Monday, May 24, 2010

ಚಿ.ನಾ.ಹಳ್ಳಿ ತಾಲೂಕಿನ 28 ಗ್ರಾ.ಪಂ.ಗಳ 484 ಸ್ಥಾನಗಳ ವಿಜೇತರ ಪಟ್ಟಿ
ಚಿಕ್ಕನಾಯಕನಹಳ್ಳಿ,ಮೇ.19: ತಾಲೂಕಿನ 28 ಗ್ರಾ.ಪಂ.ಗಳ 484 ಸದಸ್ಯರಲ್ಲಿ ಕಂದಿಕೆರೆಯ ರಂಗನಾಥ್ ಎಸ್.ಜಿ. 696 ಮತಗಳನ್ನು ಪಡೆದು ತಾಲೂಕಿನಲ್ಲೇ ಅತಿಹೆಚ್ಚು ಮತ ಪಡೆದ ಅಬ್ಯಾಥರ್ಿ ಎನಸಿಕೊಂಡಿದ್ದರೆ, ಅಂಬಾರ ಪುರದ ಆರ್.ಜ್ಯೋತಿ ಹಾಗೂ ಮಾದೀಹಳ್ಳಿ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಅಬ್ಯಾಥರ್ಿ ಇವರಿಬ್ಬರೂ 86 ಮತಗಳನ್ನು ಪಡೆದು ಅತಿ ಕಡಿಮೆ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ತಾಲೂಕಿನ 28 ಗ್ರಾಮ ಪಂಚಾಯಿತಿಯ 484 ಸ್ಥಾನಗಳಿಗೆ ಜಯಶೀಲರಾದವವರ ವಿವರ ಇಂತಿದೆ. ದಸೂಡಿ ಗ್ರಾ.ಪಂ.: ಒಟ್ಟು 18 ಸ್ಥಾನಗಳಿದ್ದು ಇದರಲ್ಲಿ ದಸೂಡಿ ಬ್ಲಾಕ್ ಒಂದರಲ್ಲಿ ನಾಲ್ಕು ಸ್ಥಾನಗಳಲ್ಲಿ ರಾಮನಾಯ್ಕ(315), ರೇಣುಕಮ್ಮ (359), ಹನುಮೇಶ್ ಡಿ.ಆರ್.(434), ಮಮತ ಸಿ.ಆರ್.(285) ದಸೂಡಿ ಬ್ಲಾಕ್ ಎರಡರಲ್ಲಿ ಮೂರು ಸ್ಥಾನಗಳಿದ್ದು ಇದರಲ್ಲಿ ಕರಿಯಮ್ಮ( ಅವಿರೋಧ ಆಯ್ಕೆ), ರಮೇಶ್(235), ಕುಮಾರನಾಯ್ಕ (204), ದಸೂಡಿ ಬ್ಲಾಕ್ ಮೂರರಲ್ಲಿ ಎರಡು ಸ್ಥಾನಗಳಲ್ಲಿ ಮಂಜಿಬಾಯಿ(ಅವಿರೋಧ ಆಯ್ಕೆ) ಶಿವಣ್ಣ.ಕೆ.(147), ಮರೆನಡುವಿನಲ್ಲಿ ನಾಲ್ಕು ಸ್ಥಾನಗಳಿದ್ದು ರಮೇಶ್.ಜಿ.(307), ರಾಮಣ್ಣ(211), ಶಾಂತಮ್ಮ(326), ಪ್ರಕಾಶ್(269) ದಬ್ಬಗುಂಟೆಯಲ್ಲಿ ಎರಡು ಬ್ಲಾಕ್ಗಳಿದ್ದು ಒಂದರಲ್ಲಿ ಹೆಂಜಯ್ಯ(414), ಕಾಂತರಾಜು(431), ಯಶೋಧಮ್ಮ ಡಿ.ಎಸ್ (429) ಎರಡರಲ್ಲಿ ರಾಜಮ್ಮ(323), ರವಿಕುಮಾರ್(328). ಹೊಯ್ಸಳಕಟ್ಟೆ ಗ್ರಾ.ಪಂ : ಒಟ್ಟು 20ಸ್ಥಾನಗಳಿದ್ದು ಇದರಲ್ಲಿ ಹೊಯ್ಸಳಕಟ್ಟೆ ಬ್ಲಾಕ್ ಒಂದರ ಮೂರು ಸ್ಥಾನಗಳಿಗೆ ಪಿ,ಹೆಚ್.ಉಮಾದೇವಿ(326), ಚಿದಾನಂದಮೂತರ್ಿ(260), ಮಲ್ಲೇಶ್(388), ಬ್ಲಾಕ್ ಎರಡರಲ್ಲಿ ಮಂಜುನಾಥ್(146), ಚಿತ್ತಮ್ಮ(168), ಲಕ್ಕೇನಹಳ್ಳಿಯಲ್ಲಿ ಈರಮ್ಮ(290), ಭಾಗ್ಯಮ್ಮ(249), ಬೆಳ್ಳಾರದ ಬ್ಲಾಕ್ ಒಂದರಲ್ಲಿ ಪುಟ್ಟಮ್ಮ(371), ಬಿ.ಆರ್.ವೆಂಕಟೇಶ್(399), ಮೀನಾಕ್ಷಮ್ಮ(314), ಬೆಳ್ಳಾರದ ಬ್ಲಾಕ್ ಎರಡರಲ್ಲಿ ಜಯರಾಮಯ್ಯ(247), ಹರೀಶ್.ಹೆಚ್.ವಿ(206), ಕರಿಯಮ್ಮ (263), ಅಂಬಾರಪುರದಲ್ಲಿ ಆರ್.ಜ್ಯೋತಿ (86), ಕಲ್ಲೇನಹಳ್ಳಿಯಲ್ಲಿ ಮಂಜುನಾಥ್ (ಅವಿರೋಧ ಆಯ್ಕೆ), ಎನ್.ದೇವರಾಜಮ್ಮ(326), ದೇವರಾಜು(308), ನೂಲೇನೂರಿನಲ್ಲಿ ಎನ್.ಕೆ.ಶಿವಣ್ಣ (534), ಈರಣ್ಣ (ಅವಿರೋಧಆಯ್ಕೆ), ಎನ್.ಟಿ.ಸುಧಾಕರ (610), ಗಾಣದಾಳು ಗ್ರಾ.ಪಂ: ಒಟ್ಟು 18 ಸ್ಥಾನಗಳಿದ್ದು ಇದರಲ್ಲಿ ಗಾಣದಾಳುವಿನ ಜಯರಾಮಯ್ಯ(253), ನೇತ್ರಾವತಿ(354), ಅಮೀದ್ಖಾನ್(397), ಸೋಮನಹಳ್ಳಿಯಲ್ಲಿ ಗುಂಡಯ್ಯ(280), ಕಲ್ಪನಾಬಾಯಿ(265), ಲಕ್ಷ್ಮೀದೇವಿ(246), ಗುರುವಾಪುರದಲ್ಲಿ ಶ್ರೀನಿವಾಸ ಜಿ.ಎಸ್(201), ನೇತ್ರಾವತಿ ಎಂ(199), ದುರ್ಗಮ್ಮ(216), ಮೇಲನಹಳ್ಳಿಯಲ್ಲಿ ದುರ್ಗಮ್ಮ(216), ಶಿವಣ್ಣ ಎಂ.ಆರ್(430), ಗೀತಾ ಎಂ.ಟಿ(353), ಯಗಚಿಹಳ್ಳಿಯಲ್ಲಿ ಶೇಕ್ಮೆಹಬೂಬ್(297), ತಾಜಾ ಉನ್ನಿಸಾ(403), ಶಿವಮೂತರ್ಿ ಕೆ.ವೈ(422), ಕಂಪನಹಳ್ಳಿಯಲ್ಲಿ ಶಿವಕುಮಾರಯ್ಯ ಸಿ.(182), ಜಯಾಬಾಯಿ(170), ಕುರಿಹಟ್ಟಿಯಲ್ಲಿ ಶಿವಣ್ಣ(256), ಚಂದ್ರಯ್ಯ ಕೆ.ವಿ(164). ಕೆಂಕೆರೆ ಗ್ರಾ.ಪಂ :ಒಟ್ಟು 18 ಸ್ಥಾನಗಳಿದ್ದು ಅದರಲಿ ಕೆಂಕೆರೆ ಬ್ಲಾಕ್ ಒಂದರಲ್ಲಿ ಪೂಣರ್ಿಮಾ(284), ನವೀನ್ ಕೆ.ಎಂ(515), ಬಸವರಾಜು. ಆರ್(491), ರೇಣುಕಾ.ಎಂ.ಟಿ(352), ಕೆಂಕೆರೆ ಬ್ಲಾಕ್ 2ರಲ್ಲಿ ಕುಮಾರಯ್ಯ.ಕೆ(240), ಚಂದ್ರಕಲಾ(329), ಗೌಡ.ಯು.ಸಿ(553), ರಾಧಮಣಿ.ಎಸ್.ಎಂ(361), ಕೆಂಕೆರೆ ಬ್ಲಾಕ್ 3ರಲ್ಲಿ ಬಸವಯ್ಯ(293), ದನಂಜಯಮೂತರ್ಿ(547), ರಾಮಲಿಂಗಪ್ಪ(435), ಶಾರದಮ್ಮ(418), ಗೌಡಯ್ಯ.ಎನ್(215), ಚೇತನ್ಕುಮಾರ್(270), ಗೌಡಗೆರೆಯಲ್ಲಿ ನೇತ್ರಾವತಿ(245), ದೊಡ್ಡಯ್ಯ,ಕೆ.ಸಿ.(335), ಪ್ರೇಮಕುಮಾರಿ(429), ಮಂಜುನಾಥ.ಕೆ.ಎಂ(554). ಹುಳಿಯಾರು ಗ್ರಾ.ಪಂ: ಒಟ್ಟು 33 ಸ್ಥಾನಗಳಿದ್ದು ಹುಳಿಯಾರು ಬ್ಲಾಕ್ 1ರಲ್ಲಿ ಇ.