Thursday, July 7, 2016ಅಣೆಕಟ್ಟೆಯಲ್ಲಿ ಶಂಕಿತ ಚಿಕನ್ಗುನ್ಯಾ 
ಚಿಕ್ಕನಾಯಕನಹಳ್ಳಿ,ಜು.6: ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಅಂಗನವಾಡಿ ಓದುವ ಮಗುವಿನಿಂದ ಹಿಡಿದು ಮುದುಕರವರೆಗೆ ವಿವಿಧ ವಯೋಮಾನದವರು ಕಾಯಿಲೆಗೆ ತುತ್ತಾಗಿದ್ದಾರೆ. ಊರಿಗೆ ಊರೇ ಶಂಕಿತ ಚಿಕೂನ್ಗುನ್ಯ ಕಾಯಿಲೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಚಟುವಟಿಕೆಗಳು ಸ್ಥಬ್ಧವಾಗಿದ್ದು, ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ.
    180 ಕುಟುಂಬ,550 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಚಿಕೂನ್ಗುನ್ಯದಿಂದ ನರಳುತ್ತಿದ್ದಾರೆ. 100ಕ್ಕೂ ಹೆಚ್ಚು ಮನೆಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಕಾಯಿಲೆಗೆ ತುತ್ತಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲೂ ಯಾರೂ ಇಲ್ಲದಂತಾಗಿದೆ. ಕೆಲವರು ಪರ ಊರಿನ ನೆಂಟರ ಮನೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಪಟ್ಟಣಗಳಲ್ಲಿ ಇರುವ ಗ್ರಾಮದವರನ್ನು ಊರಿಗೆ ಬಾರದಂತೆ ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ.
   ಗ್ರಾಮಸ್ಥ ಮಲ್ಲಿಕಾಜರ್ುನಯ್ಯ ಮಾತನಾಡಿ ಕಳೆದ ಎರಡು ತಿಂಗಳಿಂದ ಕಾಯಿಲೆ ಉಲ್ಬಣಿಸುತ್ತಿದ್ದು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ. ಕುಪ್ಪೂರು ಹಾಗೂ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗಳಿಗೆ ಎಷ್ಟು ಬಾರಿ ಎಡತಾಕಿದ್ದರೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಹಲವಾರು ಬಾರಿ ರಕ್ತದ ಮಾದರಿಯನ್ನು ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ ಹೊರತು ಯಾವ ಕಾಯಿಲೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಕೆಲವರು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಎಂಟರಿಂದ ಹತ್ತುಸಾವಿರ ಹಣ ಖಚರ್ುಮಾಡಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗಳ ಧಾಖಲೆಗಳ ಪ್ರಕಾರ ಚಿಕೂನ್ಗುನ್ಯಾ ಎಂಬುದು ದೃಢಪಟ್ಟಿದೆ ಎಂದು ವಿವರಿಸಿದರು.
ರೋಗದಿಂದ ಬಳಲುತ್ತಿರುವ ಗ್ರಾಮದ ತಾಯವ್ವ ಮಾತನಾಡಿ, ಒಮ್ಮೆ ಜ್ವರ ಬಂದರೆ ಚೇತರಿಸಿಕೊಳ್ಳಲು ತಿಂಗಳುಗಳು ಹಿಡಿಯುತ್ತವೆ. ತೀವ್ರ ಕೀಲುನೋವು ಕಾಣಿಸಿಕೊಂಡಿದ್ದು ವಾರಾನುಗಟ್ಟಲೆ ಹಾಸಿಗೆಯ ಮೇಲೆ ಮಲಗುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಗ್ರಾಮದಲ್ಲಿ ಸಂಪೂರ್ಣವಾಗಿ ನಿಂತುಹೊದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಚಿಕಿತ್ಸಾಶಿಬಿರ ಏರ್ಪಡಿಸ ಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳ ಭೇಟಿ:ಗ್ರಾಮಸ್ಥರು ದೂರವಾಣಿ ಕರೆಮಾಡಿ ಪರಿಸ್ಥಿತಿಯನ್ನು ವಿವರಿಸಿದ ಹಿನ್ನೇಲೆಯಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಚೇರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ತಾಲ್ಲೂಕು ಹಂತದ ಆರೋಗ್ಯಾಧಿಕಾರಿಗಳು ಬುಧವಾರ ಗ್ರಾಮಕ್ಕೆ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾ ತಂಡದಲ್ಲಿ ಹಿರಿಯ ಅಧಿಕಾರಿಗಳಾದ ರಾಮಚಂದ್ರಪ್ಪ ಹಾಗೂ ಚಂದ್ರಪ್ಪ ಇದ್ದರು.
