Friday, February 26, 2016


ವೈದ್ಯರ ಮೇಲೆ ಹಲ್ಲೆಗೆ ವೈದ್ಯರ ಸಂಘ ಪ್ರತಿಭಟನೆ : ತಹಶೀಲ್ದಾರ್ಗೆ ಮನವಿ
ಚಿಕ್ಕನಾಯಕನಹಳ್ಳಿ : ಸಕರ್ಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಾ|| ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿದರು.
 ಸಕರ್ಾರಿ ಆಸ್ಪತ್ರೆಯಿಂದ ಹೊರಟ ವೈದ್ಯರು ಹಾಗೂ  ಸಿಬ್ಬಂದಿ, ಬಿ.ಹೆಚ್ ರಸ್ತೆ ಮೂಲಕ  ನೆಹರು ವೃತ್ತ ಹಾದು  ತಾ|| ಕಛೇರಿಗೆ ತೆರಳಿ,  ಹಲ್ಲೆ ಮಾಡಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಸ್ಪತ್ರೆಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯರ ಸಂಘದ ಅಧ್ಯಕ್ಷ ಡಾ.ಜಗದೀಶ್, ಇದೇ 22ರಂದು ಸಂಜೆ 5.30ರ ಸುಮಾರಿನಲ್ಲಿ ಪಟ್ಟಣದ ತಾಲೂಕು ಪಂಚಾಯ್ತಿ ಕಛೇರಿ ಮುಂಭಾಗ,  ಬೋರ್ವೆಲ್  ಏಜಂಟ್ ಶಂಕರಪ್ಪ ಎನ್ನುವವರಿಗೆ ಅಪಘಾತವಾಗಿತ್ತು. ಆಗ ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿಲಾಯಿತು.  ಹೆಚ್ಚಿನ ಚಿಕಿತ್ಸೆ ನೀಡಲು ಜಿಲ್ಲಾ ಕೇಂದ್ರ ಆಸ್ಪತ್ರೆಗೆ  ಹೋಗುವಂತೆ ಸೂಚಿಸಿದ ಸಂದರ್ಭದಲ್ಲಿ  ಆಂಬುಲೆನ್ಸ್ ಇಲ್ಲದ ಕಾರಣ ಖಾಸಗಿ ವಾಹನದಲ್ಲಿ  ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾಗ, ಆ ಸಂದರ್ಭದಲ್ಲಿ  ಕೆಲವು ಕಿಡಿಗೇಡಿಗಳು ವೈದ್ಯರ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಅವರನ್ನು ಕೂಡಲೇ ಬಂಧಿಸುವಂತೆ   ಆಗ್ರಹಿಸಿದರು.
  ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ರವಿಕುಮಾರ್ ಮಾತನಾಡಿ,   ಆಸ್ಪತ್ರೆಯಲ್ಲಿ 2 ಆಂಬುಲೆನ್ಸ್ಗಳಿವೆ 6 ಜನ ವಾಹನ ಚಾಲಕರಿರಬೇಕಾದ ಜಾಗದಲ್ಲಿ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ,  ಆದರೂ ಮಾನವೀಯ ದೃಷ್ಠಿಯಿಂದ ನಗುಮಗು ವಾಹನವನ್ನು ತುಮಕೂರು ಜಿಲ್ಲಾ  ಆಸ್ಪತ್ರೆಗೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಳುಹಿಸಿದ್ದರೂ ನನ್ನ ಮೇಲೆ ಹಲ್ಲೆ ಮಾಡಲು ಬಂದಾಗ ಸಿಬ್ಬಂದಿಯಾದ ನರಸಿಂಹಮೂತರ್ಿ ನನ್ನನ್ನು ಕಾಪಾಡಲು ಬಂದಾಗ ಆತನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದರು.
