Friday, April 30, 2010




ಚುನಾವಣೆಯ ದೆಸೆಯಿಂದ ಆಂಜನೇಯ ನೆಲೆ ಕಂಡು ಕೊಂಡ!
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಏ.30: ತಾಲೂಕಿನ ಗ್ರಾಮ ಪಂಚಾಯ್ತಿ ಚುನಾವಣೆ ಜನರಲ್ಲಿ ಹಲವು ರೀತಿಯ ಕುತೂಹಲಗಳಿಗೆ ಕಾರಣವಾಗಿದೆ, ಈ ಚುನಾವಣೆ ಮರೆತೆ ಹೋದ ಸಂಬಂಧಗಳಿಗೆ ಮತ್ತೆ ಜೀವ ತುಂಬಿದೆ, ಅವಸಾನದ ಅಂಚಿನಲ್ಲಿರುವ ಹಾಗೂ ಅರ್ಧಕ್ಕೆ ನಿಂತ ದೇವಾಲಯಗಳು ಪುನರ್ ನಿಮರ್ಾಣಗೊಳ್ಳುವಂತೆ ಮಾಡಿದೆ, ದೇವರು, ದೇವಾಲಯಗಳಿಂದ ಆರಂಭಗೊಂಡು ಆಮೀಷಗಳು, ಕಳ್ಳುಬಳ್ಳಿ, ನಂಟಸ್ಥನ ಹಾಗೂ ಕುಟುಂಬದ ಮನೆತನೆಕ್ಕೆ 'ಮಾರು' ಹೋಗುವಂತೆ ಮಾಡುವುದು ಒಂದೆಡೆಯಾದರೆ, ಇದಕ್ಕೆ ವಿರುದ್ದವಾದ ನಡಾವಳಿಕೆಯಾದ ಸ್ಥಾನಗಳನ್ನು ದುಡ್ಡಿಗೆ ಹರಾಜು ಹಾಕವುದು, ವೈಮನಸ್ಸುಗಳನ್ನು ಉಂಟು ಮಾಡುವುದು, ವೈಷಮ್ಯಗಳಿಗೆ ನಾಂದಿ ಹಾಡುವುದು ಸೇರಿದಂತೆ ಹಲವು ರೀತಿಯ ''ಗೊಂದಲಾಪುರ''ಗಳನ್ನು ಹುಟ್ಟು ಹಾಕುತ್ತಿದೆ.
ತಾಲೂಕಿನ ಚೌಳಕಟ್ಟೆ ಗ್ರಾ.ಪಂ.ಯ ಸೋರಲಮಾವು ಗ್ರಾಮದಲ್ಲಿನ ಆಂಜನೇಯನ ದೇವಾಸ್ಥಾನ ಅರ್ಧಕ್ಕೆ ನಿಂತಿದ್ದು ಅದನ್ನು ಪೂರ್ಣಗೊಳಿಸಲು ಗ್ರಾಮಸ್ಥರು ಹರ ಸಾಹಸ ಪಡುತ್ತಿದ್ದರು, ಈ ಚುನಾವಣೆ ಅರ್ಧಕ್ಕೆ ನಿಂತ ದೇವಾಲಯವನ್ನು ಪೂರ್ಣಗೊಳಿಸುವಂತೆ ಮಾಡಿದೆ.
ಈ ಗ್ರಾಮಕ್ಕೆ ನಿಗದಿಯಾಗಿರುವುದು ನಾಲ್ಕು ಕ್ಷೇತ್ರಗಳು, ಇದರಲ್ಲಿ ಒಂದು ಎಸ್.ಟಿ.ಮಹಿಳೆ, ಬಿ.ಸಿ.ಎಂ.(ಎ) ಸಾಮಾನ್ಯ, ಬಿ.ಸಿ.ಎಂ.(ಎ) ಮಹಿಳೆ ಹಾಗೂ ಒಂದು ಸಾಮಾನ್ಯ ಸ್ಥಾನ, ಈ ನಾಲ್ಕು ಸ್ಥಾನಗಳನ್ನು ದೇವರ ಪಾದಕ್ಕೆ ಹಾಕಿರುವ ಈ ಗ್ರಾಮಸ್ಥರು, ಚುನಾವಣೆಗಾಗಿ ಯಾರೂ ಹಣ ಖಚರ್ುಮಾಡುವುದು ಬೇಡ, ನೀವೇನು ಚುನಾವಣೆಗೆ ಖಚರ್ುಮಾಡಬೇಕಿದೆ, ಆ ಹಣವನ್ನು ದೇವಸ್ಥಾನದ ಕಟ್ಟಡಕ್ಕೆ ನೀಡಿ ಎಂಬ ಸಲಹೆಗೆ ಗ್ರಾಮದ ಜನ ಹಾಗೂ ಮುಖಂಡರು ಒಪ್ಪಿ, ಈ ನಾಲ್ಕು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಆಂಜನೇಯನಿಗೆ ಒಂದು ನೆಲೆಯನ್ನು ಒದಗಿಸಲು ಮುಂದಾಗಿದ್ದಾರೆ. ಆ ನಾಲ್ಕು ಜನ ಗ್ರಾ.ಪಂ. ಕಛೇರಿಯಲ್ಲಿ ತಮ್ಮ ಕುಚರ್ಿಯನ್ನು ಭದ್ರಮಾಡಿಕೊಂಡಿದ್ದಾರೆ.
