Tuesday, May 24, 2016



ಬೆಳ್ಳಿಪಲ್ಲಕ್ಕಿ ಉತ್ಸವದೊಂದಿಗೆ ಮುಕ್ತಾಯಗೊಂಡ ಗುರುಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.24 : ವರ್ಷಗಳ ನಂತರ ಸಂಪನ್ನಗೊಂಡ ತಾಲ್ಲೂಕಿನ ಗೋಡೆಕೆರೆ ಶ್ರೀ ಸಿದ್ದರಾಮೇಶ್ವರಸ್ವಾಮಿಯ ಮಹಾರಥೋತ್ಸವ (ದೊಡ್ಡಜಾತ್ರೆ) ಗುರುಸಿದ್ದರಾಮೇಶ್ವರರ ಬೆಳ್ಳಿಪಲ್ಲಕ್ಕಿಯ ಉತ್ಸವದೊಂದಿಗೆ ತೆರೆಕಂಡಿತು.
ಮಂಗಳವಾರ ನಸುಕಿನಲ್ಲಿ ನಡೆದ ಬೆಳ್ಳೀಪಲ್ಲಕ್ಕಿ ಉತ್ಸವದಲ್ಲಿ ಸಿದ್ಧರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ,ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಭಾಗಿಯಾಗಿದ್ದರು. ಬೆಳ್ಳಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೋಮವಾರ ರಾತ್ರಿ 10ಕ್ಕೆ ಪ್ರಾರಂಭವಾಗಿ ಮಂಗಳವಾರ ಬೆಳಗ್ಗೆ 6ಗಂಟೆಯವರೆಗೆ ನಡೆಯಿತು.
   ಒಂದು ವಾರದ ಕಾಲ ಪ್ರತೀ ಸಂಜೆ ಜಾತ್ರೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳು ಜಾತ್ರೆಗೆ ಮೆರುಗು ತಂದವು. ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
   ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಶ್ರೀ ಗುರುಸಿದ್ದರಾಮೇಶ್ವರ ದೇವಾಲಯದ ಜೀಣರ್ೋದ್ದಾರ ಮಹಾಪೋಷಕರಾದ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಶಾಸಕ ಸಿ.ಬಿ.ಸುರೇಶ್ಬಾಬು ಸೇರಿದಂತೆ ಭಕ್ತಾಧಿಗಳು ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.
ಮುಕ್ತಾಯ ಸಮಾರಂಭ :   109ಅಡಿ ಎತ್ತರದ ರಾಜಗೋಪುರ ನಿಮರ್ಾಣಕ್ಕೆ ತನುಮನದಿಂದ ಧನ ಸಹಾಯ ಮಡುವಂತೆ ಹಾಗೂ ಗೋಡೆಕೆರೆ ಯಾತ್ರಾ ಸ್ಥಳವಾಗದೇ ಒಂದು ವಿಶ್ವ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಎಲ್ಲರೂ ಕೈಜೋಡಿಸುವಂತೆ ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ತಾಲ್ಲೂಕಿನ ಗೋಡೆಕೆರೆಯ ಶ್ರೀಸಿದ್ದರಾಮೇಶ್ವರ ಮಹಾಸ್ವಾಮಿಯವರ ದೊಡ್ಡಜಾತ್ರೆಯ ಕೊನೆಯ ದಿನವಾದ ಸೋಮವಾರ ರಾತ್ರಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ದಾಸೋಹ ತತ್ವ ಭೋದಕ, ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ ಜಾತ್ರೆಯು ಒಂದು ವಾರಗಳಕಾಲ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ, ವಿವಿಧ ಸಾಧಕರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎಲ್ಲ ವರ್ಗದ ಜನರು ತಾರತಮ್ಯವಿಲ್ಲದೇ ಪಾಲ್ಗೊಂಡು ಯಾವುದೇ ಬಿನ್ನಾಬಿಪ್ರಾಯಗಳು ಬರದಂತೆ ನಡೆದುಕೊಂಡು ಬಂದಿದ್ದು ಈ ಜಾತ್ರೆಯು ಅದ್ದೂರಿಯಾಗಿ ಜಾತ್ರೆಯು ಯಶಸ್ವಿಯಾಗಿದೆ, ಈ ಯಶ್ವಸಿಗೆ ಕಾರಣರಾದ ಎಲ್ಲಾ ಸಕರ್ಾರಿ ಇಲಾಖೆಗಳಿಗೆ ಹಾಗೂ ಎಲ್ಲಾ ಭಕ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಸುಮಾರು ಎರಡುವರೆ ಎಕರೆ ವಿಸ್ತೀರ್ಣವಿರುವಂತಹ ಶ್ರೀಸಿದ್ದರಾಮೇಶ್ವರಸ್ವಾಮಿ ದೇವಾಲಯದ ಜೀಣರ್ೋದ್ದಾರ ಕಾರ್ಯ ನಡೆಯುತ್ತಿದ್ದು ಈ ಕ್ಷೇತ್ರದಲ್ಲಿ ಸುಮಾರು ಒಟ್ಟಾರೆ 25ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಮಾಡಬೇಕಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತ್ರೆಯ ಯಶ್ವಸಿಗೆ ಕಾರಣರಾದ ಸಿದ್ದರಾಮೇಶ್ವರ ಸ್ವಾಮಿಯ ಭಕ್ತರಿಗೆ ಹಾಗೂ ಜಾತ್ರೆಯಲ್ಲಿ ತೊಡಗಿಸಿಕೊಂಡಂತಹ ಎಲ್ಲರನ್ನು ಪ್ರಶಂಸಿದ ಅವರು ಸಿದ್ದರಾಮೇಶ್ವರಸ್ವಾಮಿ ದೇವಾಲಯದ ನಿಮರ್ಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು, ಮುಂದಿನ ವರ್ಷ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲು ಅನುಮತಿ ನೀಡಿದರೆ ಗೋಡೆಕೆರೆಯಲ್ಲೇ ಆಚರಿಸಲು ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು ಗಣಿ ಬಾದಿತ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಈ ಕ್ಷೇತ್ರದ ಅಭಿವೃದ್ದಿಗಾಗಿ ಹೆಚ್ಚು ಹಣವನ್ನು ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಾತ್ರೆಯ ಯಶಸ್ವಿಯಾಗಲು ಕಾರಣರಾದಂತಹ ದೇವರ ಜೊತೆಯಲ್ಲಿ ಓಡಾಡಿದವರು, ದಾಸೋಹವನ್ನು ನೋಡಿಕೊಂಡವರು, ಬೆಳಕಿನ ವ್ಯವಸ್ಥೆ ಮಾಡಿದವರು, ರಸ್ತೆ, ಕಲ್ಯಾಣಿ, ದೇವಾಲಯದ ಸ್ವಚ್ಚತೆ, ತಪೋವನದ ಸ್ವಚ್ಛತೆ, ನೀರಿನ ವ್ಯವಸ್ಥೆ ಮಾಡಿದ್ದಂತಹವರನ್ನು  ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಡೆಕೆರೆಯ ಮೃತ್ಯುಂಜಯದೇಶೀಕೇಂದ್ರ ಸ್ವಾಮಿಜಿ, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಗುಬ್ಬಿ ಜಿ.ಪಂ.ಸದಸ್ಯ ಕೃಷ್ಣಪ್ಪ, ರಾಜ್ಯ ಹಾಲುಒಕ್ಕೂಟದ ಸದಸ್ಯರಾದ ಚಂದ್ರಶೇಖರ್, ತಿಪ್ಪೂರು ಶಿವಯ್ಯ, ಜಗಜ್ಯೋತಿ ಸಿದ್ದರಾಮಯ್ಯ, ಬೆಣ್ಣೆಹಳ್ಳಿ ಸಿದ್ದರಾಮಯ್ಯ ಗುರುಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Saturday, May 21, 2016




ಗುರುಸಿದ್ದರಾಮೇಶ್ವರ ಜಾತ್ರೆಗೆ ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಮೇ.21 : ಪ್ರಧಾನಮಂತ್ರಿ ಮೋದಿಯವರ ಆಶಯವನ್ನು ಈಡೇರಿಸುವುದು ನನ್ನ ಆದ್ಯತೆ, 40-50 ವರ್ಷಗಳ ನಂತರ ರಾಜ್ಯದಲ್ಲಿ ಭೀಕರ ಬರಗಾಲದಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಳೆಯಿಲ್ಲದೆ ದನಗಳಿಗೆ, ಮೇವಿಲ್ಲದೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಳೆಯ ಜನ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಎಂದು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಗೋಡೆಕೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೇಶ್ವರರ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ, ನದಿ ಜೋಡಣೆಗೆ ವಿನೂತನ ಬೆಳೆವಿಮೆಗೆ ಜಾರಿಗೆ ತಂದಿದ್ದಾರೆ, ರೈತರು ಶೇ.2%ರಷ್ಟು ಬೆಳೆವಿಮೆಯ ಪ್ರೀಮಿಯಂ ಕಟ್ಟಿದ್ದರೆ ಸಾಕು, ಶೇ.35%ರಷ್ಟು ಬೆಳೆ ನಾಶವಾದರೆ, ಸೆಟ್ಲೈಟ್ ಮುಖಾಂತರ ವೀಕ್ಷಿಸಿ ಸಂಪೂರ್ಣ ವಿಮೆ ನೀಡಲಾಗುತ್ತಿದೆ, ಕೆರೆ ಹೂಳು ತೆಗೆಯುವುದು, ರಾಜ್ಯದಲ್ಲಿ 12ರಿಂದ 15ಗಂಟೆ ಉಚಿತ ವಿದ್ಯುತ್ ನೀಡುವ ಅಪೇಕ್ಷೆ ಇದೆ, ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಿ ದೇಶದ ಆಥರ್ಿಕ ಸ್ಥಿತಿ ಸುಧಾರಣೆ ತಂದಿದ್ದಾರೆ, ರೈಲ್ವೆ, ರಸ್ತೆ, ಸುಧಾರಣೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದ ಅವರು, ಚೀನಾ, ಅಮೇರಿಕಾಗಿಂತಲೂ ಭಾರತ ಆಥರ್ಿಕವಾಗಿ ಬಲಿಷ್ಠವಾಗುತಿದೆ, ಭಾರತ ಶತಮಾನದ ಆಥರ್ಿಕವಾಗಿ ಬಲಿಷ್ಠವಾಗುತ್ತಿದೆ ಎಂದರು.
 ಹಿಂದಿನ ಸಕರ್ಾರಗಳು ಅನ್ನದಾತ  ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಸರಿಯಾದ ವಿದ್ಯುತ್ ಸಮನ್ವಯ ಬಗ್ಗೆ ಗಮನ ಹರಿಸಿಲ್ಲ ಎಂದ ಅವರು,  ತಾವು ಮುಖ್ಯಮಂತ್ರಿಯಾದಾಗ ರೈತರಿಗೆ ಉಚಿತ ವಿದ್ಯುತ್, ಸುವರ್ಣಗ್ರಾಮ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪಕ್ಷಬೇಧ ಮರೆತು ರಾಜ್ಯದ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ ಎಂದರು.
ಕಾಯಕಯೋಗಿ ಸಿದ್ದರಾಮರು ಕೆರೆಕಟ್ಟೆಗಳನ್ನು ಕಟ್ಟಿ ಅವುಗಳ ಸಂರಕ್ಷಣೆ ಜನರಲ್ಲಿ ಕಾಯಕದ ಬಗ್ಗೆ ಜಾಗೃತಿ ಮೂಡಿಸಲು ನಾಲ್ಕು ಸಾವಿರ ಶಿಷ್ಯರ ಮೂಲಕ ಕೆರೆ ಕಟ್ಟೆಗಳನ್ನು ಕಟ್ಟಲು ತೊಡಗಿಸಿಕೊಂಡಿದ್ದರು, ಶರಣರು ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸದೃಢರಾಗಬೇಕು ಎಂದು ಆಶಯ ಹೊಂದಿದ್ದರು ಎಂದರು.
ಮಾಜಿ ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಲ್ಲಿ ನೀರಿಲ್ಲ ಅನೇಕ ನಾಯಕರ ಹೋರಾಟದ ಫಲವಾಗಿ ಇಂದು ಜಿಲ್ಲೆಗೆ ನೀರಾವರಿ ಯೋಜನೆಗಳಿಂದ ನೀರು ಬಂದಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಮೊದಲ ಆದ್ಯತೆಯನ್ನು ನೀರಾವರಿಗೆ ನೀಡಿ ಕೃಷ್ಣನದಿ ಪಾತ್ರದ ಮಧ್ಯಕನರ್ಾಟಕದ ಹಾಗೂ ತುಮಕೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವ ಕಾರ್ಯಕ್ರಮ ರೂಪಿಸಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಚಿ.ನಾ.ಹಳ್ಳಿ ತಾ.ಹೇಮಾವತಿ ನಾಲೆಯಿಂದ 28ಕೆರೆಗಳಿಗೆ ನೀರು ಹರಿಸಿ ಯೋಜನೆಗೆ ಹಣ ಬಿಡುಗಡೆ ಮಾಡಿದರು. 
ಈಗ ನಾನಾ ಕಾರಣಗಳಿಂದ ಕಾಮಗಾರಿ ಕುಂಠಿತಗೊಂಡಿದೆ, ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಜಾರಿಗೆ ತರುವ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಸಕರ್ಾರವನ್ನು ಆಗ್ರಹಿಸಿದರು. ಗೋಡೆಕೆರೆಯ ಶ್ರೀ ಸಿದ್ದರಾಮೇಶ್ವರ ತಾಲ್ಲೂಕಿನ ವನ ವಿಶ್ವ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ, ಈ ಭಾಗದ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಇಲ್ಲಿನ ಅಂತರ್ಜಲ ಮಟ್ಟ ಸುಧಾರಿಸಿದೆ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಶರಣರ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು ನಮಗಾಗಿ ಬಿಟ್ಟು ಹೋದ ಸಂದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಸಿದ್ದರಾಮೇಶ್ವರರು ಕೆರೆ-ಕಟ್ಟೆ ದೇವಾಲಯಗಳನ್ನು ಕಟ್ಟುವ ಮೂಲಕ ಕಾಯಕ ಯೋಗಿಯಾಗಿ ಸಮಾಜಕ್ಕೆ ಮಾರ್ಗದರ್ಶನವಾದರೂ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು 21ನೇ ಶತಮಾನ ಮಾನವ ಧರ್ಮವಾಗಬೇಕು ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಒಂದು ವಾರ ಕಾಲ ನಡೆಯುವ ಜಾತ್ರೆಯ ದಾಸೋಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಬಸವರಾಜು ಬೊಮ್ಮಾಯಿರುವರು ನೀರಾವರಿ ಸಚಿವರಾಗಿದ್ದಾಗಿ ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗೆ 102ಕೋಟಿ ಬಿಡುಗಡೆ ಮಾಡಿದ್ದರು, ನಡುವನಹಳ್ಳಿ, ಜೆ.ಸಿ.ಪುರ ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸಲು 12ಕೋಟಿ ರೂ ಬಿಡುಗಡೆ ಮಾಡಿ ಈ ಭಾಗದ ಕೆರೆಗಳಿಗೆ ನೀರು ಹರಿಸಿರುವುದರಿಂದ ಅಂತರ್ಜಲ ಹೆಚ್ಚಾಗಿದೆ ಎಂದ ಅವರು, ಶ್ರೀ ಸಿದ್ದರಾಮೇಶ್ವರರ ದೇವಾಲಯ ಜೀಣರ್ೋದ್ದಾರ ಕಾರ್ಯಕ್ರಮಕ್ಕೆ 15ಕೋಟಿ ವೆಚ್ಚವಾಗುತ್ತಿದ್ದು ರಾಜಗೋಪುರ ನಿಮರ್ಿಸಲು 5 ರಿಂದ 6ಕೋಟಿ ರೂಪಾಯಿ ಭಕ್ತರು ನೀಡುತ್ತಿದ್ದಾರೆ, ಗೋಡೆಕೆರೆಯಲ್ಲಿ ಯಾತ್ರಿ ನಿವಾಸ ಹಾಗೂ ಸಮುದಾಯ ಭವನ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಅಂದಿನ ಜಿಲ್ಲಾಧಿಕಾರಿಗಳ ನಿರ್ಲಕ್ಷದಿಂದ ಹಣ ವಾಪಸ್ ಹೋಯಿತು, ತಾಲ್ಲೂಕಿನ ಗಣಿಗಾರಿಕೆಯಿಂದ ಬರುವ ಹಣವನ್ನು ಗೋಡೆಕೆರೆ ಭಾಗಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕಾಯಕವೇ ಜೀವನ, ಕೆರೆ-ಕಟ್ಟೆಗಳನ್ನು ನಿಮರ್ಿಸುವುದು, ಗೋವುಗಳ ರಕ್ಷಣೆ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳಿಗೆ ಸಿದ್ದರಾಮೇಶ್ವರರು ಆದ್ಯತೆ ನೀಡಿ ಕಾಯಕ ಯೋಗಿಗಳಾದರು, ಪೂಜೆ ಶ್ರೇಷ್ಠವಲ್ಲ ಕಾಯಕ ಧರ್ಮ ಶ್ರೇಷ್ಠ ಎಂದ ಅವರು ಈಗ ಹಣ ಶ್ರೇಷ್ಠವಾಗಿದೆ ಹಣದಿಂದಲೇ ಗುರುತಿಸಿಕೊಳ್ಳುವುದು ಶ್ರೇಷ್ಠವಲ್ಲ, ಸಾಧನೆಯಿಂದ ಮೇಲೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಮಾಜಿ ಶಾಸಕರಾದ ಬಿ.ಸಿ.ನಾಗೇಶ್, ಕೆ.ಎಸ್.ಕಿರಣ್ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮಸಾಲೆಜಯರಾಂ, ಎಂ.ಎಂ.ಜಗದೀಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಕಲ್ಲೇಶ್, ತಾ.ಪಂ.ಸದಸ್ಯೆ ಶೈಲಶಶಿಧರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎನ್.ವಿ.ಅನಘ ವಿರಚಿತ ಮಕ್ಕಳ ಕಥೆಗಳ ಆಕೃತಿ ಪುಸ್ತಕವನ್ನು ಮಾಜಿ ಸಚಿವ ಸೊಗಡು ಶಿವಣ್ಣ ಬಿಡುಗಡೆ ಮಾಡಿದರು.
ಬಾಕ್ಸ್-1
ರಾಜ್ಯಾಧ್ಯಕ್ಷ ಸ್ಥಾನ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರ ಸ್ಥಾನ ಹೊಂದಿರುವ ನಿಮ್ಮನ್ನು ಈ ರಾಜ್ಯದ  ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿಲ್ಲ ಕೇವಲ ರಾಜ್ಯಾದ್ಯಕ್ಷ ಸ್ಥಾನಕ್ಕೆ ತೃಪ್ತಿಪಡುವಿರಾ ಇಲ್ಲ ನೀವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂಘೋಷಣೆ ಪಡಿಸಿಕೊಳ್ಳುವಿರಾ ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ರಾಜ್ಯದ ಜನರ ಆಶಿವರ್ಾದ ಮತ್ತು ದೈವ ಬಲ ಇದ್ದಂತೆ ಎಂದು ಹೇಳಿದರು.
ಐದು ರಾಜ್ಯಗಳ ಚುನಾವಣಾ ಫಲಿತಾಂಶ ಒಳ್ಳೆಯ ಫಲಿತಾಂಶ ಬಂದಿದೆ ಬಿಜೆಪಿ ಪಕ್ಷಕ್ಕೆ ಹಾಗೂ ಭವಿಷ್ಯದಲ್ಲಿ ರಾಜ್ಯದ ಗೆಲುವಿಗೆ ಸಹಕಾರಿಯಾಗಲಿದೆ, ಈ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
 ಇದೊಂದು ಬಹಳ ಒಳ್ಳೆಯ ಗೆಲುವು ಆಗಿದೆ, ಕೇರಳ ರಾಜ್ಯದಲ್ಲಿ ಮೊದಲ ಬಾರಿಗೆ ಬಿ.ಜೆ.ಪಿ ಖಾತೆ ತೆರೆಯುವ ಮೂಲಕ ಹೊಸ ಮುನ್ನುಡಿ ಬರೆದಿದೆ, ಈ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ನಾಶವಾಗಲಿದೆ ಕನರ್ಾಟಕ ರಾಜ್ಯದಲ್ಲಿ ಕೂಡ ಬಿ.ಜೆ.ಪಿ ಅಧಿಕಾರ ಹಿಡಿಯಲಿದೆ ಎಂದರು. 
ಬಿ.ಎಸ್.ಯಡಿಯೂರಪ್ಪ,  ಬಿಜೆಪಿ ರಾಜ್ಯಾಧ್ಯಕ್ಷ

ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಪತ್ರಿಕಾಗೋಷ್ಠಿ 
ಚಿಕ್ಕನಾಯಕನಹಳ್ಳಿ,ಮೇ.21 : ಫೆಬ್ರವರಿ ತಿಂಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವವಿದ್ದುದರಿಂದ ತುತರ್ಾಗಿ ನೀರು ಸರಬರಾಜು ಮಾಡುವ ಹಿನ್ನಲೆಯಲ್ಲಿ ಅಂದಿನ ಅಧ್ಯಕ್ಷರಾದ ಪ್ರೇಮಾರವರ ಅವಧಿಯಲ್ಲಿ ಚೆಕ್ನೆಟ್, ವಾಲ್ಡ್ರಾಡ್ ರಿಪೇರಿ ಸೇರಿದಂತೆ ದಬ್ಬೆಘಟ್ಟದ ಕೊಳವೆ ಬಾವಿಗೆ ಕೇಬಲ್ ಅಳವಡಿಸಲು 1.78ಲಕ್ಷ ರೂ ನೀಡಿದ್ದೇನೆ ಉಪವಿಭಾಗಾಧಿಕಾರಿಗಳ ಆಡಳಿತಾವಧಿಯಲ್ಲಿ ಅಲ್ಲ ಎಂದು ಪುರಸಬಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸ್ಪಷ್ಟಪಡಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸದಸ್ಯರು ವಾಲ್ರಾಡ್, ಚೆಕ್ನೆಟ್ಗೆ 500 ರೂ ಬೆಲೆ ಬಾಳುತ್ತದೆ ಎಂದು ಆರೋಪಿಸಿದ್ದಾರೆ ಆದರೆ ವಾಸ್ತವ ಇದರ ಬೆಲೆ ನಾಲ್ಕು ಸಾವಿರಕ್ಕೂ ಹೆಚ್ಚಾಗಿದೆ, ಸಂಬಂಧಪಟ್ಟ ಗುತ್ತಿಗೆದಾರರಿಗೆ ಚೆಕ್ ನೀಡಿದ್ದೇವೆ ಹೊರತು ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು. ಪಟ್ಟಣದಲ್ಲಿ ಹೊಸದಾಗಿ 19ಕೊಳವೆ ಬಾವಿಗಳನ್ನು ಕೊರೆದಿದ್ದು 12ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಲಾಗಿದೆ ಇನ್ನು 7ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಬಂದ ತಕ್ಷಣ 2 ರಿಂದ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದರು.
  ಪುರಸಭೆಯಲ್ಲಿ ಮಧ್ಯವತರ್ಿಗಳ ಹಾವಳಿ ಇಲ್ಲ, ಕೆಲವು ಮಧ್ಯವತರ್ಿಗಳು ಹಣ ಮಾಡಲು ಬಂದರೆ ಅಂತಹವರ ಬಗ್ಗೆ ನಮ್ಮ ಗಮನಕ್ಕೆ ತರುವಂತೆ ಹಾಗೂ ಪುರಸಭಾ ಸಿಬ್ಬಂದಿಗಳು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಸಿಬ್ಬಂದಿಗಳು ಯಾರದೇ ಒತ್ತಡಕ್ಕೆ ಮಣಿಯಬಾರದು ಹಾಗೇನಾದರೂ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿ ಆಸ್ತಿಗಳ ಖಾತೆ ಮಾಡಿದರೆ ಅದಕ್ಕೆ ಅವರೇ ಜವಬ್ದಾರರು ಅಂತಹವರ ಮೇಲೆ ಸಾರ್ವಜನಿಕರು ತಮ್ಮ ಗಮನಕ್ಕೆ ತಂದರೆ ನಿದರ್ಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಕಿರಿಯ ಅಭಿಯಂತರರುಗಳಾದ ಯೋಗಾನಂದ್ಬಾಬು, ಮಹೇಶ್, ಸಿಬ್ಬಂದಿಗಳಾದ ನಾಗರಾಜು, ಶಿವಣ್ಣ, ಜಯಶಂಕರ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಹೆಚ್.ಡಿ.ದೇವೇಗೌಡ ಪತ್ರಿಕಾಗೋಷ್ಠಿ
ಚಿಕ್ಕನಾಯಕನಹಳ್ಳಿ,ಮೇ.21 : ಕೇಂದ್ರದ ಬಿ.ಜೆ.ಪಿ ಸಕರ್ಾರ  ರೈತರಿಗೆ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನೀಡಿಲ್ಲ, ರಾಜ್ಯ ಸಕರ್ಾರ ಸಮರ್ಥವಾಗಿ ಬರ ಪರಿಸ್ಥಿತಿಯನ್ನು ನಿಭಾಯಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆರೋಪಿಸಿದರು.
ತಾಲ್ಲೂಕಿನ ಯಳನಡು ಸಿದ್ದರಾಮೇಶ್ವರ ಜಾತ್ರೆಗೆ ಪಾಲ್ಗೋಳ್ಳಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿದರು. ಇತ್ತೀಚೆಗೆ ನಡೆದ ಐದು ರಾಜ್ಯಗಳ ಫಲಿತಾಂಶ ಪ್ರಾದೇಶಿಕ ಪಕ್ಷಗಳ ಸಾಮಥ್ರ್ಯವನ್ನು ತೋರಿಸಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳೇ ರಾಷ್ಟ್ರ ರಾಜಕಾರಣದಲ್ಲಿ ನಿಣರ್ಾಯಕ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಸ್ಸಾಂನ ವಲಸಿಗರ ಸಮಸ್ಯೆಯನ್ನು ಕಾಂಗ್ರೆಸ್ ಸೂಕ್ಷವಾಗಿ ಗ್ರಹಿಸದೇ ಎಡವಿದ್ದರ ಪರಿಣಾಮವಾಗಿ ಬಿ.ಜೆ.ಪಿ ಅಧಿಕಾರಕ್ಕೆ ಬಂದಿತು. ಅಸ್ಸಾಂನ ಜನತೆ ಮೋದಿಯವರ ಮೇಲೆ ನಂಬಿಕೆ ಇಟ್ಟು ಪಕ್ಷವನ್ನು ಗೆಲ್ಲಿಸಿದ್ದಾರೆ. ಅವರ ಅಶೋತ್ತರವನ್ನು ಈಡೇರಿಸುವ ಜವಬ್ದಾರಿ ನರೇಂದ್ರ ಮೋದಿಯವರ ಮೇಲಿದೆ ಎಂದರು.
ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸಕರ್ಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಹಾಯ ಮಾಡಿಲ್ಲ ಬಿಜೆ.ಪಿ ನಾಯಕರು ರಾಜ್ಯ ಸುತ್ತಿ ಸಾಂತ್ವಾನ ಹೇಳುವ ನಾಟಕ ಮಾಡಿದ್ದಾರೆ. ಸ್ವಂತಹ ಸಿದ್ದರಾಮಯ್ಯ ಅವರೇ ಸಂತ್ರಸ್ಥರ ಮನೆಗೆ ಹೋಗಿ ಬಂದಿದ್ದಾರೆ, ಸಾಂತ್ವನ ಸಮಸ್ಯೆಗಳಿಗೆ ಪರಿಹಾರವಲ್ಲ. ಬರಗಾಲವನ್ನು ಎದುರಿಸುವ ಬದ್ದತೆಯನ್ನು ಎರಡು ಸಕರ್ಾರಗಳು ತೋರುತ್ತಿಲ್ಲ ಎಂದರು.
ಮಂಡ್ಯದ ಕಬ್ಬ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಾಗ ರೈತರ ಮನೆಗೆ ಮೊದಲು ಹೋದವನು ನಾನು, ನಂತರ ಕೃಷ್ಣ ಬಂದರು, ಆಮೇಲೆ ಸಕರ್ಾರ, ನನ್ನ ರೈತ ಪರ ಕಾಳಜಿ ಏತಹದು ಎಂದು ಹೇಳಲು ಇಷ್ಟು ಸಾಕು ಎಂದರು.
ಈಗ ನನಗೆ 83ವರ್ಷ ಈಗಾಗಲೇ ರಾಜ್ಯದಾದ್ಯಂತ ಸುತ್ತಿ ಪಕ್ಷ ಸಂಘಟಿಸಿದ್ದೇನೆ, ಪುನಃ ಮತ್ತೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಬಲಗೊಳಿಸುತ್ತೇನೆ, ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ರೂ.50ಸಾವಿರದಿಂದ 1ಲಕ್ಷದವರೆವಿಗೆ ವೈಯಕ್ತಿಕ ಪರಿಹಾರ ನೀಡಿದ್ದಾರೆ, ಕೇಂದ್ರ ಸಕರ್ಾರದಿಂದ ರಾಜ್ಯ ಸಕರ್ಾರ ಪರಿಹಾರದ ಹಣ ಬಂದಿಲ್ಲ ಎಂದು ಆರೋಪಿಸಿದರೆ, ರಾಜ್ಯ ಬಿಜೆಪಿ ನಾಯಕರುಗಳು ಬಿಡುಗಡೆಯಾಗಿರುವ ಹಣವನ್ನು ಸರಿಯಾಗಿ ಖಚರ್ು ಮಾಡಿಲ್ಲ ಎಂದು ಆರೋಪ, ಪ್ರತ್ಯಾರೋಪ ಮಾಡುವ ಮೂಲಕ ಬರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆಗಳ ರಾಜಕೀಯ ಮೈತ್ರಿಯನ್ನು  ರಾಜ್ಯ ಹಾಗೂ ರಾಷ್ಟ್ರರಾಜಕಾರಣಕ್ಕೆ ತಳಕು ಹಾಕಬಾರದು, ಸ್ಥಳೀಯ ನಾಯಕರುಗಳ ಸಲಹೆಯಂತೆ ತುಮಕೂರು ಮತ್ತು ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್






ಹಾಗೂ ಶಿವಮೊಗ್ಗ ಮತ್ತು ಬೆಂಗಳೂರು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರುಗಳಾದ ಹೆಚ್.ಬಿ.ಪ್ರಕಾಶ್, ಸಿ.ಡಿ.ಚಂದ್ರಶೇಖರ್, ಸಿ.ಎಸ್.ರಮೇಶ್,   ಮುಖಂಡರುಗಳಾದ ಸಿ.ಎಸ್.ನಟರಾಜು, ಸಿ.ಡಿ.ಸುರೇಶ್, ಎಂ.ಎನ್.ಸುರೇಶ್, ಸಿ.ಎಲ್.ದೊಡ್ಡಯ್ಯ, ಸಿ.ಹೆಚ್.ದೊರೆಮುದ್ದಯ್ಯ, ಪುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬಾಲಕ ಮತ್ತು ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.21 : ತಾಲ್ಲೂಕಿನ ಹಾಗೂ ಪಟ್ಟಣದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಮೆಟ್ರಿಕ್ ನಂತರದ ಕೋಸರ್್ಗಳಲ್ಲಿ ಅಧ್ಯಯನ ಮಾಡುತ್ತಿರುವ ಪ.ಜಾತಿ, ಪ.ವರ್ಗದ ವಿದ್ಯಾಥರ್ಿಗಳಿಗಾಗಿ ಅಜರ್ಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ(ಗ್ರೇಡ್-2) ತಿಳಿಸಿದ್ದಾರೆ.
ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಗುರುವಾಪುರ, ಚಿಕ್ಕನಾಯಕನಹಳ್ಳಿ ಟೌನ್, ದಸೂಡಿ, ಹುಳಿಯಾರು, ಬರಕನಹಾಳ್, ಬೆಳಗುಲಿಗಳಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯ ಮತ್ತು ಚಿಕ್ಕನಾಯಕನಹಳ್ಳಿ ಟೌನ್ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಈ ಸಾಲಿಗಾಗಿ 5 ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಅರ್ಹ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ತಾಲ್ಲೂಕಿನ ಗೋಡೆಕೆರೆ ಗೇಟ್ನಲ್ಲಿರುವ ಪರಿಶಿಷ್ಠ ವರ್ಗದ ಆಶ್ರಮ ಶಾಲೆಗೆ 1 ರಿಂದ 5ನೇ ತರಗತಿಯ ಪರಿಶಿಷ್ಟ ವರ್ಗ / ಪ.ಜಾತಿ / ಹಿಂದುಳಿದ ವರ್ಗದ ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ನಿಲಯ ಮೇಲ್ವಿಚಾರಕರು ಅಥವಾ ಸಹಾಯಕ ನಿದರ್ೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆರವರನ್ನು ಸಂಪಕರ್ಿಸಲು ಕೋರಿದ್ದಾರೆ.

Thursday, May 19, 2016

ಜಾತ್ರೆಯಲ್ಲಿ ಜನಮನಸೂರೆಗೊಂಡ ಮೂರುಮುತ್ತು ನಗೆನಾಟಕ
 ಚಿಕ್ಕನಾಯಕನಹಳ್ಳಿ,ಮೇ.19 : ತಾಲ್ಲೂಕಿನ ಗೋಡೆಕೆರೆಯ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ದೊಡ್ಡಜಾತ್ರೆ ಅಂಗವಾಗಿ ಗುರುವಾರ ಶಶಾಂಕ ಮಂಡಲೋತ್ಸವ ಜರುಗಿತು. .ಬುಧವಾರ ಸಂಜೆ  ಅಶ್ವವಾಹನೋತ್ಸವ ಹಾಗೂ ಕುಂದಾಪುರದ ರೂಪಕಲಾ ನಾಟಕ ಸಂಸ್ಥೆ ವತಿಯಿಂದ 'ಮೂರುಮುತ್ತು' ನಗೆನಾಟಕ ಅಭಿನಯಿಸಲ್ಪಟ್ಟಿತು.
  ಗುರುವಾರ ಸಂಜೆ ತಾಲ್ಲೂಕಿನ ತಮ್ಮಡಿಹಳ್ಳಿ ವಿರಕ್ತ ಮಠದ ಆರಾಧ್ಯ ದೈವ ಪರ್ವತ ಮಲ್ಲಿಕಾಜರ್ುನ ಸ್ವಾಮಿ ಮೂತರ್ಿಯನ್ನು ಪಟ್ಟಣದ ಮೂಲಕ ಭಕ್ತರು ಕಾಲು ನಡಿಗೆಯಲ್ಲಿ ಗೋಡೆಕೆರೆಗೆ ಕರೆದೊಯ್ದರು.
ಇಂದು ಮಹಾ ರಥೋತ್ಸವ ಹಾಗೂ ಕಂತೆಸೇವೆ: ಮೇ.20 ಶುಕ್ರವಾರ ಸಂಜೆ ಮಹಾರಥೋತ್ಸವ ಹಾಗೂ ಧಾಮರ್ಿಕ ಕಾರ್ಯಕ್ರಮ ಜರುಗಲಿದೆ.ಸಾನಿಧ್ಯ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ಧರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ. ಉದ್ಘಾಟನೆ: ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿ ಕೇಂದ್ರ ಸ್ವಾಮೀಜಿ. ನೇತೃತ್ವ; ನಂದಿಗುಡಿ ಬ್ರಹ್ಮನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ. ಉಪಸ್ಥಿತಿ;ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ,ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ,ಕರಿವೃಷಬ ದೇಶೀಕೇಂದ್ರ ಸ್ವಾಮೀಜಿ,ಗವಿಮಠದ ಚಂದ್ರಶೇಖರ ಸ್ವಾಮೀಜಿ,ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ಸ್ವಾಮೀಜಿ,ಮಾರಗೊಂಡನಹಳ್ಳಿ ವಿರಕ್ತ ಮಠದ ಬಸವಲಿಂಗಸ್ವಾಮೀಜಿ,ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ,ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ,ಕರಡಿಗವಿಮಠದ ಶಂಕರಾನಂದ ಸ್ವಾಮೀಜಿ,ಕಾರದಮಠದ ವೀರಬಸವ ಕಾರದೇಶ್ವರ ಸ್ವಾಮೀಜಿ,ಮಾಡಾಳು ವಿರಕ್ತ ಮಠದ ರುದ್ರಮುನೀಶ್ವರಸ್ವಾಮೀಜಿ,ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯ ಸ್ವಾಮೀಜಿ,ಪುಷ್ಪಗಿರಿ ಸಂಸ್ಥಾನ ಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ,ದೊಡ್ಡಗುಣಿ ಬ್ರಹ್ಮನ್ಮಠದ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸಾಮೀಜಿ,ಮಾದೀಹಳ್ಳಿ ಮಠದ ಮಲ್ಲಿಕಾಜರ್ುನ ಸ್ವಾಮೀಜಿ,ಹೊನ್ನವಳ್ಲಿ ಕರಿಸಿದ್ಧೇಶ್ವರ ಮಠದ ಶಿವಪ್ರಕಾಶ ಸಿವಾಚಾಯ್ ಸ್ವಾಮೀಜಿ ಭಾಗವಹಿಸಲಿದ್ದಾರೆ.
    ರಥೋತ್ಸವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ, ಶಾಸಕ ಸಿ.ಬಿ.ಸುರೇಶ್ಬಾಬು, ಕೇಂದ್ರ ಕೈಗಾರಿಕಾ ಸಚಿವ ಜಿ.ಎಂ.ಸಿದ್ದೇಶ್ವರ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರುಗಳಾದ ಸೊಗಡು ಶಿವಣ್ಣ,ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಎಂ.ಉದಾಸಿ ಮುಂತಾದವರು ಭಾಗವಹಿಸಲಿದ್ದಾರೆ.

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು : ಬಿ.ಇ.ಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಮೇ.19 : ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಇದನ್ನು ಕಸಿದುಕೊಳ್ಳುವ ಅಧಿಕಾರ ಸ್ವತಹ ಪೋಷಕರಿಗೂ ಇಲ್ಲ, 6ರಿಂದ 14ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕರೆತನ್ನಿ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ 23ನೇ ವಾಡರ್್ ಗಾಂಧಿನಗರದ ದಕ್ಕಲಿಗರ ಕೇರಿಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಶೇಷ ದಾಖಲಾತಿ  ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ತಮ್ಮ ಗುರಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಎನ್.ಇಂದಿರಮ್ಮ ಮಾತನಾಡಿ, ಅಲೆಮಾರಿ ಮಕ್ಕಳಿಗೆ ತಂದೆ-ತಾಯಿಯ ಪೋಷಣೆಯೂ ಗಗನ ಕುಸುಮವಾಗಿದೆ, ಅಲೆಮಾರಿಗಳಲ್ಲಿ ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆಗಬೇಕು ಎಂದರು. 
ಕಾರ್ಯಕ್ರಮದಲ್ಲಿ ಬಿಆರ್ಸಿ ತಿಮ್ಮರಾಯಪ್ಪ, ಸಿಆರ್ಪಿ ಸುರೇಶ್, ಬಿಆಆರ್ಪಿ ವಿರೂಪಾಕ್ಷ, ಪುರಸಭಾ ಸದಸ್ಯೆ ಪ್ರೇಮದೇವರಾಜು, ಮುಖ್ಯೋಪಾಧ್ಯಾಯ ತಿಮ್ಮಾಬೋವಿ, ರಾಮಕ್ಕ, ಶಿಕ್ಷಕರುಗಳಾದ ಸಿ.ಟಿ.ರೇಖಾ, ಪುಟ್ಟಲಕ್ಷ್ಮೀ, ಸುವರ್ಣಮ್ಮ, ಜಯಮ್ಮ  ಮತ್ತಿತರರು ಉಪಸ್ಥಿತರಿದ್ದರು.




ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊಸಹಳ್ಳಿ ಗ್ರಾಮದ ಸಂಗಮೇಶ್ವರ ದೇವರ ಅಗ್ನಿಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.





Wednesday, May 18, 2016


ಕುಗ್ರಾಮಗಳ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಟಾಪರ್
ಚಿಕ್ಕನಾಯಕನಹಳ್ಳಿ : ಕನಿಷ್ಟ ಮನೆಪಾಠದ ಸೌಲಭ್ಯವೂ ಇಲ್ಲದ ಕುಗ್ರಾಮಗಳ ವಿದ್ಯಾಥರ್ಿಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಸವಲತ್ತುಗಳು ಇರುವ ಪಟ್ಟಣದ ಮಕ್ಕಳಿಗೆ ಸೆಡ್ಡು ಹೊಡೆದಿದ್ದಾರೆ.
 ತಾಲ್ಲೂಕಿನ ಗಡಿ ಗ್ರಾಮ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿನಿ ಎಸ್.ಲಕ್ಷ್ಮಿದೇವಿ ಹಾಗೂ ಶೆಟ್ಟಿಕೆರೆ ಜನತಾ ಪ್ರೌಢಶಾಲೆ ವಿದ್ಯಾಥರ್ಿ ಧನಂಜಯಕುಮಾರ್ ತಲಾ 611 ಅಂಕಗಳನ್ನು ಪಡೆದು ಶೇ.97.76 ಫಲಿತಾಂಶ ಪಡೆಯುವ ಇಬ್ಬರೂ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.
 ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿನಿ ವಿದ್ಯಾಶ್ರೀ 609 ಶೇ.97.44 ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. 
  ಕೃಷಿ ಕೂಲಿ ಕಾಮರ್ಿಕ ದಂಪತಿ ಶಿವಣ್ಣ ಹಾಗೂ ಶೋಭಾ ಇವರ ಮಗಳಾದ ಲಕ್ಷ್ಮೀದೇವಿ ಬಡತನದ ನಡುವೆಯೂ ಶೇ.97.76 ಫಲಿತಾಂಶ ಪಡೆದಿದ್ದಾರೆ.ಕನ್ನಡ-125.ಇಂಗ್ಲಿಷ್-95,ಹಿಂದಿ-98,ಗಣಿತ-95,ವಿಜ್ಞಾನ-100 ಮತ್ತು ಸಮಾಜ ವಿಜ್ಞಾನ 98 ಅಂಕ ಗಳಿಸಿದ್ದಾರೆ.
 ಪತ್ರಿಕೆಯೊಂದಿಗೆ ಮಾತನಾಡಿದ ಎಸ್.ಲಕ್ಷ್ಮಿದೇವಿ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಬಡತನದ ಮಧ್ಯೆಯೂ ಓದಿಗೆ ಬೆಂಬಲ ನೀಡಿದ ತಂದೆ ತಾಯಿಗೆ ಋಣಿ. ಮುಂದೆ ಕೃಷಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ರೈತ ಸಮುದಾಯಕ್ಕೆ ನೆರವಾಗುವುದು ನನ್ನ ಗುರಿ ಎಂದ


ರು.
 ಪ್ರಥಮ ಸ್ಥಾನವನ್ನು ಲಕ್ಷ್ಮಿದೇವಿ ಜತೆ ಹಂಚಿಕೊಂಡಿರುವ ಶೆಟ್ಟಿಕೆರೆ ಜನತಾ ಗ್ರಾಮಾಂತರ ಪ್ರೌಢಶಾಲೆ ವಿದ್ಯಾಥರ್ಿ ಎಚ್.ಆರ್.ಧನಂಜಯ್ಕುಮಾರ್ ,ರಾಜಣ್ಣ ಮತ್ತು ಗಂಗಮ್ಮ ದಂಪತಿ ಪುತ್ರ. ತಾಯಿ ಅಸು ನೀಗಿದ್ದು ಸಾಕು ತಾಯಿ ಸಿದ್ದಮ್ಮ ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಕನ್ನಡ 123, ಹಿಂದಿ-100, ಗಣಿತ-100, ಇಂಗ್ಲಿಷ್-95, ವಿಜ್ಞಾನ-97 ಹಾಗೂ ಸಮಾಜ ವಿಜ್ಷಾನ-96 ಪಡೆದಿದ್ದಾರೆ.
ಶಾಲೆಯಲ್ಲಿ ನಡೆಯುವ ಪಾಠಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದೆ. ಪಠ್ಯ ಪುಸ್ತಕಗಳನ್ನು ಓದುತ್ತಿದ್ದೆ. ಗೈಡ್ ಹಾಗೂ ಮನೆಪಾಠ ಇಲ್ಲ. ಪ್ರತೀ ದಿನ 5 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಶಾಲೆಯ ಶಿಕ್ಷಕರ ಮಾರ್ಗದರ್ಶ ಉತ್ತಮ ಅಂಕ ಗಳಿಸಲು ನೆರವಾಯಿತು. ಮುಂದಿನ ಗುರಿ ಐಎಎಸ್ ಎಂದು ಪತ್ರಿಕೆಗೆ ತಿಳಿಸಿದರು.
  ದ್ವಿತೀಯ ಸ್ಥಾನ ಗಳಿಸಿರುವ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿನಿ ಜಿ.ಕೆ.ವಿದ್ಯಾಶ್ರೀ ಪಡೆದಿರುವ ಒಟ್ಟು ಅಂಕಗಳು 609.ಕನ್ನಡ-124,ಇಂಗ್ಲಿಷ್-98,ಹಿಂದಿ-99,ಗಣಿತ-93,ವಿಜ್ಞಾನ 97 ಹಾಗೂ ಸಮಾಜ ವಿಜ್ಞಾನ-98.
 ಹೆಚ್ಚು ಅಂಕ ಗಳಿಸುವ ಮೂಲಕ ತಾಲ್ಲೂಕಿನ ಕೀತರ್ಿ ಹೆಚ್ಚಿಸಿರುವ ಕೃಷಿ ಕೂಲಿ ಕಾಮರ್ಿಕರ ಮಕ್ಕಳನ್ನು ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ಬಿ.ಎನ್.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಸದರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Tuesday, May 17, 2016


ಎಸ್.ಎಸ್.ಎಲ್.ಸಿ ಪರೀಕ್ಷೆ : ತಾಲ್ಲೂಕಿಗೆ 74.08 ಫಲಿತಾಂಶ 
ಚಿಕ್ಕನಾಯಕನಹಳ್ಳಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ತಾಲೂಕಿನ ಒಟ್ಟು  ಫಲಿತಾಂಶ ಶೇ.74.8ರಷ್ಟು ಬಂದಿದ್ದು, ತಾಲ್ಲೂಕಿನ ಶೆಟ್ಟಿಕೆರೆ ಜನತಾ ಪ್ರೌಢಶಾಲೆಯ ಎಚ್.ಆರ್.ಧನಂಜಯ್ಕುಮಾರ್ 611(97.76%) ಹಾಗೂ ಬಡಕೆಗುಡ್ಲು ಸಕರ್ಾರಿ ಪ್ರೌಡಶಾಲೆಯ ಲಕ್ಷ್ಮೀದೇವಿ.ಎಸ್ 611(97.76%) ಸಮನಾಗಿ ಅಂಕ ಪಡೆದು  ತಾಲ್ಲೂಕಿಗೆ ಮೊದಲಿಗರಾಗಿದ್ದಾರೆ.
ತಾಲೂಕಿನ ಸಕರ್ಾರಿ ಪ್ರೌಢಶಾಲೆಗಳು ಶೇ.78.37 ಪಡೆದಿದ್ದರೆ, ಅನುದಾನಿತ ಶಾಲೆಗಳು ಶೇ.68.71 ಪಡೆದಿದ್ದು, ಅನುದಾನ ರಹಿತ ಪ್ರೌಢಶಾಲೆಗಳು ಶೇ.81.43 ರಷ್ಟು ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲೇ ಅತ್ಯಂತ ಹೆಚ್ಚು  ಅಂಕ ಪಡೆದವರು: ತಾಲ್ಲೂಕಿನ ಬಡಕೆಗುಡ್ಲು ಸಕರ್ಾರಿ ಪ್ರೌಡಶಾಲೆಯ ವಿದ್ಯಾಶ್ರೀ-609(97.44), ಚಿ.ನಾ.ಹಳ್ಳಿ ರೋಟರಿ ಶಾಲೆಯ ಮಹೇಂದ್ರಸಿಂಗ್ ರಾಥೋಡ್-608(97.28%), ಹುಳಿಯಾರು ಕೆಂಕೆರೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪೂನಮ್-608(97.28), ನವೋದಯ ಪ್ರೌಢಶಾಲೆಯ ಸ್ಪೂತರ್ಿ.ಎಚ್.ಜಿ-606(96.96), ಮೇಲನಹಳ್ಳಿ ಮೊರಾಜರ್ಿ ವಸತಿ ಶಾಲೆಯ ಲಕ್ಷ್ಮೀ.ಆರ್.ಎಂ-605(96.80%), ಚಿ.ನಾ.ಹಳ್ಳಿ ರೋಟರಿ ಪ್ರೌಢಶಾಲೆಯ ಧನುಶ್.ಎನ್.ನಾಯಕ್-603(96.48), ಚಿ.ನಾ.ಹಳ್ಳಿ ಸಕರ್ಾರಿ ಪ್ರೌಢಶಾಲೆಯ ದಿಲೀಪ್.ಬಿ.ಗೌಡ-603(96.48), ಬರಗೂರು ಸಕರ್ಾರಿ ಪ್ರೌಢಶಾಲೆಯ ವಿಜಯ್ಕುಮಾರ್.ಬಿ.ಎಸ್.-600(96.00) ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ತಾಲೂಕಿನಲ್ಲಿ ಅತ್ಯಂತ ಹೆಚ್ಚು, ಅತ್ಯಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳು,  ಪಟ್ಟಣದ ನವೋದಯ ಆಂಗ್ಲ ಪ್ರೌಢಶಾಲೆ, ಪಟ್ಟಣದ ದಿವ್ಯ ಪ್ರಭಾ ಪ್ರೌಢಶಾಲೆ ಹಾಗೂ ಮೊರಾಜರ್ಿ ಪ್ರೌಢಶಾಲೆ ಮೇಲನಹಳ್ಳಿ ಶಾಲೆಗಳು ಶೇ.100 ಅಂಕ ಪಡೆದಿದ್ದರೆ, ತಾಲೂಕಿನಲ್ಲೇ ಅತ್ಯಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳೆಂದರೆ ಸಕರ್ಾರಿ ಪ್ರೌಢಶಾಲೆಗಳ ಪೈಕಿ ಗೋಡೆಕೆರೆ ಸ.ಪ.ಪೂ.ಕಾಲೇಜ್ ಶೇ.47.17 ಪಡೆದಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ಗೂಬೆಹಳ್ಳಿ ರಾಮಾಂಜನೇಯ ಪ್ರೌಢಶಾಲೆ ಶೇ.4. ಪಡೆದು ಇಡೀ ತಾಲೂಕಿಗೆ ಅತ್ಯಂತ ಕಳಪೆ ದಜರ್ೆಯ ಶಾಲೆ ಎನಿಸಿಕೊಂಡಿದೆ, ಅನುದಾನಿತ ಶಾಲೆಗಳಲ್ಲಿ ದೊಡ್ಡರಾಂಪುರದ ಮಾರಮ್ಮದೇವರ ಶಾಲೆ ಶೇ.34.48 ಪಡೆದು ಕೊನೆಯ ಸ್ಥಾನವನ್ನು ಪಡೆದಿದೆ.

ಅಗ್ರ ಶ್ರೇಣಿಯಲ್ಲಿ ಪಾಸಾಗಿರುವ ಸ್ಪೂತರ್ಿ:  ಪಟ್ಟಣದ ನವೋದಯ ಶಾಲೆಯ ವಿದ್ಯಾಥರ್ಿನಿ ಹೆಚ್.ಜಿ.ಸ್ಪೂತರ್ಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 606 (ಶೇ.96.96%) ಅಂಕಗಳನ್ನು ಪಡೆದಿದ್ದು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 
ಕನ್ನಡ-125, ಇಂಗ್ಲೀಷ್-97, ಸಮಾಜ-99, ವಿಜ್ಞಾನ-92, ಗಣಿತ-93, ಹಿಂದಿ-100 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಅಂಕ ಪಡೆದು ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಹೊಸಕೆರೆ ಗ್ರಾಮದ ವಕೀಲ ಹೆಚ್.ಎಸ್.ಜ್ಞಾನಮೂತರ್ಿಯವರ ಮಗಳಾದ ಹೆಚ್.ಜಿ.ಸ್ಪೂತರ್ಿ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಟ್ಯೂಷನ್ಗೆ ಹೋಗದೆ ಹೆಚ್ಚಿನ ಅಂಕ ಪಡೆದಿದ್ದೇನೆ, ಈಗ ಪಡೆದಿರುವ ಅಂಕಗಳಿಗಿಂತ ಹೆಚ್ಚಿನ ಅಂಕ ಬರುತ್ತದೆ ಎಂದು ನಿರೀಕ್ಷಿಸಿದ್ದೆ ಎಂದರು.
ಶಾಲೆಯ ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಯಿತು, ಹೊಸಕೆರೆಯಲ್ಲಿರುವ ನಮ್ಮ ಮನೆಯಿಂದ ಬೆಳಗ್ಗೆ 7ಕ್ಕೆ ಮನೆಯಿಂದ ಹೊರಡುತ್ತಿದ್ದೆ ಶಾಲೆಯಲ್ಲಿಯೇ ಸ್ಪೆಷಲ್ ಕ್ಲಾಸ್ ನೀಡುತ್ತಿದ್ದರು ನಂತರ ಶಾಲೆ ಮುಗಿದ ನಂತರ ತಂದೆಯೊಂದಿಗೆ ರಾತ್ರಿ 7ಕ್ಕೆ ಮನೆ ಸೇರಿ ಓದುತ್ತಿದ್ದೆ ಎಂದ ಅವರು ಮುಂದಿನ ದಿನಗಳಲ್ಲಿ ವೈದ್ಯನಾಗುವ ಆಸೆ ಹೊಂದಿದ್ದೇನೆ ಎಂದರು.



