Monday, June 13, 2016


ಎಲ್ಲಾ ಸಮಾಜದ ಮಕ್ಕಳು ಶಿಕ್ಷಣ ಪಡೆಯುವುದು ಅಗತ್ಯ 
ಚಿಕ್ಕನಾಯಕನಹಳ್ಳಿ,ಜೂ.13 ; ಸ್ವಾಮಿಜಿಗಳು ಮಠದ ಅಭಿವೃದ್ದಿಗೆ ಸಂಚರಿಸುವಾಗ ಆಯಾ ಸಮಾಜದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಬೇಕು, ಎಲ್ಲಾ ಸ್ಥರದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಅರಿತು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಬೇಕೆಂದು ತುಮಕೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಆಡಳಿತ ಉಪ್ಪಾರ ಸಂಘ ಆಶ್ರಯದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರೆ ಅವರೇನು ನಮ್ಮನ್ನು ಸಾಕುತ್ತಾರೆಯೇ, ಮದುವೆ ಮಾಡಿಕೊಂಡು ಗಂಡನ ಮನೆಗೆ ತೆರಳುತ್ತಾರೆ, ಇದರಿಂದ ನಮಗೇನು ಲಾಭ ಎಂಬ ದುರಾಲೋಚನೆಯನ್ನು ಪೋಷಕರು ಬಿಟ್ಟು ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಲೋಚನೆ ಬೆಳೆಸಿಕೊಳ್ಳಿ ಎಂದರು. 
, ಉಪ್ಪಾರ ಜನಾಂಗ ತಮ್ಮ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ನೀಡಿದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಸರಕಾರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿತ್ತಿದೆ ಇದನ್ನೂ ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಶೇ.50ರಷ್ಟು ಮಹಿಳೆಯರಿಗೆ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.
ಹೊಸದುರ್ಗ ಭಗೀರಥ ಪೀಠದ  ಶ್ರೀ ಪುರುಷೋತ್ತಮಾನಂದ ಪುರಿಸ್ವಾಮೀಜಿ  ಮಾತನಾಡಿ,  ಆಯಾ ಸಮುದಾಯಗಳ ಮಹನೀಯರ  ಜಯಂತಿ ಮಾಡುವ ಉದ್ದೇಶ ಅವರ ಸಾಧನೆ ಸ್ಪೂತರ್ಿ ಪಡೆದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಜಯಂತಿ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದ ಅವರು,  ಸಿದ್ದರಾಮಯ್ಯ ಸಕರ್ಾರ 2 ವರ್ಷಗಳ ಹಿಂದೆ ಭಗೀರಥ ಜಯಂತಿ ಆಚರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದ ಅವರು ಉಪ್ಪಾರ ಜನಾಂಗ ನಮ್ಮಲ್ಲಿರುವ ಸಣ್ಣ ಪುಟ್ಟ ಭೇದಗಳನ್ನು ಮರೆತು ಎಲ್ಲರೂ ಒಂದಾಗಬೇಕು ಎಂದರು 