ವೈದ್ಯಾಧಿಕಾರಿಗಳಾದ ಶಿವಕುಮಾರ್, ಡಾ.ಪ್ರೇಮಕುಮಾರಿ, ಡಾ.ಜಗದೀಶ್, ಡಾ.ಶಂಕರೇಗೌಡ, ಡಾ.ಶಶಿರೇಖಾ, ಡಾ.ರಂಗನಾಥ್, ಡಾ.ಗಣೇಶ್, ಡಾ.ಮಧು, ಡಾ.ಸಿ.ಜಿ.ಮಲ್ಲಿಕಾರ್ಜನ್,  ಡಾ.ಪ್ರಶಾಂತ್ಕುಮಾರ್ಶೆಟ್ಟಿ, ಡಾ.ಭಾಸ್ಕರ್ಹೆಗ್ಡೆ, ಡಾ.ರವಿಕುಮಾರ್ ಮಮತ, ಅನಿತ, ಸುನಿತ, ಶಾರದ, ವಿಮಲ, ನರಸಿಂಹಮೂತರ್ಿ, ಮತ್ತಿತರರು ಉಪಸ್ಥಿತರಿದ್ದರು.

ಪಡಿತರ ವಿತರಿಸುವ ಕಾರ್ಯಕ್ಕೆ ರಾಜಕೀಯ ಸೇರ್ಪಡೆ, ಪೋಲಿಸರ ಮಧ್ಯಸ್ಥಿಕೆಯಿಂದ ಪಡಿತರ ವಿತರಣೆ
ಚಿಕ್ಕನಾಯಕನಹಳ್ಳಿ,ಫೆ.26 : ಪಡಿತರ ವಿತರಿಸುವ ಕಾರ್ಯಕ್ಕೆ ರಾಜಕೀಯ ಬೆರೆತು, ಸಾರ್ವಜನಿಕರಿಗೆ ಪಡಿತರ ವಿತರಿಸುವ ಕಾರ್ಯಕ್ಕೆ ತೊಂದರೆಯುಂಟಾಗಿದ್ದ ಸಂದರ್ಭದಲ್ಲಿ  ತಹಶೀಲ್ದಾರ್ ಹಾಗೂ ಪೋಲಿಸರ ಮಧ್ಯಸ್ಥಿಕೆಯಲ್ಲಿ ಪಡಿತರ ವಿತರಿಸಲಾಯಿತು.
ತಾಲ್ಲೂಕಿನ ಹೊನ್ನೆಬಾಗಿಯಲ್ಲಿ ಪಡಿತರ ವಿತರಿಸುವ ಸಂಬಂಧ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಮಾತಿನ ಚಕಮಕಿಗಳು ನಡೆಯುತ್ತಿತ್ತು ಇದರಿಂದ ಸಾರ್ವಜನಿಕರು ಪಡಿತರ ಪಡೆಯುವುದಕ್ಕೆ ಹರಸಾಹಸ ಪಡಬೇಕಾಯಿತು.
ಹೊನ್ನೆಬಾಗಿಯ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ, ಪಡಿತರ ಚೀಟಿಯನ್ನು ವಿತರಿಸುವ ಸಂಬಂಧ ಎರಡು ಗುಂಪುಗಳಾಗಿ ಮಾರ್ಪಟ್ಟು, ಒಂದು ಗುಂಪು ಹೇಳುವುದನ್ನು ಮತ್ತೊಂದು ಗುಂಪು ವಿರೋಧಿಸುವ ಮೂಲಕ  ರಾಜಕೀಯ ಬಣ್ಣ ಪಡೆದು ಎರಡು ಗುಂಪುಗಳ ನಡುವೆ  ಮಾತಿನ ಚಕಮಕಿ ನಡೆಯಿದು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಒಂದು ಗುಂಪು ಪಡಿತರ ಇಲ್ಲದಿರುವ ಸಾರ್ವಜನಿಕರಿಗೆ ಪಡಿತರ ಚೀಟಿ ನೀಡುವವರೆಗೂ ಪಡಿತರ ವಿತರಿಸುವುದು ಬೇಡ ಎಂದು ಕೊಠಡಿಗೆ ಬೀಗ ಜಡಿದಿತ್ತು, ಬಿಜೆಪಿಯ ಮತ್ತೊಂದು ಗುಂಪು ಪಡಿತರ ಸಾರ್ವಜನಿಕರಿಗೆ ದಿನನಿತ್ಯ ಬಳಕೆಯ ವಸ್ತುಗಳಾಗಿದ್ದು ಸಾರ್ವಜನಿಕರಿಗೆ ಅಗತ್ಯವಾಗಿದ್ದು ಅವರಿಗೆ ಪಡಿತರ ನೀಡಿ, ನಾಳೆ ದಿನ ನಾವೂ ಕೂಡ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟಿಸಿ ಪಡಿತರ ವಿತರಿಸುವಂತೆ ಒತ್ತಾಯಿಸುತ್ತೇವೆ ಎಂದು ಹೇಳುತ್ತಿದ್ದರು ಈ ವೇಳೆ ಇಬ್ಬರಲ್ಲೂ ಮಾತಿನ ಘರ್ಷಣೆ ನಡೆಯುತ್ತಿತ್ತು, ಪೋಲಿಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಣ್ಣಗಾಯಿತು. 
