Wednesday, April 6, 2016


ಜಮೀನು ಬಿಟ್ಟುಕೊಟ್ಟ ರೈತರಿಗೆ ಸಚಿವರಿಂದ ಪರಿಹಾರದ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ, :  ತಾಲ್ಲೂಕಿನ 24 ಕೆರೆಗಳಿಗೆ ನೀರು ಹಾಯಿಸುವ ಬಹು ನಿರೀಕ್ಷಿತ ಹೇಮಾವತಿ ನಾಲಾ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ 28 ರೈತರಿಗೆ ಪರಿಹಾರದ ಚಕ್ ವಿತರಣೆಯಾಗುವ ಕಾಮಗಾರಿ ಪುನರಾರಂಭವಾಗುವ ಹಾಗೂ ರೈತರಿಗೆ ನ್ಯಾಯ ದೊರಕುವ ಭರವಸೆ ಮೂಡಿತು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಬುಧವಾರ ಕಂದಾಯ ಅದಾಲತ್ ಮಾದರಿಯಲ್ಲಿ ಹೇಮಾವತಿ ನಾಲೆಗೆ ಜಮೀನು ನೀಡಿರುವ 28 ರೈತರಿಗೆ ಮೊದಲ ಹಂತದ ಭಾಗವಾಗಿ ರೂ.1.75ಕೋಟಿ ಮೊತ್ತದ ಪರಿಹಾರ ಚೆಕ್ ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಿದ್ಧರಾಮಯ್ಯ ಸಕರ್ಾರ 73 ಕಿಮೀ ಹೇಮಾವತಿ ನಾಲೆಯ ಅಗಲೀಕರಣಕ್ಕಾಗಿ ರೂ.563 ಕೋಟಿ ಹಣವನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಿದೆ. 6ತಿಂಗಳ ಗಡುವು ಇಟ್ಟುಕೊಂಡು ಕಾರ್ಯ ಆರಂಭವಾಗಿದ್ದು ಜೂನ್ ಕೊನೆಯ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ, ಇದು ಕನರ್ಾಟಕದ ಚರಿತ್ರೆಯಲ್ಲೇ ಮೊದಲು ಎಂದರಲ್ಲದೆ ಕಳೆದ 40 ವರ್ಷಗಳ ಹಿಂದೆ ಚಿಕ್ಕನಾಯಕನಹಳ್ಳಿ ಸಮೃದ್ಧ ತಾಲ್ಲೂಕು ಆಗಿತ್ತು. ಈಗ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ಅಂತರ್ಜಲ ಅಪಾಯದ ಮಟ್ಟ ತಲುಪಿದೆ.  ಪ್ಲೋರಾಸಿಸ್ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಕಾರಣ ಎಂದರು.
   ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 25.ಟಿ.ಎಮ್.ಸಿ ನೀರಿನ ಲಭ್ಯವಿದೆ. ಆದರೆ  18ರಿಂದ19 ಟಿಎಂಸಿ ಮಾತ್ರ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ. ಹೇಮಾವತಿ ಅಣೆಕಟ್ಟೆಯ ಸಂಗ್ರಹ ಸಾಮಥ್ರ್ಯ 65ಟಿ.ಎಂ.ಸಿ ಆದರೆ 85ಟಿಎಂಸಿ ವರೆಗೂ ನೀರು ಸಂಗ್ರಹ ವಾಗುತ್ತದೆ. ಇದರಲ್ಲಿ ಹಾಸನದ ಪಾಲು 18ರಿಂದ19 ಟಿಎಂಸಿ ಆದರೆ 40ಟಿಎಂಸಿ ವರೆಗೂ ಹಾಸನ ಜಿಲ್ಲೆ ಬಳಸಿಕೊಳ್ಳುತ್ತಿದೆ.ಹೆಚ್ಚುವರಿ 20ಟಿಎಂಸಿ ನೀರು ತುಮಕೂರು ಜನರ ಹಕ್ಕು ಎಂದ ಅವರು ರಾಜ್ಯ ಸಕರ್ಾರ ರೈತರಿಂದ ಕೊಬ್ಬರಿಯನ್ನು ನಫೆಡ್ ಮೂಲಕ ಖರೀದಿಸುತ್ತಿದ್ದು 30ರಿಂದ 40ಕೋಟಿ ನಷ್ಟವಾದರೂ ಸಹ ರೈತರ ಹಿತ ರಕ್ಷಣೆಗೆ ಮಧ್ಯೆ ಪ್ರವೇಶಿಸುತ್ತಿದೆ ಎಂದರು.
ಅನುಮಾನ ಬೇಡ: ಪರಿಹಾರದ ಹಣ ಸಿಗುವುದೋ ಇಲ್ಲವೋ ಎಂಬ ಅನುಮಾನ ರೈತರಲ್ಲಿ ಇದೆ.ಯಾವುದೇ ಕಾರಣಕ್ಕೂ ಅನುಮಾನ ಬೇಡ.ಗಡಬನಹಳ್ಳಿಯಿಂದ ಸಾಸಲು ಕೆರೆವರೆಗೆ ನಾಲೆ ನಿಮರ್ಾಣಕ್ಕೆ 150 ಎಕರೆ ಜಮೀನು ಬೇಕು.ಪರಿಹಾರಕ್ಕಾಗಿ ರೂ.25ಕೋಟಿ ಅಗತ್ಯವಿದೆ.ಈಗ ಹಣ ಹಾಗೂ ಕಾನೂನಿನ ತೊಡಕಿಲ್ಲ ಜಮೀನು ಬಿಟ್ಟುಕೊಟ್ಟ 15ದಿನಗಳ ಒಳಗಾಗಿ ಪರಿಹಾರ ನಿಮ್ಮ ಕೈ ಸೇರುತ್ತದೆ.ಬೇರೆ ಯಾರ ಮಾತನ್ನೂ ಕೇಳಬೇಡಿ ನನ್ನ ಮೇಲೆ ಭರವಸೆ ಇಡಿ ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸಕರ್ಾರದ ಮೇಲೆ ರೈತರ ನಂಬಿಕೆಯನ್ನು ಉಳಿಸಿಕೊಳ್ಳು ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಗುತ್ತಿದೆ. ಯೋಜನೆಗೆ 700 ರೈತರ ಜಮೀನು ಕಳೆದುಕೊಳ್ಳುತ್ತಿದ್ದಾರೆ, ಕಾನೂನಿನ ತೊಡಕು ದೂರವಾಗಿದ್ದು ಎಲ್ಲರಿಗೂ ಪರಿಹಾರ ದೊರೆಯುತ್ತದೆ. ಪರಿಹಾರ ನಿಗಧಿ ಮಾಡುವಾಗ ಅಧಿಕಾರಿಗಳು ಸ್ವಲ್ಪ ಉದಾರತೆ ತೋರಿ ಎಂದ ಅವರು    ತೆಂಗು ಬೆಳೆಗಾರರ ಪರಿಸ್ಥಿತಿಯನ್ನು ಕೇಂದ್ರಕ್ಕೆ ವರದಿ ಮಾಡಿರುವ ಗೋರಕ್ ಸಿಂಗ್ ವರದಿ ಅವೈಜ್ಞಾನಿಕವಾಗಿದೆ, ಕನರ್ಾಟಕದ ತೆಂಗು ಬೆಳೆಗಾರರಿಗೆ ಕೆರಳ ಮಾದರಿಯಲ್ಲಿ ಯೋಜನೆಗಳನ್ನು ರೂಪಿಸಬೇಕು, ಕೊಬ್ಬರಿಗೆ ಕ್ವಿಂಟಾಲ್ಗೆ ರೂ.10ಸಾವಿರ ಕನಿಷ್ಟ ಬೆಲೆ ಘೋಷಿಸಬೇಕು ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಜಮೀನು ಬಿಟ್ಟು ಕೊಟ್ಟ ಗೋಪಾಲನಹಳ್ಳಿ ಹಾಗೂ ಸಾಸಲು ಗ್ರಾಮಗಳ 48 ರೈತರಿಗೆ ಹಣ ಬಿಡುಗಡೆಯಾಗಿದೆ, 28 ರೈತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ, ಇನ್ನು ಕೆಲವು ರೈತರ ಸರಿಯಾದ ದಾಖಲೆಗಳನ್ನು ನೀಡದ ಕಾರಣ ಚಕ್ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು ನೀರು ಹರಿಯುವ ಭಾಗದಲ್ಲಿನ ರೈತರು ಹೇಮಾವತಿ ನಾಲೆಗಾಗಿ ಜಮೀನು ಬಿಟ್ಟುಕೊಟ್ಟರೆ ಮಂಡ್ಯ ಭಾಗದಲ್ಲಿ ಬೆಳೆಯುವ ಬೆಳೆಯಂತೆ ಇಲ್ಲಿಯೂ ಉತ್ತಮ ಫಸಲು ಬೆಳೆಯಬಹುದು ಎಂದರು.
   ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪಕ್ಷ ಬೇಧ ಮರೆತು ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ, ಹೇಮಾವತಿ ನಾಲಾ ಕಾಮಗಾರಿ ಈಗಾಗಲೇ ತಡವಾಗಿದೆ, ರೈತರು ಜಮೀನುಗಳನ್ನು ಬಿಟ್ಟುಕೊಟ್ಟು ಕಾಮಗಾರಿ ಪ್ರಾರಂಭವಾಗಲು ಅನುವು ಮಾಡಿಕೊಂಡಿ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ ಎಂದರು. 
ವಿಶೇಷ ಭೂಸ್ವಾಧಿನಾಧಿಕಾರಿ ಆರತಿ ಆನಂದ್ ಪ್ರಾಸ್ತವಿಕ ನುಡಿಗಳನ್ನಾಡಿ ಈ ಭಾಗದ ರೈತರ ಆಳಲನ್ನು ನೋಡಿ ಯುಗಾದಿಯ ಹಬ್ಬದ ಕೊಡುಗೆಯ ರೂಪದಲ್ಲಿ ಈ ಪರಿಹಾರದ ಚೆಕ್ನ್ನು ವಿತರಿಸುತ್ತಿದ್ದು ಇನ್ನು 65ಎಕರೆ ಜಮೀನಿನ 9ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡ ಬೇಕಿದೆ ಎಂದ ಅವರು ರೈತರು ಯಾವುದೇ ಮದ್ಯವತರ್ಿಗಳ ಹಾವಳಿಗೆ ತುತ್ತಾಗದೇ ನೇರವಾಗಿ ನಮ್ಮನ್ನು ಬೇಟಿಯಾಗ ಬಹುದು ಇದು ಕೇವಲ ಸಾಂಕೇತಿಕವಾಗಿ ಚೆಕ್ ವಿತರಿಸಿದ್ದು ಮುಂದಿನ ದಿನಗಳಲ್ಲಿ ಯೋಜನೆಗೆ ಜಮೀನು ನೀಡಿರುವ ಎಲ್ಲಾ ರೈತರಿಗೂ ಪರಿಹಾರನವನ್ನು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಮಠದ ಅಭಿನವಮಲ್ಲಿಕಾಜರ್ುನದೇಶೀಕೇಂದ್ರಸ್ವಾಮೀಜಿ, ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯದೇಶಿಕೇಂದ್ರಸ್ವಾಮಿಜಿ, ಮಾಧಿಹಳ್ಳಿ ಮಠದ ಚನ್ನಮಲ್ಲಿಕಾಜರ್ುನಸ್ವಾಮಿಜಿ ಆಶಿರ್ವಚನ ನೀಡಿದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಅನಿತಾ, ತಹಸೀಲ್ದಾರ್ ಗಂಗೇಶ್, ಜಿ.ಪಂ,ಸದಸ್ಯ ಕಲ್ಲೇಶ್, ಹೊನ್ನವಳ್ಳಿ ಜಿ.ಪಂ.ಸದಸ್ಯ ನಾರಾಯಣ್, ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೇಸ್ ಮುಖಂಡ ಸಿಮೇಎಣ್ಣೆ ಕೃಷ್ಣಯ್ಯ, ಶೆಟ್ಟಿಕೆರೆ ಗ್ರಾ,ಪಂ,ಅಧ್ಯಕ್ಷೆ ನಾಗಮಣಿ, ತಾ.ಪಂ.ಸದಸ್ಯೆ ಜಯಮ್ಮ ಉಪಸ್ಥಿತರಿದ್ದರು.

