Sunday, October 24, 2010ಜನರನ್ನೇ ಮರೆತ ಜನಪ್ರತಿನಿಧಿಗಳು; ಹಣದ ಸುಳಿಯಲ್ಲಿ ಸಿಲುಕ್ಕಿದ್ದಾರೆ. ಚಿಕ್ಕನಾಯಕನಹಳ್ಳಿ,ಅ.24: ಚುನಾವಣೆ ಬಂದಾಗ ಒಂದು ಓಟು ಬಿಸಾಕಿ ಮಲಗಿದವರು, ಮತ್ತೇ ನಾವು ಹೇಳುವುದು ಮುಂದಿನ ಚುನಾವಣೆಗೆ ಹಾಗಾಗಿಯೇ ಇಂದು ನಮ್ಮ ರಾಜ್ಯದ ಜನಪ್ರತಿನಿಧಿಗಳು ಈ ರೀತಿಯ ಲಜ್ಜೆಗೇಡಿತನದಿಂದ ವತರ್ಿಸುತ್ತಿದ್ದಾರೆ. ಇದೊಂದು ಕುಂಬಕರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ನಮ್ಮನಾಳುತ್ತಿದೆ ಎಂದು ಸ್ವತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಯುಕ್ತವಾಗಿ ಆಯೋಜಿಸಿದ್ದ ಹಿರಿಯ ನಾಗರೀಕರಿಗೆ ಸನ್ಮಾನ, 'ಲೋಕನಾಯಕ ಜೆ.ಪಿ.' ಪುಸ್ತಕ ಬಿಡುಗಡೆ ಹಾಗೂ ಪಿ.ಎಚ್.ಡಿ.ಪುರಸ್ಕೃತರಾದ ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕಾರಣಿಗಳು ಜನರನ್ನು ಓಟು ಕೊಡುವ ಯಂತ್ರಗಳನ್ನಾಗಿಸಿಕೊಂಡಿರುವ ಪರಿಣಾಮ ಜನರು ಕೊಟ್ಟಿರುವ ಓಟನ್ನು ಹರಾಜಿಗಿಟ್ಟು ಹಣವನ್ನು ಮಾಡಲು ಹೊರಟಿರುವ ಈ ಲಜ್ಜೆಗೇಡಿ ರಾಜಕಾರಣಿಗಳಿಗೆ ಜನರು ಒಳ್ಳೆಯ ಪಾಠ ಕಲಿಸಬೇಕಿದೆ ಎಂದರು.
ನಾಯಿ ಬಾಲವನ್ನು ಅಲ್ಲಾಡಿಸಲುವುದು ಸಹಜ, ಆದರೆ ಈಗ ನಮ್ಮ ರಾಜ್ಯದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ. ನಮ್ಮ ಅನುಕೂಲಕ್ಕಿರುವ ಹಣ, ಇಂದು ನಮ್ಮನ್ನೇ ಆಳುತ್ತಿದೆ. ಮನುಷ್ಯತ್ವವನ್ನು ಮರೆತಿರುವ ಜನ ಹಣದ ಆಸೆಗೆ ಬಿದ್ದು ಓಟು ಹಾಕಿ ಗೆಲ್ಲಿಸಿದ ಜನರನ್ನು ಮರೆತು ಅಧಿಕಾರದ ಆಸೆಗಾಗಿ ಸಲ್ಲದ ದಾರಿ ಹಿಡಿದು ಜನರು ಕೊಟ್ಟ ಅಧಿಕಾರವನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂದರು.
ಇಂದು ಜನಪ್ರತಿನಿಧಿಗಳಾಗುತ್ತಿರುವವರು ಕೋಟಾಧಿಪತಿಗಳು, ಹೆಂಡದ ದೊರೆಗಳು, ಕುದುರೆ ಜೂಜಾಡುವ ಜನರೇ, ಹಾಗಾಗಿಯೇ ಬಡವರ ಕಷ್ಟ ಅವರಿಗೆ ಅರಿವಿಗೆ ಬರುತ್ತಿಲ್ಲವೆಂದರು.
ಮಹಾತ್ಮ ಗಾಂಧಿ, ವಿನೋಬ ಭಾವೆ ಅವರೆಲ್ಲ, ಬಡವರಿಗೆ ಜಮೀನು ಹಂಚುವುದಕ್ಕಾಗಿ ಜಮೀನುದಾರರಿಂದ 42 ಲಕ್ಷ ಎಕರೆ ಸಂಗ್ರಹಿಸಿದ್ದರು. ಬಿಹಾರ ರಾಜ್ಯ ಒಂದರಲ್ಲೇ 24 ಲಕ್ಷ ಎಕರೆ ಸಂಗ್ರಹವಾಗಿತ್ತು ಎಂದರಲ್ಲದೆ, ಆಗಿನ ಕಾಲದಲ್ಲಿ ಎಲ್ಲಾ ಬಡವರಿಗೆ ಕನಿಷ್ಠ ಪ್ರಮಾಣದಲ್ಲಿ ಜಮೀನು ಹಂಚಬೇಕೆಂದರೆ 5 ಕೋಟಿ ಎಕರೆ ಜಮೀನಿನ ಅಗತ್ಯವಿತ್ತು ಎಂದರು.
