
ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಸಪ್ತದ್ವಾರ ದರ್ಶನ
ಚಿಕ್ಕನಾಯಕನಹಳ್ಳಿ.ಡಿ.16: 15ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವದ ಪ್ರಯುಕ್ತ ಪಟ್ಟಣದ ಲಕ್ಷ್ಮೀವೆಂಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ 17, 18, 19 ರಂದು ದೇವಸ್ಥಾನದಲ್ಲಿ ಪುಷ್ಪಾಲಂಕಾರ, ಸಪ್ತದ್ವಾರದ ದರ್ಶನವನ್ನು ಏರ್ಪಡಿಸಲಾಗಿದೆ.
17ರಂದು ಸಪ್ತದ್ವಾರಗಳ ದರ್ಶನ, ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 18ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ ದೇವರ ಉಯ್ಯಾಲೆ ಉತ್ಸವ, 19ರಂದು ಊರಿನ ಪ್ರಮುಖ ಬೀದಿಗಳಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಶಿಕ್ಚಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉನ್ನತ ವ್ಯಾಸಾಂಗ
ಚಿಕ್ಕನಾಯಕನಹಳ್ಳಿ,ಡಿ.16: ವಿಜ್ಞಾನ ಗಣಿತ ಮತ್ತು ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಉನ್ನತ ವ್ಯಾಸಾಂಗ ನಿಯೋಜಿಸಲು ಶಿಕ್ಷಕರ ತಮ್ಮಾ ಇಚ್ಚಾ ಪತ್ರವನ್ನು ಇದೇ 20ರ ಒಳಗಾಗಿ ಬಿ.ಇ.ಒ ಕಛೇರಿಗೆ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment