Thursday, May 19, 2011
















ಭೂ ಸ್ವಾಧೀನದ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಚಿಕ್ಕನಾಯಕನಹಳ್ಳಿ,

ಮೇ.19: ಕೇವಲ ಜೀವನಾದಾರಕ್ಕೆ 5, 10 ಗುಂಟೆ ಭೂ ಪ್ರದೇಶ ಹೊಂದಿರುವವರೆ ಹೆಚ್ಚು, ಈ ಭೂ ಒಡೆಯರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಸಕರ್ಾರದ ಕ್ರಮ ಖಂಡಿಸಿ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಕರ್ಾರವನ್ನು ಎಚ್ಚರಿಸಿದೆ. ಪಟ್ಟಣದ ಎಲ್ಲಮ್ಮದೇವಿಯ ದೇವಾಲಯದ ಆವರಣದಲ್ಲಿ ದಾಸೀಹಳ್ಳಿ ಹಾಗೂ ಬ್ಯಾಲದಕೆರೆಯ ಆಜುಬಾಜಿನಲ್ಲಿರುವ 80 ಎಕರೆ 10ಗುಂಟೆ, ಗೃಹಮಂಡಳಿಯ ಭೂ ಸ್ವಾಧೀನಕ್ಕೆ ಒಳಪಡುವ 107 ಮಂದಿ ರೈತರು ಸಭೆ ಸೇರಿ ಭೂ ಸ್ವಾಧೀನ ಕಾಯಿದೆ ಕಲಂ 4(1) ಅಡಿಯಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು ಕಲಂ 6(1)ಎ ಕಾಯಿದೆಗೆ ಒಳಪಟ್ಟರೆ ರೈತರು ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸಕರ್ಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿ ಬಡ ರೈತರನ್ನು ರಕ್ಷಿಸುವ ಹೊಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ಹೋರಾಟದಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.ರೈತ ಮುಖಂಡ ಸಿ.ಬಿ.ತಿಪ್ಪೇಸ್ವಾಮಿ ಮಾತನಾಡಿ ಬದ್ದತೆಯ ಮೂಲಕ ಹೋರಾಟ ಕೈಗೆತ್ತಿಕೊಳ್ಳಬೇಕು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಹೋರಾಟದಲ್ಲಿ ಯಶಸ್ಸು ಕಾಣುವವರೆಗೂ ಸಂಘಟಿತರಾಗಿರಬೇಕು ಎಂದರು.ಸಭೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ಡಿ.ರಾಜಣ್ಣ, ಪುರಸಭೆ ಸದಸ್ಯ ಸಿ.ಪಿ.ಮಹೇಶ್, ಸಿ.ಪಿ.ಚಂದ್ರಶೇಖರಶೆಟ್ಟಿ, ಟಿ.ಕುಮಾರಯ್ಯ, ಸಿ.ಎನ್.ಕುಮಾರ್, ಪುಟ್ಟಯ್ಯ, ರಾಮಚಂದ್ರಯ್ಯ, ಸಿ.ವಿ.ದಯಾನಂದ, ಸಿ.ಬಿ.ರೇಣುಕಸ್ವಾಮಿ, ಸಿ.ಎಸ್.ಮಲ್ಲಿಕಾಜರ್ುನಯ್ಯ, ಬ್ಯಾಲದಕೆರೆ ನಂಜಪ್ಪ ಉಪಸ್ಥಿತರಿದ್ದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಿಗೆಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಆಗ್ರಹಿಸಿ ತಾಲೂಕು ದಂಡಾದಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.

No comments:

Post a Comment