Tuesday, February 16, 2016

ಶಾಸಕ ಸಿ.ಬಿ.ಸುರೇಶ್ಬಾಬುರವರ 46ನೇ ವರ್ಷದ ಹುಟ್ಟುಹಬ್ಬ ಆಚರಣೆ

ಚಿಕ್ಕನಾಯಕನಹಳ್ಳಿ : ವೈದ್ಯರ ನಡೆ ಹಳ್ಳಿಯ ಕಡೆಗೆ ಎಂಬ ಘೋಷಣೆಯನ್ನು ಸಮಾಜಕ್ಕೆ ನೀಡಿ ಐಕ್ಯರಾಗಿರುವ ಬಾಲಗಂಗಾಧರನಾಥಸ್ವಾಮಿಜಿಗಳ ಆಶಯದಂತೆ ನಮ್ಮ ಆಸ್ಪತ್ರೆ ನಡೆದುಕೊಳ್ಳುತ್ತಿದೆ ಎಂದು ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧೀಕ್ಷಕ ಡಾ.ಮನೋಹರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಹುಟ್ಟಹಬ್ಬದ ಅಂಗವಾಗಿ, ಕಿದ್ವಾಯಿ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ರೇಡಿಯೆಂಟ್ ಕ್ಯಾನ್ಸರ್ ಆಸ್ಪತ್ರೆ, ಕಾಲಭೈರವೇಶ್ವರ ಆಯುವರ್ೇದಿಕ್ ಆಸ್ಪತ್ರೆ ಹಾಗೂ ಸಿ.ಬಿ.ಸುರೇಶ್ಬಾಬು ವೆಲ್ಫೆರ್ ಟ್ರಸ್ಟ್ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
8ವರ್ಷಗಳಿಂದ ಸಿ.ಬಿ.ಸುರೇಶ್ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಚಿಕಿತ್ಸೆ ಹಾಗೂ ವೈದ್ಯಕೀಯ ಶಿಬಿರ ನಡೆಸುತ್ತಿದ್ದು ಈ ಶಿಬಿರದಲ್ಲಿ 75ಜನ ವೈದ್ಯರ ತಂಡ ಹಾಗೂ 40ಕ್ಕೂ ಹೆಚ್ಚು ಸೇವಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಇಲ್ಲಿ ಪರೀಕ್ಷೆಗೆ ಒಳಪಟ್ಟು ರೋಗದ ಲಕ್ಷಣಕಂಡವರಿಗೆ  ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿರುವುದೂ ಇದೆ, ಅದೇರೀತಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿದ್ದೇವೆ ಎಂದರು.
 ಶಿಬಿರದಲ್ಲಿ ಹೃದ್ರೋಗ ತಜ್ಞರು, ನರರೋಗ, ಮೂತ್ರಪಿಂಡ, ಮಧುಮೇಹ, ಇಎನ್ಟಿ,  ಮಕ್ಕಳ, ಕಣ್ಣಿನ, ಚರ್ಮರೋಗ ತಜ್ಞರು ಭಾಗವಹಿಸಿದ್ದಾರೆ ಎಂದರು, ಈ ಶಿಬಿರದಲ್ಲಿ ಸ್ಕ್ಯಾನಿಂಗ್, ಇ.ಸಿ.ಜಿ, ರಕ್ತಮೂತ್ರ ಪರೀಕ್ಷೆ ನೀಡಲಾಗುತ್ತಿದೆ ಹಾಗೂ ಉಚಿತವಾಗಿ ಔಷಧಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಧಮರ್ೇಂದ್ರ, ಮೈಸೂರಿನ ವಿಕ್ರಮ್ ಆಸ್ಪತ್ರೆಯ ರಮೇಶ್ಕುಮಾರ್, ಶಿವಕುಮಾರ್ ಮತ್ತಿತರರರು ಉಪಸ್ಥಿತರಿದ್ದರು.
ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ :  ಶಾಸಕ ಸಿ.ಬಿ.ಸುರೇಶ್ಬಾಬು  ಪಟ್ಟಣದ  ಸಕರ್ಾರಿ ಎನ್.ಬಿ. ಶಾಲೆ ವಿದ್ಯಾಥರ್ಿಗಳು ಹಾಗೂ  ಅಂಗನವಾಡಿ  ಮಕ್ಕಳ ಜೊತೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು, ನಂತರ ಮಕ್ಕಳಿಗೆ  ಸಮವಸ್ತ್ರ ವಿತರಿಸಿದರು. 
ಮಾಜಿ ಜಿ.ಪಂ.ಸದಸ್ಯ ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯ ರಾಜಶೇಖರ್, ಹೆಚ್.ಬಿ.ಪಪ್ರಕಾಶ್, ರವಿಚಂದ್ರ, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಸಿ.ಎಲ್.ದೊಡ್ಡಯ್ಯ, ಮುಖಂಡ ಪುಟ್ಟಣ್ಣ, ಚೇತನಗಂಗಾಧರ್, ಸಿ.ಎಂ.ರಮೇಶ್,  ನಿವೃತ್ತ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ಶೆಟ್ಟಿ, ಬಿಇಓ ಕೃಷ್ಣಮೂತರ್ಿ, ತಹಶೀಲ್ದಾರ್ ಗಂಗೇಶ್, ಎಸಿಡಿಪಿಒ ಪರಮೇಶ್ವರಪ್ಪ, ಮುಖಂಡ ಸಿ.ಎಸ್.ನಟರಾಜು, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ದೊರೆಮುದ್ದಯ್ಯ, ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಆಗಮಿಸಿ ಶಾಸಕರಿಗೆ ಪುಷ್ಪಗುಚ್ಚವನ್ನು  ನೀಡುವ ಮೂಲಕ ಹುಟ್ಟುಹಬ್ಬದ ಶುಭಾಷಯ ಕೋರಿದರು.