ದಾಕ್ಷಾಯಣಮ್ಮ(135), ಸಿದ್ದಗಂಗಮ್ಮ.ಡಿ(111), ಬ್ಲಾಕ್ 2ರಲ್ಲಿ ಸೈಯದ್ ಅನ್ಸ್ರ್ ಆಲಿ (234), ಅಬೀಬ್ ಉನ್ನಿಸಾ(119), ಬ್ಲಾಕ್ 3ರಲ್ಲಿ ಹೆಚ್.ಬಿ.ಬೈರೇಶ್(201), ಹೆಚ್.ವಿ.ಶ್ರೀನಿವಾಸ್(185), ಬ್ಲಾಕ್ 4ರಲ್ಲಿ ಪಹರ್ಾನ(95), ಹೆಚ್.ಆರ್.ರಂಗನಾಥ್(151), ಬ್ಲಾಕ್ 5ರಲ್ಲಿ ಕಾಳಮ್ಮ(252), ಅಶೋಕ್.ಎಂ(394), ಎಂ.ಸೈಯಿದ್ ಜಹೀರ್(412), ಹೆಚ್.ಎಂ.ಶಿವಲಿಂಗಮ್ಮ(241), ಬ್ಲಾಕ್ 6ರಲ್ಲಿ ಹೆಚ್.ಎನ್.ರಾಘವೇಂದ್ರ(125), ವೆಂಕಟಮ್ಮ(122), ಬ್ಲಾಕ್ 7ರಲ್ಲಿ ಹೆಚ್.ಶಿವಕುಮಾರ್(236), ಹೇಮಂತಕುಮಾರ್(190), ಬ್ಲಾಕ್ 8ರಲ್ಲಿ ಪುಟ್ಟಮ್ಮ(241), ಎಸ್.ಪುಟ್ಟರಾಜು(348), ಕೆ.ಗಂಗಾಧರರಾವ್(190), ಬ್ಲಾಕ್ 9ರಲ್ಲಿ ಹಸೀನ್ಬಾನು(ನಾವಬ್ಬೇಗ್)(196), ಷಫಿಉಲ್ಲಾ(316), ಹಸೀನಾಬಾನು(277), ಬ್ಲಾಕ್10ರಲ್ಲಿ ಎಸ್.ರೇವಣ್ಣ(356), ಅಹಮದ್ಖಾನ್(257), ಸುವರ್ಣಮ್ಮ(253), ಬ್ಲಾಕ್11ರಲ್ಲಿ ಚಂದ್ರಕಲಾ(187), ಬಾಲರಾಜು(212), ಬ್ಲಾಕ್12ರಲ್ಲಿ ಶಿವಣ್ಣ(341), ಸಿ.ಆರ್.ಮಂಜುಳ(303), ಬ್ಲಾಕ್ 13ರಲ್ಲಿ ಸೈಯದ್ಜಬೀಉಲ್ಲಾ(353), ಸಬ್ರೆಆಲಂ(362), ವೈ.ಎ.ಅಹಮದ್(302), ಅಬೀದ್ಉನ್ನಿಸಾ(222). ಯಳನಡು ಗ್ರಾ.ಪಂ : ಒಟ್ಟು 17 ಸ್ಥಾನಗಳಿದ್ದು ಯಳನಡು ಬ್ಲಾಕ್1ರಲ್ಲಿ ಅನ್ನಪೂರ್ಣ(141), ಜಯಮ್ಮ.ವೈ.ಎಚ್(151), ಗುರುಪ್ರಸಾದ್.ವೈ.ಕೆ.(227), ಬ್ಲಾಕ್2ರಲ್ಲಿ ರಾಜಣ್ಣ.ವೈ.ಸಿ(355), ಸಿದ್ದರಾಮಯ್ಯ.ವೈ.ಎಸ್(406), ಸುರೇಶ್ ವೈ.ಬಿ(341), ಲಕ್ಷ್ಮೀದೇವಿ(328), ಸಿಂಗಾಪುರದಲ್ಲಿ ಶಿವಕುಮಾರ(329), ಬಸವರಾಜು(293), ತಮ್ಮಡಿಹಳ್ಳಿ ಬ್ಲಾಕ್1ರಲ್ಲಿ ಚನ್ನಭಸವಯ್ಯ.ಎಸ್.(273), ಯಶೋಧಮ್ಮ(272), ಉಮೇಶ್ ಟಿ.ಎಸ್.(364), ರೇಣುಕಾಬಾಯಿ(252), ತಮ್ಮಡಿಹಳ್ಳಿ ಬ್ಲಾಕ್2ರಲ್ಲಿ ಗಂಗಮ್ಮ(309), ರಮೇಶ್ಕುಮಾರ್.ಕೆ(510), ಕಾಂತಮ್ಮ.ಕೆ.(356), ಕೆರೆಸುಗೊಂಡನಹಳ್ಳಿಯಲ್ಲಿ ರಾಮಚಂದ್ರಯ್ಯ ಡಿ.(127). ಕೋರಗೆರೆ ಗ್ರಾ.ಪಂ : ಒಟ್ಟು 15 ಸ್ಥಾನಗಳಿದ್ದು ಕೋರಗೆರೆ ಬ್ಲಾಕ್1ರಲ್ಲಿ ಬೋರಯ್ಯ(192), ರಾಮಚಂದ್ರಯ್ಯ ಕೆ.ಬಿ(289), ಬ್ಲಾಕ್2ರಲ್ಲಿಕಾಂತಯ್ಯ.ಆರ್.(273), ಸುಮಿತ್ರ ಎಸ್(240), ಭಟ್ಟರಹಳ್ಳಿಯಲ್ಲಿ ಸಿದ್ದರಾಮಕ್ಕ(ಅವಿರೋಧ ಆಯ್ಕೆ0, ಯತೀಶ್,ಬಿ.ಎಸ್(395), ಭಾಗ್ಯಮ್ಮ(402), ಮೋಟಿಹಳ್ಳಿ ಬ್ಲಾಕ್1ರಲ್ಲಿ ಚಂದ್ರಬಾಯಿ(161), ಬಸವರಾಜು.ಎಂ.ವಿ.(269), ಚಂದ್ರಮ್ಮ(210), ಬ್ಲಾಕ್2ರಲ್ಲಿ ರಂಗಾಬೋವಿ(92), ಬರಗೀಹಳ್ಳಿಯಲ್ಲಿ ಶಿವಣ್ಣ(407), ರಂಗಮ್ಮ(382), ಫರ್ಕುಂದ(465), ಉಬೇದ್ಉಲ್ಲಾ(457). ದೊಡ್ಡಎಣ್ಣೆಗೆರೆ ಗ್ರಾ.ಪಂ : ಒಟ್ಟು 21 ಸ್ಥಾನಗಳಿದ್ದು ದೊಡ್ಡಎಣ್ಣೆಗೆರೆ ಬ್ಲಾಕ್1ರಲ್ಲಿ ನಾಗಪ್ಪ(451), ಕಲ್ಯಾಣಮ್ಮ(530), ಉಮಾದೇವಿ(328), ಬ್ಲಾಕ್ 2ರಲ್ಲಿ ಕರಿಯಮ್ಮ(137), ಬಸವರಾಜು(282), ಬ್ಲಾಕ್3ರಲ್ಲಿ ಚನ್ನಬಸಮ್ಮ(223), ಬಿ.ಎಂ.ಪುಷ್ಪಾವತಿ(292), ಚಿಕ್ಕೆಣ್ಣೆಗೆರೆ ಬ್ಲಾಕ್1ರಲ್ಲಿ ಗಂಗಮ್ಮ(246), ಕರಿಯಪ್ಪ(289), ಮಲ್ಲಯ್ಯ(324), ಬ್ಲಾಕ್2ರಲ್ಲಿ ಸಿದ್ದಗಂಗಮ್ಮ(161), ಚಂದ್ರಪ್ಪ(185), ನಡುವನಹಳ್ಳಿಯಲ್ಲಿ ಲಕ್ಷ್ಮೀದೇವಿ(209), ಗೌರಮ್ಮ(213), ಎನ್.ಜಿ.ಹಾಲಪ್ಪ(240) ಬೊಮ್ಮೇನಹಳ್ಳಿಯಲ್ಲಿ ಬಿ.ಜೆ.ಸುಗಂಧರಾಜು(199), ಶಿವಮ್ಮ(116) ದೊಡ್ಡಹುಲ್ಲೇನಹಳ್ಳಿ ಮಂಜನಾಯ್ಕ(344), ದೊಡ್ಡಯ್ಯ(451), ನಾಗರಾಜು(388), ಬನ್ನೀಕೆರೆಯ ಇಂದ್ರಮ್ಮ(151). ಹಂದನಕೆರೆ ಗ್ರಾ.ಪಂ ;ಒಟ್ಟು 19 ಸ್ಥಾನಗಳಿದ್ದು ಹಂದನಕೆರೆಯ ಬ್ಲಾಕ್1ರಲ್ಲಿ ಶಮೀಮುನ್ನಿಸಾ (244), ದೊರೆಸ್ವಾಂಮಿ.ಎಂ(424), ನಾಗವೇಣಿ(244), ಬ್ಲಾಕ್2ರಲ್ಲಿ ಗಿರೀಶ್.ಹೆಚ್.ಕೆ(197), ರಂಗನಾಥ.ಕೆ(396), ಮಹಾಲಕ್ಷ್ಮೀ(304), ಕೆಂಚಮ್ಮ(365), ಬ್ಲಾಕ್ 3ರಲ್ಲಿ ಪುಷ್ಪಾವತಿ(196), ಚಂದ್ರಪ್ಪ(260), ಸಣ್ಣರಂಗಪ್ಪ(274), ಜಯಲಕ್ಷಮ್ಮ(289), ರಾಮಘಟ್ಟದಲ್ಲಿ ಬಸವರಾಜು.ಪಿ(359, ಓಂಕಾರಪ್ಪ(240), ನೀಲಕಂಠಪ್ಪ.ಆರ್.ಜಿ(361), ಪುರದಕಟ್ಟೆಯಲ್ಲಿ( ರವಿಕುಮಾರ.ಪಿ.ಎಸ್(167), ಹುಚ್ಚನಹಳ್ಳಿಯಲ್ಲಿ(ಹೇಮಲತಾ.ಪಿ.