Wednesday, October 19, 2011

ಗಂಗಾ ಕಲ್ಯಾಣ ಯೋಜನೆಯಲ್ಲಿ 36 ಪಂಪ್ ಸೆಟ್ ವಿತರಣೆಚಿಕ್ಕನಾಯಕನಹಳ್ಳಿ,ಅ.18:ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ತಾಲೂಕಿನ ಫಲಾನುಭವಿಗಳಿಗೆ ಮಂಜೂರಾಗಿರುವ ವಿವಿಧ ಸವಲತ್ತುಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ಪರಿಶಿಷ್ಟ ಜಾತಿಯವರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 36 ಜನ ಫಲಾನುಭವಿಗಳಿಗೆ ಒಂದು ಲಕ್ಷ ರೂ ಮೌಲ್ಯದ ಪಂಪ್ ಸೆಟ್ಗಳನ್ನು ವಿತರಿಸಲಾಯಿತು, ಒಂದು ಲಕ್ಷ ರೂಗಳ ಪೈಕಿ 86 ಸಾವಿರ ಸಕರ್ಾರದ ಸಬ್ಸಿಡಿಯಾದರೆ ಉಳಿದ 14 ಸಾವಿರ ರೂಗಳನ್ನು ಫಲಾನುಭವಿಗಳು ಸಂಬಂಧಿಸಿದ ನಿಗಮಕ್ಕೆ ಮರುಪಾವತಿ ಮಾಡಬೇಕು. ದೊಡ್ಡ ಬಿದರೆಯ ಶ್ರೀ ರೇಣುಕಾಂಬ ಸುಜಲ ಜಲಾನಯನ ಸಂಘದ 14 ಮಹಿಳಾ ಸದಸ್ಯರಿಗೆ ತಲಾ 25 ಸಾವಿರ ರೂ ಗಳ ಸಾಲ ಸೌಲಭ್ಯ ನೀಡಲಾಯಿತು, ಇದರಲ್ಲಿ 10 ಸಾವಿರ ಸಬ್ಸಿಡಿ, ಉಳಿದ 15 ಸಾವಿರ ಹಣವನ್ನು ಮರು ಪಾವತಿ ಮಾಡುವ ಷರತ್ತಿಗೊಳಪಟ್ಟು ಈ ಸಾಲವನ್ನು ನೀಡಲಾಗಿದೆ. ಅದೇ ರೀತಿ ಒಂದು ಟಾಟಾ ಇಂಡಿಕಾ ಕಾರ್ಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸಂದರ್ಭದಲ್ಲಿ ತಾ.ಪಂ. ಇ.ಓ. ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಅಭಿವೃದ್ದಿ ನಿಗಮದ ಮಧು ಉಪಸ್ಥಿತರಿದ್ದರು.(ಪೊಟೋ ಇದೆ. 18 ಸಿ.ಎನ್.ಎಚ್.ಪಿ1)ರೈತರಿಗೆ ಡೀಸೆಲ್ ದರದಲ್ಲಿ ರಿಯಾಯಿತಿ ನೀಡಲು ರೈತ ಮೋಚರ್ಾ ಒತ್ತಾಯಚಿಕ್ಕನಾಯಕನಹಳ್ಳಿ,ಸೆ.18: ಭಾರತೀಯ ಜನತಾ ಪಕ್ಷದ ರೈತ ಮೋಚರ್ಾ ಸಮಿತಿಯ ಕಾರ್ಯಗಾರಿ ಸಮಿತಿ ಸಭೆಯು ತಾ.ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ ಗುರುವಾಪುರ ಜಿ.ಎಸ್.ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಮೋಚರ್ಾ ಅಧ್ಯಕ್ಷರಾದ ರೇಣುಕಯ್ಯ, ಪ್ರಧಾನ ಕಾರ್ಯದಶರ್ಿ ಗರುಡಯ್ಯ, ತಾ.