ಇನ್ನು ಹೊಯ್ಸಲಕಟ್ಟೆ ಗ್ರಾ.ಪಂ.ಯಲ್ಲಿ ಎರಡು ಸ್ಥಾನಗಳಿಗೆ ಒಬ್ಬೊಬ್ಬರು ನಾಮ ಪತ್ರ ಸಲ್ಲಿಸಿದ್ದಾರೆ, ಇದರಲ್ಲಿ ಕಲ್ಲೇನಹಳ್ಳಿ ಗ್ರಾಮದಲ್ಲಿ ತಮ್ಮ, ಅಣ್ಣನಿಗಾಗಿ ತ್ಯಾಗ ಮಾಡಿದ್ದಾನೆ. ಇಲ್ಲಿಯ ಸ್ಥಾನ ಎಸ್.ಸಿ.ಗೆ ಮೀಸಲಿದ್ದರಿಂದ ಒಂದೇ ಮನೆಯ ಅಣ್ಣ-ತಮ್ಮಂದಿರು ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯುವ ಎಲ್ಲಾ ಲಕ್ಷಣಗಳು ಆರಂಭದಲ್ಲಿ ಕಂಡು ಬಂದವಾದರೂ, ಕೊನೆಗೆ ಹಿರಿಯರ ಮಾತಿನಿಂದ ಅಣ್ಣನಿಗೆ ಅಧಿಕಾರವನ್ನು ಬಿಟ್ಟು ಕೊಡುವ ದೊಡ್ಡತನ ತೋರಿದ 'ತಮ್ಮ', ತನ್ನ ನಾಮಪತ್ರವನ್ನು ವಾಪಸ್ ಪಡೆಯುವ ಮೂಲಕ ತ್ಯಾಗಮಯಿ ಆಗಿದ್ದಾನೆ. ಇನ್ನು ನುಲೇನೂರಿನಲ್ಲಿ ಒಬ್ಬನೇ ಅಬ್ಯಾಥರ್ಿ ನಾಮಪತ್ರ ಸಲ್ಲಿಸಿದ್ದಾನೆ. ಈತನಿಗೆ ಎದುರಾಳಿಯೇ ಇಲ್ಲ.
ಬೆಳಗುಲಿ ಗ್ರಾ.ಪಂ.ಯಲ್ಲಿನ ಗೂಬೆಹಳ್ಳಿಯಲ್ಲಿ ಸಿದ್ದೇಗೌಡರ ಮನೆತನಕ್ಕೆ ವಿಶೇಷ ಗೌರವವಿದೆ, ಅಲ್ಲಿ ಈಗ ಉಷಾ ಒಬ್ಬರೇ ಅಬ್ಯಾಥರ್ಿ, ಇಲ್ಲಿ ಇವರ ಮಾವ ಸಿದ್ದೇಗೌಡರು ಈ ಹಿಂದೆ ಮಾಡಿದ ದಾನಧರ್ಮಗಳನ್ನು ಇಂದಿಗೂ ಸ್ಮರಿಸುವ ಅಲ್ಲಿಯ ಜನ, ಉಷಾ ಅವರ ವಿರುದ್ದ ಯಾರೂ ನಾಮಪತ್ರ ಸಲ್ಲಿಸದೆ ಅವರ ಗೆಲುವಿಗೆ ರೋಡ್ ಕ್ಲಿಯರ್ ಮಾಡಿಕೊಟ್ಟಿದ್ದಾರೆ.
ಹಂದನಕೆರೆ ಗ್ರಾ.ಪಂ.ಯ ಕೆಂಗಲಾಪುರದಲ್ಲಿ ಇರುವ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಇಲ್ಲಿ ಝಣ, ಝಣ, ಕಾಂಜಾಣದ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ.
ದಸೂಡಿ ಗ್ರಾ.ಪಂ.ಯಲ್ಲಿನ ಉಮ್ಲಾನಾಯ್ಕನ ತಾಂಡ್ಯದ ಎಸ್.ಸಿ ಮಹಿಳೆ ಸ್ಥಾನಕ್ಕೆ, ಎಮ್ಮೆಕುರಿಹಟ್ಟಿಯ ಬಿ.ಸಿ.ಎಂ.(ಎ)ಗೆ, ಕೋರಗೆರೆ ಗ್ರಾ.ಪಂ.ಯ ಎಸ್.ಸಿ.ಮಹಿಳೆಗೆ, ಮರಾಠಿಪಾಳ್ಯ ಎಸ್.ಸಿ.ಮಹಿಳಾ ಸ್ಥಾನಕ್ಕೆ, ಬರಗೂರು ಗ್ರಾ.ಪಂ.ಯ ಓಟೀಕೆರೆಯ ಎಸ್.ಟಿ. ಮಹಿಳೆಯ ಜಾಗಕ್ಕೆ , ಮತ್ತೀಘಟ್ಟದಲ್ಲಿನ ಮಲ್ಲೇನಹಳ್ಳಿ ಬಿ.ಸಿ.ಎಂ.(ಎ) ಮಹಿಳೆಯ ಸ್ಥಾನಕ್ಕೆ ಹಾಗೂ ಕುಪ್ಪೂರಿನ ಬಿ.ಸಿ.ಎಂ.(ಎ) ಸಾಮಾನ್ಯ ಸ್ಥಾನಗಳಿಗೆ ಒಂದೊಂದೆ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಈ ಕ್ಷೇತ್ರಗಳಿಗೂ ಹಲವು ರೀತಿಯ ಕಸರತ್ತುಗಳನ್ನು ನಡೆದಿವೆ.
ಒಟ್ಟಾರೆ ಈ ಚುನಾವಣೆ ಹಲವು ಜನರ ಮೊಗದಲ್ಲಿ ನಗೆಯನ್ನು ಹೊರಸೂಸುವಂತೆ ಮಾಡಿದ್ದರೆ, ಇನ್ನೂ ಕೆಲವರ ಕಣ್ಣುಗಳನ್ನು ಕೆಂಪಗೆ ಮಾಡಿವೆ. ಚುನಾವಣೆ ಮುಗಿಯುವದೊರಳಗೆ ಅದೆಷ್ಟು ಜನ ಗೆಲುವೆಂಬ 'ಬಿಸಲು ಕುದುರೆ'ಯ ಬಾಲಕ್ಕೆ ತಮ್ಮ ಜಮೀನುಗಳನ್ನು ಅಡ ಇಡುತ್ತಾರೊ, ಅದೆಷ್ಟು ಜನ ಇದೇ ಒಂದು ಛಾನ್ಸು ಎಂದು ಹಣ ಮಾಡಲು ತೊಡಗುತ್ತಾರೊ ಗೊತ್ತಿಲ್ಲ, ಚುನಾವಣೆ ಮುಗಿಯುವುದರೊಳಗೆ ಅದೆಷ್ಟು ಸಂಬಂಧಗಳು ಏನಾಗುತ್ತವೆಯೊ ತಿಳಿದಿಲ್ಲ, ಅದೆಷ್ಟು ಕಾದಾಟಗಳು ನಡೆಯುತ್ತವೆಯೊ ಲೆಕ್ಕವಿಲ್ಲ. ಆದರೆ ಇವೆಲ್ಲಾ ಹಲವಾಟಗಳು ಚುನಾವಣೆಗೆ ಮಾತ್ರ ಮೀಸಲಿದ್ದರೆ ಚನ್ನ, ಚುನಾವಣೆಯ ನಂತರವೂ ಈ ಆಟಗಳನ್ನು ಮುನ್ನಡೆಸಬೇಡಪ್ಪ ಓ ಆಂಜನೇಯ..... ವಾಯುಪುತ್ರ....!


No comments:

Post a Comment