ಗ್ರಾಮಸ್ಥರೇ ಒಟ್ಟಾಗಿ ರಸ್ತೆಗೆ ಡಾಂಬರು ಹಾಕಿ ರಸ್ತೆ ಉಬ್ಬು ನಿಮರ್ಾಣ
ಚಿಕ್ಕನಾಯಕನಹಳ್ಳಿ,ಮೇ.17 : ಸರಣಿ ಅಪಘಾತದ ಹಿನ್ನಲೆಯಲ್ಲಿ ಗ್ರಾಮಸ್ಥರೇ ಮುಂದೆ ಬಂದು ರಸ್ತೆ ತಡೆ ನಡೆಸಿ ನಂತರ ರಸ್ತೆಗೆ ಡಾಂಬರು ಹಾಕಿ ಹಮ್ಸ್ನ್ನು ನಿಮರ್ಿಸಿದ ಘಟನೆ ತಾಲ್ಲೂಕಿನ ತರಬೇನಹಳ್ಳಿಯಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ಕಡೆಯಿಂದ ಕೆ.ಬಿ.ಕ್ರಾಸ್ ಕಡೆಗೆ ವೇಗವಾಗಿ ತೆರಳುತ್ತಿದ್ದ ಟಾಟಾಎಸಿ ವಾಹನ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಹೋದ ಸಂದರ್ಭದಲ್ಲಿ ಎದುರಿನಿಂದ ಬಂದ ಟ್ಯಾಂಕರ್ ಲಾರಿಗೆ ಟಾಟಾ ಎ.ಸಿ ಡಿಕ್ಕಿ ಹೊಡೆಯಿತು ಇದರಿಂದ ಚಾಲಕನ ಪಕ್ಕ ಕುಳಿತಿದ್ದ ಪ್ರಯಾಣಿಕರಿಗೆ ತೀವ್ರ ಗಾಯಗೊಂಡು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಏಳು ಮಂದಿಯಿದ್ದರು ಇವರು ಗಾಮರ್ೆಂಟ್ಸ್ ಕಾಮರ್ಿಕರಾಗಿದ್ದಾರೆ. ಬೆಳಗ್ಗೆ 8.30ರ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತರಬೇನಹಳ್ಳಿಯ ಗ್ರಾಮಸ್ಥರು ಮಾತನಾಡಿ, ಗ್ರಾಮದ ಮೂಲಕ ಹಾದು ಹೋಗಿರುವ ಚಾಮರಾಜನಗರ ಮಾರ್ಗ ಜೇವಗರ್ಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿವೆ, ಇತ್ತೀಚೆಗೆ ರಸ್ತೆಯನ್ನು ದುರಸ್ತಿಗೊಳಿಸಿರುವುದರಿಂದ,  ಅಸ್ಥಿತ್ವದಲ್ಲಿದ್ದ ರಸ್ತೆಯ ಉಬ್ಬುಗಳನ್ನು ತೆರವುಗೊಳಿಸಲಾಗಿದೆ ಇದರಿಂದ ವಾಹನ ಸವಾರರು ಅತಿ ವೇಗದ ಚಾಲನೆ ಮಾಡುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಆದ ಕಾರಣ ನಾವೇ ಮುಂದಾಗಿ ರಸ್ತೆಯ ಉಬ್ಬುಗಳನ್ನು ನಿಮರ್ಿಸಿದ್ದೇವೆ, ಇಲಾಖೆಯವರು ಇತ್ತ ಗಮನ ಹರಿಸಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿಮರ್ಾಣ ಮಾಡಬೇಕು ಹಾಗೂ ರಸ್ತೆಯ ತಿರುವುಗಳ ಬಗ್ಗೆ ಸೂಚನ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ವಾರದಲ್ಲಿ ಮೂರು ಅಪಘಾತ : ತರಬೇನಹಳ್ಳಿಯಲ್ಲಿ ರಸ್ತೆ ನಿಮರ್ಾಣವಾದಾಗಿನಿಂದಲೂ ಇದೇ ಸ್ಥಳದಲ್ಲಿ ವಾರದಲ್ಲಿಯೇ ಮೂರು ಅಪಘಾತ ಸಂಭವಿಸಿದ್ದು, ಕಳೆದ ಐದು ದಿನಗಳ ಹಿಂದ ದಾರಿಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ರೈತ ಸಂತೋಷ್ ಮೇಲೆ ಲಾರಿ ಹರಿದು ಸಾವನ್ನಪ್ಪಿದ್ದರು, ಮೂರು ದಿನಗಳ ಹಿಂದ ಲಾರಿಯೊಂದು ಮಗುಚಿ ಬಿದ್ದಿತ್ತು, ಬುಧವಾರ ಬೆಳಗ್ಗೆ ಗಾಮರ್ೆಂಟ್ಸ್ ಕಾಮರ್ಿಕರನ್ನು ಕರೆದೊಯ್ಯುತ್ತಿದ್ದ ಟಾಟಾಎಸಿ ವಾಹನ ಅಪಘಾತಕ್ಕೀಡಾಗಿದೆ.
ಆಕ್ರೋಶಕಗೊಂಡ ಗ್ರಾಮಸ್ಥರು ಹಮ್ಸ್ ನಿಮರ್ಾಣ : ಈ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸುತ್ತಿರುವುದರಿಂದ ತರಬೇನಹಳ್ಳಿ ಗ್ರಾಮಸ್ಥರು ಒಟ್ಟಾಗಿ ರಸ್ತೆ ತಡೆ ನಡೆಸಿದರು. ನಂತರ ಬೇರೆ ಕಡೆ ರಸ್ತೆ ನಿಮರ್ಾಣಕ್ಕೋಸ್ಕರ ಡಾಂಬರ್ ಸಾಗಿಸುತ್ತಿದ್ದ ವಾಹನವನ್ನು ಗ್ರಾಮಸ್ಥರು ತಡೆದು ಡಾಂಬರ್ ಮಿಶ್ರಣವನ್ನು ರಸ್ತೆಯಲ್ಲಿ ಸುರಿಸಿ ಗ್ರಾಮಸ್ಥರೇ ರಸ್ತೆ ದಿಬ್ಬವನ್ನು ನಿಮರ್ಿಸಿದ್ದು ವಿಶೇವಾಗಿತ್ತು.

ಹೇಮಾವತಿ ನೀರು ಶೀಘ್ರ ಚಿ.ನಾ.ಹಳ್ಳಿಗೆ : ಸಚಿವ ಟಿ.ಬಿ.ಜಯಚಂದ್ರ 
ಚಿಕ್ಕನಾಯಕನಹಳ್ಳಿ17:-ತಾಲ್ಲೂಕಿನ 22ಕೆರೆಗಳಿಗೆ ಹೇಮಾವತಿ ನೀರು ಶೀಘ್ರವಾಗಿ  ಹರಿಸುವುದು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡುವುದು ನನ್ನ ಆದ್ಯ ಕರ್ತವ್ಯ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗ್ರಾಮದ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಯವರ ದೊಡ್ಡಜಾತ್ರೆಯ ಮೊದಲದಿನ ಸೋಮವಾರ ಸಂಜೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು, ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಅದನ್ನು ಹೆಚ್ಚಿಸಲು ತಾಲ್ಲೂಕಿನ ಹೇಮಾವತಿ ನೀರಾವರಿ ಯೋಜನೆಯಡಿಯಲ್ಲಿ  ಈಗಾಗಲೇ ಈ ಭಾಗದ ನಡುವನಹಳ್ಳಿಕೆರೆ, ಜೆ.ಸಿಪುರ ಕೆರೆ, ಬ್ಯಾಡರಹಳ್ಳಿಕೆರೆ, ನಾಗೇನಹಳ್ಳಿ ಕೆರೆಗಳಿಗೆ ನೀರು ಹರಿಸಿದ್ದು ಸ್ವಲ್ಪಮಟ್ಟಿನ ಅಂತರ್ಜಲ ಹೆಚ್ಚಿದೆ,  ಉಳಿದಂತೆ 22ಕೆರೆಗಳಿಗೆ ಈ ವರ್ಷದಲ್ಲಿ ನೀರುಹರಿಸುವ ಇಂಗಿತ ವ್ಯಕ್ತಪಡಿಸಿದ ಅವರು,  ಭೂಸ್ವಾದಿನ ಪಡಿಸಿಕೊಂಡಿರುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡುವುದಾಗಿ ತಿಳಿಸಿದರು.
 ಗೋಡೆಕೆರೆ ದೇವಾಲಯಕ್ಕೆ ಇರುವಷ್ಟು ಜಾಗದಲ್ಲೇ ಒಂದು ಉತ್ತಮ ಪ್ರವಾಸಿ ತಾಣವನ್ನಾಗಿಸಲು ಅಭಿವೃದ್ದಿ ಪಡಿಸಲು   ಈ  ಕೂಡಲೇ  ಮುಜುರಾಯಿ ಇಲಾಖೆಯ ಸಚಿವರೊಂದಿಗೆ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿಸಿ ಇನ್ನು ಹೆಚ್ಚಿನ ಅನುದಾನ ನೀಡಿ ಕ್ಷೇತ್ರವನ್ನು ಜಿಲ್ಲೇಯಲ್ಲೆ ಒಂದು ಉತ್ತಮ ಧಾಮರ್ಿಕ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.  
ಕಾರ್ಯಕ್ರಮದ ದಿವ್ಯಸಾನಿದ್ಯವಹಿಸಿದ್ದ ಸ್ಥಿರಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ,  ಗೋಡೆಕೆರೆ ಸಿದ್ದರಾಮೇಶ್ವರರ ಕ್ಷೇತ್ರ ಭೂಸುಕ್ಷೇತ್ರವಾಗಿದ್ದು ಕಾಯಕ ಯೋಗಿ ಸಿದ್ದರಾಮೇಶ್ವರರ ತಪೋಭೂಮಿಯಾಗಿದೆ,  ಈ ಕ್ಷೇತ್ರದಲ್ಲಿ ಯಾತ್ರಿಭವನವಾಗಬೇಕಾಗಿದ್ದು ಸಕರ್ಾರದಿಂದ ಸುಮಾರು 10ಕೋಟಿಗಳಷ್ಟು ಹಣವನ್ನು ಮಂಜೂರು ಮಾಡುವಂತೆ ತಿಳಿಸಿದ ಅವರು,  ಶ್ರೀಸಿದ್ದರಾಮೇಶ್ವರರಬಗ್ಗೆ ವಿವರಿಸಿದರು.
ದಿವ್ಯಸಾನಿದ್ಯವಹಿಸಿದ್ದ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ,  ಗೋಡೆಕೆರೆ ಕ್ಷೇತ್ರವನ್ನು ಒಂದು ಧಾಮರ್ಿಕ ಪವಿತ್ರ ಯಾತ್ರಾಸ್ಥಳವನ್ನಾಗಿಸ ಬೇಕು ಸಮಾಜ ಸುಧಾರಕ,  ಜನರಿಗೆ ಕಾಯಕವನ್ನು ಮಾಡಲು ತಿಳಿಸಿದ ಹಾಗೂ ಜನರ ಉದ್ದಾರಕ್ಕಾಗಿ ಕೆರೆ ಕಟ್ಟೆ ಬಾವಿಗಳನ್ನು ನಿಮರ್ಿಸಿದಂತಹ ಸಿದ್ದರಾಮೇಶ್ವರರು ನಮಗೆ ಆದರ್ಶರಾಗಿದ್ದು ಅವರ ಕ್ಷೇತ್ರದ ಅಭಿವೃದ್ದಿ ಎಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ  ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಸಂಸದ ಜಿ.ಎಸ್.ಬಸವರಾಜು 12ನೇ ಶತಮಾನದ ಶಿವಶರಣರಲ್ಲಿ ನಾಲ್ಕನೇಯವರು ಶ್ರೀ ಸಿದ್ದರಾಮೇಶ್ವರರು ಇವರು ಸಮಾಜಕ್ಕಾಗಿ ಕಾಯಕವನ್ನು  ಮಾಡಲು ತಿಳಿಸಿದಂತವರು ಇವರು ಕಲ್ಯಾಣದ ಕ್ರಾಂತಿಯ ನಂತರ ಸಂಚಾರ ಕೈಗೊಂಡರು,  ನಾಡಿನೆಲ್ಲೇಡೆ ಸಂಚರಿಸಿ ಭಕ್ತಿಯೊಂದಿಗೆ ಕಾಯಕದ ಬಗ್ಗೆ ತಿಳಿಸಿದಂತವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೂ ಸುಮಾರು 4ಕಡೆಗಳಲ್ಲಿ ಇವರ ತಪೋಭೂಮಿಇದ್ದು ಇವರು ಈ ಮಾರ್ಗವಾಗಿ ಸೊಲ್ಲಪುರಕ್ಕೆ ಹೋದರು ಎಂದು ಹೇಳುತ್ತಾರೆ ಇಂತಹ ಮಹಾಪುರುಷರು ತಪ್ಪಸ್ಸು ಮಾಡಿದ ಈ ಕ್ಷೇತ್ರವು ಸುಮಾರು 48ಎಕರೆ ಪ್ರದೇಶವಿದ್ದು ಇದನ್ನು ಒಂದು ಯಾತ್ರಾಸ್ಥಳವನ್ನಾಗಿಸ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಿದ್ದರು,  ಈ ಸಂದರ್ಭದಲ್ಲಿ ಎಂ.ಎಲ್.ಸಿ. ಎಂ.ಡಿ ಲಕ್ಷ್ಮೀನಾರಾಯಣ, ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಎಸ್.ಆರ್.ಎಲ್.ಪಿ.ಎಸ್.ನ ಅಪರ ಅಭಿಯಾನ ನಿದರ್ೇಶಕ ಎನ್.ಆರ್.ಆದರ್ಶಕುಮಾರ್, ತಹಸೀಲ್ದಾರ್ ಗಂಗೇಶ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಜಿ.ಪಂ.ಸದಸ್ಯರಾದ ನಾರಾಯಣ್, ಕಲ್ಲೇಶ್, ಮಾಜಿ ತಾ.ಪಂ.ಅದ್ಯಕ್ಷ ಎಂ.ಎಂ.ಜಗದೀಶ್, ದೇವಾಲಯದ ಕನ್ವಿನಿಯರ್ ಸಿದ್ದರಾಮಯ್ಯ, ದಿನೇಶ್, ಆರಾಧ್ಯ, ಸೇರಿದಂತೆ ಹಲವರುಇದ್ದರು.
ಕಾರ್ಯಕ್ರಮ ನಡೆದ ನಂತರ ತುಮಕೂರಿನ ಶ್ರೀರಾಜರಾಜೇಶ್ವರಿ ನೃತ್ಯಕಲಾತಂಡದವರಿಂದ ಸಾಸ್ಕೃತಿಕ ಕಾರ್ಯಕ್ರಮವನ್ನು ಆಯೊಜಿಸಲಾಗಿತ್ತು, ಸಮಾರಂಭದಲ್ಲಿ ಉಪನ್ಯಾಸಕ ಪ್ರೊ.ಬಸವರಾಜು ಎಲ್ಲರನ್ನೂ ಸ್ವಾಗತಿಸಿದರೆ ಶಿಕ್ಷಕ ದಿಬ್ಬದಹಳ್ಳಿ ಶ್ಯಾಮಸುಂದರ್ ಕಾರ್ಯಕ್ರಮ ನಿರೂಪಿಸಿದರು.  ನಂತರ ಶ್ರೀಸಿದ್ದರಾಮೇಶ್ವರರ ಸೂರ್ಯಮಂಡಲೋತ್ಸವವನ್ನು ನಡೆಸಲಾಯಿತು.

ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ಜಾತ್ರೆಗೆ ತೆಪ್ಪೋತ್ಸವದ  ಮೂಲಕ  ಚಾಲನೆ
 ಚಿಕ್ಕನಾಯಕನಹಳ್ಳಿ,ಮೇ.16 : ತಾಲ್ಲೂಕಿನ ಗೋಡೆಕೆರೆಯ ಸುಪ್ರಸಿದ್ದ ಗುರುಸಿದ್ದರಾಮೇಶ್ವರರ ಜಾತ್ರಾ ಮಹೋತ್ಸವದ ಮೊದಲ ದಿನವಾದ ಸೋಮವಾರ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು, ಮುಂಜಾನೆಯಿಂದಲೇ ಆರಂಭಗೊಂಡ ಪೂಜಾ ವಿಧಿವಿಧಾನಗಳಲ್ಲಿ ಸಿದ್ದರಾಮೇಶ್ವರರಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಏರ್ಪಡಿದ್ದವು, ಭಕ್ತರು ಸಿದ್ದರಾಮೇಶ್ವರರಿಗೆ ಏರ್ಪಡಿಸಿದ್ದ ವಿಶೇಷ ಪೂಜೆಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಜಾತ್ರಾ ವಿಶೇಷತೆ ಅಂಗವಾಗಿ ದೇವಾಲಯಕ್ಕೆ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು, ದೇವಾಲಯದಲ್ಲಿ ಗಣಪತಿ ಪೂಜೆ, ಗಂಗಾಪೂಜೆ, ವೃಷಬ ಧ್ವಜ ಸ್ಥಾಪನೆ ಮಾಡಲಾಯಿತು. ತಾಲ್ಲೂಕಿನ ಭಕ್ತಾಧಿಗಳು ಅಷ್ಟೇ ಅಲ್ಲದೆ ಜಿಲ್ಲೆಯ ಹಾಗೂ ರಾಜ್ಯದ ಹಲವು ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಗೋಡೆಕೆರೆಯಲ್ಲಿನ ನೆಂಟರಿಷ್ಟರು, ಶಾಲೆಗಳಲ್ಲಿ ತಂಗಿದ್ದಾರೆ. ಒಂದು ವಾರ ಕಾಲ ನಡೆಯುವ ಜಾತ್ರೆಗೆ ಪೂರ್ವ ಸಿದ್ದತೆಯನ್ನು ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮೇಶ್ವರರನ್ನು ಹೊತ್ತ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು, ನಂದಿಧ್ವಜ, ನಗಾರಿ, ಪಟ ಆಕರ್ಷಣೀಯವಾಗಿ ಮೆರವಣಿಗೆಯಲ್ಲಿ ಸಂಚರಿಸಿದವು. ಜಾತ್ರೆಯ ಮೆರವಣಿಗೆಯಲ್ಲಿ ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ, ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಗುರುಸಿದ್ದರಾಮೇಶ್ವರಸ್ವಾಮಿ ದೇವಸ್ಥಾನದ ಪಾರುಪತ್ತೇದಾರ್ ಸಿದ್ದರಾಮಣ್ಣ, ಬಿಜೆಪಿ ಮುಖಂಡ ಎಂ.ಎಂ.ಜಗದೀಶ್, ತಾ.ಪಂ.ಸದಸ್ಯೆ ಶೈಲಶಶಿಧರ್ ಸೇರಿದಂತೆ ಭಕ್ತಾಧಿಗಳು ಭಾಗವಹಿಸಿದ್ದರು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಒಂದು ವಾರ ಕಾಲ ಪ್ರತಿದಿನ ದಾಸೋಹ ವ್ಯವಸ್ಥೆ ನೀಡಲು ಈಗಾಗಲೇ ಸಿದ್ದತೆ ನಡೆದಿದೆ, ಜಾತ್ರೆಗೆ ಗಣ್ಯಾತಿಗಣ್ಯರು ಆಗಮಿಸುವುದರಿಂದ ಅವರಿಗಾಗಿ ಸಮಾರಂಗಳನ್ನು ಏರ್ಪಡಿಸಲು ಸುಸಜ್ಜಿತವಾದ ವೇದಿಕೆಯೂ ನಿಮರ್ಾಣವಾಗಿದೆ. 


 ದಲಿತರನ್ನು ಕಡೆಗಣಿಸುತ್ತಿರುವ ತಹಶೀಲ್ದಾರ್ : ಆರೋಪ
 
ಚಿಕ್ಕನಾಯಕನಹಳ್ಳಿ16: ಇಲ್ಲಿನ ತಹಸೀಲ್ದಾರ್ರವರು ದಲಿತರನ್ನು ಕಡೆಗಣಿಸುತ್ತಿದ್ದಾರೆ, ಯಾವುದೇ ಸಕರ್ಾರಿ ಕಾರ್ಯಕ್ರಮಗಳಿಗೆ ದಲಿತ ಮುಖಂಡರನ್ನು ಆಹ್ವಾನಿಸುವುದಿಲ್ಲ, ಅದೇ ರೀತಿ ಮಾಧ್ಯಮದವರನ್ನು ದೂರವಿಟ್ಟು ಸಭೆಗಳನ್ನು ನಡೆಸುತ್ತಾರೆ ಎಂದು ದಲಿತ ಮುಖಂಡರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆಯುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಭೆಯ ಮುನ್ನ ದಲಿತ ಮುಖಂಡರು ತಹಸೀಲ್ದಾರ್ರವರ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಲಿಂಗದೇವರು, ಕಂದಾಯ ಇಲಾಖೆಯ ಅನುಭವವಿಲ್ಲದ ಈಗಿನ ತಹಶೀಲ್ದಾರ್ ರವರು, ಈ ಬಾರಿಯ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಗೂ ಗೈರುಹಾಜರಾಗಿದ್ದರು, ದಲಿತರನ್ನು ಈ ಹಿಂದಿನ ತಹಸೀಲ್ದಾರ್ಗಳು ದಲಿತರನ್ನು ಕಡೆಗಣಿಸದೇ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಕಾರ್ಯಗಳನ್ನು ಮಾಡುತ್ತಿದ್ದರು, ಅದರೆ ಇಂದಿನ ತಹಸೀಲ್ದಾರ್ ದಲಿತರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಇವರು ಬಸವಜಯಂತಿ ಆಚರಣೆಗೆ ದಲಿತ ಮುಖಂಡರಿಗೆ ಯಾವುದೇ ಆಹ್ವಾನ ನೀಡಿಲ್ಲ, ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿಯನ್ನು ನಾಮಕಾವಸ್ಥೆಗೆ ಎಂಬಂತೆ ಆಚರಣೆ ಮಾಡಿದರು ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮದ್ಯಪ್ರವೇಶಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಪ್ರತಿಭಟನಾಕಾರರನ್ನು ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಸಭೆಯಲ್ಲಿ ದಲಿತರ ಸಮಸ್ಯೆಗಳಾದ ಬಿಪಿಎಲ್ ಕಾಡರ್್ವಿತರಣೆ, ಸ್ಮಶಾನದ ಸಮಸ್ಯೆಗಳು, ಪಿಂಚಣಿ ವ್ಯವಸ್ಥೆ, ಹಾಗೂ ಗ್ರಾಮಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿದ್ದ ಅನುದಾನಗಳ ಬಗ್ಗೆ ಚಚರ್ಿಸಲಾಯಿತು. ಸಭೆಯಲ್ಲಿ ದಲಿತ ಮುಖಂಡ ಮಲ್ಲಿಕಾಜರ್ುನ್ಮಾತನಾಡಿ ಮೂರು ತಿಂಗಳಿಗೊಮ್ಮೆ ನಡೆಯ ಬೇಕಿದ್ದ ಸಭೆ ವರ್ಷಕ್ಕೊಮ್ಮೆ ನಡೆಯುವಂತಾಗಿದ್ದು ಇದನ್ನು ಕೂಡಲೇ ತಹಸೀಲ್ದಾರ್ಗಮನಹರಿಸಿ ಮೂರು ತಿಂಗಳಿಗೊಮ್ಮೆ ಸಭೆ ಕರೆಯುವಂತೆ ಒತ್ತಾಯಿಸಿದರು. ನಂತರ ಸಭೆಯಲ್ಲಿ ಜೂನ್ ತಿಂಗಳ 6ನೇತಾರಿಖಿನಂದು ನಡೆಸಲು ಸಭೆಯಲ್ಲಿ ತೀರ್ಮನಿಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಗಂಗೇಶ್, ಜಿ.ಪಂ.ಸದಸ್ಯ ಮಹಾಲಿಂಗಯ್ಯ, ದಲಿತ ಮುಖಂಡರುಗಳಾದ ಬೇವಿನಹಳ್ಳಿ ಚನ್ನಬಸವಯ್ಯ, ಮಲ್ಲಿಕಾಜರ್ುನ್, ಬೆಳಿಗೆಹಳ್ಳಿರಾಜು, ಗಿರಿಯಪ್ಪ, ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
 

Friday, May 13, 2016


ಡಿಸಿಸಿ ಬ್ಯಾಂಕ್ನ ನಾಲ್ಕು ವರ್ಷದ ಅವಧಿಯೊಳಗೆ ತಾಲ್ಲೂಕಿನ ಪ್ರತಿ ಕುಟುಂಬದವರಿಗೂ ಬೆಳೆ ಸಾಲ ವಿತರಣೆ : ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಪ್ರತಿ ಕೃಷಿಕ ಕುಟುಂಬಗಳಿಗೂ ಡಿಸಿಸಿ ಬ್ಯಾಂಕ್ನಿಂದ ಬೆಳೆ ಸಾಲ ವಿತರಿಸುತ್ತೇವೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲ್ಲೂಕಿನ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸಾಲ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಾಲ ವಿತರಿಸಿ ಮಾತನಾಡಿದ ಅವರು, ಈಗಾಗಲೇ ತಾಲ್ಲೂಕಿನಾದ್ಯಂತ 2015-16ನೇ ಸಾಲಿನಲ್ಲಿ 1262ರೈತರಿಗೆ 2ಕೋಟಿ 46ಲಕ್ಷದ 86ಸಾವಿರದಷ್ಟು ಬೆಳೆ ಸಾಲ ವಿತರಿಸಲಾಗಿದೆ, ಜೂನ್ ನಂತರ ಉಳಿದ ರೈತರಿಗೆ ಬೆಳೆ ಸಾಲವನ್ನು ನೀಡಲಾಗವುದು ಎಂದರು.
ನಮ್ಮ ಅವಧಿಯಲ್ಲಿ ಪಕ್ಷ, ಜಾತಿ-ಬೇದವೆನ್ನದೆ ಪಕ್ಷಾತೀತವಾಗಿ ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ನೀಡಿದ್ದೇವೆ, ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಬಾರಿ 171 ಜನ  ರೈತರಿಗೆ 29ಲಕ್ಷದ 50ಸಾವಿರದಷ್ಟು ಸಾಲ ವಿತರಿಸಲಾಗಿದೆ, ಸಾಲ ಪಡೆದವರು ಸರಿಯಾಗಿ ಸಾಲವನ್ನು ಮರುಪಾವತಿ ಮಾಡಬೇಕು, ಸೊಸೈಟಿಯಲ್ಲಿ ಅಡಮಾನ ಸಾಲ, ಚಿನ್ನಾಭರಣ ಸಾಲ ನೀಡಿದ್ದೇವೆ ಎಂದರು.
ರೈತರು ತಮ್ಮಲ್ಲಿರುವ ಹಣವನ್ನು ವಾಣಿಜ್ಯ ಬ್ಯಾಂಕ್ಗಳಿಗೆ ಉಳಿತಾಯ ಮಾಡುವ ಬದಲು ಡಿಸಿಸಿ ಬ್ಯಾಂಕ್ಗೆ ಡೆಪಾಸಿಟ್ ಮಾಡಿ ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಹೆಚ್ಚಿನ ಬಡ್ಡಿ ಡಿಸಿಸಿ ಬ್ಯಾಂಕ್ ನೀಡುತ್ತಿದೆ, ಬ್ಯಾಂಕ್ನಲ್ಲಿ ಆಭರಣ ಸಾಲ, ವಾಹನ ಸಾಲ ಸೇರಿದಂತೆ ಹಲವು ಸಾಲ ನೀಡಲಾಗುವುದು, ಡಿಸಿಸಿ ಬ್ಯಾಂಕ್ನಲ್ಲಿ ಸಾಲ ಪಡೆದು ನಿಧನರಾದ ರೈತರಿಗೆ 5ಕೋಟಿಗೂ ಹೆಚ್ಚಿನಷ್ಟು ಸಾಲವನ್ನು  ಮನ್ನಾ ಮಾಡಲಾಗಿದೆ ಅದೇ ರೀತಿ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಸಾಲ ಪಡೆದು ಮರಣವನ್ನಪ್ಪಿರುವ 6ಜನ ರೈತರಿಗೆ 2ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಅಧ್ಯಕ್ಷ ಯೋಗೀಶ್ , ಉಪಾಧ್ಯಕ್ಷ ಶಿವಕುಮಾರ್,  ದರ್ೇಶಕರಾದ ಉಮೇಶ್, ಶಿವಬಸವಣ್ಣ, ಚನ್ನಿಗರಾಯಪ್ಪ, ಈಶ್ವರಮೂತರ್ಿ, ಶೈಲಪ್ರಕಾಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಉಪಸ್ಥಿತರಿದ್ದರು.


ಕಾಮರ್ಿಕರ ಹಿತರಕ್ಷಣೆಗೆ ಕಾಮರ್ಿಕರು ಹೋರಾಟ

ಅನಿವಾರ್ಯ 
ಚಿಕ್ಕನಾಯಕನಹಳ್ಳಿ,ಮೇ.13: ಇತ್ತೀಚೆಗೆ ಲಕ್ಷಾಂತರ ಗಾಮರ್ೆಂಟ್ಸ್ ಕಾಮರ್ಿಕರು ತಮ್ಮ ಹಕ್ಕುಗಳಿಗಾಗಿ ಬೆಂಗಳೂರಿನ ರಸ್ತೆಗಳಿಗೆ ಇಳಿದಿದ್ದು, ಈ ಹಿಂದೆ ಹತ್ತಿಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾಮರ್ಿಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಿದ ಐತಿಹಾಸಿಕ ಕ್ಷಣ ಮರುಕಳಿಸುವಂತೆ ಮಾಡಿತು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಐ.ಟೆಕ್ಸ್.ಅಪಾರೆಲ್ಸ್ ಸಂಯಕ್ತಾಶ್ರಯದಲ್ಲಿ ಪಟ್ಟಣದ ಐ.ಟೆಕ್ಸ್.ಅಪಾರೆಲ್ಸ್ ಗಾಮರ್ೆಂಟ್ಸ್ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ಕಾಮರ್ಿಕರ ದಿನಾಚಾರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಪಂಚದ 80 ರಾಷ್ಟ್ರಗಳಲ್ಲಿ ಕಾಮರ್ಿಕರ ದಿನಾಚಾರಣೆಯನ್ನು ಆಚರಿಸಲಾಗುತ್ತಿದೆ ಎಂದರು.
 ಅಮೇರಿಕಾದಲ್ಲಿ ಕಾಮರ್ಿಕರು ಪ್ರಪ್ರಥಮವಾಗಿ ದಿನಕ್ಕೆ 8ಗಂಟೆಗಳ ಕಾಲ ಮಾತ್ರ ಕೆಲಸ ಮಾಡವ ವ್ಯೆವಸ್ಥೆಗೆ ಆಗ್ರಹಿಸಿ  ಹೋರಾಟ ಪ್ರಾರಂಭಿಸಿದರು. ಅದಾದ ನಂತರ ಭಾರತದಲ್ಲಿ ಅಂತಹ ವ್ಯೆವಸ್ಥೆಯು 1926ರಲ್ಲಿ  ಮದ್ರಾಸಿನಲ್ಲಿ ಜಾರಿಗೆ ಬಂತು. ಕೈಗಾರಿಕೆ ಉದ್ಯಮದಲ್ಲಿ ಸಂಬಳದ ಜೊತೆಗೆ ಮೂಲಭೂತ ಸೌಕರ್ಯ ಹಾಗು ಸೌಲಭ್ಯಗಳು ಸಿಗಬೇಕಾದದ್ದು ಕಾಮರ್ಿಕರ ಹಕ್ಕು ಎಂದರು. 
   ವಕೀಲ ದಿಲೀಪ್ ಉಪನ್ಯಾಸ ನೀಡಿ, ಕಾಮರ್ಿಕರು ಕೆಲಸ ಮಾಡುವ ಕೈಗಾರಿಕೆಯಲ್ಲಿ ಮೂಲಭೂತ ಸೌಕರ್ಯ,ಆರೋಗ್ಯಕರ ವಾತಾವರಣ.ಮಹಿಳಾ ಕಾಮರ್ಿಕರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕಂಪನಿ ಮಾಲೀಕರ ಕರ್ತವ್ಯ ಎಂದರು.
   ಐ.ಟೆಕ್ಸ್.ಅಪಾರೆಲ್ಸ್ ಗಾಮರ್ೆಂಟ್ಸಿನ ಮಾಲೀಕ ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್,ಮಾತನಾಡಿದರು.ವಕೀಲ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ವಕೀಲರಾದ ಶೇಖರ್, ರವೀಂದ್ರ ಕುಮಾರ್, ಕೆ.ಎಂ.ಷಡಕ್ಷರಿ. ರತ್ನರಂಜಿನಿ ಹಾಗೂ ಕಾಮರ್ಿಕರು ಹಾಜರಿದ್ದರು.


Tuesday, May 10, 2016


ಮಕ್ಕಳ ಬೇಸಿಗೆ ಶಿಬಿರ ಆರಂಭ 
ಚಿಕ್ಕನಾಯಕನಹಳ್ಳಿ,ಮೇ.10 : ಮಕ್ಕಳಲ್ಲಿ ಬೌದ್ದಿಕ ಹಾಗೂ ಮನಸ್ಸಿನ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಪ್ರಭಾರ ಸಿ.ಡಿ.ಪಿ.ಓ ಪರಮೇಶ್ವರಪ್ಪ ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಬದುಕು ಸಂಸ್ಥೆ, ಶಿಶು ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ 10 ದಿನಗಳ ಕಾಲ ನಡೆಯಲಿರುವ  ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
   5 ರಿಂದ 15 ವರ್ಷದ ವರೆಗಿನ ವಿವಿಧ ವಯೋಮಾನದ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಶಿಬಿರದ ರೂಪುರೇಷೆಗಳನ್ನು ತಯಾರಿಸಲಾಗಿದೆ. ಶಿಬಿರದಲ್ಲಿ ಆಸಕ್ತಿ ಮೂಡುವಂತಹ ಆಕಷರ್ಿಣಿಯ ಚಟುವಟಿಕೆಗಳು ನಡೆಯಲಿವೆ. ಯೋಗ, ಕರಕುಶಲ, ಬೊಂಬೆ ಮಾಡುವುದು, ಮುಖವಾಡ, ಗಾಯನ, ನೃತ್ಯ ಇವೆಲ್ಲವನ್ನು ಇಲ್ಲಿ ಕಲಿಸಲಾಗುವುದು. ಎಂದರು.
ಕ್ಷೇತ್ರ ಸಂಪನ್ಮೊಲನಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ಬಿಸಿಲಿನ ತಾಪದಿಂದ ಮಕ್ಕಳಲ್ಲಿನ ಆರೋಗ್ಯ ವ್ಯತ್ಯಯವಾಗುತ್ತಿದೆ. ಜೊತೆಗೆ ಮಕ್ಕಳು ಬೀದಿಗಳಲ್ಲಿ ಆಟವಾಡುವಾಗ ಅನಾಹುತಗಳಿಗೆ ಒಡ್ಡಿಕೊಳ್ಳುತ್ತಾರೆ. ಇಂತಹವುಗಳನ್ನು ತಪ್ಪಿಸಲೆಂದೇ ಸಕರ್ಾರ ಬೇಸಿಗೆ ಶಿಬಿರಗಳಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಪೋಷಕರು ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಕಳುಹಿಸಿಕೊಡಿ ಎಂದರು.
ಸಂಪನ್ಮೂಲ ವ್ಯಕ್ತಿ ಬಸವರಾಜು ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಶ್ರವಣದ ಮೂಲಕ ಆಲಿಸುವ ಮನನ ಮಾಡಿಕೊಂಡು, ವಜ್ರ ವೈಡೂರ್ಯಗಳನ್ನು ಶೇಖರಿಸಿಡುವಂತೆ ಕಲಿತ ವಿದ್ಯೆಯನ್ನು ಮನಸ್ಸಿನಲ್ಲಿ ದಾಖಲಿಸಿಕೊಳ್ಳಬೇಕು ಎಂದರು.
ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆ ಶಿಬಿರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಕ್ಕಳ ಮಾನಸಿಕ ಬೆಳವಣಿಗೆಯ ವೃದ್ದಿಗೆ ಸಹಕಾರವಾಗಲಿವೆ ಎಂದರು.
ಈ ಸಂದರ್ಭದಲ್ಲಿ ಮಹದೇವಮ್ಮ, ಎಸ್.ಬಿ.ಕುಮಾರ್, ಕವಿತ, ಕುಮಾರಸ್ವಾಮಿ, ಅನುಸೂಯಮ್ಮ, ದಯಾನಂದ್, ಶಾರದಮ್ಮ ಮತ್ತಿತ್ತರರು ಹಾಜರಿದ್ದರು.
ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮ 
ಚಿಕ್ಗಕನಾಯಕನಹಳ್ಳಿ,ಮೇ.10 : ವಿಶಿಷ್ಠಾಧ್ವೈತ ತತ್ವದ ಮೂಲಕ ಭಕ್ತನಿಗಿಂತ ಭಕ್ತಿಮುಖ್ಯ ಎಂದು ಸಾರಿದವರು ರಾಮಾನುಜಾಚಾರ್ಯರಯ ಎಂದು ವೈಷ್ಣವ ಜನಾಂಗದ ಮುಖಂಡ ವೆಂಕಟೇಶ್ ತಿಳಿಸಿದರು. 
   ಪಟ್ಟಣದ ಹೊಸಬಾಗಿಲು ಸಮೀಪ ಇರುವ ರಾಮಾನುಜಾಚಾರ್ಯರ ಧ್ಯಾನಕೇಂದ್ರದಲ್ಲಿ ,ತಾಲ್ಲೂಕು ವೈಷ್ಣವ ಸಮಾಜದಿಂದ ರಾಮಾನುಜಾಚಾರ್ಯರ 999ನೇ ಜಯಂತಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಬ್ಯಾಟರಾಯಸ್ವಾಮಿ ಹಾಗೂ ರಾಮಾನುಜಾಚಾರ್ಯರ ವಿಗ್ರಹಗಳಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜಾಕಾರ್ಯಗಳು ಜರುಗಿದವು.
  ವೈಷ್ಣವ ಜನಾಂಗದ ಮುಖಂಡ ವೆಂಕಟೇಶ್ ಮಾತನಾಡಿ, ರಾಮಾನುಜಾಚಾರ್ಯರು ತಮಿಳುನಾಡಿನ ಪೆರಂಬದೂರಿನಲ್ಲಿ ಜನಿಸಿ, ಶ್ರೀವೈಷ್ಣವ ಧರ್ಮವನ್ನು ದೇಶದೆಲ್ಲಡೆ ಪಸರಿಸಿದ ಮಹಾನ್ ಪುರುಷ ಎಂದರು.
ಮುಂದಿನ  ವರ್ಷ ರಾಮಾನುಜಚಾರ್ಯರಿಗೆ  ಸಾವಿರ ವರ್ಷ ತುಂಬುತ್ತದೆ. 2017ಕ್ಕೆ  ಮೇಲುಕೋಟೆಯಲ್ಲಿ ಕೇಂದ್ರಸಕರ್ಾರ ಹಾಗೂ ರಾಜ್ಯ ಸಕರ್ಾರಗಳ ನೆರವಿನೊಂದಿಗೆ ವಿಶೇಷ ಸಮಾರಂಭವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
  ಮುಖಂಡ ದೇವರಾಜು ಮಾತನಾಡಿ, ತಾಲ್ಲೂಕಿನಲ್ಲಿರುವ ವೈಷ್ಣವ ಸಂಘದ ಕಟ್ಟಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜನಾಂಗಕ್ಕೆ ಸಮುದಾಯ ಭವನದ ಅವಶ್ಯಕತೆ ಇದೆ. ತಾಲ್ಲೂಕು ಆಡಳಿತ ಎರಡೂ ಸವಲತ್ತುಗಳನ್ನು ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೃಷ್ಣಮೂತರ್ಿ, ರಂಗಸ್ವಾಮಿ, ದೇವರಾಜು, ವೆಂಕಟೇಶ್, ಮಂಜುನಾಥ್ , ದೇವರಾಜು ಇತರರು ಹಾಜರಿದ್ದರು.