ಕೋಟ್-1
'ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಡೆಂಗೆ ಪ್ರಕರಣಗಳು ವರದಿಯಾಗಿದ್ದರಿಂದ ಪಟ್ಟಣದ ಸಮೀಕ್ಷೆಗೆ ಬಂದಿದ್ದಾಗ ಗ್ರಾಮಸ್ಥರು ಕರೆಮಾಡಿ ಪರಿಸ್ಥಿತಿ ಬಗ್ಗೆ ವಿವರಿಸಿದರು.ಆ ಹಿನ್ನೆಲೆಯಲ್ಲಿ ಜಿಲ್ಲಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.'
            -- ಚಂದ್ರಪ್ಪ.ಹಿರಿಯ ಅಧಿಕಾರಿ,ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಛೇರಿ,ತುಮಕೂರು.
ಕೋಟ್-2
'ಗ್ರಾಮಸ್ಥರು ಹೇಳುವ ಲಕ್ಷಣಗಳನ್ನು ಆಧರಿಸಿ ಚಿಕೂನ್ಗುನ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ, ವೈದ್ಯಕೀಯವಾಗಿ ದೃಢಪಟ್ಟಿಲ್ಲ.'
ಡಾ. ಶಿವಕುಮಾರ್. ತಾಲ್ಲೂಕು ವೈದ್ಯಾಧಿಕಾರಿ ಚಿಕ್ಕನಾಯಕನಹಳ್ಳಿ.
ಕೋಟ್-3
'2 ತಿಂಗಳಿನಿಂದ ಗ್ರಾಮದ ಜನ ಸಾಂಕ್ರಾಮಿಕ ರೂಗದಿಂದ ಬನಳಲುತ್ತಿದ್ದಾರೆ ಆದರೂ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ.ಸಕರ್ಾರಿ ವೈದ್ಯರು ಕಾಯಿಲೆ ಇಂತಹದ್ದೇ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ.'
                                -ಕುಮಾರಯ್ಯ,ಗ್ರಾಮಸ್ಥ. 

ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ 
ಚಿಕ್ಕನಾಯಕನಹಳ್ಳಿ,ಜು.07 : ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಶಂಕಿತ ಚಿಕೂನ್ಗುನ್ಯ ಕಾಯಿಲೆ ಕಳೆದ ಒಂದೂವರೆ ತಿಂಗಳಿನಿಂದ ಉಲ್ಬಣಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳದ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಗುರುವಾರ ಪ್ರಕಟವಾಗಿದ್ದ ವರದಿ ಆಧರಿಸಿ ಅಣೇಕಟ್ಟೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.    ಕಳೆದ ಒಂದುವರೆ ತಿಂಗಳಿನಿಂದ ನಿರಂತರ ಜ್ವರ, ಕೈ ಕಾಲು, ಕೀಲು ನೋವಿನಿಂದ ಊರಿನ ಜನ ಬಳಲುತ್ತಿದ್ದಾರೆ. ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೇಟಿಯ ಸಂದರ್ಭದಲ್ಲೂ 70 ರಿಂದ 80 ರೋಗಿಗಳು ಕಂಡು ಬಂದಿದ್ದಾರೆ. ಕೆಲ ರೋಗಿಗಳನ್ನು ಪರ ಊರುಗಳ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂಬುದು ಗ್ರಾಮಸ್ಥರಿಂದ ತಿಳಿದು ಬಂದಿದೆ, ಆದರೂ ಪ್ರಾಥಮಿಕ ವರದಿ ತಯಾರಿಸದೆ ಏನು ಮಾಡುತ್ತಿದ್ದೀರಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಹಾಗೂ ಅವರ ಸಿಬ್ಬಂದಿಯನ್ನು ಪ್ರಶ್ನಿಸಿದರು. ವೈದ್ಯಾಧಿಕಾರಿ ಉತ್ತರ ನೀಡಲು ತಡಬಡಾಯಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಸ್ಥಳದಲ್ಲಿದ್ದ ತಾ.ವೈದ್ಯಾಧಿಕಾರಿಗಳಿಗೆ ಗ್ರಾಮದಲ್ಲಿ ಇರುವ 868 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ಪೂರ್ಣ ಮಾಹಿತಿ ನೀಡಿ ಸೂಚನೆ ನೀಡಿದರು.
ಗ್ರಾಮಸ್ಥ ವಿಶ್ವನಾಥ್ ಮಾತನಾಡಿ, ಕಳೆದ ಅರವತ್ತು ದಿನಗಳಿಂದ ಕಾಯಿಲೆ ನಿರಂತರವಾಗಿ ವ್ಯಾಪಿಸುತ್ತಿದೆ. ಈಗಾಗಲೆ ರೋಗ ಹರಡುವ ಸೊಳ್ಳೆಗಳ ಜೀವನ ಚಕ್ರ 2ನೇ ಸುತ್ತಿಗೆ ಪ್ರವೇಶ ಆಗಿದ್ದು ಮುಂದಿನ 20 ದಿನಗಳಲ್ಲಿ ಕಾಯಿಲೆಯ ತೀವ್ರತೆ ಹೆಚ್ಚಾಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳಿಗೆ ಹಬ್ಬುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟರು.
   ತಕ್ಷಣ ಕ್ರಮಕ್ಕೆ ಮುಂದಾಗಿ; ನಾಳೆಯಿಂದ ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್ ಪ್ರಾರಂಭಿಸಿ. ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಕಿ, ಊರಿನಲ್ಲಿರುವ ಸಿಸ್ಟನ್ಗಳು ಹಾಗೂ ಚರಂಡಿ ಸ್ವಚ್ಛಗೊಳಿಸಿ, ಸ್ವಚ್ಛತೆ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸಲು ಆದೇಶ ಹೊರಡಿಸಿ ಎಂದು ತಹಶಿಲ್ದಾರ್ ಆರ್.ಗಂಗೇಶ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು,  ಸಮಸ್ಯೆ ಇಷ್ಟು ತೀವ್ರವಾಗಿದ್ದರೂ ಇಲಾಖೆ ಸಮಸ್ಯೆಯನ್ನು ಸಕರ್ಾರದ ಗಮನಕ್ಕೆ ತಂದಿಲ್ಲ, ಎಲ್ಲವನ್ನೂ ಕುಲಂಕುಶವಾಗಿ ಪರಿಶೀಲಿಸಲಾಗುವುದು. ಹೇಳಿದರು.
    ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ: ಸೋಕು ಪೀಡಿತ ಗ್ರಾಮ ಅಣೇಕಟ್ಟೆಯಲ್ಲಿ ಗುರುವಾರದಿಂದಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭವಾಗಿದ್ದು ವೈದ್ಯರ ದಂಡು ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಗೈರು ಹಾಜರಿ: ಗ್ರಾಮದ ಆಶಾ ಕಾರ್ಯಕತರ್ೆ, ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಗೈರು ಹಾಜರಾಗಿದ್ದಕ್ಕೆ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು.  
ಜಿಲ್ಲಾಧಿಕಾರಿ ಭೇಟಿ ವೇಳೆ ಡಿ.ಎಚ್.ಓ. ಡಾ.ಎನ್.ಶಶಿಕಲಾ,  ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ, ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಆರ್.ಗಂಗೇಶ್, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು. 

ರಂಜಾನ್ ಆಚರಣೆಗೆ ಸಾಮೂಹಿಕ ಪ್ರಾರ್ಥನೆ
 
ಚಿಕ್ಕನಾಯಕನಹಳ್ಳಿ,ಜು.07 : ರಂಜಾನ್ ಹಬ್ಬ ಆಚರಣೆಯಿಂದ ಬಡವ ಬಲ್ಲಿದ ಎಂಬ ಅಂತರ ಅಳಿದು ಪರಸ್ಪರ ಸ್ನೇಹದ ಬೆಸುಗೆಯಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಮುಸ್ಲಿಂ ಜನಾಂಗದ ಪವಿತ್ರ ಕುರಾನ್ ಅವತರಿಸಿದ ಮಾಸವಿದು. ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಹೆಚ್ಚು ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳುತ್ತಾರೆ,  ದಾನಧರ್ಮದಂತಹ ಪುಣ್ಯ ಆಚರಣೆಯಲ್ಲಿ ತೊಡಗುತ್ತಾರೆ, ಧರ್ಮಕ್ಕೆ ಅನುಗುಣವಾಗಿ ದೇವರನ್ನು ಪ್ರಾಥರ್ಿಸುತ್ತಾರೆ ಎಂದರು.
ಪಟ್ಟಣದಲ್ಲಿರುವ ಐದು ಮಸೀದಿಗಳಾದ ಜಾಮಿಯಾ, ನೂರಾನಿ, ಮದೀನ, ಬಲಾಲ, ಅಸ್ಸಾ ಮಸೀದಿಗಳಿಗೆ ತೆರಳಿ ಅಲ್ಲಾನ ಅನುಯಾಯಿಗಳು ಅಲ್ಲಿ ಪ್ರಾರ್ಥನೆ ನೆರವೇರಿಸಿದರು. ನಂತರ ಆಯಾ ಮಸೀದಿಗಳಿಂದ ಹೊರಟ ಸಮೂಹ, ಒಟ್ಟಾಗಿ ಈದ್ಗ ಮೈದಾನಕ್ಕೆ ತೆರಳಿದರು. ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಈದ್ ಮುಬಾರಕ್ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುತುವಲ್ಲಿಗಳಾದ ಮಹಬೂಬ್ ಅಲಂ,  ಜಹಿರ್ಅಹಮದ್, ಅನ್ಸರ್ಪಾಷ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಸದಸ್ಯರಾದ  ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಿ, ಮಹಮದ್ಖಲಂದರ್, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸದಸ್ಯ ಸಿ.ಎಸ್.ನಟರಾಜು, ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಸಿ.ಬಸವರಾಜು ಬಾಬುಸಾಹೇಬ್, ಮತ್ತಿತರರು ಉಪಸ್ಥಿತರಿದ್ದರು.