ಮಡಿಲು ತುಂಬವ ಕಾರ್ಯಕ್ರಮ ಟೀಕಿಸುವವರಿಗೆ ಟಾಂಗ್:  ಗಭರ್ಿಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದ ಆಶಯವನ್ನು  ತಿಳಿಯದ ಕೆಲವು ಮೂಡರು ಬೇರೆ ಅರ್ಥದಲ್ಲಿ ಅಥ್ರ್ಯಸುತ್ತಿದ್ದಾರೆ, ಮಡಿಲು ತುಂಬವ ಕಾರ್ಯಕ್ರಮ ಅಣ್ಣತಂಗಿಯರ ವಾತ್ಸಲ್ಯದ ಕಾರ್ಯಕ್ರಮ ಇದು ಸಕರ್ಾರಿ ಕಾರ್ಯಕ್ರಮವೂ ಆಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ  ಸಕರ್ಾರಿ ಫ್ರೌಢಶಾಲಾ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ 46ನೇ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಮಾತನಾಡಿ, ಕೇಂದ್ರ ಸಕರ್ಾರ ಗಣಿ ಪರಿಹಾರವಾಗಿ 10ಸಾವಿರ ಕೋಟಿ ರೂಗಳನ್ನು ಗಣಿಬಾಧಿತ ಪ್ರದೇಶಗಳಿಗೆ ತೆಗೆದಿಟ್ಟಿದೆ, ಹಣ ಬಿಡುಗಡೆಯಾದ ನಂತರ ಕೆ.ಬಿ.ಕ್ರಾಸ್ನಲ್ಲಿ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಶ್ರಮಿಸುವುದಾಗಿ ತಿಳಿಸಿದರು,  ಮನುಷ್ಯನಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯ, ಹಣವಿದ್ದಾಗ ಆರೋಗ್ಯವಿಲ್ಲದಿದ್ದರೆ ಏನೂ ಪ್ರಯೋಜನವಿಲ್ಲ ಎಂದರು.
ಈಗ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಸಕರ್ಾರಿ ಸೌಲಭ್ಯ ವಿತರಿಸಲಾಗುತ್ತಿಲ್ಲ, ನೀತಿ ಸಂಹಿತೆ ಮುಗಿದ ತಕ್ಷಣ ಸಕರ್ಾರ ನೀಡುವ ಸವಲತ್ತುಗಳನ್ನು ವಿತರಿಸಲಾಗುವುದು ಎಂದರಲ್ಲದೆ,  ಬಡವ, ಬಲ್ಲಿದ ಪಕ್ಷ ಬೇದ ಮರೆತು ಎಲ್ಲರಿಗೂ ಸಹಾಯ ಮಾಡುವುದಾಗಿ ತಿಳಿಸಿದರು,  ಸಕರ್ಾರ ಬಿಪಿಎಲ್ ಕಾಡರ್್ ಹೊಂದಿರುವ ಫಲಾನುಭವಿಗಳಿಗೆ 1.5ಲಕ್ಷದವರಗೆ ಶಸ್ತ್ರಚಿಕಿತ್ಸೆಗೆ ನೀಡಿದಂತೆ ಅನೇಕ ಸಲವತ್ತುಗಳನ್ನು ನೀಡುತ್ತಿದ್ದು ಇದನ್ನು ಉಪಯೋಗಿಸಿಕೊಂಡು ಆರೋಗ್ಯವಾಗಿರುವಂತೆ ಸಲಹೆ ನೀಡಿದರು.
ಈ ಸಮಯದಲ್ಲಿ ಡೆವರಿಗೆ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದಿಂದ ಉಚಿತ ಸ್ಮಾಟರ್್ ಕಾಡರ್್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸಂಶೋಧನ ಕೇಂದ್ರದ ಡಾ.ಮಂಜುನಾಥ್, ಡಾ.ಮನೋಹರ್, ಜೆಡಿಎಸ್ ಮುಖಂಡರುಗಳಾದ ಬೇವಿನಹಳ್ಳಿಚನ್ನಬಸವಯ್ಯ, ಬಿ.ಎನ್.ಶಿವಪ್ರಕಾಶ್, ಪ್ರೇಮದೇವರಾಜು, ರೇಣುಕಮ್ಮ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಸಿ.ಎಸ್.ನಟರಾಜು, ಕಲ್ಲೇಶ್, ಸಿ.ಎಸ್.ರಮೇಶ್, ಮಲ್ಲೇಶ್ಟಿಂಬರ್, ಮಹಮದ್ಖಲಂದರ್, ಸಿ.ಡಿ.ಚಂದ್ರಶೇಖರ್, ಸಿ.ಪಿ.ಚಂದ್ರಶೇಖರಶೆಟ್ಟಿ, ಇಂದಿರಾಪ್ರಕಾಶ್, ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment