Wednesday, May 18, 2011


ರಾಜ್ಯಪಾಲರನ್ನು ವಾಪಸ್ ಕೇಂದ್ರಕ್ಕೆ ಕರೆಸಿಕೊಳ್ಳಲು ಆಗ್ರಹ
ಚಿಕ್ಕನಾಯಕನಹಳ್ಳಿ,ಮೇ.18: ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ರವರು ಬಿ.ಜೆ.ಪಿ ನೇತೃತ್ವದ ಸಕರ್ಾರವನ್ನು ರಾಜ್ಯದಲ್ಲಿ ವಜಾ ಮಾಡಬೇಕೆಂದು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಘಟಕ ಕಾರ್ಯಕರ್ತರೊಂದಿಗೆ ನಗರದ ನೆಹರು ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಸಂವಿಧಾನ ವಿರೋದಿ ರಾಜ್ಯಪಾಲರ ಅಸಂವಿಧಾನಿಕ ಕುತಂತ್ರ ವರದಿಯನ್ನು ಕೇಂದ್ರ ಸಕರ್ಾರ ತಿರಸ್ಕರಿಸಬೇಕು ಹಾಗೂ ಕಾಂಗ್ರೆಸ್ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವ ಇವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದರು.
ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಜನರಿಂದ ಆಯ್ಕೆಯಾದ ಬಿಜೆಪಿ ಸಕರ್ಾರಕ್ಕೆ ಕಿರುಕುಳ ನೀಡುತ್ತಲಿದ್ದಾರೆ, ಸಕರ್ಾರಕ್ಕೆ 121 ಸದಸ್ಯರ ಬಲವಿದ್ದರೂ ಸಕರ್ಾರವನ್ನು ಅಮಾನತ್ತಿನಲ್ಲಿಡಲು ಶಿಫಾರಸ್ಸು ಮಾಡಲು ರಾಜ್ಯಪಾಲರ ಕ್ರಮ ಪ್ರಜಾತಂತ್ರಕ್ಕೆ ಮಾಡಿದ ಅಪಮಾನ ಇಂತಹ ಕೃತ್ಯಗಳನ್ನು ಎಸಗುತ್ತಿರುವ ರಾಜ್ಯಪಾಲರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವುದು ಸೂಕ್ತ ಎಂದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ (ಮಿಲ್ಟ್ರೀ)ಶಿವಣ್ಣ, ಹಳೇಮನೆ ಸುರೇಶ್, ಶ್ರೀನಿವಾಸಮೂತರ್ಿ, ರವಿಕುಮಾರ್, ಎಚ್.ಎಲ್.ಜಯದೇವ್, ಹುಳಿಯಾರ್ ಮೋಹನ್, ರಾಜಣ್ಣ, ರೇವಣ್ಣ ಮಧುಸೂಧನ, ಚಿತ್ತಯ್ಯ, ಕೆ.ಕೆ.ಹನುಮಂತಪ್ಪ ರೋಜೆಗೌಡ, ಈಶ್ವರ್ಭಾಗವತ್ ಕಾರ್ಯಕರ್ತರು ಹಾಜರಿದ್ದರು.ಕವಿಗಳು ಹಾಗೂ ಲೇಖಕರು ಹೆಸರು ನೊಂದಾಯಿಸಿಕೊಳ್ಳಲು ಮನವಿ
ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕು ನಾಲ್ಕನೇಯ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 10 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕವಿಗೋಷ್ಠಿ ಮತ್ತು ಲೇಖಕರ ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗುವುದು, ತಾಲೂಕಿನ ಆಸಕ್ತ ಕವಿಗಳು ತಮ್ಮ ಸ್ವರಚಿತ ಒಂದು ಕವನವನ್ನು ವಾಚಿಸಲು ಅವಕಾಶವಿದೆ, ಲೇಖಕರು ತಮ್ಮ ಹೊಸ ಪುಸ್ತಕದ ಒಂದು ಪ್ರತಿಯನ್ನು ಕಳಿಸಲು ಕೋರಿದೆ.