                     ಪರಿಸರ ಉಳಿಸಿ : ಶಾಸಕ ಸಿ.ಬಿ.ಸುರೇಶ್ಬಾಬು 
ಚಿಕ್ಕನಾಯಕನಹಳ್ಳಿ,ಜು.07 : ಪರಿಸರದ ವೈಪರಿತ್ಯ ತಡೆಯಲು ಹಾಗೂ ಭೂಮಿಯ ಮೇಲೆ ಹಸಿರು ಹೊದಿಕೆ ಹೆಚ್ಚಿಸಲು ಜನತೆ ತಮ್ಮ ತೋಟ ಹಾಗೂ ಜಮೀನುಗಳಲ್ಲಿ ಸಸಿಗಳನ್ನು ನೆಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸಸಿ ನೆಡುವ ಮೂಲಕ ಕೋಟಿ ವೃಕ್ಷ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಿಡಮರಗಳ ನಾಶದಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಮರಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದೆ ಆದ್ದರಿಂದ ಜನತೆ ಸಸಿಗಳನ್ನು ಹಾಕಿ ಪೋಷಿಸಿಕೊಂಡು ಹೋಗುವಂತೆ ಹೇಳಿದರು.
ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪರಿಸರ ಸಮತೋಲನದಿಂದ ಕೂಡಿರಬೇಕಾದರೆ ಭೂಮಿಯ ಮೇಲೆ ಶೇ.33% ಅರಣ್ಯವಿರಬೇಕು, ಮನುಷ್ಯ ವಿವಿಧ ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಈಗ ಶೇ21%  ರಷ್ಟು ಮಾತ್ರ ಅರಣ್ಯವಿದ್ದು ಇದನ್ನು ಹೆಚ್ಚಿಸಲು ಶೇ 33%ರಷ್ಟು ಅರಣ್ಯ ಬೆಳೆಸಲು ಕೋಟಿ ವೃಕ್ಷ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಒಂದು ಮರ ತನ್ನ ಜೀವಿತಾವಧಿಯಲ್ಲಿ ಪರಿಸರಕ್ಕೆ 15.70 ಲಕ್ಷದಷ್ಟು ಬೆಲೆಯ ಉತ್ಪನ್ನಗಳನ್ನು ಪರಿಸರಕ್ಕೆ ನೀಡುತ್ತದೆ ಅದರೆ ಮನುಷ್ಯ ಕೆಲವೇ ಸಾವಿರಕ್ಕೆ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಎಂದರು. ಕೋಟಿ ವೃಕ್ಷ ಅಂದೋಲನದ ಅಡಿಯಲ್ಲಿ ರೈತರಿಗೆ ಅರಣ್ಯ ಇಲಾಖಾ ವತಿಯಿಂದ ರಿಯಾಯ್ತಿ ದರದಲ್ಲಿ ಸಸಿಗಳನ್ನು ನೀಡುತ್ತಿದ್ದು ರೈತರು ತೋಟಗಳಲ್ಲಿ ಹಾಕಿಸಿ ಬೆಳೆಸಿದರೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಂದು ಸಸಿಗೆ ಪ್ರಥಮ ವರ್ಷ ಹತ್ತು ರೂಪಾಯಿ ಎರಡನೇ ವರ್ಷ 15ರೂ 3 ನೇ ವರ್ಷ 20ರೂ ಸಹಾಯ ಧನ ನೀಡಲಾಗುತ್ತಿದೆ ಇದರ ಉಪಯೋಗವನ್ನು ರೈತರು ಪಡೆಯುವಂತೆ ಮನವಿ ಮಾಡಿದರು.
ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರಾದ ಎಮ್.ಕೆ.ರವಿಚಂದ್ರ, ಸಿ.ಡಿ ಚಂದ್ರಶೇಖರ್, ಹೆಚ್,ಬಿ,ಪ್ರಕಾಶ್, ಅಶೋಕ್, ಸಿ.ಎಸ್.ರಮೇಶ್, ರಾಜಶೇಖರ್, ಮಹಮದ್ ಖಲಂದರ್, ಸಿ.ಕೆ.ಕೃಷ್ಣಮೂತರ್ಿ, ಜೆ.ಡಿ.ಎಸ್ ಮುಖಂಡ ಸಿ.ಎಸ್.ನಟರಾಜ್ ಉಪಸ್ಥಿತರಿದ್ದರು.No comments:

Post a Comment