ಕಾಮರ್ಿಕರ ದಿನಾಚಾರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮೇ.10 : ಕಾಮರ್ಿಕರ ದಿನಾಚಾರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮೇ 11ರ ಬುಧವಾರ ಮಧ್ಯಾಹ್ನ 12.30ಕ್ಕೆ ಏರ್ಪಡಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಐ-ಟೆಕ್ಸ್ ಅಪಾರೆಲ್ಸ್ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳ; ಐ-ಟೆಕ್ಸ್ ಅಪಾರೆಲ್ಸ್. ಉದ್ಘಾಟನೆ; ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ಅಧ್ಯಕ್ಷತೆ; ಐ-ಟೆಕ್ಸ್ ಅಪಾರೆಲ್ಸ್ ಮಾಲೀಕ ರವಿಶಂಕರ್. 
ಮುಖ್ಯ ಅತಿಥಿಗಳು; ಕಾಮರ್ಿಕ ನಿರೀಕ್ಷಕರಾದ ಭಾರತಿ, ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಉಪನ್ಯಾಸ;. ವಕೀಲ ದಿಲೀಪ್ ವಿಷಯ ;ಕಾಮರ್ಿಕರ ಹಿತರಕ್ಷಣೆ.

Saturday, May 7, 2016


ಮೇ 16ರಿಂದ 23ರವರಗೆ ಗೋಡೆಕೆರೆ ದೊಡ್ಡ ಜಾತ್ರೆ
ಚಿಕ್ಕನಾಯಕನಹಳ್ಳಿ,: ಗೋಡೆಕೆರೆಯ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ಮಹಾರಥೋತ್ಸವ ದೊಡ್ಡಜಾತ್ರೆಯು ಹದಿನೇಳು ವರ್ಷಗಳ ನಂತರ ನಡೆಯುತ್ತಿದ್ದು,  ಇದೇ ಮೇ 16ರಿಂದ 23ರವರೆಗೆ ನಡೆಯಲಿದ್ದು ವಿಶೇಷ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೋಡೆಕೆರೆ ಮಠದ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇ .16ರ ಸೋಮವಾರ ಗಣಪತಿ ಪೂಜೆ, ಗಂಗಾಪೂಜೆ, ವೃಷಭಧ್ವಜ ಸ್ಥಾಪನೆ, ಪ್ರಥಮೋತ್ಸವ, ತೆಪ್ಪೋತ್ಸವ, ಉಯ್ಯಾಲೋತ್ಸವ, ಸೂರ್ಯಮಂಡಲೋತ್ಸವ ನಡೆಯಲಿದೆ. 17ರಂದು ಶ್ರೀ ವೃಷಭ ವಾಹನೋತ್ಸವ, 18ರಂದು ಅಶ್ವವಾಹನೋತ್ಸವ ನಡೆಯಲಿದ್ದು ಅಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಾತ್ರೆಗೆ ಆಗಮಿಸಲಿದ್ದಾರೆ.
19ರಂದು ಶಶಾಂಕ ಮಂಡಲೋತ್ಸವ, 20ರಂದು ಮಹಾರಥೋತ್ಸವ, ಕಂತೆಸೇವೆ ನಡೆಯಲಿದ್ದು ಅಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ರೆಗೆ ಆಗಮಿಸಲಿದ್ದಾರೆ.
21ರಂದು ಬಿಲ್ವವೃಕ್ಷ ವಾಹನೋತ್ಸವ, 22ರಂದು ಗಜವಾಹನೋತ್ಸವ, 23ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ, ತೀಥೋತ್ಸವ ನಡೆಯಲಿದೆ. ಜಾತ್ರೆಯ ನಡೆಯುವ ಪ್ರತಿದಿನ ವಿಶೇಷ ದೀಪಾಲಂಕಾರ, ಮದ್ದಿನ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಸಮಯದಲ್ಲಿ ಆಗಮಿಸುವ ಭಕ್ತರಿಗೆ ಪ್ರತಿನಿತ್ಯ ದಾಸೋಹ ವ್ಯವಸ್ಥೆ ನಡೆಯಲಿದೆ.
ಜಾತ್ರೆಗೆ ಲಕ್ಷಾಂತರ ಜನರು ಸೇರುವುದರಿಂದ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಬೇಕು, ಅಗ್ನಿಶಾಮಕ ಸಿಬ್ಬಂದಿ ಜಾತ್ರೆ ಮುಗಿಯುವವರೆಗೆ ಹಾಜರಿರಬೇಕು, ಭಕ್ತರು ಬಂದುಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಮಾಡಬೇಕು ಹಾಗೂ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕು ಈ ಭಾಗದಲ್ಲಿ  ವಿದ್ಯುತ್ ವ್ಯತ್ಯಾಯವಾಗದಂತೆ ನೋಡಿಕೊಳ್ಳಬೇಕು, ಗೋಡೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ವೈದ್ಯಾಧಿಕಾರುಗಳು ಇಲ್ಲದೆ ಈ ಭಾಗದ ನೂರಾರು ಜನರಿಗೆ ತೊಂದರೆಯಾಗಿದೆ ಈಗಲಾದರೂ ಇಲ್ಲಿಗೆ ಖಾಯಂ ವೈದ್ಯರನ್ನು ನೇಮಿಸಬೇಕೆಂದು ಸ್ವಾಮಿಜಿಗಳು ಒತ್ತಾಯಿಸಿದರು.
ಶ್ರೀಮಠದ ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮೀಜಿಯವರು ಹಾಗೂ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮಿಯವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬು ಜಾತ್ರೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಗೋಡೆಕೆರೆಯ ಮುಖಂಡರಾದ ಸಿದ್ದರಾಮಣ್ಣ, ಗೋ.ನಿ.ವಸಂತ್ಕುಮಾರ್, ಎಂ.ಎಂ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಮುಕ್ತಾಯವಾದ ಬೆಂಗಳೂರು ಕೃಷಿ ವಿ.ವಿ.ಯ ಎನ್.ಎಸ್.ಎಸ್. ಶಿಬಿರ
ಚಿಕ್ಕನಾಯಕನಹಳ್ಳಿ,ಮೇ.07 : ಎನ್.ಎಸ್.ಎಸ್ ಶಿಬಿರಗಳಿಂದ ವಿದ್ಯಾಥರ್ಿಗಳಲ್ಲಿ ಗೆಳೆತನ, ಪರಸ್ಪರ ಗೌರವದ ಮನೋಭಾವ ಬೆಳೆಯುತ್ತದೆ ಎಂದು ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಡೀನ್ ಡಾ.ಹೆಚ್.ಖಾದರ್ಖಾನ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಏರ್ಪಡಿಸಿದ್ದ ಎನ್.ಎಸ್.ಎಸ್ ವಾಷರ್ಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರಮದಾನ ಮಾಡುವುದರಿಂದ ಸೇವಾ ಮನೋಭಾವ ಹೆಚ್ಚಲಿದೆ, ವಿದ್ಯಾಥರ್ಿಗಳು ಜೀವನದಲ್ಲಿ ಮುಂದೆ ಬರಬೇಕಾದರೆ ಶಿಸ್ತನ್ನು ಮೈಗೂಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ತಹಶೀಲ್ದಾರ್ ಗಂಗೇಶ್ ಮಾತನಾಡಿ, ಏಳು ದಿನಗಳ ಕಾಲ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಕ್ಕೆ ತಾಲ್ಲೂಕು ಆಡಳಿತದ ಪರವಾಗಿ ಎಲ್ಲಾ ನೆರವು ನೀಡಲಾಯಿತು, ರೈತರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಕೃಷಿ ವಿಶ್ವವಿದ್ಯಾನಿಲಯ ಮುಂದೆಯೂ ಹಮ್ಮಿಕೊಂಡರೆ ಸಹಕರಿಸುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಲೋಕೇಶ್ಮೂತರ್ಿ ಮಾತನಾಡಿ, ಬದುಕನ್ನು ಅರಿಯಲು ಇಂತಹ ಶಿಬಿರಗಳು ಸಹಕಾರಿ, ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿದ್ದ ಮುನ್ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳು ಒಟ್ಟಿಗೆ ಕಲೆತು ಶ್ರಮದಾನ ಮಾಡಿದ್ದಾರೆ ಇದು ಅವರ ಮುಂದಿನ ಬದುಕಿನಲ್ಲಿ ಅವಿಸ್ಮರಣೀಯ ಸಂದರ್ಭ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಹೊನ್ನದಾಸೆಗೌಡ, ಡಾ.ಗೋಪಿನಾಥ್, ಪ್ರೊ.ಬಿ.ಕೃಷ್ಣಮೂತರ್ಿ, ಡಾ.ವಸಂತಕುಮಾರಿ, ಡಾ.ಎಂ.ಎಸ್.ಗಣಪತಿ, ಡಾ.ಉಷಾರವೀಂದ್ರ, ಡಾ.ಆರ್.ಮುತ್ತುರಾಜ್, ಬಾಬು.ಆರ್.ಎಂ.ರಾಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಶಾಲೆ ಬಳಿ ಮನೆಯೊಂದರಲ್ಲಿ ಕಳ್ಳತನ
ಚಿಕ್ಕನಾಯಕನಹಳ್ಳಿ,ಮೇ.07 : ಪಟ್ಟಣದ ರೋಟರಿ ಶಾಲೆ ಮುಂಭಾಗದ ಒಂಟಿ ಮನೆಯಲ್ಲಿ ಶನಿವಾರ ಹಾಡಹಗಲೇ ಕಳ್ಳರು ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ವಡವೆಗಳನ್ನು ಕದ್ದೊಯ್ದಿದ್ದಾರೆ.
ರಿದಂ ಮ್ಯೂಸಿಕ್ ಮಾಲೀಕ ರೂಪೇಶ್ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಧ್ಯಾಹ್ನ 4ರ ಸುಮಾರಿನಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಎರಡು ಬೀರುಗಳನ್ನು ಮುರಿದಿರುವ ಕಳ್ಳರು ಬೀರುವಿನಲ್ಲಿದ್ದ 1.52ಲಕ್ಷ ಮೌಲ್ಯದ 52ಗ್ರಾಂ ಚಿನ್ನದ ನೆಕ್ಲೆಸ್ ಹಾಗೂ 25ಗ್ರಾಂ ಚಿನ್ನದ ಬಳೆಯನ್ನು ಕದ್ದಿದ್ದಾರೆ.
ಕಳೆದ ಮೂರು ದಿನಗಳ ಹಿಂದಷ್ಟೆ ಪಟ್ಟಣದ ಜನನಿಬಿಡ ಪ್ರದೇಶವಾದ ಖಾಸಗಿ ಬಸ್ನಿಲ್ದಾಣದ ಬಳಿಯ ಮಧ್ಯಾಹ್ನದ ಸಮಯದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು ಸುಮಾರು 12ಲಕ್ಷ ಮೌಲದ ನಗನಾಣ್ಯ ದೋಚಿದ್ದರು ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ನಡೆದಿರುವುದು ನಾಗರೀಕರನ್ನು ಆತಂಕಕ್ಕೀಡು ಮಾಡಿದೆ.
ಸ್ಥಳಕ್ಕೆ ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜೋಗಿಹಳ್ಳಿ ಆಂಜನೇಯಸ್ವಾಮಿಗೆ ನೂರೆಂದೆಡೆ ಸೇವೆ 
ಚಿಕ್ಕನಾಯಕನಹಳ್ಳಿ,ಮೇ.07 : ಪಟ್ಟಣದ ಜೋಗಿಹಳ್ಳಿಯ ಶ್ರೀ ಆದಿ ಆಂಜನೇಯಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಯವರಿಗೆ ನೂರೊಂದೆಡೆಸೇವೆ ಹಾಗೂ ಆರತಿಬಾನ ಸೇವಾಕಾರ್ಯ ಜರುಗಿದವು.
ಆದಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ ನಡೆಯಿತು. ಗ್ರಾಮದೇವತೆ ದಬ್ಬೆಘಟ್ಟದ ಕೆಂಪಮ್ಮದೇವಿ ಹಾಗೂ ಲಕ್ಷ್ಮೀದೇವರ ಆಗಮನದೊಂದಿಗೆ ಗಂಗಾಸ್ನಾನ ನೆರವೇರಿದ ನಂತರ ನಡೆಮುಡಿಯೊಂದಿಗೆ ದೇವಾಲಯಕ್ಕೆ ದೇವರುಗಳು ಆಗಮಿಸಿದವು.
  ಜೋಗಿಹಳ್ಳಿ ಗ್ರಾಮಸ್ಥರು ಹಾಗೂ ಮಹಿಳೆಯರು ದೇವರ ಮೆರವಣಿಗೆ ಜೋತೆಯಲ್ಲಿ ಆರತಿ ಹೊತ್ತು ತಂದ ಪರಿ ಚಿತ್ತಾಕರ್ಷಕವಾಗಿತ್ತು. ಸ್ವಾಮಿಯವರ ವಿಶೇಷ ಸೇವೆಯಾದ ನೂರೊಂದೆಡೆ ಸೇವೆಯನ್ನು ದಾಸಪ್ಪ, ಗೋವಿಂದಪ್ಪನವರ ನೇತೃತ್ವದಲ್ಲಿ ಇತರ ದಾಸಪ್ಪಗಳು ನೂರೊಂದೆಡೆ ಸೇವಾ ಪೂಜೆಯನ್ನು ನೆರವೇರಿಸಿದರು. ಸಾವಿರಾರು ಭಕ್ತರು ಆದಿ ಆಂಜನೇಯಸ್ವಾಮಿಯವರ ದರ್ಶನ ಪಡೆದರು. ಬಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
   ಈ ಸಂದರ್ಭದಲ್ಲಿ ಆದಿ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕಳಸೇಗೌಡ, ಕಾರ್ಯದಶರ್ಿ ಲಕ್ಷ್ಮೀಪತಿ, ಗುಡಿಗೌಡ ರಂಗನಾಥ್, ದೇವಾಲಯದ ಅರ್ಚಕ ದೇವರಾಜು, ಸದಸ್ಯರುಗಳಾದ ಶಿವಣ್ಣ, ನಿಂಗದಾಳಯ್ಯ, ನಾಗರಾಜು, ರಮೇಶ್, ಬೀರಲಿಂಗಯ್ಯ, ಶಿವಪ್ರಸಾದ್, ರವಿಕುಮಾರ್, ಮಂಜುನಾಥ್, ಲಕ್ಕಣ್ಣ ಸೇರಿದಂತೆ ಭಕ್ತಾಧಿಗಳು ಭಾಗವಹಿಸಿದ್ದರು.





Friday, May 6, 2016


ನೀರಿನ ಕೊಳಾಯಿಗಳಿಗೆ ಸೆಂಟರ್ ಲಾಕ್ ಅಳವಡಿಕೆ : ಮುಖ್ಯಾಧಿಕಾರಿ
ಚಿಕ್ಕನಾಯಕನಹಳ್ಳಿ : ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ 178 ಸಾರ್ವಜನಿಕ ನೀರಿನ ಕೊಳಾಯಿಗಳಿಗೆ ಸೆಂಟರ್ ಲಾಕ್ ಅಳವಡಿಸುವ ಮೂಲಕ ವ್ಯಯವಾಗುತ್ತಿದ್ದ 3ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡಿ ಸಾರ್ವಜನಿಕರಿಗೆ ನೀಡಲಿದ್ದೇವೆ ಎಂದು ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ತಿಳಿಸಿದರು.
ಕಳೆದ ವಾರ ಜಿಲ್ಲಾಧಿಕಾರಿ ಪಿ.ಮೋಹನ್ರಾಜ್ ಬರಗಾಲದ ಹಿನ್ನಲೆಯಲ್ಲಿ ಪುರಸಭೆಯಲ್ಲಿ ಸಭೆ ನಡೆಸಿ ಪಟ್ಟಣದ ಕೊಳಾಯಿಗಳಲ್ಲಿರುವ ರೈಸಿಂಗ್ ಕೊಳಾಯಿಗಳನ್ನು ತೆರವುಗೊಳಿಸಿದರೆ ನೀರು ಉಳಿತಾಯ ಮಾಡಬಹುದು ಎಂದು ನೀಡಿದ ಸೂಚನೆ ಮೇರೆಗೆ ಕೊಳಾಯಿಗಳಿಗೆ ಸೆಂಟರ್ ಲಾಕ್ನ್ನು ಪಟ್ಟಣದ 23 ವಾಡರ್್ಗಳಲ್ಲಿರುವ ಸಾರ್ವಜನಿಕ ಕೊಳಾಯಿಗಳಿಗೆ ಅಳವಡಿಸಿ ನೀರನ್ನು ಉಳಿತಾಯ ಮಾಡುತ್ತಿದ್ದೇವೆ ಎಂದರಲ್ಲದೆ ಕೊಳಾಯಿಗಳಿಗೆ ಅಳವಡಿಸಿರುವ ಸೆಂಟರ್ ಲಾಕ್ನ್ನು ಕಳ್ಳತನವಾಗದಿರುವಂತೆ ಆಯಾ ಸ್ಥಳೀಯ ನಾಗರೀಕರು ಗಮನ ಹರಿಸಬೇಕು ಹಾಗೂ ಪುರಸಭೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೀರು ವಿತರಕ ರಾಮದಾಸು, ನಯಾಜ್ ಮತ್ತಿತರರು ಉಪಸ್ಥಿತರಿದ್ದರು.

ಕಸಾಪ ಸಂಸ್ಥಾಪನಾ ದಿನಾಚಾರಣಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮೇ.05 : ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಲಾಗುವ ಮುಖ್ಯ ನಿರ್ಣಯಗಳನ್ನು  ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಸಾಹಿತಿಗಳು ಬಹುಜನರ ಆಶೋತ್ತರಗಳನ್ನು ಜಾರಿಗೆ ತರುವ ಸಾಂಸ್ಕೃತಿಕ ರಾಜಕಾರಣಕ್ಕೆ ಕೈ ಹಾಕದೇ ಇರುವುದೇ ಇದಕ್ಕೆ ಕಾರಣ, ಇಂದಿನ ಯುವಕರು ಇಂತಹ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಪ್ರತಿಪಾದಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮವನ್ನು ಕವನ ವಾಚಿಸುವ ಮೂಲಕ ಉದ್ಘಾಟಿಸಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ದೊಡ್ಡ ನಿಧರ್ಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಂಡಿದೆ ಎಂದರು.
ಗಾಂಧೀಜಿ ಹೇಳಿದಂತೆ ಸ್ವಾತಂತ್ರ್ಯ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಸರ್ಜನೆಯಾಗಿದ್ದರೆ ದೇಶದ ರಾಜಕಾರಣಕ್ಕೆ ಮರುಹುಟ್ಟು ಸಿಗುತ್ತಿತ್ತು, ನೂರು ವರ್ಷ ಹಳೆಯದಾಗಿರುವ ಕನ್ನಡ ಸಾಹಿತ್ಯ ಪರಿಷತ್ಗೂ ಮರುಹುಟ್ಟು ನೀಡುವ ಅವಶ್ಯಕತೆ ಇದೆ. ಹಳೆ ತಲೆಮಾರು ಮುಗಿದಂತೆ ಪ್ರತಿಭೆಗಳು ಕಳೆದು ಹೋಯಿತು ಎಂದು ಭಾವಿಸುವುದಕ್ಕಿಂತ ಹೊಸ, ಹೊಸ ಪ್ರತಿಭೆಗಳನ್ನು ಹುಡುಕಿ ಹೊರ ತೆಗೆಯುವುದು ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದರು.  
ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಲ್ಲೇ ದೋಷವಿದೆ, ನದಿಗಳ ಆಧಾರದಲ್ಲಿ ರಾಜ್ಯಗಳ ವಿಂಗಡಣೆ ಕಲ್ಪನೆ ಸರಿಯಾಗಿತ್ತು ಎಂದ ಅವರು ನಾಲ್ವಡಿ ಕೃಷ್ಣರಾಜರು ಬಂಗಾಳದ ಪ್ರವಾಸವಿದ್ದಾಗ ಅಲ್ಲಿನ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ನ್ನು ಸ್ಥಾಪಿಸಿದರು ಎಂದರು.
  ಕಸಾಪ ತಾಲ್ಲೂಕು ಘಟಕದ ಅಧ್ಯತಕ್ಷೆ ಎನ್.ಇಂದಿರಮ್ಮ ಮಾತನಾಡಿ,ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ತೀನಂಶ್ರೀ ಭವನ ಪೂರ್ಣಗೊಳಿಸುವುದು, ಕನ್ನಡ ಶಾಲೆ ಉಳಿಸಲು ಆಂದೋಲನ ರೂಪಿಸಿರುವುದು, ತಾಲ್ಲೂಕಿನ ಪರಿಸರ, ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿ ಬೆಳೆಸುವುದು, ಮಹಿಳಾ ಸಮಾನತೆ, ಮಕ್ಕಳ ಸಾಹಿತ್ಯ ಹಾಗೂ ಯುವಜನತೆಯನ್ನು ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
  ಕಸಾಪ ಪದಾಧಿಕಾರಿಗಳ ಆಯ್ಕೆ : ಇದೇ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಘಟಕಕ್ಕೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷೆ ಎನ್.ಇಂದಿರಮ್ಮ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಕಾರ್ಯದಶರ್ಿಗಳಾಗಿ ನಾಗಕುಮಾರ್ ಚೌಕಿಮಠ್ ಮತ್ತು ಕಂಟಲಗೆರೆ ಗುರುಪ್ರಸಾದ್, ಖಜಾಂಚಿ ರಾಮಕೃಷ್ಣಪ್ಪ. ಸಂಘ ಸಂಸ್ಥೆಗಳ ಪ್ರತಿನಿಧಿ ಸಿ.ಬಿ.ರೇಣುಕಸ್ವಾಮಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪ್ರತಿನಿಧಿ ಕೆ.ಜಿ.ಶಂಕರಪ್ಪ, ಮಹಿಳಾ ಪ್ರತಿನಿಧಿ ಎಲ್.ಜಯಮ್ಮ, ಸದಸ್ಯರು ಸಿ.ಡಿ.ಚಂದ್ರಶೇಖರ್, ಬಿ.ಎಸ್.ರಾಧಾಕೃಷ್ಣ, ಸುಪ್ರೀಂ ಸುಬ್ರಮಣ್ಯ, ಕಲಾವಿದ ಗೌಸ್ ಹಾಗೂ ಎಂ.ಜಯಮ್ಮರವರನ್ನು ಆಯ್ಕೆ ಮಾಡಲಾಯಿತು.

                                      ಜನಜಾಗೃತಿ ಧರ್ಮ ಸಮಾರಂಭ
ಚಿಕ್ಕನಾಯಕನಹಳ್ಳಿ,ಮೇ.5:  ದ್ರಾವಿಡರ ಭಕ್ತಿ, ಮುಸ್ಲಿಂ ನಿಷ್ಠೆ, ಬೌದ್ಧರ ಸಮತೆ, ಜೈನರ ಅಹಿಂಸೆ, ಕ್ರೈಸ್ತರ ಕರುಣೆ ಸಂಗಮವಾದರೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿ ವಾಣಿಗೆ ಅರ್ಥ ಬರುತ್ತದೆ ಎಂದು ರಂಭಾಪುರಿ ಪ್ರಸನ್ನ ರೇಣುಕ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕು ಹಂದನಕೆರೆ ಹೋಬಳಿ ಬಂದ್ರೆಹಳ್ಳಿಯಲ್ಲಿ ಗುರುವಾರ ನಡೆದ ಜನಜಾಗೃತಿ ಧರ್ಮಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ,  ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಹ್ಣತೆ, ರಾಷ್ಟ್ರಭಕ್ತಿ ಹಾಗೂ ಕ್ರಿಯಾಶೀಲ ಬದುಕು ಸಾಮರಸ್ಯ ಮತ್ತು ಸೌಹಾರ್ದಯುತ ವಾತಾವರಣ ಸೃಷ್ಠಿಸಬಲ್ಲದು, ಮನುಷ್ಯ ಭೌತಿಕವಾಗಿ ಆಧುನಿಕನಾಗುತ್ತಿದ್ದರೂ, ಆಧ್ಯಾತ್ಮಿಕವಾಗಿ ಹಿಂದಕ್ಕೆ ಚಲಿಸುತ್ತಿದ್ದಾನೆ. ಧರ್ಮ,ಜಾತಿ ಹಾಗೂ ವರ್ಗಗಳ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿದೆ. ಮನಸ್ಸುಗಳು ನಡುವೆ ಕಂದರ ಏರ್ಪಡುತ್ತಿದೆ. ರಾಜಕಾರಣಿಗಳು ಓಟಿನ ರಾಜಕಾರಣಕ್ಕಾಗಿ ಕಂದರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದರು.
   ಧರ್ಮದ ನಿಜ ಕಾರ್ಯ ಸಾಮರಸ್ಯದ ಬದುಕನ್ನು ಕಲಿಸುವುದೇ ಆಗಿದೆ.ಶಾಂತಿ ಹಾಗೂ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ.ವೀರಶೈವ ಧರ್ಮ ಕಾಯಕ ನಿಷ್ಠೆ ಹಾಗೂ ದಾಸೋಹ ತತ್ವಕ್ಕೆ ಒತ್ತು ನೀಡಿದೆ ಎಂದರಲ್ಲದೆ,    ಸಂಸ್ಕಾರ, ಸಚ್ಚಾರಿತ್ರ್ಯ ಮಾಡುವುದೇ ಗುರುಪೀಠಗಳ ಧ್ಯೇಯ.ಉತ್ತಮ ಮಳೆ ಬಂದು ರೈತರ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.
  ಹೊನ್ನವಳ್ಳಿ ಶಿವಪೀಠದ ಅಧ್ಯಕ್ಷ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಬದುಕಿಗೆ ಧರ್ಮ ದಿಕ್ಸೂಚಿ.ಸಂಸ್ಕೃತಿ,ಧರ್ಮ ಉಳಿದು ಬೆಳೆಯಲು ಎಲ್ಲರೂ ಶ್ರಮಿಸಬೇಕು ಎಂದರು.
  ದೊಡ್ಡಗುಣಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಪರಧರ್ಮ ಸಹಿಷ್ಣತೆ,ದೇಶಪ್ರೇಮ, ಬೆಳೆಸುವುದು ಪೀಠಾಧಿಪತಿಗಳ ಕರ್ತವ್ಯ ಎಂದರು.
ಸಮಾರಂಭಕ್ಕೂ ಮುನ್ನ  ಬಾಳೆಹೊನ್ನೂರು ಮಠದ ರಂಭಾಪುರಿ ಮಠದ ಪೀಠಾಧ್ಯಕ್ಷ ಪ್ರಸನ್ನ ರೇಣುಕ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಜಿಪಂ ಸದಸ್ಯ ರಾಮಚಂದ್ರಯ್ಯ ಭಾಗವಹಿಸಿದ್ದರು.



Saturday, April 30, 2016



ಪಟ್ಟಣದಲ್ಲಿ ಸೋರಿಕೆಯಾಗುವ ನೀರು ತಡೆಗಟ್ಟಲು ಪುರಸಭಾಧ್ಯಕ್ಷ ಮನವಿ
ಚಿಕ್ಕನಾಯಕನಹಳ್ಳಿ,:ಪಟ್ಟಣದಲ್ಲಿ ಪ್ರತಿನಿತ್ಯ 3ಲಕ್ಷ ಲೀಟರ್ ನೀರು ಸೋರಿಕೆಯಾಗುತ್ತಿದೆ. ಪೋಲಾಗುತ್ತಿರುವ ನೀರನ್ನು ತಡೆಗಟ್ಟಿದರೆ 3ದಿನಗಳಿಗೊಮ್ಮೆ ಎಲ್ಲಾ ವಾಡರ್್ಗಳಿಗೂ ಕುಡಿಯುವ ನೀರು ಒದಗಿಸಬಹುದು ಎಂದು ಪುರಸಭೆ ಅಧ್ಯಕ್ಷ ಸಿ.ಟಿ.ದಯಾನಂದ್ ಹೇಳಿದರು. 
ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಿಸಿದ ಬಳಿಕ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ತಡರಾತ್ರ ಸಭೆಕರೆದು ಸಮಸ್ಯೆ ಆಲಿಸುವ ಸಂದರ್ಭದಲ್ಲಿ ಪುರಸಭೆ ಸದಸ್ಯರು ಪಟ್ಟಣದಲ್ಲಿ ತಲೆದೋರಿರುವ ಸಮಸ್ಯೆಯನ್ನು ವಿವರಿಸಿದರು.
   ಪಟ್ಟಣದಲ್ಲಿ 23ಸಾವಿರ ಜನಸಂಖ್ಯೆ ಇದೆ.ಪ್ರತಿನಿತ್ಯ ಪಟ್ಟಣಕ್ಕೆ 20ಲಕ್ಷ ಲೀಟರ್ ಅವಶ್ಯಕತೆ ಇದೆ. ಪಟ್ಟಣದಲ್ಲಿ 59 ಕೊಳವೆಬಾವಿ ಇದ್ದು, 27 ಬರಿದಾಗಿವೆ. ಹೊಸದಾಗಿ ಕೊರೆಸಲಾಗಿರುವ 9 ಕೊಳವೆಬಾವಿಗಳಿಗೆ ಮೋಟ್ರು ಅಳವಡಿಸಬೇಕಿದೆ. 23 ಕೊಳವೆಬಾವಿಗಳಲ್ಲಿ ನೀರು ಲಭ್ಯ ಇದ್ದು, 6.5ಲಕ್ಷ ನೀರು ಲಭ್ಯ ಇದೆ.ಇದರಲ್ಲಿ ಅರ್ಧದಷ್ಟು ನೀರು ಸೋರಿಕೆಯಾಗುತ್ತಿದೆ ಎಂದು ಪುರಸಭೆ ಇಂಜಿನಿಯರ್ ಮಹೇಶ್ಬಾಬು ಸಭೆಗೆ ವಿವರಣೆ ನೀಡಿದರು.
  ನೀರು ಸರಬರಾಜು ಮಾಡಲು ಅಳವಡಿಸಿರುವ ಕೊಳವೆ ಮಾರ್ಗ 30 ವರ್ಷ ಹಳೆಯದಾಗಿದ್ದು ನೀರು ಸೋರಿಕೆಯಾಗುತ್ತಿದೆ ಹಾಗೂ 171 ರೈಸಿಂಗ್ ಮೈನ್ಗಳು ಇದ್ದು ನಿರಂತರವಾಗಿ ನೀರು ಪೋಲಾಗುತ್ತಿದೆ. ನೀರಿನ ಅಪವ್ಯಯ ತಪ್ಪಿಸಲು ಹೊಸ ಕೊಳವೆ ಮಾರ್ಗ ಹಾಕಬೇಕು ಹಾಗೂ ಅಕ್ರಮ ರೈಸಿಂಗ್ ಮೈನ್ಗಳಿಗೆ ಕಡಿವಾಣ ಹಾಕಬೇಕು ಎಂದರು.
  
  ಹೇಮಾವತಿ ನಾಲೆಯಿಂದ ಪಟ್ಟಣದ ಕೆರೆಗೆ ಕುಡಿಯುವ ನೀರು ಹರಿಸಲು ಅವಶ್ಯವಿರುವ ಹೊಸ ಮೋಟ್ರು ಅಳವಡಿಸಲು ರೂ.50ಲಕ್ಷದ ಕ್ರಿಯಾ ಯೋಜನೆ ಹಾಗೂ ಹೇಮಾವತಿ ನೀರನ್ನು ಸಂಗ್ರಹಿಸಲು ಚಿಕ್ಕನಾಯಕನಹಳ್ಳಿಕೆರೆಗೆ ಸಿಮೆಂಟ್ ಬೆಡ್ಡಿಂಗ್ ಹಾಕಲು ಕ್ರಿಯಾ ಯೋಜನೆ ರೂಪಿಸಿ ಹಾಗೂ ಹೊಸದಾಗಿ ಹತ್ತು ಕೊಳವೆ ಬಾವಿಗಳನ್ನು ಕೊರೆಸಲು ಪ್ರಸ್ತಾವನೆ  ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ ಪಟ್ಟಣಕ್ಕೆ ಅಗತ್ಯವಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಾ,  ಕುಡಿಯುವ ನೀರು ಸಮಸ್ಯೆಯ ಬಗ್ಗೆ,  ನೆನಗುದಿಗೆ ಬಿದ್ದಿರುವ ಯು.ಜಿ.ಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ಬಗ್ಗೆ ಹಾಗೂ  ಹೆಚ್ಚುವರಿ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ  ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡುವುದು ಹಾಗೂ ಕೆ.ಎಸ್.ಆರ್.ಟಿ.ಸಿ ಡಿಪೋಗೆ ಸ್ಥಳ ಮಂಜೂರು ಮಾಡಬೇಕೆಂದು ಬೇಡಿಕೆಯನ್ನು ಓದಿ ಹೇಳಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ನಾನಾ ಅಭಿವೃದ್ದಿ ಕಾರ್ಯಗಳಿಗಾಗಿ, ಗಣಿ ಪುನಶ್ಚೇತನ ಯೋಜನೆ ಅಡಿಯಲ್ಲಿ ರೂ.32 ಕೋಟಿ ಹಣ ಮೀಸಲಿಡಲಾಗಿದೆ ಎಂದರು.

ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ಡಾಂಬರು ರಸ್ತೆ ನಿಮರ್ಿಸಿರುವುದರಿಂದ ರಸ್ತೆಯ ಎರಡೂ ಬದಿಗಳಲ್ಲೂ ಪೈಪ್ಲೈನ್ ಮಾಡಲು ಹಣ ಬಿಡುಗಡೆ ಮಾಡಬೇಕು.ಪುರಸಭೆಗೆ ಕೈಲಾಸರಥ ಮುಂಜೂರು ಮಾಡಬೇಕುನೀರು ಸೋರಿಕೆ ತಡೆಗಟ್ಟಲು .ರೈಸಿಂಗ್ ಮೈನ್ಗೆ ಲಾಕ್ ಸಿಸ್ಟಮ್ ಅಳವಡಿಸಬೇಕು ಹಾಗೂ ಮೊಕದ್ದಮೆ ಹಿಂಪಡೆದು ಕೆರೆ ಅಂಗಳದಲ್ಲಿ ಸಂತೆ ಮೈದಾನ ನಿಮರ್ಿಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಎಂ.ಕೆ.ರವಿಚಂದ್ರ, ಹೆಚ್.ಬಿ.ಪ್ರಕಾಶ್, ಮಲ್ಲಿಕಾಜರ್ುನಯ್ಯ, ರೂಪಶಿವಕುಮಾರ್, ರೇಣುಕಮ್ಮ, ಪ್ರೇಮದೇವರಾಜು, ಪುಷ್ಪ.ಟಿ.ರಾಮಯ್ಯ, ಧರಣಿ.ಬಿ.ಲಕ್ಕಪ್ಪ, ಮಹಮದ್ಖಲಂದರ್, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮೂರಲ್ಲಿ ಅಷ್ಟೊಂದು ಜನ ಸಾಯ್ತಾರಾ: ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ವಿದ್ಯುತ್ ಚಿತಾಗಾರ ಮುಂಜೂರು ಮಾಡಿ ಎಂದು ಸದಸ್ಯರೊಬ್ಬರು ಕೇಳಿದ ತಕ್ಷಣ, ನಿಮ್ಮೂರಲ್ಲಿ ಅಷ್ಟೊಂದು ಜನ ಸಾಯ್ತಾರಾ ಎಂದು ಜಿಲ್ಲಾಧಿಕಾರಿ  ಮೋಹರಾಜ್ ಪ್ರಶ್ನಿಸಿದರು..ಚಿತಾಗಾರ ಬೇಕೆಂದರೆ ಪ್ರತಿದಿನ ಸಾವು ಸಂಭವಿಸಲೇಬೇಕು ಎಂದು ಧ್ವನಿ ಗೂಡಿಸಿದರು.ಸಭೆ ನಗೆಗಡಲಲ್ಲಿ ತೇಲಿತು.