ಜಿ(122), ಕೆಂಗಲಾಪುರದಲ್ಲಿ ಗೌರೀಶ್(400), ಮಂಜುಳ(ಅವಿರೋಧ ಆಯ್ಕೆ), ರಘುನಾಥ.ಇ(378). ಚೌಳಕಟ್ಟೆ ಗ್ರಾ.ಪಂ: ಒಟ್ಟು 16 ಸ್ಥಾನಗಳಿದ್ದು ಅದರಲ್ಲಿ ಚೌಳಕಟ್ಟೆಯಲ್ಲಿ ಬಸವರಾಜು(359), ಆರ್.ರಂಗಯ್ಯ(445), ಮಂಜುಳ(378), ಸಿ.ಎಂ.ಶಶಿಕಲಾ(465), ಸೋರಲಮಾವುನಲ್ಲಿ ಎಸ್.ನೇತ್ರಾವತಿ, ಎಸ್.ಟಿ.ಬಸವರಾಜು, ಸಾವಿತ್ರಮ್ಮ, ಸಿದ್ದೇಗೌಡ(ಅವಿರೋಧವಾಗಿ ಆಯ್ಕೆಯಾಗಿದ್ದಾರೆ), ಹೊನ್ನಶೆಟ್ಟಿಹಳ್ಳಿಯಲ್ಲಿ ಪಾಲಾಕ್ಷಮ್ಮ(233), ಎಸ್.ಲೋಕೇಶ್(277), ಲಕ್ಷ್ಮೀಪುರದಲ್ಲಿ ಶಂಕರಯ್ಯ(380), ಎಲ್.ಬಿ.ಪರಮೇಶ್(500), ಸೋಮಶೇಖರಯ್ಯ(489), ಮಂಜುಳ(456), ಹರೇನಹಳ್ಳಿಯಲ್ಲಿ ಹೆಚ್.ಜಿ.ಧರ್ಮಕುಮಾರ್(233), ಹೆಚ್.ಗುಲ್ಷರ್ಖಾನಂ(210). ತಿಮ್ಲಾಪುರ ಗ್ರಾ.ಪಂ : ಒಟ್ಟು 18 ಸ್ಥಾನಗಳಿದ್ದು ಅದರಲ್ಲಿ ತಿಮ್ಲಾಪುರದ ಬ್ಲಾಕ್ 1ರಲ್ಲಿ ರತ್ನಮ್ಮ(227), ತಿಮ್ಮಯ್ಯ ಟಿ.ಎಚ್(215), ಬ್ಲಾಕ್2ರಲ್ಲಿ (ಬಸವರಾಜು ಹೆಚ್.ಹೆಚ್(362), ಸುರೇಶ್.ಡಿ(335), ಭಾಗ್ಯಮ್ಮ(248), ಬ್ಲಾಕ್ 3ರಲ್ಲಿ ಸುಗಂಧರಾಜು.ಹೆಚ್.ಎಂ.267), ರಾಜಮ್ಮ. ಎಸ್.ಕೆ(240), ತೊರೆಸೂರಗೊಂಡನಹಳ್ಳಿಯ ಗೌರಮ್ಮ(201), ಪ್ರಕಾಶ್.ಟಿ.ಕೆ(217), ಶಿಗೇಬಾಗಿ ಬ್ಲಾಕ್1ರಲ್ಲಿ(213), ರೇವಣ್ಣ(334), ಗಂಗಮ್ಮ(329), ಬ್ಲಾಕ್2ರಲ್ಲಿ ರಾಜಮ್ಮ(159), ಸುಂದರೇಶ್.ಟಿ.ಕೆ(241), ನಂದಿಹಳ್ಳಿಯ ಕುಮಾರಸ್ವಾಮಿ.ಎನ್.ಪಿ(426), ನಂದೀಶಯ್ಯ ಎನ್.ಬಿ(183). ಬೋರಲಿಂಗಯ್ಯ(469), ರೇಣುಕಮ್ಮ(296). ದೊಡ್ಡಬಿದರೆ ಗ್ರಾ.ಪಂ :ಒಟ್ಟು ಸ್ಥಾನಗಳು 18 ಅದರಲ್ಲಿ ದೊಡ್ಡಬಿದರೆಯ ರಾಮನಾಯ್ಕ(340), ಬಿ.ಎಸ್.ಶಶಿಕಲಾ(257), ಡಿ.ಪಿ.ಅರುಣ್ಕುಮಾರ್(381), ಡಿ.ಜಿ.ಕುಮಾರ್(372), ಚಿಕ್ಕಬಿದರೆಯ ಬದ್ಯಾನಾಯ್ಕ(324), ಶಾಂತಕುಮಾರ ಸಿ.ಜೆ(358), ವಿಶ್ವೇಶ್ವರಯ್ಯ(420), ಕಲ್ಲಹಳ್ಳಿಯ ಆರ್.ಕರಿಯಪ್ಪ(97), ಬೈರಾಪುರದ ಕಾಂತಯ್ಯ ಎಸ್.(194), ಕ್ಯಾತಲಿಂಗಮ್ಮ(216), ಅವಳಗೆರೆಯ ಇಂದಿರಮ್ಮ(199), ಮಲ್ಲಿಕಾಜರ್ುನಯ್ಯ(174), ಬಳ್ಳಕಟ್ಟೆಯ ಕರಿಯಾನಾಯ್ಕ(298), ಸೌಬಾಗ್ಯ(359), ಅಪ್ಸನಾಖಾನಂ(315), ಪೋಚುಕಟ್ಟೆಯ ಜೆ.ಜ್ಯೋತಿಲಕ್ಷ್ಮೀ(289), ಪಿ.ಎನ್.ಗಂಗಾಧರಯ್ಯ((342), ರಾಜಮ್ಮ(340). ಬರಕನಾಳು ಗ್ರಾ.ಪಂ : ಬರಕನಾಳುವಿನ ರಾಧಮ್ಮ(174), ವಿಶ್ವನಾಥ ಹೆಚ್.ಎಂ(266), ಶೊಡ್;ಲಟ್ಟೆಉ ರಾಮಯ್ಯ.ಎಸ್(217), ಯಶೋಧಮ್ಮ(224), ಹಂದಿನಗಡುವಿನ ಗಂಗಣ್ಣ((297), ಭೂತಯ್ಯ(379), ಕಲಾವತಿ.ಹೆಚ್.ಎನ್.(233), ಗೀತಾ(472), ಸಂಗೇನಹಳ್ಳಿಯ ಮಂಜುಳಾದೇವಿ ಎಸ್.ಆರ್(203), ಬೈರಲಿಂಗಯ್ಯ ಎಸ್.ಬಿ(168), ದೊಡ್ಡಬೆಳವಾಡಿಯ ರಾಜಮ್ಮ(235), ಶ್ರೀನಿವಾಸ(238), ನಾಗರಾಜು(264), ರಮೇಶ್.ಡಿ.ಎಚ್(440), ಎರೇಹಳ್ಳಿಯ ನಿಂಗಮ್ಮ(337), ರಾಜಮ್ಮ.ಬಿ.ಎಂ(271). ತಿಮ್ಮನಹಳ್ಳಿ ಗ್ರಾ.ಪಂ.: ಒಟ್ಟು 19ಸ್ಥಾನಗಳಿದ್ದು ಅದರಲ್ಲಿ ತಿಮ್ಮನಹಳ್ಳಿ ಬ್ಲಾಕ್1ರ ರೇಣುಕಾನಂದ ಟಿ.ಎಸ್.(229), ಗಂಗಣ್ಣ.ಟಿ.ಎಸ್.(223), ಪುಟ್ಟಮ್ಮ(172), ಬ್ಲಾಕ್2ರಲ್ಲಿ ರಾಘವೇಂದ್ರ ಟಿ.ಜೆ(245), ರವೀಂದ್ರ ಟಿ.ಆರ್(316), ಬ್ಲಾಕ್ 3ರಲ್ಲಿ(ಟಿ.ಕೆ.ಸಿದ್ದರಾಮಯ್ಯ(160), ಕೃಷ್ಣಯ್ಯ.ಕೆ(209), ಶಾರದಮ್ಮ ಎ.ಎನ್(199), ಬ್ಲಾಕ್4ರಲ್ಲಿ ಗೋಪಾಲಕೃಷ್ಣ ಟಿ.ಎಸ್(255), ಉಮಾದೇವಿ.ಕೆ(216), ಬ್ಲಾಕ್5ರಲ್ಲಿ ಲಕ್ಷ್ಮೀದೇವಮ್ಮ(180), ಅಮೀರ್ಜಾನ್(152), ಬಡಕೆಗುಡ್ಲು ಬ್ಲಾಕ್1ರಲ್ಲಿ ಭಾರತಿ(372), ಹುಸೇನ್ಸಾಬ್(294), ಬ್ಲಾಕ್2ರಲ್ಲಿ ಪುಟ್ಟಮ್ಮ(181), ಅನುಸೂಯಮ್ಮ(202), ಗೋವಿಂದರಾಜು(232), ಮೈಲುಕಬ್ಬೆಯ ಕರಿಯಪ್ಪ(133), ಹನುಮಂತಪ್ಪ(195). ರಾಮನಹಳ್ಳಿ ಗ್ರಾ.ಪಂ.; ಒಟ್ಟು14 ಸ್ಥಾನಗಳಿದ್ದು ಅದರಲ್ಲಿ ರಾಮನಹಳ್ಳಿಯ ರೇಣುಕಮ್ಮ(379), ಬಸವರಾಜು(229), ರತ್ಮಮ್ಮ(263), ಸಿದ್ದನಕಟ್ಟೆಯ ನಾಗಮ್ಮ ಎಸ್.ಹೆಚ್.(243), ಉಸ್ಮಾನ್ಸಾಬ್(190), ಆಶ್ರೀಹಾಳ್ನ ನಾರಾಯಣ(240), ಕೆಂಚಮ್ಮ(199996), ಸಿರಿಯಮ್ಮ(276), ಜಾಣೇಹಾರ್ ಕುಮಾರಯ್ಯ ಎನ್.356), ಗುಡ್ಡಯ್ಯ(294), ಮೋಹನ್ಕುಮಾರ್(601), ಯಶೋಧ(534), ಮದನಮಡುವಿನ ಶಿವರತ್ನಮ್ಮ(193), ನಾಗರಾಜು (187). ಕಂದಿಕೆರೆ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಅದರಲ್ಲಿ ಕಂದಿಕೆರೆ ಬ್ಲಾಕ್1ರ ಲಕ್ಷ್ಮೀದೇವಮ್ಮ(252), ಪ್ರಸಾದ್.