Sunday, October 24, 2010

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಅಂಗನವಾಡಿ ಶಿಕ್ಷಕಿ
ಚಿಕ್ಕನಾಯಕನಹಳ್ಳಿ,ಅ.22: ವರದಕ್ಷಿಣೆ ಕಿರುಕುಳವನ್ನು ಸಹಿಸದ ಅಂಗನವಾಡಿ ಶಿಕ್ಷಕಿ ರೇಣುಕಮ್ಮ(25) ವಿಷ ಕುಡಿದು ಸಾವನ್ನಪ್ಪಿರುವ ಘಟನೆ ರಂಗಾಪುರದ ಹಟ್ಟಿಯಲ್ಲಿ ನಡೆದಿದೆ.
ಪಟ್ಟಣದ ಗಂಗಮ್ಮನ ಮಗಳು ರೇಣುಕಮ್ಮಳನ್ನು ಇದೇ ತಾಲೂಕಿನ ರಂಗಾಪುರದ ಹಟ್ಟಿಯ ಆನಂದ ಎಂಬುವವರಿಗೆ ಆರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿತ್ತು. ಮದುವೆಯ ಸಂದರ್ಭದಲ್ಲಿ ವರ ಆನಂದನಿಗೆ ಐವತ್ತು ಸಾವಿರ ರೂ ನಗದು, ಒಂದು ಉಂಗುರ, ಹೆಣ್ಣಿಗೆ ಎರಡು ಎಳೆ ಚಿನ್ನದ ಸರ ಕೊಟ್ಟು ಮದುವೆ ಮಾಡಿದ್ದರು.
ಆರಂಭದಲ್ಲಿ ಅನೂನ್ಯವಾಗಿದ್ದ ರೇಣುಕಮ್ಮ, ಅಲ್ಲಿಯೇ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಅವಳ ಸಂಬಳವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದ ಪತಿ ಆನಂದ ಕುಡಿತಕ್ಕೆ ಬಲಿಯಾಗಿ, ಕುಡಿದ ಅಮಲಿನಲ್ಲಿ ತವರು ಮನೆಯಿಂದ ಹಣ ತರುವಂತೆ ರೇಣುಕಮ್ಮಳನ್ನು ಪೀಡಿಸುತ್ತಿದ್ದ.
ತವರು ಮನೆಯವರು ಮಗಳ ಸಂಸಾರ ಸುಖವಾಗಿರಲೆಂದು ಒಂದೆರಡು ಸಂದರ್ಭಗಳಲ್ಲಿ ಹಣವನ್ನು ಕೊಟ್ಟು ಗಂಡನ ಮನೆಗೆ ಕಳುಹಿಸಿದ್ದಾರೆ. ಇದಷ್ಟಕ್ಕೆ ತೃಪ್ತಿಯಾಗದ ಆನಂದ, ತನ್ನ ತಾಯಿ ಲಕ್ಷ್ಮಮ್ಮನೊಂದಿಗೆ ಸೇರಿಕೊಂಡು ರೇಣುಕಮ್ಮಳಿಗೆ ಇನ್ನಷ್ಟು ಹಣ ತರುವಂತೆ ಪೀಡಿಸತೊಡಗಿದ್ದಾರೆ.
ಈ ಸಂಬಂಧವಾಗಿ ರೇಣುಕಮ್ಮ ಹುಳಿಯಾರು ಠಾಣೆಗೆ ತನಗಾಗುತ್ತಿರುವ ಕಿರುಕುಳದ ಬಗ್ಗೆ ಅಲ್ಲಿನ ಅಧಿಕಾರಿಗಳ ಬಳಿ ಅಲವತ್ತು ಕೊಂಡಿದ್ದಾಳೆ, ಇವ್ಯಾವುದಕ್ಕೂ ಜಗ್ಗದ ಗಂಡ ಆನಂದ, ಅತ್ತೆ ಲಕ್ಷ್ಮಮ್ಮ, ಗಂಡನ ಸ್ನೇಹಿತರಾದರ ಬಳೆ ಚಂದ್ರಯ್ಯ, ಓಂಕಾರ, ಪಾಂಡುರಂಗ ಸೇರಿ ರೇಣುಕಮ್ಮಳಿಗೆ ಕಿರುಕುಳ ಕೊಟ್ಟದ್ದರಿಂದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ತಾಯಿ ಗಂಗಮ್ಮ ದೂರಿದ್ದಾರೆ.
ಮೃತಳ ಪತಿ ಆನಂದನನ್ನು ಚಿ.ನಾ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


No comments:

Post a Comment