ಕಾರಿಗೆ ಲಾರಿ ಡಿಕ್ಕಿ ಯುವಕರು ಸಾವು
ಚಿಕ್ಕನಾಯಕನಹಳ್ಳಿ,ಏ.30: ಈರುಳ್ಳಿ ತುಂಬಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ ಮತ್ತೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇನ್ನು ಮೂವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಅಗ್ನಿಶಾಮಕ ಠಾಣೆಯ ಬಳಿ ಈ ಅಪಘಾತ ಸಂಬಂವಿಸಿದ್ದು, ಚಿಕ್ಕನಾಯಕನಹಳ್ಳಿ ಕಡೆಯಿಂದ ಹೋರಟ ಕಾರು ಹುಳಿಯಾರಿನ ಕಡೆಯಿಂದ ಬಂದ ಲಾರಿ ಮುಖಾಮುಖಿಯಾದ್ದರಿಂದ ಕಂದಿಕೆರೆಯ ಚೇತನ್(25), ಕಿರಣ್(25) ಇಬ್ಬರು ಸ್ಥಳದಲ್ಲೇ ಸಾವನ್ನಪಿದರೆ, ಸಿ.ಆರ್.ಯೋಗಿಶ್  ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ, ಉಳಿದ ಗಾಯಾಳುಗಳಾದ  ಕೆ.ಎನ್. ಯೋಗೀಶ್, ನಾಗರಾಜ್, ಹರೀಶ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸ್ಥಳಕ್ಕೆ ಸಿ.ಪಿ.ಐ.ಮಾರಪ್ಪ, ಪಿ.ಎಸೈ.ವಿಜಯಕುಮಾರ್ ಭೇಟಿ ನೀಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 ಈಜಲು ಹೋದ ಯುವಕ ಸಾವು 



ಚಿಕ್ಕನಾಯಕನಹಳ್ಳಿ,ಏ.30: ಕುಡಿದ ಅಮಲಿನಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ತಾಲೂಕಿನ ಸಿಂಗದಹಳ್ಳಿ ದೊಡ್ಡ ಕೆರೆಯಲ್ಲಿ ನಡೆದಿದೆ.
ಸಿಂಗದಹಳ್ಳಿ  ಗ್ರಾಮದ ವಾಸಿ ಮೀನಿನ ನರಸಿಂಹಮೂತರ್ಿಯ ಅಳಿಯ ಹತ್ಯಾಳ್ನ ಸ್ವಾಮಿ(35) ತಮ್ಮ ಮಾವನ ಮನೆಗೆ ಬಂದ ಸಂದರ್ಭದಲ್ಲಿ ಮಾವನ ಮನೆಯವರು ಮದುವೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡೆದಿದೆ.   ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಧ್ಯ ಪಾನ ಸೇವಿಸಿ ಈಜಲು ಹೋಗಿದ್ದಾನೆ. ಕೆರೆಯ ಸಮೀಪ ಯಾರೂ ಇಲ್ಲದ ಸಂದರ್ಭದಲ್ಲಿ  ಕೆರೆಯ ತೂಬಿನ ಮೇಲಿದ್ದ ಜಿಗಿದಿದ್ದಾನೆ, ಈ ಸಂದರ್ಭದಲ್ಲಿ ಮೃತ ಸ್ವಾಮಿಯ ಆಯಕಟ್ಟಿನ ಜಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು, ಕೈಕಾಲ ಆಡಿಸಲು ಸಾಧ್ಯವಾಗದೆ ನೀರಿನೊಳಗೆ ಊದುಕೊಂಡಿದ್ದಾನೆ ಎಂದು ಕೆರೆಯ ಸಮೀಪದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಜಯಣ್ಣ ಪತ್ರಿಕೆ ತಿಳಿಸಿದರು. 
 ಕೆರೆಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟದ್ದನ್ನು ಮನಗಂಡಿದ್ದರು, ಆದರೆ ಕೆರೆಯೊಳಗೆ  ಯಾರೂ ಈಜಾಡುತ್ತಿರುವುದು ಕಾಣದೆ ಇದ್ದಾಗ ಗಾಬರಿಗೊಂಡ ಸಿಂಗದಹಳ್ಳಿ ಗ್ರಾಮಸ್ಥರು ಕೆರೆಯ ನೀರಿಗೆ ಇಳಿದು ಹುಡುಕಾಡಿದ್ದಾರೆ, ಹಲವು ಘಂಟೆಗಳವರೆಗೆ ಹುಡುಕಾಟದ  ನಂತರ ಮೃತ ದೇಹ ನೀರಿನಲ್ಲಿರುವುದು ಪತ್ತೆಯಾಗಿದೆ. ಪೊಲೀಸರ ಸ್ಥಳಕ್ಕೆ ಆಗಮಿಸಿದ ನಂತರ ಮೃತ ದೇಹವನ್ನು ಹೊರತೆಗೆಯಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.






Friday, April 29, 2016


ಬರಪೀಡಿತ  ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಬೇಟಿ, ರೈತರ ಸಭೆ 
ಚಿಕ್ಕನಾಯಕನಹಳ್ಳಿ,:  ಹೇಮಾವತಿ ನಾಲೆಯಿಂದ ಕೊಂಡ್ಲಿಕೆರೆ ಹಾಗೂ ನಡುವನಹಳ್ಳಿ, ಜೆ.ಸಿ ಪುರದಿಂದ  ತೀರ್ಥಪುರ ಭಾಗಗಳಿಗೆ ನೀರು ಹರಿಸುವ ಕಾರ್ಯಕ್ಕೆ ಯೋಜನೆಯನ್ನು ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ತಿಳಿಸಿದರು.
 ತಾಲ್ಲೂಕಿನ ತೀರ್ಥರಾಮಲಿಂಗೇಶ್ವರ ವಜ್ರದಲ್ಲಿ ಶುಕ್ರವಾರ ತಾಲ್ಲೂಕು ಬರಪೀಡಿತ ಪ್ರದೇಶಕ್ಕೆ ಬರ ಪರಿಹಾರ ವೀಕ್ಷಣೆಯ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ರೂ.8 ಕೋಟಿವರೆಗೂ ಹಣ ಬಿಡುಗಡೆ ಮಾಡಲು ಜಿಲ್ಲಾಡಳಿತ ಸಿದ್ದವಿದೆ ಎಂದರು.
ಮಳೆಗಾಲದಲ್ಲಿ ಹರಿದು ಪೋಲಾಗುವ ನೀರನ್ನು ಇಂಗಿಸಲು ಸೇತುವೆ ಸಹಿತ ಬ್ಯಾರೇಜ್, ಚೆಕ್ಡ್ಯಾಂ ನಿಮರ್ಿಸಲು ಕ್ರಮ ಕೈಗೊಳ್ಳಲಾಗುವುದು. ಬರಗಾಲದ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ನೀರು ಹಾಗೂ ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 
ಶಾಸಕ ಸಿ.ಬಿ ಸುರೇಶ್ಬಾಬು ಮಾತನಾಡಿ, ದೊಡ್ಡರಾಂಪುರದ ಮೂಲಕ ತೀರ್ಥರಾಮೇಶ್ವರ ವಜ್ರಕ್ಕೆ ಬರಲು ಬ್ರಿಡ್ಬ್ ಕಂ ಬ್ಯಾರೇಜ್  ನಿಮರ್ಿಸಲು ರೂ.1.5 ಕೋಟಿ ವೆಚ್ಚದಲ್ಲಿ ನಕ್ಷೆ ತಯಾರಾಗಿದೆ. ಕಾಮಗಾರಿ ಮುಗಿದರೆ  ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ. ಪಟ್ಟಣ ಹೊರತು ಪಡಿಸಿ ತಾಲ್ಲೂಕಿನ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ. ಪಟ್ಟಣದಲ್ಲಿ ಮಾತ್ರ ನೀರಿನ ಬರವಿದ್ದು ಎಂಟು-ಹತ್ತು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದರು.
ಗಣಿಗಾರಿಕೆಯಿಂದ ಬಂದ ಹಣದಲ್ಲಿ 81 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ತೀಮರ್ಾನಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಒಟ್ಟಿಗೆ ಸೇರಿ ಹಳ್ಳಿಗಳ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಎಂದರು.
ತುಮಕೂರು ಅಭಿವೃದ್ದಿ ರೆವಲ್ಯೂಷನ್ ಪೋರಂ ಕಾರ್ಯದಶರ್ಿ ಕುಂದರನಹಳ್ಳಿ ರಮೇಶ್ ಮಾತನಾಡಿ, ಮಂಗಳೂರಿನ ಪಿಣಕುಲ ಪ್ರವಾಸಿ ತಾಣದ ಮಾದರಿಯಲ್ಲಿ ತೀರ್ಥರಾಮೇಶ್ವರ ವಜ್ರವನ್ನು ಅಭಿವೃದ್ದಿ ಪಡಿಸಬೇಕಿದೆ ಎಂದರು.
 ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ತಹಶೀಲ್ದಾರ್ ಆರ್.ಗಂಗೇಶ್, ತೀರ್ಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಭೂಷಣ, ರೈತರಾದ ರಾಮಕೃಷ್ಣಯ್ಯ, ಲಿಂಗರಾಜು, ಚೇತನ್, ರಾಜಣ್ಣ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಇಟಿ ತರಬೇತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕನಾಯಕನಹಳ್ಳಿ,ಏ.29 : ಸ್ಮಧರ್ಾತ್ಮಕ ಪರೀಕ್ಷೆಗಳಾದ ಐ.ಎ.ಎಸ್, ಐ.ಎ.ಎಮ್, ಕೆ.ಎ.ಎಸ್, ಕೆ.ಪಿ.ಎಸ್.ಸಿ, ಸಿಇಟಿ ಈ ರೀತಿಯ ಯಾವುದೇ ಪರೀಕ್ಷೆಗಳು ದಿನಕಳೆದಂತೆ ಬದಲಾಗುತ್ತಾ ಹೋಗುತ್ತಿದ್ದು ಈ ಬದಲಾವಣೆಗೆ ತಕ್ಕಂತೆ ವಿದ್ಯಾಥರ್ಿಗಳು ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಉಚಿತ ಸಿಇಟಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶದ ಸೌಲಭ್ಯ ಪೆಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಇದಕ್ಕೆ ನಾಗರೀಕರು ಪ್ರಸಕ್ತ ದಿನಮಾನಗಳಲ್ಲಿ ಸಿಗುವ ಸೌಕರ್ಯಗಳಿಗೆ ಶಿಕ್ಷಣದ ಅಗತ್ಯತೆ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಸಿಇಟಿ ತರಬೇತಿ ಪಡೆಯುತ್ತಿರುವ ವಿದ್ಯಾಥರ್ಿಗಳು ಅಂದುಕೊಂಡಷ್ಟು ಅಂಕಗಳನ್ನು ಪಡೆಯದೇ ಇದ್ದರೆ ಅದರ ಬಗ್ಗೆ ಯೋಚಿಸದೆ, ಹೆಚ್ಚಿನ ತರಬೇತಿ ಮತ್ತೊಂದು ಪರೀಕ್ಷೆಗೆ ಅನುಕೂಲವಾತ್ತದೆ ಎಂದು ತಿಳಿದುಕೊಳ್ಳಬೇಕು, ತಮ್ಮಲ್ಲಿರುವ  ಆತ್ಮವಿಶ್ವಾಸವನ್ನು ವಿದ್ಯಾಥರ್ಿಗಳು ಎಂದಿಗೂ ಕಳೆದುಕೊಳ್ಳಬಾರದು, ಈ ವರ್ಷ ಪಡೆಯುತ್ತಿರುವ ತರಬೇತಿ ಮತ್ತೊಂದು ಸ್ಮಧರ್ಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದ ಅವರು ಹಣವಿದ್ದರೆ ವಿದ್ಯೆ ದೊರೆಯುವುದಿಲ್ಲ, ವಿದ್ಯೆ ಪಡೆಯಲು ಶ್ರಮ, ಸಾಧನೆ ಮಾಡುವ ಗುರಿ ಹೊಂದಿರಬೇಕು ಆಗಲೇ ವಿದ್ಯಾಥರ್ಿಗಳು ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಪಟ್ಟಣದಲ್ಲಿ ಆರಂಭಿಸಿರುವ ಉಚಿತ ಸಿಇಟಿ ತರಬೇತಿ ಶಿಬಿರವನ್ನು ಪ್ರತಿ ವರ್ಷ ನಡೆಸಲಾಗುವುದು, ಈ ತರಬೇತಿ ಶಿಬಿರ ಪ್ರಥಮ ವರ್ಷವಾಗಿರುವುದರಿಂದ ವಿದ್ಯಾಥರ್ಿಗಳಿಗೆ ಕೆಲವು ತೊಂದರೆಗಳಾಗಿದೆ ಅದನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಬರುವ ವಿದ್ಯಾಥರ್ಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಹಾಗೂ ಉಚಿತ ಸಿಇಟಿ ತರಬೇತಿ ಪಡೆಯುತ್ತಿರುವ 3 ಸಾವಿರ ರ್ಯಾಂಕಿಂಗ್ ಒಳಗೆ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾಥರ್ಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಕೆಐಎಡಿಬಿ ಜಂಟಿ ನಿದರ್ೇಶಕ ಸಿ.ಟಿ.ಮುದ್ದುಕುಮಾರ್, ಬೆಂಗಳೂರು ಆಂತರಿಕ ಭದ್ರತೆ ಡಿ.ವೈ.ಎಸ್.ಪಿ ಸಿ.ಆರ್.ರವೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ ಐಟಂ.
ವೈದ್ಯನಾಗುವ ಆಸೆ ಇತ್ತು : ವೈದ್ಯನಾಗಿ ನಂತರದಲ್ಲಿ ಐಎಎಸ್ ಬರೆಯಬೇಕೆಂಬ ಎರಡು ಗುರಿ ಇತ್ತು ಆದರೆ, ನನಗೆ ವೈದ್ಯನಾಗುವ ಅವಕಾಶವೇ ಸಿಗಲಿಲ್ಲ,  ನಂತರ  ಐಎಎಸ್ ಪರೀಕ್ಷೆ ಬರೆದೆ, ನಾಲ್ಕನೇ  ಬಾರಿಗೆ ನನಗೆ ಐ.ಎ.ಎಸ್.ಗೆ ಅವಕಾಶ ಲಭಿಸಿತು, ನಾನು ಒಬ್ಬ ನಿಮ್ಮಂತೆ ತಾಲೂಕು ಪ್ರದೇಶದಿಂದಲೇ ಬಂದವನು, ಆದರೆ ನಮ್ಮ ಕಡೆ ಅನುಕೂಲಸ್ಥಿತಿ ಇದ್ದರೂ, ಐ.ಎ.ಎಸ್. ಪರೀಕ್ಷೆ ಬರೆಯುವ ಜೊತೆಯಲ್ಲಿ  ಕೆಲ ದಿನಗಳ ಕಾಲ ಐಎಎಸ್ ಪರೀಕ್ಷೆ ಬರೆಯುವವರಿತೆ ತರಬೇತಿ ನೀಡುವ ತರಬೇತುದಾರನಾಗಿದ್ದೆ ನಂತರ ಐಎಎಸ್ ಪರೀಕ್ಷೆ ತೇರ್ಗಡೆಯಾಗಿ ಜಿಲ್ಲಾಧಿಕಾರಿಯಾದೆ ಎಂದು ಡಿ.ಸಿ.ಮೋಹನ್ ರಾಜ್ ತಮ್ಮ ಮನದಾಳದ ಮಾತುಗಳನ್ನು ವಿದ್ಯಾಥರ್ಿಗಳ ಮುಂದಿಟ್ಟರು.

ಸಾಸಲು ಬನಶಂಕರಿ ದೇವಿಯ ಜಾತ್ರಾಮಹೋತ್ಸವ 
ಚಿಕ್ಕನಾಯಕನಹಳ್ಳಿ,ಏ.29:  ಬಿರು ಬಿಸಿಲಿನಂಥ  ಪ್ರಕೃತಿ ವಿಕೋಪ ಎದುರಾಗಿದೆ.  ಮಳೆ ಇಲ್ಲದೆ ಜನ ಜಾನುವಾರುಗಳು ನೀರಿನಹಾಹಾಕಾರ ಎದುರಿಸುತ್ತಿವೆ. ಇದು ಮನುಷ್ಯ ದೈವಕ್ಕೆ ಸಮ ಎಂದುಕೊಂಡಿದ್ದರ ಫಲ ಎಂದು  ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಶ್ರೀಬನಶಂಕರಿದೇವಿ ನೂತನ ದೇವಾಲಯದ ಪ್ರಾರಂಭೋತ್ಸವ ವಾಷರ್ಿಕ ಪೂಜಾ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ ಧಾಮರ್ಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಬರ ಸಮೀಕ್ಷೆ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಬಂದು ಹೋಗುತ್ತಾರೆ. ದೇವರ ಕರುಣೆ ಇಲ್ಲದೆ ಇಂಥ ಸಮಸ್ಯೆಗಳಿಗೆ ಪರಿಹಾರ ದೊರಕದು ಎಂದರು.
   ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀಡಾ.ಅಭಿನವ ಮಲ್ಲಿಕಾಜರ್ುನ ಮಹಾಸ್ವಾಮೀಜಿ, ಮಾತನಾಡಿ, ನೀರು,ಗಾಳಿ ಮಣ್ಣು ಮುಂತಾದ ಪಕೃತಿ ಅಂಶಗಳಲ್ಲಿ ಭಗವಂತನನ್ನು ಕಾಣುವಂತಹ ಸಂಸ್ಕೃತಿ ನಮ್ಮದು. ಸಂಪತ್ತಿಗೆ , ಹಣಕ್ಕೆ ಭಗವಂತನ ಒಲಿಯುವುದಿಲ್ಲ ಎಂದರು. 1931ರಲ್ಲಿ ಈ ರೀತಿಯ ಬೀಸಿಲು ಇತ್ತು,  ಇದು ಗುಲಬರ್ಗ, ರಾಯಚೂರುಗಳ ಕಡೆಗಳಲ್ಲಿ ಇರುವಂತಹ  ತಾಪಮಾನ ನಮ್ಮಲ್ಲೂ ಸೃಷ್ಠಿಯಾಗಿದೆ  ಎಂದರು.
     ಗೋಡೆಕೆರೆಯ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಬಿ.ಲಕ್ಕಪ್ಪ, ತಾ.ಪಂ.ಸದಸ್ಯೆ ಜಯಮ್ಮ, ಪಟೇಲ್ ಎಸ್ ಬಸವರಾಜು, ಆಡಿಟರ್ ಚಂದ್ರಶೇಖರ್, ಎಸ್.ಟಿ.ರವಿಕುಮಾರ್, ಸಾ.ಚಿ.ನಾಗೇಶ್, ವೆಂಕಟೇಶ, ನಟರಾಜ್, ಉಪನ್ಯಾಸಕ ದಿನೇಶ್, ಸಿದ್ದಲಿಂಗಮೂತರ್ಿ, ಉಮೇಶ್, ಸುರೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.