ಹೊನ್ನೆಬಾಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿತ್ತು, ಜೆಡಿಎಸ್ ಪಕ್ಷ ಸಮೀಪದಲ್ಲಿ ಸೋಲನ್ನು ಅನುಭವಿಸಿತ್ತು. ಈ ಕಾರಣವೇ ಎರಡೂ ಪಕ್ಷಗಳಲ್ಲಿ ಮಾತಿನ ಚಕಮಕಿಗೆ ಕಾರಣವಾಗಿದೆ.
ಕೋಟ್-1
ಕಳೆದ 24ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಿದ್ದರಿಂದ ಯಾರೊಬ್ಬರಿಗೂ ಪಡಿತರ ಕಾಡರ್್ ವಿತರಿಸಲಾಗಿತ್ತು, ಈಗ ಚುನಾವಣೆ ಮುಗಿದಿದೆ ಹೊನ್ನೆಬಾಗಿಯಲ್ಲಿ ಎಷ್ಟು ಜನರಿಗೆ ಕಾಡರ್್ ವಿತರಿಸ ಬೇಕಾಗಿದೆ ನಮಗೆ ಮಾಹಿತಿ ನೀಡಿದರೆ ಒಂದ ವಾರದೊಳಗೆ ಪಡಿತರ ಕಾಡರ್್ ವಿತರಿಸುತ್ತೇವೆ. : ತಹಶೀಲ್ದಾ

ರಾಜ್ಯ ಸಕರ್ಾರಿ ನೌಕರರ ಸಂಘದ  ಪ್ರತಿಭಟನೆ : ತಹಶೀಲ್ದಾರ್ಗೆ ಮನವಿ
ಚಿಕ್ಕನಾಯಕನಹಳ್ಳಿ,ಫೆ.26 : ಕೇಂದ್ರ ಸಕರ್ಾರ ನೀಡಿರುವ 6ನೇ ವೇತನ ಆಯೋಗದ ವರದಿಯನುಸಾರ ರಾಜ್ಯ ಸಕರ್ಾರ ನೀಡಿರುವ ವೇತನ ಬಡ್ತಿಯಲ್ಲಿ ಕನಿಷ್ಟಶೇ.20 ರಿಂದ ಗರಿಷ್ಟ ಶೇ.86 ವ್ಯತ್ಯಾಸಗಳು ಸರಿಪಡಿಸಿ 7ನೇ ವೇತನ ಆಯೋಗದಲ್ಲಿ ವರದಿ ಅನುಸಾರ ಕೇಂದ್ರ ಸಕರ್ಾರದ ಮಾದರಿಯಲ್ಲಿಯೇ ಸರಿಸಮಾನದ ವೇತನ, ಭತ್ಯೆಗಳನ್ನು ನೀಡಬೇಕು ಇಲ್ಲದಿದ್ದರೆ ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಸಕರ್ಾರಿ ನೌಕರರು, ಕಂದಾಯ ಇಲಾಖೆ ನೌಕರರು, ಉಪನ್ಯಾಸಕರು ಸೇರಿದಂತೆ ವಿವಿಧ ಇಲಾಖೆ ನೌಕರರು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಕರ್ಾರಿ ನೌಕರರಲ್ಲಿ ಯಾವುದೇ ತಾರತಮ್ಯವಿಲ್ಲದೆ ನಿರಂತರ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ, ಸಮಾನ ಕೆಲಸಕ್ಕೆ ಸಮಾನ ವೇತನ ಪ್ರತಿಪಾದಿಸಿರುವ ರಾಜ್ಯ ಸಕರ್ಾರಿ ನೌಕರರಿಗೆ ಕೇಂದ್ರ ಸಕರ್ಾರದ ಮಾದರಿಯಲ್ಲಿ ನೀಡಿರುವ ವೇತನವನ್ನು ರಾಜ್ಯ ಸಕರ್ಾರ ನಿರ್ವಹಿಸಿಲ್ಲ, ನ್ಯಾಯ ಸಮ್ಮತವಾಗಿರುವ ಈ ಬೇಡಿಕೆಯನ್ನು ರಾಜ್ಯ ಸಕರ್ಾರ ಪೂರೈಸಬೇಕು 5ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುವ ಸಚಿವ ಸಂಪುಟ ಉಪಸಮಿತಿಗಳು ರಾಜ್ಯ ಸಕರ್ಾರಿ ನೌಕರರ ಬಗ್ಗೆ ಅವೈಜ್ಞಾನಿಕ ಸಿದ್ದಾಂತಗಳನ್ನು ಅನುಸರಿಸಿ ವೇತನ ಮತ್ತು ಭತ್ಯೆಗಳನ್ನು