ಬಿಜೆಪಿ ಅಧ್ಯಕ್ಷ ಶಿವಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ರೈತ ಮೊಚರ್ಾದಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ರೈತ ಪ್ರಹರಿಗಳನ್ನು ನೇಮಿಸುವಂತೆಯೂ ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಬಳಸುವ ಜನುವಾರುಗಳ ಸಂಖ್ಯೆ ಕಡಿಮೆ ಇರುವುದರಿಂದ ರೈತರು ಟ್ರಾಕ್ಟರ್ ಅವಲಂಬಿಸಿರುವುದರಿಂದ ರೈತರಿಗೆ ವ್ಯವಸಾಯಕ್ಕೆ ಉತ್ತೇಜನ ನೀಡುವ ಸಲುವಾಗಿ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸುವಂತೆ ಕೇಂದ್ರ ಸಕರ್ಾರವನ್ನು ಒತ್ತಾಯಿಸಲಾಯಿತು.ರಾಜ್ಯ ಸಕರ್ಾರದಿಂದ ಬಿಡುಗಡೆ ಮಾಡಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸುವರ್ಣಬೂಮಿ ಯೋಜನೆಯ ಸಹಾಯ ಧನವನ್ನು ಅಧಿಕಾರಿಗಳು ವಿಳಂಬೆ ಮಾಡದೆ ತಕ್ಷಣ ರೈತರಿಗೆ ತಲುಪಿಸವುದು ಹಾಗೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳಲಾಗಿದೆ ಎಂದು ತಾಲೂಕು ರೈತ ಮೋಚರ್ಾದ ಪ್ರಧಾನ ಕಾರ್ಯದಶರ್ಿ ಕೆ.ಎಸ್.ಪರಮೇಶ್ವರಯ್ಯ ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ರೈತ ಮೋಚರ್ಾದ ಕಾರ್ಯದಶರ್ಿ ಎ.ಬಿ.ಶರತ್ ಕುಮಾರ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಮಹಿಳಾ ಜನಪ್ರತಿನಿಧಿಗಳಿಗೆ ರಾಜ್ಯಮಟ್ಟದ ವಿಚಾರ ಸಂಕೀರಣಚಿಕ್ಕನಾಯಕನಹಳ್ಳಿ.ಅ.17: ಮಹಿಳಾ ಜನಪ್ರತಿನಿಧಿಗಳ ರಾಜ್ಯಮಟ್ಟದ ವಿಚಾರ ಸಂಕೀರಣ ಮುಂಬರುವ ನವೆಂಬರ್ನಲ್ಲಿ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ತಿಳಿಸಿದ್ದಾರೆ. ನವೆಂಬರ್ 17 ರಿಂದ 19ರವರೆಗೆ ನಡೆಯುವ ವಿಚಾರ ಸಂಕೀರಣದಲ್ಲಿ ಜನತಂತ್ರ ಮತ್ತು ಸಂವಿಧಾನ, ಮಾನವ ಹಕ್ಕುಗಳು, ಕೌನ್ಸಿಲರ್ಗಳ ಪಾತ್ರ ಹಾಗೂ ಸ್ಥಳೀಯ ಸಕರ್ಾರದಲ್ಲಿ ಮಹಿಳಾ ಜನಪ್ರತಿನಿಧಿಗಳು ಸಕ್ರೀಯವಾಗಿ ಭಾಗವಹಿಸಬೇಕಾದರೆ ಆಡಳಿತಾತ್ಮಕವಾಗಿ ತರಬೇಕಾದ ಬದಲಾವಣೆಗಳ ಬಗ್ಗೆ ಚಚರ್ಿಸಲಾಗುವುದು ಎಂದರು. ಈ ಸಭೆಯಲ್ಲಿ ನಗರ ಸಂಶೋಧನಾ ಕೇಂದ್ರದ ಮಂಗಳೂರು ವಿಭಾಗದ ಹರಿಣಿ, ಬೆಂಗಳೂರು ವಿಭಾಗದ ಗುರುರಾಜ್ ಬುಥ್ಯಾ ಉಪಸ್ಥಿತರಿದ್ದರು.

No comments:

Post a Comment