ಕೆ.ಜಿ(322), ಪ್ರಸನ್ನಕುಮಾರ್(361), ಬ್ಲಾಕ್2ರ ನಾಗರಾಜ ಆರ್.(253), ಅಬ್ದುಲ್ರಜಾಕ್(281), ಜಯಂತಿ.ಕೆ.ಸಿ(170), ಬ್ಲಾಕ್ 3ರ ಸುಜಾತ ಬಿ.ಎಸ್.331), ಲೋಕೇಶ್(345), ಮುದ್ದುರಾಜ ಡಿ.ಪಿ(373), ಲಕ್ಷ್ಮೀದೇವಮ್ಮ(432), ಸಾದರಹಳ್ಳಿಯ ಜಯಣ್ಣ(217), ಕಾಂತಮ್ಮ.ಹೆಚ್.ಕೆ(385), ರಾಧ.ಹೆಚ್.ಎಲ್(513), ರಂಗನಾಥ(696), ಗೌರಸಾಗರದ ವಸಂತಕುಮಾರ (253), ಈರಯ್ಯ(251), ಲಕ್ಷ್ಮೀದೇವಮ್ಮ(187). ಬೆಳಗುಲಿ ಗ್ರಾ.ಪಂ.: ಒಟ್ಟು 14ಸ್ಥಾನಗಳಿದ್ದು ಅದರಲ್ಲಿ ಬೆಳಗುಲಿಯ ಬ್ಲಾಕ್1ರ ಕೆಂಪಮ್ಮ (443), ರೇಣುಕಮ್ಮ(510), ಬಿ.ರವಿಶಂಕರ(567), ಕರಿಬಸಮ್ಮ(446), ಬ್ಲಾಕ್2ರ ಪಿ.ಆರ್.ಕುಮಾರಸ್ವಾಮಿ(186), ಬ್ಲಾಕ್3ರ ತಿಮ್ಮರಾಯಪ್ಪ(484), ಉಷಾ(ಅವಿರೋಧ ಆಯ್ಕೆ), ಉದಯಕುಮಾರ್(498), ರಮೇಶ್.ಕೆ(585), ನಿರುವಗಲ್ನ ಶಾರದಮ್ಮ(240), ಅನಂತಯ್ಯ(402), ಸುನಂದಮ್ಮ(302), ನಾಗರಾಜು(126), ತಾರೀಕಟ್ಟೆಯ ನಾಗರಾಜನಾಯ್ಕ(116). ಬರಗೂರು ಗ್ರಾ.ಪಂ.: ಒಟ್ಟು 14ಸ್ಥಾನಗಳಿದ್ದು ಅದರಲ್ಲಿ ಬರಗೂರಿನ ಭಾರತಿಬಾಯಿ (416), ಎಂ.ಲಕ್ಷ್ಮಮ್ಮ(ಅವಿರೋಧ ಆಯ್ಕೆ), ರಾಧಮ್ಮ(552), ದೇವರಾಜಪ್ಪ.ಆರ್(502), ರಂಗೇನಹಳ್ಳಿಯ ಲಕ್ಕಯ್ಯ(313), ನಟರಾಜಯ್ಯ(317), ಉಪ್ಪಾರಹಳ್ಳಿಯ ಯು.ಟಿ.ಬಸವರಾಜು(237), ಬಿ.ಎ.ಮುನಿಯಪ್ಪ(240), ಬಂಗಾರಗೆರೆಯ ಲಕ್ಷ್ಮೀಕಾಂತಯ್ಯ(192), ಸಿ.ಲಕ್ಷ್ಮೀದೇವಮ್ಮ(441), ಎನ್.ಶಶಿಕಿರಣ್(352), ಬರಗೂರು ಬಸವರಾಜು(372), ಕೆ.ಚಂದ್ರಯ್ಯ(217), ಹೊಸಕೆರೆಯ ಶಿವಮ್ಮ(205). ಮತಿಘಟ್ಟ ಗ್ರಾ.ಪಂ.: ಒಟ್ಟು 14 ಸ್ಥಾನಗಳಿದ್ದು ಅದರಲ್ಲಿ ಮತಿಘಟ್ಟದ ಬ್ಲಾಕ್1ರ ಎಂ.ಜಿ.ವೆಂಕಟೇಶ್((305), ನಾಗಮ್ಮ(336), ಮಹೇಶ್(486), ಸಿದ್ದರಾಮಯ್ಯ(378), ಬ್ಲಾಕ್2ರ ವೀರಣ್ಣ(144), ಬೆಳಗೀಹಳ್ಳಿಯ ರತ್ನಮ್ಮ(240), ದಾಸೀಹಳ್ಳಿಯ ಶಿವಣ್ಣ(195), ದೇವರಾಜಯ್ಯ(190)< ಮದಾಪುರದ ಮುನಿಯಪ್ಪ(283), ರಂಗನಾಥ(195), ಮಲ್ಲೇನಹಳ್ಳಿಯ ಶೈಲಜ ಎಂ (163), ಆರ್.ಟಿ.ಭಾರತಿ(ಅವಿರೋಧ ಆಯ್ಕೆ), ಯಳ್ಳೇನಹಳ್ಳಿಯ ದೇವರಾಜಾಚಾರ್(242), ದ್ರಾಕ್ಷಾಯಣಮ್ಮ(241). ಮಲ್ಲಿಗೆರೆ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಮಲ್ಲಿಗೆರೆಯ ಗೌರಮ್ಮ.ಕೆ.ಜಿ.(341), ಯಶೋಧ(395), ನಿಂಗಮ್ಮ(342), ನಾಗಭೂಷಣ್.ಎಂ.ವಿ(455), ದವನದಹೊಸಹಳ್ಳಿಯ ಜಯಲಕ್ಷ್ಮಮ್ಮ(253), ಕರಿಯಪ್ಪ(261), ಕಾಮಲಾಪುರದ ಬ್ಲಾಕ್1ರ ನಾಗರಾಜು(216), ಉಮೇಶ್(316), ವಸಂತ್ಕುಮಾರ(417), ಮಂಜುಳ ಕೆ.ಎಂ(410), ಬ್ಲಾಕ್2ರ ಗಿರಿಜಮ್ಮ(472), ತಾತಯ್ಯ ಎಸ್.ಎನ್(365), ಉಗ್ರನರಸಿಂಹಯ್ಯ(367), ಕಾನ್ಕೆರೆಯ ಪರಮೇಶ್ವರಯ್ಯ ಜಿ.(297), ವಿಮಲಮ್ಮ(198), ಬಂದ್ರೇಹಳ್ಳಿಯ ಚಂದ್ರನಾಯ್ಕ(196), ರಾಜಶೇಖರ(229).. ಕುಪ್ಪೂರು ಗ್ರಾ.ಪಂ.: ಒಟ್ಟು 18ಸ್ಥಾನಗಳಲ್ಲಿ ಕುಪ್ಪೂರಿನ ಕೆ.ಸಿ.ಮಾದಯ್ಯ(285), ರೆಹನಾಬಾನು(323), ಕೆ.ಎಸ್.ದಕ್ಷಿಣಮೂತರ್ಿ(429), ಬೆನಕನಕಟ್ಟೆಯ ಬಿ.ಹೆಚ್.ಆನಂದ್ಕುಮಾರ್(257), ಕೃಷ್ಣಮೂತರ್ಿ(347), ಕೆ.ಪೂಣರ್ಿಮಾ(370), ತಗಚೇಘಟ್ಟದ ರಾಮಯ್ಯ(194), ಮಂಗಳಮ್ಮ(229), ಸೋಮಶೇಖರಯ್ಯ(353), ಅಣೇಕಟ್ಟೆಯ ಎನ್.ಎಸ್.ವೀಣಾ(211), ಮಹಾಲಿಂಗಯ್ಯ(233), ಅರಳೀಕೆರೆಯ ಸುನಂದ(254), ಹೆಚ್.ಕಲ್ಪನ(283), ಎ.ಎಂ.ಉಮೇಶ್(495), ನವಿಲೆಯ ಎನ್.ಹೆಚ್.ವೆಂಕಟೇಶಯ್ಯ(187), ಶಾಂತಮ್ಮ(221)ವ, ಮಂಚಸಂದ್ರದ ಶಿವಲಿಂಗಯ್ಯ(ಅವಿರೋಧ ಆಯ್ಕೆ), ಜಯಪ್ಪ(163).. ಶೆಟ್ಟಿಕೆರೆ ಗ್ರಾ.ಪ.: ಒಟ್ಟು 16ಸ್ಥಾನಗಳಿದ್ದು ಶೆಟ್ಟಿಕೆರೆಯ ಬ್ಲಾಕ್1ರಲ್ಲಿ ರಂಗಮ್ಮ(137), ಭೈರಪ್ಪ(281), ಲತಾ(197), ಬ್ಲಾಕ್2ರ ದೊಡ್ಡವೀಣಾ(256), ಶಶಿಧರ್.ಎಸ್.ಇ(374), ಶಶಿಕಲಾ(261), ಬ್ಲಾಕ್3ರ ಸಾವಿತ್ರಮ್ಮ(261), ನಾಗರಾಜು(21), ಸೋಮಲಾಪುರದ ದ್ರಾಕ್ಷಾಹಿಣಿ(399), ನಾಗರಾಜು.ಜಿ.