ಅಪಘಾತ ಸುದ್ದಿ
ಚಿಕ್ಕನಾಯಕನಹಳ್ಳಿ,ಏ.06 : ಕೆ.ಬಿ.ಕ್ರಾಸ್ನಿಂದ ಚಿ.ನಾ.ಹಳ್ಳಿಗೆ ಗಾರೆಕೆಲಸ ಮುಗಿಸಿಕೊಂಡು ಆಟೋದಲ್ಲಿ ಬರುವಾಗ ಆಟೋ ಪಲ್ಟಿಯಾದ ಪರಿಣಾಮ ಧೃವಕುಮಾರ್ ಎಂಬುವವರಿಗೆ ತೀವ್ರಗಾಯಗಳಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯ ಮೃತಪಟ್ಟಿದ್ದಾನೆ.
ಕೆ.ಬಿ.ಕ್ರಾಸ್ನಿಂದ ಚಿ.ನಾ.ಹಳ್ಳಿಗೆ  ಆಟೋದಲ್ಲಿ ಧೃವಕುಮಾರ್ ತನ್ನ ಸ್ನೇಹಿತರಾದ ಮುದ್ದಪ್ಪ, ರವಿ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಆಟೋ ಚಾಲಕನ ಅಜಾಗುರೂಕತೆ ಹಾಗೂ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದರಿಂದ,  ಜೆ.ಸಿ.ಪುರ ಬಳಿ ಆಟೋ ಮಗುಚಿ ಬಿದ್ದು ಮೂರು ಜನರು ಗಾಯಗೊಂಡರು, ತಕ್ಷಣವೇ ಇವರು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಸೇರಿಸಲಾಯಿತು ಅಲ್ಲಿ ಪ್ರಥಮ ಚಿಕಿತ್ಸೆಪಡೆದಿದ್ದಾರೆ,  ತೀವ್ರವಾಗಿ ಗಾಯಗೊಂಡ ಧೃವಕುಮಾರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಸಕರ್ಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ತುಮಕೂರಿನ ಗುಬ್ಬಿ ಗೇಟ್ ಬಳಿ ಮೃತಪಟ್ಟಿದ್ದಾನೆ. ಈ ಸಂಬಂಧ ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕನಾಯಕನಹಳ್ಳಿ,ಏ.06 : ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ  ಬಾಲಕಿಗೆ ಮೋಟಾರು ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಚಿನ್ಮಯಿ(11) ಯನ್ನು  ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಿನ್ಮಯಿ ಮನೆಯ ಹತ್ತಿರ ರಸ್ತೆಯಲ್ಲಿ ದಯಾನಂದ ಎನ್ನುವವರು ಮೋಟಾರ್ ಸೈಕಲನ್ನು ಅತಿವೇಗದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ,  ಚಿನ್ಮಯಿಗೆ ಢಿಕ್ಕಿ ಹೊಡೆದಪರಿಣಾಮ ತೀವ್ರವಾಗಿ ಗಾಯಗೊಂಡ ಚಿನ್ಮಯಿಯನ್ನು ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು,  ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಸಂಬಂಧ ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

No comments:

Post a Comment