Thursday, May 19, 2011

ರಾಜ್ಯ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂ

ಚಿಕ್ಕನಾಯಕನಹಳ್ಳಿ,ಮೇ.19 : ರಾಜ್ಯ ರಕ್ಷಣ ವೇದಿಕೆ ದಶಮಾನೋತ್ಸವವು ಬೆಂಗಳೂರು ಅರಮನೆಯ ಮೈದಾನದಲ್ಲಿ ಇದೇ ತಿಂಗಳ 28-29ರಂದು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕರವೇ ಅಧ್ಯಕ್ಷ ಎನ್.ಎಸ್. ವಿಷ್ಣುವರ್ಧನ್ ಹೇಳಿದರು. ಪಟ್ಟಣದ ಸಕರ್ಾರಿ ನೌಕರರ ಸಂಘದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಕ್ಷಣ ವೇದಿಕೆಗೆ 10ನೇ ವರ್ಷ ದಾಟಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಕರವೇ ಒಗ್ಗೂಡಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ನಮ್ಮ ಜಿಲ್ಲೆಯಿಂದ 10.000 ಕಾರ್ಯಕರ್ತರು ಆಗಮಿಸುವ ನೀರಿಕ್ಷೆಯಿದೆ ಎಂದರು. ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಗಳ ಜನಪದ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪ್ರದಶರ್ಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದ್ದು ರಾಜ್ಯದ ಅಭಿವೃದ್ಧಿಯ ಚಿಂತನೆ ಜಾನಪದದ ವಿಚಾರವಾಗಿ ರಾಜ್ಯಮಟ್ಟದಲ್ಲಿ ವಿಚಾರ ಗೋಷ್ಟಿಗಳ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರು ನಾಡಿನ ಮಠಾಧೀಶರುಗಳು ಜನ ಪ್ರತಿನಿಧಿಗಳು ಅನಿವಾಸಿ ಕನ್ನಡಿಗರು ಸಾಹಿತಿಗಳು ಹಾಗೂ ನಾಡಪರ ಚಿಂತಕರ ಸಮ್ಮುಖದಲ್ಲಿ ನೆಡೆಯಲಿರುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.ತಾಲೂಕು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಪ್ರತಿಯೊಂದು ಹೋಬಳಿ &ಗ್ರಾಮಗಳಲ್ಲಿ ನಮ್ಮ ಕರವೇ ಶಾಖೆಗಳನ್ನು ತೆಗೆಯಬೇಕು ಮುಖಂಡರುಗಳು ಜನಪರ ರೈತರಿಗಾಗಿ ಅನ್ಯಾಯ ಆಗದಂತೆ ಹೋರಾಟ ಮಾಡಿ ಒಳ್ಳೆಯ ಕೆಲಸ ಮಾಡಬೇಕು ನಮ್ಮ ರಾಜ್ಯದಲ್ಲಿ ಭ್ರಷ್ಟಚಾರ ಜಾಸ್ತಿಯಗಾಗಿದೆ ಬಳ್ಳಾರಿ ಜಿಲ್ಲೆ ಮೊದಲನೆಯದಾದರೆ ಎರಡನೇಯದಾಗಿ ತುಮಕುರು ಜಿಲ್ಲೆ ಇವುಗನ್ನು ಹೋಗಲಾಡಿಸಲು ಪ್ರಯತ್ನಿಸೋಣ ಎಂದರು.ಸಭೆಯಲ್ಲಿ ಕೃಷ್ಣಮೂತರ್ಿ ಪ್ರಾಥರ್ಿಸಿ, ಲಕ್ಷ್ಮೀಶ್ ಸ್ವಾಗತಿಸಿ, ಸಿ.ಟಿ.ಗುರುಮೂತರ್ಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಮರ್ಿಕರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಿದ್ಯಾಥರ್ಿ ಘಟಕದ ಅಧ್ಯಕ್ಷ ರಾಜೇಶ್ ಹಾಗೂ ಕರವೇ ಕಾರ್ಯಕರ್ತರು ಹಾಜರಿದ್ದರು.

No comments:

Post a Comment