ಎಂ(417), ಲತಾಮಣಿ(288), ಮಾದಿಹಳ್ಳಿಯ ಮಲ್ಲಿಗಮ್ಮ(86), ಶಿವಶಂಕರಪ್ಪ(179), ಗೋಪಾಲನಹಳ್ಳಿಯ ಬಸವರಾಜು ಜಿ.ಎಂ(228), ಮಾಕುವಳ್ಳಿಯ ಎಂ.ಬಿ.ನಾಗರಾಜು(198), ಲಿಂಗರಾಜು(182).. ದುಗುಡಿಹಳ್ಳಿ ಗ್ರಾ.ಪಂ.: ಒಟ್ಟು 12ಸ್ಥಾನಗಳಿದ್ದು ಅದರಲ್ಲಿ ದುಗುಡಿಹಳ್ಳಿಯ ಬಿ.ಎಸ್.ಉಮೇಶ್(322), ಬಿ.ಸಿ.ವಸಂತಕುಮಾರಿ(287), ಬಸವೇಗೌಡ(298), ಚುಂಗನಹಳ್ಳಿಯ ಲಕ್ಷ್ಮಿದೇವಮ್ಮ(170), ದಯಾನಂದ(188), ವಡೇರಹಳ್ಳಿಯ ಶಕುಂತಲ.ಎನ್(243), ಚಂದ್ರಯ್ಯ(185), ಬಿ.ಎನ್.ವೀಣಾ(219), ಹೆಸರಹಳ್ಳಯ ಹೆಚ್.ಎನ್.ನಾಗರಾಜು(400), ಹೆಚ್.ಆರ್.ಗವಿಯಪ್ಪ(514), ಚಿಕ್ಕಮ್ಮ ಹೆಚ್.ಎನ್(465), ಕಾರೇಹಳ್ಳಿಯ ಸುಶೀಲಮ್ಮ(103).. ಮುದ್ದೇನಹಳ್ಳಿ ಗ್ರಾ.ಪಂ.; ಒಟ್ಟು 20ಸ್ಥಾನಗಳಿದ್ದು ಮುದ್ದೇನಹಳ್ಳಿಯ ಚಂದ್ರಯ್ಯ(347), ಟಿ.ಬಸವರಾಜಯ್ಯ(346), ಶಾತಾಜ್ಉನ್ನಿಸಾ(355), ಗುರುಶಾಂತಯ್ಯ(471), ಕ್ಯಾತನಾಯಕನಹಳ್ಳಿಯ ಗಂಗಮ್ಮ(273), ವಸಂತಕುಮಾರ(386), ಲಕ್ಕೇನಹಳ್ಳಿಯ ಉಷಾ(176), ಸಾಲ್ಕಟ್ಟೆಯ ಸಿ.ಕಮಲಮ್ಮ(467), ಗೋಪಾಲಕೃಷ್ಣ(448), ಚಂದ್ರಕಲಾ.ಎಂ.ಎಸ್(394), ಕೆ.ಎಸ್.ವಿಜಯ(395), ಮರಳುಹಳ್ಳದ ಕಾವಲ್ನ ವಿನೋದಬಾಯಿ(110), ತಿಮ್ಮಯ್ಯ(160), ಆಲದಕಟ್ಟೆಯ ಎಸ್.ನಾಗರಾಜನಾಯ್ಕ(369), ರಂಗಮ್ಮ(319), ಮಾಳಿಗೇಹಳ್ಳಿಯ ಬಿ.ಎಸ್.ಯೋಗರಾಜು(127), ಎಂ.ಎಸ್.ಮಹಾಲಿಂಗಯ್ಯ(264), ಸಾವಶೆಟ್ಟಿಹಳ್ಳಿಯ ಓಂಕಾರಮೂತರ್ಿಯ(88), ಜೋಡಿಕಲ್ಲೇನಹಳ್ಳಿಯ ಟಿ.ಎನ್.ಶಕುಂತಲ(152), ಶ್ರೀಧರ ಕೆ.ಟಿ(198).. ಹೊನ್ನೆಬಾಗಿ ಗ್ರಾ.ಪಂ.: ಒಟ್ಟು 11ಸ್ಥಾನಗಳಿದ್ದು ಅದರಲ್ಲಿ ಹೊನ್ನೇಬಾಗಿಯ ಪದ್ಮ(361), ಗುರುಮೂತರ್ಿ(424), ಸ್ವರ್ಣಕುಮಾರಿ(476), ಬುಳ್ಳೇನಹಳ್ಳಿಯ ರಂಗಮ್ಮ(168), ಬಿ.ಎನ್.ಉದಯಕುಮಾರ್(146), ಕಾಡೇನಹಳ್ಳಿಯ ಶಂಕರಮ್ಮ(133), ಬಾವನಹಳ್ಳಿಯ ಟಿ.ಎನ್.ಕಲ್ಪನ(105). ಹೆಚ್.ಎನ್.ಸತ್ಯನಾರಾಯಣ(250), ಮೇಲನಹಳ್ಳಿಯ ಶರತ್ಕುಮಾರ್(381), ಎಂ.ಮಂಜುಳ(348), ಶಿವಮ್ಮ.ಬಿ(435).. ತೀರ್ಥಪುರ ಗ್ರಾ.ಪಂ..: ಒಟ್ಟು 18ಸ್ಥಾನಗಳಿದ್ದು ಅದರಲ್ಲಿ ತೀರ್ಥಪುರದ ಟಿ.ಕೆ.ಕೆಂಪರಾಜು(357), ಟಿ.ಜಿ.ಮಂಜುನಾಥ(346), ಪಿ.ಮಧುಶ್ರೀ(339), ದೊಡ್ಡರಾಂಪುರದ ಡಿ.ಎನ್.ರಮೇಶ(312), ರಂಗಸ್ವಾಮಯ್ಯ ಡಿ.ಎನ್(407), ಪದ್ಮಮ್ಮ(457), ಚಿಕ್ಕರಾಂಪುರದ ಕಾಮಾಕ್ಷಿ(286), ಹೆಚ್.ಸಿ.ರಾಮಯ್ಯ(318), ಕಾತ್ರಿಕೆಹಾಳ್ನ ಕೆಂಪಮ್ಮ(276), ಗೋವಿಂದರಾಜು.ಯು(495), ಕುಮಾರ್.ಕೆ.ವೈ(318), ಕೆ.ಆರ್.ಕಾಂತರಾಜು(310), ಶಶಿಕಲಾ(366), ಬರಶಿಡ್ಲಹಳ್ಳಿಯ ಕೆ.ಶಂಕರ(425), ಮಹಾಲಿಂಗಮ್ಮ(514), ಬಿ.ಕೆ.ಕೇಶವಮೂತರ್ಿ(307), ಸಿಂಗದಹಳ್ಳಿಯ ಬಿ.ಆರ್.ಪಾರ್ವತಮ್ಮ(191), ಗಿರೀಶ್(166).. ಗೋಡೆಕೆರೆ ಗ್ರಾ.ಪಂ.: ಒಟ್ಟು 16ಸ್ಥಾನಗಳಲ್ಲಿ ಗೋಡೆಕೆರೆಯ ಬ್ಲಾಕ್ 1ರ ಬಸವಲಿಂಗಪ್ಪಮೂತರ್ಿ(145), ಜಿ.ಎಸ್.ಕುಶಲ(182), ಬ್ಲಾಕ್2ರ ಜಿ.ಎನ್.ವಸಂತ್ಕುಮಾರ್(307), ಸುನಂದ(298), ಜಿ.ಪಿ.ಲೋಕೇಶ್(394), ಚಿತ್ತಯ್ಯ(356), ಸೋಮನಹಳ್ಳಿಯ ಶಂಕರಮ್ಮ(29), ಎಸ್.ಎ.ತಮ್ಮೇಗೌಡ(364), ಮಲ್ಲಿಕಾಜರ್ುನ(302), ಬಗ್ಗನಹಳ್ಳಿಯ ನರಸಿಂಹಮೂತರ್ಿ(290), ಜಿ.ಮಂಜುಳ(453), ಶಿವಲಿಂಗಮ್ಮ(488), ಕರಿಯಮ್ಮ(337), ತರಬೇನಹಳ್ಳಿಯ ಬಿ.ಎಸ್.ಗಂಗಾಧರ(222, ಜಿ.ಪಿ.ಪರಮಶಿವಯ್ಯ(315), ಜಯಮ್ಮ(255).. ಜಯಚಾಮರಾಜಪುರ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಜಯಚಾಮರಾಜಪುರದ ಶಶಿಕಲಾ ಬಿ.ಎನ್.(246), ನಾಗರಾಜು ಬಿ.(241), ನಿಜಗುಣಮೂತರ್ಿ.ಜೆ.ಟಿ(389), ಸಾಸಲಿನ ಕುಮಾರಯ್ಯ ಎಸ್.ಜಿ(481), ಲಲಿತಮ್ಮ(426), ರವಿಕುಮಾರ(419), ದಿನೇಶ ಎಸ್.ಎನ್(536), ಹಾಲುಗೊಣದ ದೇವರಾಜು ಬಿ.ಆರ್(218), ಮಮತ ಕೆ.ಎಸ್(228), ಮಲಗೊಂಡನಹಳ್ಳಿಯ ಶಿವಾನಂದಯ್ಯ(398), ಪ್ರಸನ್ನಕುಮಾರ್(551), ಪಾರ್ವತಮ್ಮ(551), ತಿಗಳನಹಳ್ಳಿಯ ಸುಜಾತ(246), ಯಶೋಧ(256), ಯಶೋಧಮ್ಮ(134), ಶಶಿಧರ ಎ.ಎಂ(204), ಮಲ್ಲಿಕಾಜರ್ುನಯ್ಯ ಎ.ಎಸ್(240).. ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.