ದಿನೇ ದಿನೇ ಬಡವರ ಸಂಖ್ಯೆ ಹೆಚ್ಚುತ್ತಿದೆ, ಅದನ್ನು ನೀಗಿಸುವ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳು ಮುಂದಾಗಿ, ವರ್ಷದಲ್ಲಿ ಸೇವಾ ಸಂಸ್ಥೆಯೊಂದು ಕನಿಷ್ಟ ಹತ್ತು ಜನರ ಜೀವನಾಧಾರಕ್ಕೆ ಅಗತ್ಯವಾದ ಉದ್ಯೋಗವನ್ನು ಕಲ್ಪಿಸಿಕೊಡಬೇಕೆಂದರು.
ಸಮಾರಂಭದಲ್ಲಿ ಗೌರವಾಭಿನಂದನೆಯನ್ನು ಸ್ವೀಕರಿಸಿದ ಕುಪ್ಪೂರು ಮರುಳಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಸಮಾಜಕ್ಕಾಗಿ ದುಡಿಯುವ ಜನರ ಸಂಖ್ಯೆ ಹೆಚ್ಚಾಗಬೇಕಾಗಿದೆ. ನಮ್ಮ ದೇಹದಲ್ಲಿ ಜೀವವೆಂಬುದು ಇರುವ ತನಕ ಈ ದೇಹಕ್ಕೆ ಒಂದು ಬೆಲೆ, ನೆಲೆ. ನಂತರದಲ್ಲಿ ಈ ದೇಹವೇ ಬೇರೆ, ಜೀವವೇ ಬೇರೆಯಾಗಿ ದೇಹ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ದೇಹದಲ್ಲಿ ಜೀವವಿರುವಾಗಲೇ ಬೇರೆಯವರ ಜೀವನಕ್ಕೂ ಸಹಾಯ ಮಾಡಿ ಎಂದರು.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಂಡಿಸಿರುವ ತಮ್ಮ ಪ್ರೌಢ ಪ್ರಬಂಧ 'ವೀರಶೈವ ಧಾಮರ್ಿಕ ಸಂಸ್ಕಾರಗಳಲ್ಲಿ ಸಾಮಾಜಿ ಸ್ವಾಸ್ಥ್ಯ' ಎಂಬ ವಿಷಯದ ತಿರುಳೆಂದರೆ ಜಾನಪದ ಆಟವಾದ ಕಣ್ಣಾಮುಚ್ಚೆ ಕಾಡೇಗೂಡೆ'' ಯ ಸಾರಾಂಶವೇ ಆಗಿದೆ, ಎಂಬುದನ್ನು ಎಳೆ ಎಳೆಯಾಗಿ ಸಭೆಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಹಿಸಿದ್ದರು. ಪ್ರೊ.ನಾ.ದಯಾನಂದ, ಸಿ.ಪಿ.ಐ. ರವಿಪ್ರಸಾದ್, ರೋಟರಿ ಜಿಲ್ಲಾ ಅಸಿಸ್ಟಂಟ್ ಗೌರ್ನರ್ ಶಾಂತಿಲಾಲ್, ಸಿ.ಎಚ್.ಮರಿದೇವರು ಮಾತನಾಡಿದರು. ಆರ್.ಬಸವರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ನಾಗರೀಕರಾದ ಎಸ್.ಎ.ನಬಿ, ಸಿ.ಕೆ.ಸೀತರಾಮಯ್ಯ, ಸಿ.ಎಚ್.ಮರಿದೇವರು, ಪೈಲ್ವಾನ ಶಿವರಾಮಯ್ಯ, ಪಾರ್ಕ ಶಿವಣ್ಣ, ಗುಂಡಮ್ಮ ನವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಭಾವನಿ ಜಯರಾಂ ನಿರೂಪಿಸಿದರು, ಸಿ.ಕೆ.ಪರಶುರಾಮಯ್ಯ ಅಭಿನಂದನಾ ಪತ್ರ ವಾಚಿಸಿದರು, ಕೆ.ವಿ.ಕುಮಾರ್ ವಂದಿಸಿದರು.

ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ ಮಹಾನ್ ಸಂತ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ,ಅ.24: ವಾಲ್ಮೀಕಿ ರಾಮಾಯಣವನ್ನು ರಚಿಸಿ ಅದರಲ್ಲಿ 24ಸಾವಿರ ಶ್ಲೋಕವನ್ನು ಬರೆಯುವ ಮೂಲಕ ಇಡೀ ಮನುಷ್ಯ ಕುಲ ಇರುವವರೆಗೆ ಅಜರಾಮರಾದ ಶ್ರೇಷ್ಠ ಸಂತ ಎಂದು ಜಿ.ಪಂ.ಮಾಜಿ ಅ
ಧ್ಯಕ್ಷೆ ಜಯಮ್ಮದಾನಪ್ಪ ಬಣ್ಣಿಸಿದ್ದಾರೆ.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಹಷರ್ಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತಿಗೆ ಪಾತ್ರವಾದ ಮಹಾಕಾವ್ಯವನ್ನು ಬರೆಯುವ ಮೂಲಕ ಅಕ್ಷರ ಜ್ಞಾನದ ಮಹತ್ವವನ್ನು ನಮ್ಮ ಪೂರ್ವಜರು ಅರಿತಿದ್ದರು, ಈ ಜ್ಞಾನ ಭಕ್ತಿಗೆ ಸೀಮಿತವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ನಿದರ್ಿಷ್ಟ ವೃತ್ತಿ ಇಲ್ಲದೆ, ಕೈಯಿಗೆ ಸಿಕ್ಕಿದ ಕೆಲಸ ಮಾಡಿಕೊಂಡು ಜೀವನ ಕಳೆಯುವ ನಾಯಕ ಸಮಾಜ ವಿದ್ಯಾಬ್ಯಾಸದಿಂದ ಹಿಂದಿದೆ. ಅಕ್ಷರ ಜ್ಞಾನದಿಂದಾಗಿ ಮಹಷರ್ಿ ವಾಲ್ಮೀಕಿ ಇಂದಿನ ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಂತು ಅವರ ಜೀವನವನ್ನು ಅವರೇ ಉತ್ತಮ ಪಡಿಸಿಕೊಳ್ಳವುದಕ್ಕೆ ಸಕರ್ಾರ ಜಾತಿ ಕೀಳರಿಮೆಯನ್ನು ತೋರದೆ ಎಲ್ಲಾ ಜಾತಿ ಧಮರ್ಿಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕೆಂದರಲ್ಲದೆ, ನಾಯಕ ಜನಾಂಗದಲ್ಲಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ ನಂತಹ ಗುರುಭಕ್ತರು ಹುಟ್ಟಿದ್ದು ಅಂತ ಸಮಾಜವನ್ನು ಗುರುತಿಸಿ ವಾಲ್ಮೀಕಿ ಜಯಂತಿಯನ್ನು ಸಕರ್ಾರಿ ಆಚರಣೆಯನ್ನಾಗಿಸಿರುವ ಸಕರ್ಾರವನ್ನು ಶ್ಲಾಘಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿ ಜಗತ್ತಿಗೆ ರಾಮನ ದರ್ಶನ ನೀಡಿದ ವಾಲ್ಮೀಕಿ, ರಾಮಾಯಣದಲ್ಲಿ ದೈವಭಕ್ತಿಯನ್ನು ಸಾರಿ ರಾಮನ ಆದರ್ಶವನ್ನು ಮತ್ತು ರಾಮನು ಪ್ರಜೆಗಳಲ್ಲಿ ಕಾಣುತ್ತಿದ್ದ ಪ್ರೀತಿಯ ಆಡಳಿತವನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದ ಮಹಾವ್ಯಕ್ತಿ ವಾಲ್ಮೀಕಿ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಗುರುಭಕ್ತಿ, ದೈವಭಕ್ತಿಗೆ ಹೆಸರಾದ ವಾಲ್ಮೀಕಿ, ಪ್ರತಿ ಸಮಾಜದವರು ಗೌರವದಿಂದ ಕಾಣುವ ಮಹಾನ್ ಚೇತನರಾದರು, ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ, ಮಹಷರ್ಿ ವಾಲ್ಮೀಕಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ವಾಲ್ಮೀಕಿ ಜಯಂತ್ಯೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್, ತಾ.ಪಂ.ಸದಸ್ಯ ಸ್ವಾಮಿನಾಥ್, ರುದ್ರೇಶ್, ಬಸವರಾಜು, ಈರಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಸಾಸಲು ನಟರಾಜ್ ನಿರೂಪಿಸಿದರು.
ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ ಮಹಾನ್ ಸಂತ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ,ಅ.23: ವಾಲ್ಮೀಕಿ ರಾಮಾಯಣವನ್ನು ರಚಿಸಿ ಅದರಲ್ಲಿ 24ಸಾವಿರ ಶ್ಲೋಕವನ್ನು ಬರೆಯುವ ಮೂಲಕ ಇಡೀ ಮನುಷ್ಯ ಕುಲ ಇರುವವರೆಗೆ ಅಜರಾಮರಾದ ಶ್ರೇಷ್ಠ ಸಂತ ಎಂದು ಜಿ.ಪಂ.ಮಾಜಿ ಅ
ಧ್ಯಕ್ಷೆ ಜಯಮ್ಮದಾನಪ್ಪ ಬಣ್ಣಿಸಿದ್ದಾರೆ.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಹಷರ್ಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತಿಗೆ ಪಾತ್ರವಾದ ಮಹಾಕಾವ್ಯವನ್ನು ಬರೆಯುವ ಮೂಲಕ ಅಕ್ಷರ ಜ್ಞಾನದ ಮಹತ್ವವನ್ನು ನಮ್ಮ ಪೂರ್ವಜರು ಅರಿತಿದ್ದರು, ಈ ಜ್ಞಾನ ಭಕ್ತಿಗೆ ಸೀಮಿತವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ನಿದರ್ಿಷ್ಟ ವೃತ್ತಿ ಇಲ್ಲದೆ, ಕೈಯಿಗೆ ಸಿಕ್ಕಿದ ಕೆಲಸ ಮಾಡಿಕೊಂಡು ಜೀವನ ಕಳೆಯುವ ನಾಯಕ ಸಮಾಜ ವಿದ್ಯಾಬ್ಯಾಸದಿಂದ ಹಿಂದಿದೆ. ಅಕ್ಷರ ಜ್ಞಾನದಿಂದಾಗಿ ಮಹಷರ್ಿ ವಾಲ್ಮೀಕಿ ಇಂದಿನ ವಿದ್ಯಾಥರ್ಿಗಳಿಗೆ ಸ್ಪೂತರ್ಿಯಾಗಿದ್ದಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಕಾಲಿನ ಮೇಲೆ ತಾವು ನಿಂತು ಅವರ ಜೀವನವನ್ನು ಅವರೇ ಉತ್ತಮ ಪಡಿಸಿಕೊಳ್ಳವುದಕ್ಕೆ ಸಕರ್ಾರ ಜಾತಿ ಕೀಳರಿಮೆಯನ್ನು ತೋರದೆ ಎಲ್ಲಾ ಜಾತಿ ಧಮರ್ಿಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕೆಂದರಲ್ಲದೆ, ನಾಯಕ ಜನಾಂಗದಲ್ಲಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ ನಂತಹ ಗುರುಭಕ್ತರು ಹುಟ್ಟಿದ್ದು ಅಂತ ಸಮಾಜವನ್ನು ಗುರುತಿಸಿ ವಾಲ್ಮೀಕಿ ಜಯಂತಿಯನ್ನು ಸಕರ್ಾರಿ ಆಚರಣೆಯನ್ನಾಗಿಸಿರುವ ಸಕರ್ಾರವನ್ನು ಶ್ಲಾಘಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿ ಜಗತ್ತಿಗೆ ರಾಮನ ದರ್ಶನ ನೀಡಿದ ವಾಲ್ಮೀಕಿ, ರಾಮಾಯಣದಲ್ಲಿ ದೈವಭಕ್ತಿಯನ್ನು ಸಾರಿ ರಾಮನ ಆದರ್ಶವನ್ನು ಮತ್ತು ರಾಮನು ಪ್ರಜೆಗಳಲ್ಲಿ ಕಾಣುತ್ತಿದ್ದ ಪ್ರೀತಿಯ ಆಡಳಿತವನ್ನು ಎಲ್ಲರೂ ಪಾಲಿಸುವಂತೆ ತಿಳಿಸಿದ ಮಹಾವ್ಯಕ್ತಿ ವಾಲ್ಮೀಕಿ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಗುರುಭಕ್ತಿ, ದೈವಭಕ್ತಿಗೆ ಹೆಸರಾದ ವಾಲ್ಮೀಕಿ, ಪ್ರತಿ ಸಮಾಜದವರು ಗೌರವದಿಂದ ಕಾಣುವ ಮಹಾನ್ ಚೇತನರಾದರು, ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ, ಮಹಷರ್ಿ ವಾಲ್ಮೀಕಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ವಾಲ್ಮೀಕಿ ಜಯಂತ್ಯೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್, ತಾ.ಪಂ.ಸದಸ್ಯ ಸ್ವಾಮಿನಾಥ್, ರುದ್ರೇಶ್, ಬಸವರಾಜು, ಈರಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಸ್ವಾಗತಿಸಿ, ಸಾಸಲು ನಟರಾಜ್ ನಿರೂಪಿಸಿದರು.

No comments:

Post a Comment