ರಾಜ್ಯ ಸಂಸದೀಯ ವ್ಯವಹಾರಗಳ ಕಾರ್ಯದಶರ್ಿ ಪುಟ್ಟರಂಗ ಶೆಟ್ಟಿ ಮಾತನಾಡಿ, ನಮ್ಮ ಪೂರ್ವಜನರನ್ನು ನೆನೆಸಿಕೊಳ್ಳಲು ಜಯಂತಿಗಳನ್ನು ಮಾಡಲಾಗುತ್ತದೆ ರಾಜಕೀಯವಾಗಿ ಉಪ್ಪಾರ ಜನಾಂಗ ಬೆಳೆಯಬೇಕಾದರೆ ಶಿಕ್ಷಣ ಅಗತ್ಯ,  1973ರಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅತಿ ಹಿಂದುಳಿದ ಜನಾಂಗವಾದ  ಉಪ್ಪಾರ ಜನಾಂಗವನ್ನು ಗುರುತಿಸಿ ರಾಜಕೀಯ ಪ್ರತಿನಿಧ್ಯ ನೀಡಿದರು ಸಂಘಟನೆ ಶಿಕ್ಷಣ ಹೋರಾಟದ ಮೂಲಕ  ನಾವು ಮುಂದೆ ಬರಬೇಕಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಒಳ್ಳೆಯ ಮನಸ್ಸಿನಿಂದ ಮಠ ಮಂದಿರಗಳನ್ನು ಕಟ್ಟುವುದರಿಂದ ಎಲ್ಲರ ಮನಸ್ಸು ಕಟ್ಟದಂತಹ ಸಾರ್ಥಕತೆ ಬರುತ್ತದೆ, ಉಪ್ಪಾರ ಸಮಾಜಕ್ಕೆ ಚಿ.ನಾ.ಹಳ್ಳಿ ಪಟ್ಟಣದಲ್ಲಿ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳವುದಾಗಿ ಹೇಳಿದರು. ಶೆಟ್ಟೀಕೆರೆ ಜಿ.ಪಂ.ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಉಪ್ಪಾರ ಜನಾಂಗವಿದ್ದರೂ ಎಲ್ಲಾ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ಕಲ್ಲೇಶರವರನ್ನು ಜಿ.ಪಂ.ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿದ್ದೇವೆ ಎಂದರು. 
ಕಾರ್ಯಕ್ರಮದಲ್ಲಿ ತಾ||ಪಂ ಅಧ್ಯಕ್ಷೆ ಕೆ. ಹೊನ್ನಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪುನರ್ವಸತಿ ನಿಗಮದ ಅಧ್ಯಕ್ಷ ವೆಂಕೋಬ, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ಮಹಾಲಿಂಗಪ್ಪ, ಮತ್ತಿತ್ತರರು ಉಪಸ್ಥಿತರಿದ್ದರು.
ತಾಲ್ಲೂಕು ಕಛೇರಿಯಿಂದ ಹೊರಟ ಭಗೀರಥ ಜಯಂತಿಯ ಮೆರವಣಿಗೆ ಬಿ.ಹೆಚ್ ರಸ್ತೆ ನೆಹರು ವೃತ್ತದ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ಕುಣಿತ, ನಾಸಿಕ್ ಡೊಳ್ಳು, ವಿವಿಧ ಕಲಾ ತಂಡಗಳು ಉಪಸ್ಥಿತರಿದ್ದವು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಾದ ದೇವಿಕರಿಯಪ್ಪ, ಈರಲಕ್ಕಪ್ಪ, ಹನುಮಂತಯ್ಯ,ಪುಟ್ಟಯ್ಯ,ಮತ್ತಿತ್ತರರನ್ನು ಸನ್ಮಾನಿಸಲಾಯಿತು.

ಅಲೆಮಾರಿ ಮುಖಂಡನ ಹೋರಾಟದ ಮಕ್ಕಳು ಫಲವಾಗಿ ನೇರವಾಗಿ ವಸತಿ ಶಾಲೆಗೆ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.13 :  ಅಲೆಮಾರಿ ಮುಖಂಡರೊಬ್ಬರ ಹೋರಾಟದಫಲವಾಗಿ 7 ಅಲೆಮಾರಿ ಹಾಗೂ ಅರೆ ಅಲೆಮಾರಿ ಮಕ್ಕಳು ಪ್ರವೇಶ ಪರೀಕ್ಷೆ ಬರೆಯದೇ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.
   ಮಕ್ಕಳ ಪ್ರವೇಶಾತಿಗೆ ಶ್ರಮಿಸಿರುವ ಅಲೆಮಾರಿ ಮುಖಂಡ ಹುಳಿಯಾರ್ ರಾಜಪ್ಪ ಮಾತನಾಡಿ,ವಸತಿ  ಶಾಲೆಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಮಕ್ಕಳಿಗೆ  ಪ್ರವೇಶ ಪರೀಕ್ಷೆ ಎದುರಿಸದೇ ಶೇ.10ರಷ್ಟು ನೇರಪ್ರವೇಶಾತಿ ನೀಡಬೇಕು ಎಂಬ ನಿಯಮ 2011ರಲ್ಲಿ ಆದೇಶಿಸಲಾಗಿದೆ, ಆದರೂ ಅರಿವಿಲ್ಲದ ಅಲೆಮಾರಿಗಳು ಈ ವಿಶೇಷ ಸವಲತ್ತುನ್ನು ಪಡೆದು ಕೊಳ್ಳಲು ವಿಫಲರಾಗಿದ್ದರು. ಮನವರಿಕೆ ಮಾಡಿಕೊಟ್ಟ ಬಳಿಕ ಪ್ರವೇಶ ಪಡೆಯಲು ಮುಂದಾದರು.ನೇರವಾಗಿ ವಸತಿಶಾಲೆಗಳ ಪ್ರಾಧಿಕಾರಕ್ಕೆ ಬರೆದು 7 ವಿದ್ಯಾಥರ್ಿಗಳಿಗೆ ಪ್ರವೇಶ ಗಿಟ್ಟಿಸಿಕೊಡಲಾಯಿತು ಎಂದರು.
    ವಿಶೇಷ ಪ್ರವೇಶಾತಿ ಅಡಿಯಲ್ಲಿ ಸಿರಾದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 5 ವಿದ್ಯಾಥರ್ಿಗಳು, ತುರುವೇಕೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಒಬ್ಬ ಹಾಗೂ ಮೇಲನಹಳ್ಳಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಒಬ್ಬ ವಿದ್ಯಾಥರ್ಿ ವಿಶೇಷ ಪ್ರವೇಶಾತಿ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ ಎಂದರು.
   ಅರೆ ಅಲೆಮಾರಿ ಕಾಡುಗೊಲ್ಲ ಸಮುದಾಯದ ತಮ್ಮಡಿಹಳ್ಳಿ ಮೋಹನ್ಕುಮಾರ್ ಹಾಗೂ ಅಕ್ಷತಾ, ಅಲೆಮಾರಿ ಜನಾಂಗದ  ಚನ್ನದಾಸ ಸಮುದಾಯದ .ಎಂ.ಶ್ರೀರಾಮು, ಸಿಳ್ಳೆಕ್ಯಾತ ಸಮುದಾಯದವರಾದ ಎಚ್.ಕೆ.ನವೀನ್ಕುಮಾರ್, ರಾಜು ಮತ್ತು ಕೆ.ಶೋಭಾ, ದೊಂಬಿದಾಸ ಸಮುದಾಯದ ಸಿ.ಆರ್.ಸೀಬಾ ಹಾಗೂ ಹಂದಿಜೋಗಿ ಸಮುದಾಯದ ಕೆ.ಸುಜಾತ ಪ್ರವೇಶ ಪರೀಕ್ಷೆ ಇಲ್ಲದೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
  ಅಲೆ ಮಾರಿ,  ಅರೆ ಅಲೆಮಾರಿ ಕುಟುಂಬಗಳು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುತ್ತಾ ಸಣ್ಣಪುಟ್ಟ ವ್ಯಾಪಾರ ಮಾಡುತ್ತ ದುಸ್ತರ ಬದುಕು ಸಾಗಿಸುತ್ತಿದ್ದಾರೆ. ಬಹುತೇಕ ಅನಕ್ಷರಸ್ಥರೇ ಹೆಚ್ಚಿರುವ ಈ ಸಮುದಾಯಗಳು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ತೆರೆದುಕೊಳ್ಳು ವಂತೆ ಮಾಡಬೇಕು.ಅಲೇ ಮಾರಿಗಳಿಗೇ ಇರುವ ವಿಶೇಷ ಸವಲತ್ತುಗಳನ್ನು ಬಳಸಿಕೊಳ್ಳಬೇಕು.ಇಲಾಖೆ ಹಾಗೂ ಅಧಿಕಾರಿಗಳು ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.





No comments:

Post a Comment