ಹತ್ತು ವರ್ಷದ ಹಿಂದಿನ ಬಿ.ಪಿ.ಎಲ್.ಪಟ್ಟಿಯಿಂದ ಫಲಾನುಭವಿಗಳ ಆಯ್ಕೆ: ಸದಸ್ಯರ ಆಕ್ರೋಶ

ಚಿಕ್ಕನಾಯಕನಹಳ್ಳಿ,ಮೇ.24: ಪುರಸಭೆಯ ಎಸ್.ಜೆ.ಎಸ್.ಆರ್,ವೈ.ನಲ್ಲಿ ಹಿಂದಿನ ಹತ್ತು ವರ್ಷಗಳ ಬಿ.ಪಿ.ಎಲ್.ಪಟ್ಟಿಯನ್ನೇ ಅನುಸರಿಸಿ ಫಲಾನುಭವಿಗಳಿಗೆ ಸವಲತ್ತು ವಿತರಿಸುತ್ತಿರುವುದನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜರುಗಿತು.
ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಏಪ್ರಿಲ್ ಮಾಹೆಯ ಜಮಾ-ಖಚರ್ು ಮಂಡನೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸಂಗ ನಡೆಯಿತು.
ಕಳೆದ ಸಭೆಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಲ್ಲಿ ಅವ್ಯವಹಾರವಾಗಿದೆ, ಈ ಬಗ್ಗೆ ಸಮಗ್ರ ತನಿಖೆ ನೆಡೆಯಬೇಕು ಹಾಗೂ ಈ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರ ನೀಡಬೇಕೆಂದು ಒತ್ತಾಯಿಸಿ ಸಭಾ ತ್ಯಾಗ ಮಾಡಿದ್ದ ವಿರೋಧ ಪಕ್ಷದವರು, ಈ ಬಾರಿಯ ಸಭೆಯಲ್ಲೂ ಈ ವಿಷಯವನ್ನು ಕೈಗೆತ್ತಿಕೊಂಡು ಬಿಸಿ ಬಿಸಿ ಚಚರ್ೆ ನಡೆಸಿದರು. ಎಸ್.ಜೆ.ಎಸ್.ಆರ್.ವೈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಕಾರ್ಯಕ್ರಮಗಳ ಬಗ್ಗೆ ಪುರಸಭಾ ಸದಸ್ಯರಿಗೆ ಏನೊಂದೂ ಮಾಹಿತಿ ನೀಡುತ್ತಿಲ್ಲ ಹಾಗೂ ಎಲ್ಲಾ ಹಳೇ ಮಾಹಿತಿಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಎಸ್.ಜೆ.ಎಸ್.ಆರ್.ವೈ.ಯೋಜನೆಯ ಎಲ್ಲಾ ಸವಲತ್ತುಗಳು ಪ್ರತಿ ವಾಡರ್್ನಲ್ಲಿರುವ ಅರ್ಹರಿಗೆ ತಲುಪುವಂತೆ ಕಾರ್ಯಕ್ರಮ ರೂಪಿಸಬೇಕು ಹಾಗೂ ಅಯಾ ವಾಡರ್್ನ ಸದಸ್ಯರ ಗಮನಕ್ಕೆ ತಾವು ಮಾಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಈ ಯೋಜನೆಯ ಅಧಿಕಾರಿ ಜಯಲಕ್ಷಮ್ಮನವರಿಗೆ ಸೂಚಿಸಿದರು.
ಕೇದಿಗೆಹಳ್ಳಿಗೆ ವಿದ್ಯುತ್ ಕಂಬ ಅಳವಡಿಸಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ, ನಾನೇಷ್ಟೇ ಸಲ ಸಹನೆಯಿಂದ ಹೇಳಿದರೂ ಕೇಳುತ್ತಿಲ್ಲವೆಂದು ಸಿಟ್ಟಿಗೆದ್ದ ವಿರೋಧ ಪಕ್ಷದ ಸದಸ್ಯೆ ಧರಣಿ ಲಕ್ಕಪ್ಪ, ಈ ಬಗ್ಗೆ ಅಧ್ಯಕ್ಷರ ಗಮನವಹಿಸಿ ಕೇದಿಗೆ ಹಳ್ಳಿಗೆ ಅಗತ್ಯವಿರುವ ವಿದ್ಯುತ್ ಕಂಬಗಳನ್ನು ಒಂದು ವಾರದೊಳಗೆ ಅಳವಡಿಸುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ನೀಡಿದರು. ಈ ವಿಷಯಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಬಸ್ ರಾಜಣ್ಣ ಲೈಟ್ ಕಂಬ ಅಳವಡಿಕೆಯ ಬಗ್ಗೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳ ಬಗ್ಗೆ ಅಸಡ್ಡೆ ತೋರುವುದು ಹೆಚ್ಚಾಗಿದೆ, ನಾವೇನೇ ಹೇಳಿದರೂ ಅದಕ್ಕೆ ಬೆಲೆ ಸಿಗುತ್ತಿಲ್ಲ, ಪಟ್ಟಣದ ರಸ್ತೆಗಳೆಲ್ಲಾ ಚರಂಡಿಯಾಗಿದೆ, ಪಟ್ಟಣದಲ್ಲಿ ಏನೂ ಕೆಲಸವಾಗುತ್ತಿಲ್ಲವೆಂದು ವಿರೋಧ ಪಕ್ಷದವರನ್ನು ಮೀರಿಸುವ ರೀತಿಯಲ್ಲಿ ಆಕ್ರೋಶಗೊಂಡ ರಾಜಣ್ಣ, ನಾವೇನು ಪುರಸಭೆಗೆ ಉಪ್ಪಿಟ್ಟು ಕಾಫಿಗಾಗಿ ಬರುತ್ತೇವೆಯೇ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ಜಮಾ ಖಚರ್ಿನಲ್ಲಿ ಊಟಕ್ಕೆಂದು ಖಚರ್ುಮಾಡಿರುವ ಹಣದ ಬಗ್ಗೆ ಆಕ್ಷೇಪವೆತ್ತಿದ ಸಿ.ಡಿ.ಚಂದ್ರಶೇಖರ್, ಇಲ್ಲಿನ ಸಭೆಗಳಿಗೆ ಊಟಕ್ಕೆಂದು ಖಚರ್ುಮಾಡಲು ಸಕರ್ಾರ ನಿಗಧಿ ಪಡಿಸಿರುವ ಹಣವೆಷ್ಟು? ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಸಾಮಾನ್ಯ ಸಭೆ ಒಂದಕ್ಕೆ ಒಂದುವರೆ ಸಾವಿರ ರೂಗಳನ್ನು ಮೀಸಲಿರಿಸಿದ್ದು ವರ್ಷ ಒಂದಕ್ಕೆ ಹದಿನೆಂಟು ಸಾವಿರ ರೂಗಳನ್ನು ಖಚರ್ು ಮಾಡಬಹುದು, ಇದಲ್ಲದೆ ಸ್ಥಾಯಿ ಸಮಿತಿ ಸಭೆಗಳಿಗೆ ಪ್ರತ್ಯೇಕವಾಗಿ ಖಚರ್ು ಮಾಡಲು ಅವಕಾಶವಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಕಂಪ್ಯೂಟರ್ ಅಪರೇಟರ್ಗಳಿಗೆ ಸಂಬಳ ನೀಡದೆ ಶೋಷಣೆ ಮಾಡುತ್ತಿದ್ದರಾ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್, ಸಂಬಳ ಕೊಡದೆ ಹೇಗೆ ಅವರಿಂದ ಕೆಲಸ ಮಾಡಿಸುತ್ತೀರಾ, ಶೀಘ್ರವೇ ಅವರ ಸಂಬಳ ನೀಡಿ ಎಂದರು.
ಪುರಸಭೆಗೆ ಹೊಸದಾಗಿ ಬಂದಿರುವ ವಾಹನದಲ್ಲಿ ಬ್ಯಾಟರಿ ಕಳವಾಗಿದೆ, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರಾ ಎಂದು ಮಹೇಶ್ ಪ್ರಶ್ನಿಸಿದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸಿದ್ದಮೂತರ್ಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಪಟ್ಟಣದ ಗ್ರ್ರಂಥಾಲಯಕ್ಕೆ ಶೌಚಾಲಯ ಹಾಗೂ ಯು.ಪಿ.ಎಸ್. ಕಲ್ಪಿಸಬೇಕೆಂದು ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು, ರುದ್ರನ ಗುಡಿ ವೃತ್ತದಲ್ಲಿರುವ ಕಸಬಾ ಚಾವಡಿ ಕಟ್ಟಡದಲ್ಲಿ ಸಕರ್ಾರಿ ಚಿಕಿತ್ಸಾಲಯವನ್ನು ಪ್ರಾರಂಭಿಸುವಂತೆ ಕೋರಿ ಬಂದಿದ್ದ ಅಜರ್ಿಗೆ, ಈ ಬಗ್ಗೆ ಡಿ.ಎಚ್.ಓ. ಹಾಗೂ ವೈದ್ಯಾಧಿಕಾರಿಗಳನ್ನು ಸಂಪಕರ್ಿಸಿ ಕ್ರಮ ಕೈಗೊಳ್ಳವಂತೆ ಸೂಚಿಸಲಾಯಿತು.