ಮಂಜೂರು ಮಾಡುವಲ್ಲಿ ವಿಫಲವಾಗಿದೆ, 6ನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನಗೊಳಿಸುವಲ್ಲಿ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಬದ್ದವಾಗಿಬೇಕು, 2016-17ನೇ ಸಾಲಿನಲ್ಲಿ ಅಯವ್ಯಯದಲ್ಲಿ ಈ ನೌಕರರ ಬೇಡಿಕೆಯನ್ನು ಈಡೇರಿಸುವ ಸ್ಪಷ್ಪ ನಿಲುವನ್ನು ತಾಳಬೇಕಾಗಿದೆ, ಇಂದಿಗೂ ಕನಿಷ್ಠ ಶೇ.21.51 ರಿಂದ ಗರಿಷ್ಠ ಶೇ.86-39ರವರೆಗೆ ವೇತನ ಹಾಗೂ ಭತ್ಯೆಗಳಲ್ಲಿ ರಾಜ್ಯ ಸಕರ್ಾರಿ ನೌಕರರಿಗೆ ಆಗಿರುವ ವ್ಯತ್ಯಾಸಗಳನ್ನು ಆಯೋಗದ ಮೂಲಕ ಶಿಫಾರಸ್ಸು ಮಾಡಿ ಅನುಷ್ಠಾನಗೊಳಿಸಬೇಕು ಎಂದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಈರಣ್ಣ, ಗಂಗಾಧರ್, ರವಿಕುಮಾರ್, ಅಜಯ್, ರಮೇಶ್, ಪ್ರತಾಪ್, ಮಧು, ಡಿ.ನಾಗರಾಜು, ಎಂ.ಎಸ್.ರಾಜಶೇಖರ್, ಅಂಬುಜ, ವನಜಾಕ್ಷಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

                         ಮಾತೃಭಾಷೆ ಅರ್ಥವಾಗುವಷ್ಟು ಬೇರೆ ಬಾಷೆ ಅರ್ಥವಾಗುವುದಿಲ್ಲ : ನ್ಯಾಯಾಧೀಶ ಎನ್.ಆರ್.ಲೋಕಪ್ಪ
ಚಿಕ್ಕನಾಯಕನಹಳ್ಳಿ,ಫೆ.26 : ಹಲವಾರು ಭಾಷೆಗಳಿಗೆ ಲಿಪಿಯೇ ಇಲ್ಲ ಆದರೂ ಅವರವರ ಮಾತೃ ಭಾಷೆಗಳನ್ನು ತಾಯಿ ಪ್ರೀತಿಯಂತೆ ಮಾತನಾಡುವುದರಿಂದಲೇ ಮಾತೃಭಾಷೆಯಲ್ಲಿ ಅರ್ಥವಾಗುವಷ್ಟು ಪದಗಳು ಬೇರೆ ಭಾಷೆಗಳಲ್ಲಿ ತಿಳಿಯುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಆರ್ ಲೋಕಪ್ಪ ಹೇಳಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ರೋಟರಿ ಆಂಗ್ಲ ಹಿರಿಯ ಪ್ರಾಥಮಿಕ, ಪ್ರೌಡಶಾಲೆ, ವಕೀಲರ ಸಂಘದ ವತಿಯಿಂದ ನಡೆದ ವಿಶ್ವ ಜಾಗೃತಿಕ ಮಾತೃ ಭಾಷೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವಾದ್ಯಂತ ಫೆಬ್ರವರಿ 21ರಂದು ಮಾತೃಭಾಷೆ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ, ಮಾತೃಭಾಷೆಗೆ ಪ್ರತಿಯೊಬ್ಬರು ತನ್ನದೇ ಆದ ವಿಶಿಷ್ಠ ಸ್ಥಾನ ನೀಡಿರುತ್ತಾರೆ, ನೆಲ, ಜಲ, ತಾಯಿಗೆ ಕೊಟ್ಟಷ್ಟೇ ಸ್ಥಾನವನ್ನು ಮಾತೃ ಭಾಷೆಗೆ ನೀಡಿ ಗೌರವಿಸುವ ಬೇಕಾಗಿದೆ ಎಂದರು.
