದ್ದರು, ಮಕ್ಕಳು, ಅಪಘಾತಕ್ಕಿಡಾಗುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ತಲೆಕೆಡಿಸಿಕೊಂಡಿಲ್ಲ ಈ ಬಗ್ಗೆ ಗ್ರಾಮಸ್ಥರು ಅನೇಕಬಾರಿ ಮನವಿ ಮಾಡಿರುವುದಾಗಿ ತಿಳಿಸಿದರು.
ಮಾಧ್ಯಮದೊಂದಿಗೆ  ಮಾತನಾಡಿದ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಜಯರಾಮಯ್ಯ ನಾವು ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಗ್ರಾಮಗಳಿಗೆ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲ ರಸ್ತೆಯು ಸರಿಯಾಗಿಲ್ಲ ರಸ್ತೆಯಲ್ಲಿ ನಡೆದು ಕೊಂಡು ಹೋಗಲು ಸಾದ್ಯವಾಗದಷ್ಟು ಹಾಳಾಗಿದ್ದು, ದ್ವಿಚಕ್ರ ವಾಹನದವರು, ಆಟೋದವರು ಪ್ರತಿನಿತ್ಯ ಹರಸಾಸಹ ಪಡುವಂತಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಸರಿಪಡಿಸ ಬೇಕೆಂದು ಒತ್ತಾಯಿಸಿದರು.
ಈ ಭಾಗದ ಕಂದಿಕೆರೆ ಗ್ರಾಮಪಂಚಾಯಿತಿ ಸದಸ್ಯ ಶಾನುವುಲ್ಲಾಖಾನ್ ಪ್ರತಿಕ್ರಿಯಿಸಿ ರಸ್ತೆಯ ದುರಸ್ಥಿಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ನಮ್ಮಊರು ನಮ್ಮ ರಸ್ತೆಯಡಿ ದುರಸ್ಥಿ ಮಾಡಿಸಿರುವುದಾಗಿ ತಿಳಿಸಿದರು.
ಗ್ರಾಮಸ್ಥ ಜಿ.ಹೆಚ್ ರಂಗಚಾರ್ ಮಾತನಾಡಿ ಪ್ರತಿನಿತ್ಯ ಯಾರಾದರೊಬ್ಬರು ಈ ರಸ್ಥೆಯಲ್ಲಿ ಬಿಳುತ್ತಲೇ ಇರುತ್ತಾರೆ ಯಾವುದಾದರು ತೊಂದರೆಯಾದರೆ ಇಲ್ಲಿಂದ ಮುಖ್ಯರಸ್ಥೆಯಾದ ಹುಳಿಯಾರು ರಸ್ತೆಗೆ ಇಲ್ಲವೇ ಕಂದಿಕೆರೆ ರಸ್ತೆಗೆ ಹೋಗಲು ಸುಮಾರು 1ಗಂಟೆಯಾಗುತ್ತದೆ ಅದ್ದರಿಂದ ಕೂಡಲೇ ಈ ರಸ್ಥೆಯನ್ನು ಸರಿಪಡಿಸ ಬೇಕು ಈ ಬಗ್ಗೆ ತಿಳಿಸಿದ್ದು ರಸ್ತೆ ದುರಸ್ಥಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದರು.

ಮಗಳ ಮದುವೆಯ ಮುನ್ನಾದಿನ ವಧುವಿನ ತಾಯಿ 


ಆತ್ಮಹತ್ಯೆ
ಚಿಕ್ಕನಾಯಕನಹಳ್ಳಿ06: ಮಗಳ ಮದುವೆಯ ಮುನ್ನಾದಿನ ವಧುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಮ್ಮನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಖಮರುನ್ನೀಸಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,  ಮಗಳ ಮದುವೆಯನ್ನು ತನ್ನ ತಂಗಿಯ ಮಗನ ಜೊತೆ ನಿಶ್ಚಿಯಿಸಿದ್ದರು, ಆದರೆ ವಧು ಬೀಬಿ ಆಯಿಷಾಳಿಗೆ ಒಪ್ಪಿಗೆ ಇಲ್ಲದಿದ್ದರಿಂದ ಮದುವೆಯ ವಿಷಯದಲ್ಲಿ ಕುಟುಂಬದಲ್ಲಿ ಉಂಟಾದ ಕಲಹದಿಂದ ಬೇಸತ್ತು ಖಮರುನ್ನೀಸಾ ವಿಷ ಸೇವಿಸಿದ್ದಾಳೆ.  
ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ ಈ ಸಂಬಂಧ ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No comments:

Post a Comment