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿನ ಆಶ್ರಯ ಮನೆಗಳ ಫಲಾನುಭವಿಗಳು ಪಟ್ಟಣದಲ್ಲಿ 313 ಜನರಿದ್ದಾರೆ, ಈ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಫಲಾನುಭವಿಗಳಿಗೆ ಸಾಲ ನೀಡಿದ್ದು, ಈ ಸಾಲವನ್ನು ಮರುಪಾವತಿ ಮಾಡದೆ ಇರುವ ಜನರಿಗಾಗಿ ಸಕರ್ಾರ ಮತ್ತೊಂದು ಅವಕಾಶ ನೀಡಿದ್ದು, ಇಲ್ಲಿಯವರೆಗಿನ ಬಡ್ಡಿಯನ್ನು ಮನ್ನಾ ಮಾಡಿರುವ ಸಕರ್ಾರ, ಉಳಿಕೆ ಅಸಲನ್ನು ಮಾತ್ರ ಕಟ್ಟಲು ಸೂಚನೆ ನೀಡಿದೆ. ಪಟ್ಟಣದಲ್ಲಿ ಈ ಯೋಜನೆಯ ಸವಲತ್ತು ಪಡೆದಿರುವವರು ಇಲ್ಲಿಯವರೆಗೆ ಕೇವಲ 3 ಲಕ್ಷ ರೂಗಳನ್ನು ಮಾತ್ರ ಕಟ್ಟಿದ್ದು ಉಳಿಕೆ 68 ಲಕ್ಷ ಬಾಕಿ ಇದೆ, ಈ ಹಣವನ್ನು ಮರುಪಾವತಿಗೆ ಸದಸ್ಯರು ಸಹಕಾರ ನೀಡಬೇಕೆಂದು ಮುಖ್ಯಾಧಿಕಾರಿ ಪಿ.ಸಿದ್ದಮೂತರ್ಿ ಸದಸ್ಯರನ್ನು ಕೋರಿದರು.
ಪಟ್ಟಣದ ತಾತಯ್ಯನ ಗೋರಿ ಬಳಿ ಲಘುವಾಹನ ನಿಲ್ದಾಣವನ್ನು ಕಟ್ಟಲು ಪುರಸಭೆಯಿಂದ ಜಾಗ ನೀಡಿದರೆ ಶಾಸಕರ ನಿಧಿಯಿಂದ ನಿಲ್ದಾಣವನ್ನು ನಿಮರ್ಿಸಲಾಗುವುದು ಎಂದು ಅಧ್ಯಕ್ಷರು ಸೂಚಿಸಿದಕ್ಕೆ ಸದಸ್ಯರೆಲ್ಲಾ ಸಮ್ಮತಿಸಿ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದವರು ಹಾಗೂ ನಾಮಿನಿ ಸದಸ್ಯರುಗಳು ಹಾಜರಿದ್ದರು.

ವೈದ್ಯರು ಕಾರ್ಯಸ್ಥಾನದಲ್ಲೇ ವಾಸಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಹೊಟ್ಟೆನೋವಿನಿಂದ ವೆಂಕಟೇಶ್ ಸಾವು ಆಸ್ಪತ್ರೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಮೇ24: ತಾಲೂಕಿನ ಹಂದನೆಕೆರೆಯ ವೆಂಕಟೇಶ್ ಎಂಬಾತನ ಸಾವಿಗೆ ವೈದ್ಯರು ಕಾರ್ಯಸ್ಥಾನದಲ್ಲಿ ಲಭ್ಯವಿಲ್ಲದಿರುವುದೇ ಕಾರಣವೆಂದು ಸಿಟ್ಟೆಗೆದ್ದ ಇಲ್ಲಿನ ಜನರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಂದನೆಕೆರೆಯ ಟೈಲರ್ ವೆಂಕಟೇಶ್ ಎಂಬಾತ ಗುರುವಾರ ರಾತ್ರಿ ಹೊಟ್ಟೆನೋವಿನಿಂದ ಹಂದನಕೆರೆ ಆಸ್ಪತ್ರೆಗೆ ಬಂದಿದ್ದಾನೆ, ಈ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿ ತಿಪಟೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ರೋಗಿಯನ್ನು ತಿಪಟೂರಿಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ವೆಂಕಟೇಶನಿಗೆ ಸಕಾಲಕ್ಕೆ ವೈದ್ಯರಿಂದ ಸಮರ್ಪಕವಾದ ಔಷಧಿ ದೊರೆತ್ತಿದ್ದರೆ ಸಾವು ಸಂಭವಿಸುತ್ತಿರಲಿಲ್ಲವೆಂದು ತಿಳಿದು ಇಲ್ಲಿನ ಜನರು ವೈದ್ಯರ ವಿರೋಧ ಪ್ರತಿಭಟನೆಗೆ ಮುಂದಾದರು.
ಈ ಆಸ್ಪತ್ರೆಗೆ ನಿಯೋಜಿಸಿರುವ ಡಾ.ಶಂಕರಪ್ಪನವರು, ಅರಸೀಕೆರೆ ತಾಲೂಕಿನ ಬಾಣಾವಾರದಿಂದ ಹಂದನಕೆರೆಗೆ ದಿನಂಪ್ರತಿ ಬರುತ್ತಿದ್ದು ರಾತ್ರಿ ಸಂದರ್ಭದಲ್ಲಿ ಅವಗಡಗಳು ಸಂಭವಿಸಿದರೆ ಶುಶ್ರೂಷೆ ನೀಡಲು ವೈದ್ಯರಿರುವುದಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ಡಾ.ಶಂಕರಪ್ಪನವರು ಪೊಲೀಸ ಠಾಣೆಯಲ್ಲಿದ್ದು ರಕ್ಷಣೆ ಪಡೆದಿದ್ದರು.
ಸ್ಥಳಕ್ಕೆ ಸಿ.ಪಿ.ಐ, ಪಿ. ರವಿಪ್ರಸಾದ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಭೇಟಿ ನೀಡಿದ್ದರು. ಹಂದನಕೆರೆ ಪಿ.ಎಸೈ. ಲಕ್ಷ್ಮೀಪತಿ ಹಾಜರಿದ್ದರು.
ಜನ ಸೇವಾ ಕಾಯರ್ಾಲಯದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಮೇ.21: ಪಟ್ಟಣದ ನ್ಯಾಯಾಲಯದ ಬಳಿ 'ಜನ ಸೇವಾ ಕಾಯರ್ಾಲಯ'ವನ್ನು ಇದೇ 23ರಂದು ಬೆ.9ಕ್ಕೆ ಉದ್ಘಾಟಿಸಲಾಗುವುದು ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ತಿಳಿಸಿದ್ದಾರೆ.
ತಾಲೂಕಿನ ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಈ ಕಾಯರ್ಾಲವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿರುವ ಲಕ್ಕಪ್ಪ, ಈ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಾದ ಎಸ್.ಮುರುಡಯ್ಯ, ಕುಪ್ಪೂರು ಗೋಪಾಲರಾವ್, ಜೋಡಿ ಕಲ್ಲೇನಹಳ್ಳಿ ಶಿವಪ್ಪ ಹಾಗೂ ನಾಗೇಶಯ್ಯನವರು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ಬಡಕೆಗುಡ್ಲು ಸಕರ್ಾರಿ ಶಾಲೆಗೆ ಶೇ.96 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.21: ತಾಲೂಕಿನಿ ಕಂದಿಕೆರೆ ಹೋಬಳಿ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.96 ಫಲಿತಾಂಶ ಬಂದಿದ್ದು, ಈ ಫಲಿತಾಂಶಕ್ಕೆ ಅಲ್ಲಿನ ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಸಕರ್ಾರಿ ಪ್ರೌಢಶಾಲೆ ಇತ್ತೀಚೆಗೆ ಆರಂಭಗೊಂಡಿದ್ದು, ಶಿಕ್ಷಕರು ಇಲ್ಲಿನ ವಿದ್ಯಾಥರ್ಿಗಳಿಗೆ ಮುತುವಜರ್ಿಯಿಂದ ಪಾಠಭೋದನೆ ಮಾಡಿದ್ದು ಹಾಗೂ ವಿದ್ಯಾಥರ್ಿಗಳು ಶ್ರದ್ದೆಯಿಂದ ಓದಿದ್ದರ ಫಲವಾಗಿ ನಾವು ಈ ರೀತಿಯ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ತಿಳಿಸಿದ್ದಾರೆ.


ಕಾಳಿಕಾಂಬ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ
ಚಿಕ್ಕನಾಯಕನಹಳ್ಳಿ,ಮೇ.24: ಹೊಯ್ಸಳರ ಕಾಲದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಶಿವಲಿಂಗೇಶ್ವರ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಳಿಕಾಂಬ ದೇವಾಲಯ ಸಮಿತಿಯ ಅಧ್ಯಕ್ಷ ಸಾಸಲು ಪುಟ್ಟದೇವಿರಾಚಾರ್ ತಿಳಿಸಿದ್ದಾರೆ.
ಪಟ್ಟಣದ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಟು ನೂರು ವರ್ಷಗಳ ಇತಿಹಾಸವಿರುವ ಈ ದೇವಾಲಯವನ್ನು ಜೀಣರ್ೋದ್ದಾರಗೊಳಿಸಿದ್ದು, ಪುರಾತನ ವಿಗ್ರಹಗಳ ಜೊತೆಗೆ ನೂತನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಈ ಸಂಬಂಧ ಇದೇ 25 ರಂದು ಗಣಪತಿ ಪೂಜೆ, ಪುಣ್ಯಾಹವಾಚನ ಕಾರ್ಯಕ್ರಮಗಳನ್ನು ನಮ್ಮ ಸಮಾಜದ ಪೀಠಾಧ್ಯಕ್ಷರುಗಳಾದ ಶಿವಸುಜ್ಞಾನ ಮೂತರ್ಿ ಸ್ವಾಮಿ, ಗುರುನಾಥ ಸ್ವಾಮಿ ಹಾಗೂ ಕರುಣಾಕರ ಸ್ವಾಮಿ ಯವರ ಸಾನಿಧ್ಯದಲ್ಲಿ ನೆರವೇರಿಸಲಾಗುವುದು ಎಂದರು.