ವಕೀಲ ಸಿ.ರಾಜಶೇಖರ್ ಮಾತನಾಡಿ, ತಾಯಿಯಿಂದ ಮಗುವಿಗೆ ಬರುವ ಮೊದಲ ಮಾತೇ ಮಾತೃ ಭಾಷೆಯಾಗಿದೆ, ಮಾತೃ ಭಾಷೆಗೆ ಪ್ರತಿಯೊಂದು ರಾಷ್ಟ್ರದಲ್ಲೂ ವಿಶೇಷ ಸ್ಥಾನವಿದೆ, ಜನರಲ್ಲಿ ಮಾತೃಭಾಷೆಗಿಂತ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅನ್ಯಭಾಷಾ ವ್ಯಾಮೋಹ ಹೆಚ್ಚುತ್ತಿದೆ, ಅಂತರಾತ್ಮದಿಂದ ಬರುವಂತಹ ನೋವು, ನಲಿವುಗಳನ್ನು ಹಂಚಿಕೊಳ್ಳಲು ಮಾತೃಭಾಷೆಯೇ ಹೆಚ್ಚಿನ ಮಹತ್ವ ಹೊಂದುತ್ತದೆ ಎಂದರಲ್ಲದೆ ನಮ್ಮಗಳ ಮಾತೃಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದರು.
ಅನ್ಯಭಾಷೆಯಲ್ಲಿ ಕಂಠಪಾಠ ಮಾಡಿದರೆ ಮಾತ್ರ ಹಚ್ಚಿನ ಅಂಕಗಳಿಸಬಹುದು ಆದರೆ ಮಾತೃಭಾಷೆಯಲ್ಲಿ ತಿಳಿದುಕೊಂಡರೆ ಸೃಜನಶೀಲತೆಯನ್ನೂ ಪಡೆಯಬಹುದು, ಜನತೆ ಕೀಳರಿಮೆ ತೊರೆದು ಮಾತೃಭಾಷೆಗೆ ಗೌರವ ನೀಡುವಂತೆ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಬಿ.ಕೆ.ಮಂಜುನಾಥ್ ಮಾತನಾಡಿ, ತಮ್ಮಗಳ ಭಾವನೆಯನ್ನು ವ್ಯಕ್ತಪಡಿಸುವುದೇ ಮಾತೃಭಾಷೆ, ಭಾರತದಾದ್ಯಂತೆ 240 ಮಾತೃಭಾಷೆಗಳಿವೆ, ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಠ ಭಾರತವಾಗಿದ್ದು ವಿಶ್ವದಲ್ಲಿ ತನ್ನದೇ ಆದ ವಿಶಿಷ್ಠ ಸ್ಥಾನಮಾನ ಹೊಂದಿದೆ, ಭಾರತದಲ್ಲಿನ ಅಜ್ಜ, ಅಜ್ಜಿ, ಅಮ್ಮ, ಅಪ್ಪ ಇವುಗಳ ಬಾಂದವ್ಯಗಳನ್ನು ಹೊಂದಿರುವ ಭಾರತರಾಷ್ಟ್ರದಲ್ಲಿ ಸಂಸ್ಕೃತಿಯ ತಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಪ್ರಕಾಶ್ನಾಯಕ್, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಅಧ್ಯಕ್ಷ ಕರಿಯಣ್ಣ, ವಕೀಲರಾದ ರತ್ನರಂಜಿನಿ, ರವಿಕುಮಾರ್, ರೋಟರಿ ಶಾಲಾ ಸಂಸ್ಥೆಯ ಚಾಂದ್ಪಾಷ ಮತ್ತಿತರರು ಉಪಸ್ಥಿತರಿದ್ದರು.




 

No comments:

Post a Comment