ಕವಿಗಳು ಹಾಗೂ ಲೇಖಕರು, ಸಿ.ಗುರುಮೂತರ್ಿ ಕೋಟಿಗೆಮನೆ ಕಾರ್ಯದಶರ್ಿ ತಾ.ಕ.ಸಾ.ಪ ಇವರಲ್ಲಿ ದಿ. 31.05.2011ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ, ಹೆಚ್ಚಿನ ಮಾಹಿತಿಗೆ ಮೊ.9448659573. ಸಂಪಕರ್ಿಸಲು ಕೋರಿದೆ.
ಡಿ.ವಿ.ಪಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 71.96 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕರ ಪ್ರೌಢಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಶೇ.71.96ರಷ್ಟು ಪಲಿತಾಂಶ ಪಡೆದಿದೆೆ.
ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಮೇಘನ. ಎಮ್. 597, ಶ್ರೀನಿವಾಸ್. ಟಿ. - 594. ಯೋಗೀಶ್. .ಆರ್. 575, ಪೂಜಾ .ಕೆ.ಜೆ. 563, ಅನುಶ್ರೀ 543, ಮನೋಜ್ ಕುಮಾರ್ 535 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ರೋಟರಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 92.72 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ರೋಟಾರಿ ಇಂಗ್ಲೀಷ್ ಪ್ರೌಡಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.92.72ರಷ್ಟು ಪಲಿತಾಂಶ ಪಡೆದಿದೆೆ.
55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು 11 ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿ, 22 ವಿದ್ಯಾಥರ್ಿಗಳು ಪ್ರಥಮ ದಜರ್ೆ, 5 ವಿದ್ಯಾಥರ್ಿಗಳು ದ್ವೀತೀಯ ದಜರ್ೆ, 13 ವಿದ್ಯಾಥರ್ಿಗಳು ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಶಿಲ್ಪ ಎಸ್. (585) 93.6, ಅಮೂಲ್ಯ ಜಿ.ಎಸ್.(582) 93.12, ಪ್ರಿಯಾ ಬಿ.(582)93.12, ಭವ್ಯ ಆರ್.(579)92.64, ದಿಲೀಪ ಎಮ್. ಬಿ.(578)92.48, ಚಿದಾನಂದ(563) 90.08, ಮೇಘನ ಹೆಚ್.(557)89.12, ಬಿಂದುಶ್ರೀ(552)88.32, ಅಪೇಕ್ಷ ಜೆ.ಎಮ್.(549)87.84, ನಂದೀನಿ ಕೆ.(546)87.36. ಹಷರ್ಿತ ಎಸ್.ವಿ.(537) 85.94 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ಭಾರಿ ಮಳೆಗೆ 1ಲಕ್ಷಕ್ಕೂ ಹೆಚ್ಚು ಹಾನಿ
ಚಿಕ್ಕನಾಯಕನಹಳ್ಳಿ,ಮೇ18: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ 34.8ರಷ್ಟು ಮಿ.ಮೀ ಭಾರಿ ಮಳೆಯಿಂದಾಗಿ ತೆಂಗಿನ, ಅಡಿಕೆ, ರಸ್ತೆಬದಿಯ ಮರ ಹಾಗೂ 17 ಮನೆಗಳು ಕುಸಿದು 1ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.
ಕಂದಿಕೆರೆ ಹೋಬಳಿಯ ಆಶ್ರಹಾಳ್ನಲ್ಲಿ 16 ಮನೆಗಳು ಕುಸಿತಗೊಂಡು, ಕಂದಿಕೆರೆಯಲ್ಲಿ 1 ಮನೆ ಕುಸಿದಿದೆ, ಚಿ.ನಾ.ಹಳ್ಳಿಯಲ್ಲಿ 65.ಮಿ.ಮೀ, ಶೆಟ್ಟಿಕೆರೆಯಲ್ಲಿ 22.ಮಿ.ಮೀ, ಮತಿಘಟ್ಟದಲ್ಲಿ 14.1 ಮಿ.ಮೀ, ದೊಡ್ಡೆಣ್ಣೆಗೆರೆ 9.3 ಮಿ.ಮೀ, ಹುಳಿಯಾರು 40.6 ಮಿ.ಮೀ, ಬೋರನಕಣಿವೆ 46.2 ಮಿ.ಮೀ, ಸಿಂಗದಹಳ್ಳಿ 49.2 ಮಿ.ಮೀ.ನಷ್ಠು ಮಳೆಯಾಗಿದ.No comments:

Post a Comment