ಇದೇ 26ರ ಬೆಳಿಗ್ಗೆ 9.30ಕ್ಕೆ ಶ್ರೀ ಕಾಳಿಕಾಂಬದೇವಿ, ಶಿವಲಿಂಗೇಶ್ವರ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ, ಹೋಮ ಹಾಗೂ ಕುಂಭಾಭಿಷೇಕ ಮತ್ತು ಮಹಾದಾಸೋಹವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ದಿನ ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನೆಯನ್ನು ಹಾಸನ ಜಿಲ್ಲೆಯ ಅರೆಮಾದನಹಳ್ಳಿ ಮಹಾ ಸಂಸ್ಥಾನದ ಸುಜ್ಞಾನ ಪೀಠದ ಶಿವಸುಜ್ಞಾನಮೂತರ್ಿ ಸ್ವಾಮಿ ನೆರವೇರಿಸಲಿದ್ದಾರೆ, ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನವನ್ನು ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ ನೀಡಲಿದ್ದಾರೆ, ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜನಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ಗುಲ್ಬರ್ಗದ ಏಕದಂಡಿಗಿ ಮಠದ ಗುರುನಾಥ ಸ್ವಾಮಿ, ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರ ಸ್ವಾಮಿ, ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ಹುಲಿಯೂರು ದುರ್ಗದ ದೀಪಾಂಬುದಿ ಕಾಳಿಕಾಂಬ ಪೀಠಾಧ್ಯಕ್ಷರಾದ ಕರುಣಾಕರ ಸ್ವಾಮಿ,ಚಿತ್ರದುರ್ಗ ಕೃಷ್ಣಯಾದವಾನಂದ ಸ್ವಾಮಿ, ಬಸವ ಮಾಚೀದೇವ ಸ್ವಾಮಿ, ಬಂಜಾರ ಗುರುಪೀಠದ ಸದರ್ಾರ್ ಸೇವಾಲಾಲ್ ಸ್ವಾಮಿ, ಚಿ.ನಾ.ಹಳ್ಳಿಯ ನನ್ನಯ್ಯ ಸ್ವಾಮಿ ಉಪಸ್ಥಿತರಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಸಂಸದ ಜಿ.ಎಸ್.ಬಸವರಾಜು, ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಶಾಸಕರುಗಳಾದ ಬಿ.ಸಿ.ನಾಗೇಶ್, ಎಂ.ಆರ್.ಹುಲಿನಾಯ್ಕರ್, ಸಾಹಿತಿ ಸಾ.ಶಿ.ಮರುಳಯ್ಯ, ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಉಮೇಶ್, ಬೆಂಗಳೂರಿನ ಮ್ಯೂಜಿಕಲ್ ಅಕಾಡಮಿಯ ಪ್ರಧಾನ ಕಾರ್ಯದಶರ್ಿ ಎಲ್.ಜಗಧೀಶ್, ಶಿಲ್ಪಿ ಹೊನ್ನಪ್ಪಾಚಾರ್ ಭಾಗವಹಿಸುವರು.
ಅತಿಥಿಗಳಾಗಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಪಿ.ನಾಗರಾಜು, ಆನಂದರಾಮು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಬಿ.ಲಕ್ಕಪ್ಪ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಸವರಾಜು ಸೇರಿದಂತೆ ಹಲವರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವವರಿಗೆ ಸನ್ಮಾನವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನ ಭೂಮಿಕಾ ಜೂಯಲ್ಲರ್ಸ್ನ ಎಲ್.ರಮೇಶ್, ಮುನಿಯೂರಿನ ವಿದ್ವಾನ್ ಕ.ನಾ.ದಾಸಾಚಾರ್, ತಿಪಟೂರಿನ ಡಾ.ನಾಗೇಂದ್ರ, ನಿವೃತ್ತ ಪ್ರಾಂಶುಪಾಲ ಕೆ.ಉಪೇಂದ್ರ, ಶಿಲ್ಪಿ ಪಿ.ವಿಶ್ವನಾಥ್, ಕಲಾವಿದ ಸಿ.ಎನ್.ಕೃಷ್ಣಾಚಾರ್ ರವರನ್ನು ಅಭಿನಂದಿಸಲಾಗುವುದು ಎಂದು ದೇವಾಲಯ ಸಮಿತಿಯ ಕಾರ್ಯದಶರ್ಿ ಅನು ಜ್ಯೂಯಲರ್ಸ್ನ ಎಂ.ದೇವರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಸಿ.ಎನ್.ಮೂತರ್ಿ, ಯತಿರಾಜ್, ತಾಂಡವಾಚಾರ್, ಕೃಷ್ಣಚಾರ್, ಶೆಟ್ಟೀಕೆರೆ ಮೋಹನ್, ಪಂಚಲಿಂಗಾಚಾರ್ ಉಪಸ್ಥಿತರಿದ್ದರು.

ತಾಲೂಕಿನ ಇಬ್ಬರು ಅಂಗವಿಕಲರು ಗ್ರಾ.ಪಂ.ಸದಸ್ಯರು
ಚಿಕ್ಕನಾಯಕನಹಳ್ಳಿ,ಮೇ.24: ತಾಲೂಕಿನ ಕುಪ್ಪೂರು ಗ್ರಾ.ಪಂ.ಗೆ ಬೆನಕನಕಟ್ಟೆ ಕ್ಷೇತ್ರದಿಂದ ನವಚೇತನ ಅಂಗವಿಕಲರ ಶ್ರೋಯೋಬಿವೃದ್ದಿ ಸಂಘದ ಅಧ್ಯಕ್ಷ ಬಿ.ಕೆ.ರಮೇಶ್ ಆಯ್ಕೆಯಾಗಿದ್ದಾರೆ.
ಡಿ.ಎಡ್. ಪದವೀಧರರಾದ ಇವರು, ಅಂಗವಿಕಲರ ಹಕ್ಕುಬಾದ್ಯತೆಗೆ ಸಾಕಷ್ಟು ಹೋರಾಟ ಮಾಡಿದ್ದಾರಲ್ಲದೆ, ವಿಕಲ ಚೇತನರ ಕ್ಷೇಮಾಭಿವೃದ್ದಿಗಾಗಿ ಸಂಘ ಸಂಸ್ಥೆಗಳನ್ನು ಕಟ್ಟಿ ಅದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.ಉಜ್ಜೀವನ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಸ್ಟಮರ್ ರಿಲೇಷನ್ ಸ್ಟಾಫ್ ಆಗಿರುವ ಇವರು, ಚುನಾವಣೆಯ ಸಂದರ್ಭದಲ್ಲಿ ಬೆಳಗಿನ ಸಮಯದಲ್ಲಿ ತಮ್ಮ ಕಂಪನಿಯ ಕೆಲಸಗಳನ್ನು ಮಾಡಿದರೆ, ರಾತ್ರಿ ಸಮಯದಲ್ಲಿ ಪ್ರಚಾರದಲ್ಲಿ ಮಗ್ನರಾಗುತ್ತಿದ್ದರು, ಊರಿನ ಯುವಕರ ಸಹಕಾರ ಹಾಗೂ ಮತದಾರರ ಒಲವಿನಿಂದ ನಾನು ಇಂದು ಗ್ರಾ.ಪಂ.ಸದಸ್ಯನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಮಾಳಿಗೆಹಳ್ಳಿ ಕ್ಷೇತ್ರದಿಂದ ವಿಕಲ ಚೇತನ ಯೋಗರಾಜ್ ಆಯ್ಕೆ: ಮುದ್ದೇನಹಳ್ಳಿ ಗ್ರಾ.ಪಂ.ಯ ಮಾಳಿಗೆಹಳ್ಳಿ ಕ್ಷೇತ್ರದಿಂದ ಬ್ಯಾಲದಕೆರೆಯ ಅಂಗವಿಕಲ ಯೋಗರಾಜ್ ಆಯ್ಕೆಯಾಗಿದ್ದಾರೆ.
ತಾಲೂಕು ಕಛೇರಿಯಲ್ಲಿ ಗ್ರಾಮಲೆಕ್ಕಿಗರ ಖಾಸಗಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಈತ, ಮಾಳಿಗೆಹಳ್ಳಿ ಭಾಗದ ಜನರ ಭೂ ದಾಖಲೆಗಳು, ವರಮಾನ ಪತ್ರಗಳು ಸೇರಿದಂತೆ ಜನ ಸಾಮಾನ್ಯರ ಕೆಲಸಗಳನ್ನು ಮಾಡಿಸಿಕೊಡುವ ಮೂಲಕ ಆ ಭಾಗದ ಜನರಿಗೆ ಚಿರ ಪರಿಚಿತನಾದ ಯೋಗರಾಜ್, ಈ ಬಾರಿ ಗ್ರಾ.ಪಂ.ಚುನಾವಣೆಯಲ್ಲಿ ಸ್ಪಧರ್ಿಸಿ ಅಲ್ಲಿಯ ಘಟಾನುಘಟಿ ಸ್ಪಧರ್ಾಳುವನ್ನು ಸೋಲಿಸುವ ಮೂಲಕ ಗ್ರಾ.ಪಂ.ಗೆ ಪ್ರವೇಶ ಪಡೆದಿದ್ದಾನೆ, ಮನಸ್ಸೊಂದಿದ್ದರೆ ಯಾವ ವೈಕಲ್ಯವೂ ಅಡ್ಡಿ ಬರುವುದಿಲ್ಲ, ನಾವೂ ಸೇವೆ ಮಾಡುವುದರಲ್ಲಿ ಕಡಿಮೆ ಏನಿಲ್ಲಾ ಎಂಬುದನ್ನು ತೋರಿಸಿದ್ದಾರೆ.

No comments:

Post a Comment