Saturday, May 1, 2010

28 ಗ್ರಾ.ಪಂನಲ್ಲಿನ 484 ಸ್ಥಾನಕ್ಕೆ 1527 ಮಂದಿ ಕಣದಲ್ಲಿ: 14 ಮಂದಿ ಅವಿರೋಧ

ಚಿಕ್ಕನಾಯಕನಹಳ್ಳಿ,ಮೇ.01; ತಾಲೂಕಿನ 28ಗ್ರಾಮ ಪಂಚಾಯಿತಿಗಳ ಒಟ್ಟು 484ಸ್ಥಾನಕ್ಕೆ 1527 ಅಭ್ಯಥರ್ಿಗಳು ಕಣದಲ್ಲಿದ್ದು 14ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ದಸೂಡಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸ್ಥಾನಗಳಿದ್ದು ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ 25ಮಂದಿ ಕಣದಲ್ಲಿದ್ದಾರೆ, ಹೊಯ್ಸಳಕಟ್ಟೆ ಗ್ರಾ.ಪಂ.ನಲ್ಲಿ 20 ಸ್ಥಾನಗಳಿದ್ದು 48ಮಂದಿ ಕಣದಲಿದ್ದು ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಚೌಳಕಟ್ಟೆಯಲ್ಲಿ 16 ಸ್ಥಾನಕ್ಕೆ 33 ಮಂದಿ ಕಣದಲ್ಲಿದ್ದು ನಾಲ್ಕು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗುಲಿಯಲ್ಲಿ 14 ಸ್ಥಾನಕ್ಕೆ ಕಣದಲ್ಲಿ 29 ಮಂದಿ ಇದ್ದಾರೆ, ಬೆಳಗುಲಿಯ 14 ಸ್ಥಾನಕ್ಕೆ 29 ಮಂದಿ ಕಣದಲ್ಲಿದ್ದಾರೆ, ಬರಗೂರು ಗ್ರಾ.ಪಂ.ನಲ್ಲಿನ 14 ಸ್ಥಾನಕ್ಕೆ ಕಣದಲ್ಲಿ 38 ಮಂದಿ ಇದ್ದಾರೆ, ಮತಿಘಟ್ಟದ 14 ಸ್ಥಾನಕ್ಕೆ ಕಣದಲ್ಲಿ 44 ಮಂದಿ, ಕುಪ್ಪೂರಿನ 18 ಸ್ಥಾನಕ್ಕೆ ಕಣದಲ್ಲಿ 55ಮಂದಿ ಮತ್ತು ಕೋರಗೆರೆಯಲ್ಲಿ 15 ಸ್ಥಾನಕ್ಕೆ ಕಣದಲ್ಲಿ 39 ಮಂದಿ, ಹಂದನಕೆರೆಯಲ್ಲಿ 19 ಸ್ಥಾನಕ್ಕೆ 59 ಕಣದಲ್ಲಿ ಮಂದಿಯಿದ್ದು ಈ ಆರು ಗ್ರಾ.ಪಂಯಲ್ಲಿ ಒಬ್ಬರಂತೆ ಆರು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಗಾಣದಾಳುವಿನಲ್ಲಿ 18 ಸ್ಥಾನಗಳಿದ್ದು ಕಣದಲ್ಲಿ 60ಮಂದಿ, ಕೆಂಕೆರೆಯಲ್ಲಿ 18 ಸ್ಥಾನಗಳಿದ್ದು ಕಣದಲ್ಲಿ 54ಮಂದಿ, ಹುಳಿಯಾರಿನಲ್ಲಿ 33 ಸ್ಥಾನಗಳಿದ್ದು ಕಣದಲ್ಲಿ 131ಮಂದಿ, ಯಳನಡುವಿನಲ್ಲಿ 17 ಸ್ಥಾನಗಳಿದ್ದು ಕಣದಲ್ಲಿ 62ಮಂದಿ, ದೊಡ್ಡಎಣ್ಣೆಗೆರೆಯ 21 ಸ್ಥಾನಕ್ಕೆ ಕಣದಲ್ಲಿ 63ಮಂದಿ , ತಿಮ್ಲಾಪುರದ 18 ಸ್ಥಾನಕ್ಕೆ ಕಣದಲ್ಲಿ 65ಮಂದಿ, ದೊಡ್ಡಬಿದರೆಯ 18 ಸ್ಥಾನಕ್ಕೆ ಕಣದಲ್ಲಿ 55 ಮಂದಿ, ಬರಕನಾಳು 16 ಸ್ಥಾನಕ್ಕೆ ಕಣದಲ್ಲಿ 52 ಮಂದಿ, ತಿಮ್ಮನಹಳ್ಳಿಯ 19 ಸ್ಥಾನಕ್ಕೆ ಕಣದಲ್ಲಿ 69 ಮಂದಿ, ರಾಮನಹಳ್ಳಿಯ 14 ಸ್ಥಾನಕ್ಕೆ ಕಣದಲ್ಲಿ 52 ಮಂದಿ, ಕಂದಿಕೆರೆಯ 17 ಸ್ಥಾನಕ್ಕೆ ಕಣದಲ್ಲಿ 61 ಮಂದಿ, ಮಲ್ಲಿಗೆರೆಯ 17 ಸ್ಥಾನಕ್ಕೆ ಕಣದಲ್ಲಿ 51ಮಂದಿ, ಶೆಟ್ಟಿಕೆರೆಯ 16 ಸ್ಥಾನಕ್ಕೆ ಕಣದಲ್ಲಿ 55 ಮಂದಿ, ದುಗಡೀಹಳ್ಳಿಯ 12 ಸ್ಥಾನಕ್ಕೆ ಕಣದಲ್ಲಿ 36 ಮಂದಿ, ಮುದ್ದೇನಹಳ್ಳಿಯ 20 ಸ್ಥಾನಕ್ಕೆ ಕಣದಲ್ಲಿ 60 ಮಂದಿ , ಹೊನ್ನೆಬಾಗಿಯ 11 ಸ್ಥಾನಕ್ಕೆ ಕಣದಲ್ಲಿ 36 ಮಂದಿ, ತೀರ್ಥಪುರದ 18 ಸ್ಥಾನಕ್ಕೆ ಕಣದಲ್ಲಿ 65 ಮಂದಿ, ಗೋಡೆಕೆರೆಯ 16 ಸ್ಥಾನಕ್ಕೆ ಕಣದಲ್ಲಿ 53 ಮಂದಿ, ಜೆ.ಸಿ.ಪುರದ 17 ಸ್ಥಾನಕ್ಕೆ 55 ಮಂದಿ ಕಣದಲ್ಲಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

No comments:

Post a Comment